
ಸೋಷಿಯಲ್ ಮೀಡಿಯಾ ಸೆನ್ಸೇಷನ್ ಬೆಡಗಿ ಚೈತ್ರಾ ಜೆ ಆಚಾರ್ (Chaithra J Achar) ಬಗ್ಗೆ ಹೊಸದಾಗಿ ಹೇಳೋದೇನಿಲ್ಲ. ಬಿಂದಾಸ್ ಅಗಿ ಹೇಳಿಕೆ ಕೊಡುತ್ತ, ಮೈ ಚಳಿ ಬಿಟ್ಟು ನಟಿಸುತ್ತ ತಮ್ಮ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಕಚಗುಳಿ ಇಡುವ ಸುಂದರಿ ಎಂಬುದು ಬಹುತೇಕರಿಗೆ ಗೊತ್ತು. ಮೈಮಾಟ ಕಾಪಾಡಿಕೊಳ್ಳಲು ಯಾವುದೇ ಬೇಸರಕ್ಕೆ ಒಳಪಡದೇ ಬೆವರು ಹರಿಸಿ ಫಿಟ್‌ನೆಸ್ ಕಾಪಾಡಿಕೊಳ್ಳುವ ಚೆಲುವೆ ಚೈತ್ರಾ!
ಇದೀಗ, ಜಿಮ್‌ನಲ್ಲಿ ವರ್ಕ್‌ಔಟ್ ಮಾಡಿದ ಬಳಿಕ ರೆಸ್ಟ್ ಮೂಡ್‌ನಲ್ಲಿರುವ ಚೈತ್ರಾ ಅವರು 'May your weekend be as vibrant as our T-shirt' ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಹಳದಿ ಹಾಗೂ ಕಾಫೀ ಕಲರ್ ಜಿಮ್ ಫಿಟ್ ಡ್ರೆಸ್‌ನಲ್ಲಿ ಕಂಗೊಳಸುತ್ತಿರುವ ಚೈತ್ರಾ ಕೊಟ್ಟಿರುವ ಲುಕ್‌ಗೆ ಹಲವು ಪಡ್ಡೆಗಳ ಕಣ್ಣು ಅಗಲವಾಗಿರುವುದು ಸೀಕ್ರೆಟ್ ಆಗಿಯೇನೂ ಉಳಿದಿಲ್ಲ. ಕೈನಲ್ಲಿ ವಾಟರ್ ಬಾಟೆಲ್ ಹಿಡಿದು ಕ್ಯಾಮೆರಾಗೆ ಫೋಸ್ ಕೊಟ್ಟಿರುವ ಚೈತ್ರಾ ನಮ್ಮ ಟೀಶರ್ಟ್‌ನಂತೆ ಈ ವೀಕ್‌ಎಂಡ್ ಕೂಡ ವೈಬ್ರಂಟ್ ಆಗಿರಲಿ' ಎಂದು ಪೋಸ್ಟ್ ಮಾಡಿದ್ದಾರೆ.
ಚೈತ್ರಾ ಪೋಸ್ಟ್ ಮಾಡುತ್ತಿದ್ದಂತೆ ಕಾದು ಕುಳಿತ್ತಿದ್ದವರಂತೆ ಕೆಲವರು ಲೈಕ್ಸ್ ಕೊಟ್ಟಿದ್ದಾರೆ. ಆದರೆ ಯಾರಿಗೆ ಇನ್ನೂ ಪುರುಸೊತ್ತು ಆಗಿಲ್ವೋ ಅವರ ಲೈಕ್ಸ್ ಸ್ವಲ್ಪ ಲೇಟ್ ಆಗಬಹುದು! ಆದರೆ ಇಲ್ಲಯವರೆಗೂ ಯಾರೂ ಕೂಡ ಯಾವುದೇ ಕಾಮೆಂಟ್ ಹಾಕಿಲ್ಲ. ಪೋಸ್ಟ್ ಹಾಕಿ ಈಗಷ್ಟೆ 8 ಗಂಟೆ ಕಳೆದಿದೆ, ಕಾಮೆಂಟ್ ಬರಬಹುದು ಅಂತ ಯೋಚಿಬೇಡಿ!
ಏಕೆಂದರೆ ಚೈತ್ರಾ ತಮ್ಮ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರಂತೆ. ಚೈತ್ರಾ ಆಚಾರ್ ಅವರು ಕನ್ನಡಕಷ್ಟೇ ಸೀಮಿತವಾಗಿರದೇ ಪರಭಾಷೆಗಳಲ್ಲಿ ಕೂಡ ಮಿಂಚುತ್ತಿದ್ದರು. ನಟನೆ ಹಾಗೂ ಸ್ಟೇಜ್ ಶೋಗಳಿಗೆ ಹೆಚ್ಚು ಒತ್ತು ಕೊಡುತ್ತಿರುವ ಚೈತ್ರಾ ವಿಭಿನ್ನ ಪಾತ್ರ ಪೋಷಣೆಗೆ ಹಂಬಲಿಸುತ್ತಿರುವ ನಟಿ ಎಂದರೆ ತಪ್ಪಾಗಲಾರದು!
ಚೈತ್ರಾ ಆಚಾರ್ (Chaithra Achar)ತಮ್ಮ ಅದ್ಭುತವಾದ ನಟನೆ ಮತ್ತು ತಮ್ಮ ಬೋಲ್ಡ್ ಲುಕ್ ಮೂಲಕವೇ ಸದ್ದು ಮಾಡುತ್ತಿರುವ ಚೆಲುವೆ. ಯಾವುದೇ ಪಾತ್ರ ಸಿಕ್ಕರೂ ಅಷ್ಟೇ ಅದ್ಭುತವಾಗಿ ನಟಿಸುತ್ತಾರೆ ಚೈತ್ರಾ.
ಮತ್ತೊಮ್ಮೆ ಬೋಲ್ಡ್ ಫೋಟೊ ಶೂಟ್ ಮೂಲಕ ಹೊಸ ಅಲೆ ಎಬ್ಬಿಸಿದ ಚೈತ್ರಾ ಆಚಾರ್
ಚಂದನವನದ ಸುಂದರಿ ಚೈತ್ರಾ ಆಚಾರ್ ಇದೀಗ ಮತ್ತೊಮ್ಮೆ ತಮ್ಮ ಬೋಲ್ಡ್ ಫೋಟೊ ಶೂಟ್ ಮೂಲಕ ಹಲ್ ಚಲ್ ಸೃಷ್ಟಿಸಿದ್ದಾರೆ. ಹೊಸ ಲುಕ್ ನಲ್ಲಿ ಸಖತ್ ಹಾಟ್ ಆಗಿ ಕಾಣಿಸ್ತಿದ್ದಾರೆ ನಟಿ.
ಚೈತ್ರಾ ಆಚಾರ್ (Chaithra Achar)ತಮ್ಮ ಅದ್ಭುತವಾದ ನಟನೆ ಮತ್ತು ತಮ್ಮ ಬೋಲ್ಡ್ ಲುಕ್ ಮೂಲಕವೇ ಸದ್ದು ಮಾಡುತ್ತಿರುವ ಚೆಲುವೆ. ಯಾವುದೇ ಪಾತ್ರ ಸಿಕ್ಕರೂ ಅಷ್ಟೇ ಅದ್ಭುತವಾಗಿ ನಟಿಸುತ್ತಾರೆ ಚೈತ್ರಾ.
ಕನ್ನಡ, ತಮಿಳು, ತೆಲುಗು ಎಂದು ಸದ್ಯಕ್ಕಂತೂ ನಟನೆಯಲ್ಲಿ ಸಾಕಷ್ಟು ಬ್ಯುಸಿಯಾಗಿರುವ ನಟಿ ಸೋಶಿಯಲ್ ಮೀಡಿಯಾ ಮೂಲಕ ಬೋಲ್ಡ್ ಲುಕ್ ನಲ್ಲಿ (bold look)ಕಾಣಿಸಿಕೊಳ್ಳುವುದನ್ನು ತಪ್ಪಿಸಲ್ಲ ಈ ಮಚ್ಚೆ ಸುಂದರಿ.
ಯಾವತ್ತೂ ಟ್ರೋಲರ್ ಗಳಿಗೆ ಕಾಮೆಂಟ್ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳದ ಚೈತ್ರಾ ಆಚಾರ್, ತಮ್ಮ ಕಾಮೆಂಟ್ ಸೆಕ್ಷನ್ ಗಳನ್ನೇ ಕ್ಲೋಸ್ ಮಾಡಿ, ತಮಗೆ ಬೇಕೆನಿಸಿದ ಲುಕ್ ಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ರಾರಾಜಿಸುತ್ತಿರುತ್ತಾರೆ.
ಇದೀಗ ಹೊಸದಾಗಿ ಫೋಟೊ ಶೂಟ್ ಮಾಡಿಸಿಕೊಂಡಿರುವ ಸುಂದರಿ, ಮತ್ತೊಮ್ಮೆ ತಮ್ಮ ಬೋಲ್ಡ್ ಲುಕ್ ತೋರಿಸಿದ್ದಾರೆ. ಸದ್ಯಕ್ಕಂತೂ ಈ ಫೋಟೊಗಳು ವೈರಲ್ ಆಗುತ್ತಿದೆ. ನಟಿಯ ಅಂದಕ್ಕೂ ಜನ ಫಿದಾ ಆಗಿದ್ದಾರೆ.
ಬಿಳಿ ಬಣ್ಣದ ಪ್ಯಾಂಟ್ ಹಾಗೂ ಬಿಳಿ ಬಣ್ಣದ ಬ್ರೇಜರ್ ನಂತಹ ಟಾಪ್ ಧರಿಸಿರುವ ಚೈತ್ರಾ ಆಚಾರ್, ಅಷ್ಟೇ ಬೋಲ್ಡ್ ಮತ್ತು ಬಿಂದಾಸ್ ಆಗಿ ವಿವಿಧ ರೀತಿಯಲ್ಲಿ ಫೋಟೊಗಳಿಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೊವನ್ನು ಸಾವಿರಾರು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಇದೀಗ ಪೋಸ್ಟ್ ಮಾಡಿರುವ ಜಿಮ್ ಬ್ಯಾಕ್‌ಗ್ರೌಂಡ್ ಫೋಟೋಗಳಿಗೂ ಸಾಕಷ್ಟು ಲೈಕ್ಸ್ ಬಂದಿವೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಚೈತ್ರಾ ಆಚಾರ್ ತಮಿಳಿನಲ್ಲಿ ನಟ ಸಿದ್ಧಾರ್ಥ್, ಶರತ್ ಕುಮಾರ್ ಅವರೊಂದಿಗೆ '3 ಬಿಎಚ್‌ಕೆ' ಸಿನಿಮಾದಲ್ಲಿ ನಟಿಸಿದ್ದರು, ಈ ಸಿನಿಮಾ ಸಿನಿರಸಿಕರ ಮನಸ್ಸು ಗೆದ್ದಿದ್ದು, ಸಿಕ್ಕಾಪಟ್ಟೆ ಯಶಸ್ಸು ಗಳಿಸಿದೆ.
ಕನ್ನಡದಲ್ಲಿ ಚೈತ್ರಾ ಆಚಾರ್ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ‘ಉತ್ತರಕಾಂಡ’, 'ಮಾರ್ನಮಿ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ ತಮಿಳು ನಟ ಶಶಿಕುಮಾರ್ ಜೊತೆಗೂ ಇನ್ನೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಒಟ್ಟಲ್ಲಿ ಸದ್ಯಕ್ಕಂತೂ ನಟಿ ಸಖತ್ ಬ್ಯುಸಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.