Ishaani Krishna: ತಾತ ತೀರಿಕೊಂಡ ಮೇಲೆ ಆ ಯೋಚನೆ ಬಂತು, ನಾನು ಲಕ್ಕಿ ಎಂದ ನಟಿ ಇಶಾನಿ!

Published : Jun 22, 2026, 07:49 PM IST
Ishaani Krishna

ಸಾರಾಂಶ

Ishaani Krishna: ನಟಿ ಇಶಾನಿ ಕೃಷ್ಣ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ತಂದೆ ಕೃಷ್ಣಕುಮಾರ್ ಅವರ ಸೋಲೊಪ್ಪದ ಗುಣ ಹಾಗೂ ತಾಯಿಯ ಸಮರ್ಪಣಾ ಮನೋಭಾವ ತಮಗೆ ತುಂಬಾ ಇಷ್ಟ ಅಂತ ಹೇಳಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫ್ಯಾನ್ ಫಾಲೋಯಿಂಗ್ ಹೊಂದಿರುವ ನಟಿ ಇಶಾನಿ ಕೃಷ್ಣ, ನಟ ಕೃಷ್ಣಕುಮಾರ್ ಅವರ ಮೂರನೇ ಮಗಳು. ಸದ್ಯ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ಇಶಾನಿ ಹಲವು ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಇಷ್ಟಗಳು, ಪೋಷಕರ ಬಗ್ಗೆ ಮೆಚ್ಚುಗೆಯ ಮಾತುಗಳು ಹೀಗೆ ಎಲ್ಲವನ್ನೂ ತಮ್ಮ ಹೊಸ ವಿಡಿಯೋದಲ್ಲಿ ಮಾತನಾಡಿದ್ದಾರೆ.

ತಮ್ಮ ತಂದೆಯ ಬಗ್ಗೆ ಮಾತನಾಡಿದ ಇಶಾನಿ, "ಒಂದು ಪ್ರಯತ್ನದಲ್ಲಿ ಸೋತರೆ, ಜೀವನವೇ ಹೋಯ್ತು ಅಂತ ಕೂರಲ್ಲ. ಮುಂದಿನ ಕೆಲಸಕ್ಕೆ ಹೋಗ್ತಾರೆ. ಅಪ್ಪನ ಈ ಗುಣ ನನಗೆ ತುಂಬಾ ಇಷ್ಟ. ಅದೊಂದು ಒಳ್ಳೆ ಕ್ವಾಲಿಟಿ. ಅವರಿಗೆ ಈಗ 58 ವರ್ಷ. ಆದರೆ, ಒಮ್ಮೆಯೂ ನನಗೆ ವಯಸ್ಸಾಯ್ತು, ಸುಸ್ತಾಯ್ತು ಅಂತ ವಿಶ್ರಾಂತಿ ಪಡೆದಿದ್ದಿಲ್ಲ. ಅವರಿಗೆ ಸೋಮಾರಿತನವೇ ಇಲ್ಲ. ಹಾಗೆ ನೋಡಿದರೆ ನನಗೇ ಸ್ವಲ್ಪ ಸೋಮಾರಿತನ ಜಾಸ್ತಿ ಅಂತ ಹೇಳಬೇಕು," ಎಂದಿದ್ದಾರೆ.

"ಅಮ್ಮ ನಮಗೋಸ್ಕರ ಪಡುವ ಶ್ರಮಕ್ಕೆ ಅವಾರ್ಡ್ ಕೊಡಬೇಕು. ಅದು ದೊಡ್ಡ ಟಾಸ್ಕ್. ಆದರೆ ಇವತ್ತಿನವರೆಗೂ ಒಂದೇ ಒಂದು ದೂರು ಹೇಳದೆ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡ್ತಾರೆ," ಎಂದು ತಾಯಿಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಪೋಷಕರು, ಅಜ್ಜ-ಅಜ್ಜಿ ಜೊತೆ ಹೆಚ್ಚು ಸಮಯ ಕಳೆಯಬೇಕು ಅಂತ ನಾನು ಇತ್ತೀಚೆಗೆ ಕಲಿತೆ. ಅಜ್ಜ ತೀರಿಕೊಂಡ ಮೇಲೆಯೇ ನನಗೆ ಆ ಯೋಚನೆ ಬಂದಿದ್ದು. ಪೋಷಕರ ಜೊತೆ ಇರಲು ಸಾಧ್ಯವಾಗಿರೋ ನಾನು ಅದೃಷ್ಟವಂತೆ ಅಂತ ಅನಿಸಿದೆ. ನನ್ನ ವಯಸ್ಸಿನ ಬಹುತೇಕರು ಓದಲು ಅಥವಾ ಕೆಲಸಕ್ಕೆ ಅಂತ ಹೊರಗೆ ಹೋಗಿರುತ್ತಾರೆ.

ಅದೆಲ್ಲಾ ಫ್ಲಾಪ್

ಹಾಗಾಗಿ ಅವರಿಗೆ ಕುಟುಂಬದ ಜೊತೆ ಸಮಯ ಕಳೆಯಲು ಆಗಲ್ಲ. ನನಗೆ ಒಬ್ಬಳೇ ಇರೋದು ಇಷ್ಟ. ಆದರೆ ಒಬ್ಬಳೇ ಹೊರಗೆ ಹೋಗಿ ಊಟ ಕೂಡ ಮಾಡಿಲ್ಲ. ಅಪರಿಚಿತರ ಜೊತೆ ಮಾತಾಡೋಕೆ ನನಗೆ ಸ್ವಲ್ಪ ಕಷ್ಟ," ಎಂದು ಇಶಾನಿ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. "ಸದ್ಯಕ್ಕೆ ನನ್ನ ಹಾಬಿ ಅಂದ್ರೆ ನನ್ನ ನಾಯಿ ಓಮಿ ಮತ್ತು ಬೇಕಿಂಗ್. ಬೇಕಿಂಗ್ ಅಂದ್ರೆ ಮೊದಲಿನಿಂದಲೂ ಇಷ್ಟ, ಆದರೆ ಅದೆಲ್ಲಾ ಫ್ಲಾಪ್ ಆಗ್ತಿತ್ತು. ಹೊಸ ಕಿಚನ್ ಬಂದ್ಮೇಲೆ ಇಂಗ್ಲಿಷ್ ಸಿನಿಮಾಗಳಲ್ಲಿ ನೋಡಿದ ಹಾಗೆ ಬೇಕಿಂಗ್ ಮಾಡಬೇಕು ಅನಿಸಿತು. ಈಗೀಗ ನಾನು ಮಾಡೋದು ಸಕ್ಸಸ್ ಆಗ್ತಿದೆ. ಬೇಕಿಂಗ್ ನನಗೊಂದು ಸ್ಟ್ರೆಸ್ ರಿಲೀಫ್ ಇದ್ದ ಹಾಗೆ," ಎಂದು ಇಶಾನಿ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

CM Vijay Birthday- Big Secret: ಎಲೆಕ್ಷನ್ ಗೆದ್ದ ಬಳಿಕ ಮನೆಗೆ ಬಂದ ವಿಜಯ್ ಹೇಳಿದ್ದೇನು? ಆ 'ಬಿಗ್ ಸೀಕ್ರೆಟ್' ರಿವೀಲ್ ಮಾಡಿದ ದಳಪತಿ ಅಮ್ಮ ಶೋಭಾ!
Actress Samantha ಜೊತೆ ಮತ್ತೆ ಮದುವೆಯಾದ ಗಂಡ; ಬೇಸತ್ತು ಜ್ಯೋತಿಷಿಯಾದ ರಾಜ್‌ ನಿಡಿಮೊರು ಫಸ್ಟ್‌ ಹೆಂಡ್ತಿ..