'ನಮ್ಮನೆ ವಿಚಾರಕ್ಕೆ ಬರಬೇಡಿ'; Article 370 ರದ್ದು ಖಂಡಿಸಿದ ವಿಜಯ್ ಸೇತುಪತಿ!

Published : Aug 13, 2019, 06:03 PM IST
'ನಮ್ಮನೆ ವಿಚಾರಕ್ಕೆ ಬರಬೇಡಿ'; Article 370 ರದ್ದು ಖಂಡಿಸಿದ ವಿಜಯ್ ಸೇತುಪತಿ!

ಸಾರಾಂಶ

  ಕಾಲಿವುಡ್‌ ಖ್ಯಾತ ನಟ ವಿಜಯ್ ಸೇತುಪತಿ ಆಸ್ಟ್ರೇಲಿಯಾದ ಖಾಸಗಿ ರೇಡಿಯೋ ಸಂದರ್ಶನದಲ್ಲಿ ಜಮ್ಮು-ಕಾಶ್ಮೀರ ವಿಶೇಷ ಅಧಿಕಾರವನ್ನು ರದ್ದು ಮಾಡಿರುವುದರ ಬಗ್ಗೆ ಖಂಡಿಸಿರುವುದಾಗಿ ಮಾತುಗಳು ಕೇಳಿ ಬರುತ್ತಿದೆ.

ಕಾಲಿವುಡ್ ಮಾಸ್ ಆ್ಯಂಡ್ ಕ್ಲಾಸ್ ಹೀರೋ ವಿಜಯ್ ಸೇತುಪತಿ ಕೆಲ ದಿನಗಳ ಹಿಂದೆ ಆಸ್ಟ್ರೇಲಿಯಾದ ಇಂಡಿಯನ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ಮೆಲ್ಭಾರ್ನ್ ನಲ್ಲಿರುವ STS Tamil ಆಸ್ಟ್ರೇಲಿಯಾ ರೇಡಿಯೋ ಚಾನೆಲ್‌ಗೆ ಸಂದರ್ಶನ ನೀಡಿದ್ದರು. ಅಲ್ಲಿ Article 370 ಬಗ್ಗೆ ಮಾತನಾಡಿದ್ದಾರೆ.

ಸೆಟ್ಟೇರಲಿದೆ ಮುತ್ತಯ್ಯ ಮುರುಳೀಧರನ್ ಬಯೋಪಿಕ್

 

ಕಾಶ್ಮೀರದ ಬಗ್ಗೆ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರ ಅಸಂವಿಧಾನಿಕ ಹಾಗೂ ಪ್ರಜಾಪ್ರಭುತ್ವ ವಿರೋಧಿ. ಕಾಶ್ಮೀರದ ಜನರು ಅನುಭವಿಸುತ್ತಿರುವ ತೊಂದರೆ ಹಾಗೂ ಅವರ ಸಮಸ್ಯೆ ಅಲ್ಲಿ ವಾಸ ಮಾಡುವವರಿಗೆ ಮಾತ್ರ ತಿಳಿದಿರುತ್ತದೆ. ನಾನು ಕಾಳಜಿಯಿಂದ ಹೇಳಬಹುದು. ಆದರೆ ನನ್ನ ಅಭಿಪ್ರಾಯದ ಮೇಲೆ ನೀವು ನಿರ್ಧಾರ ತೆಗೆದುಕೊಳ್ಳಿ ಎನ್ನಲು ಆಗುವುದಿಲ್ಲ' ಎಂದು ಹೇಳಿಕೊಂಡಿದ್ದಾರೆ.

ಇನ್ನೊಂದೆಡೆ ಸೂಪರ್ ಸ್ಟಾರ್ ರಜನೀಕಾಂತ್ NDA ಸರ್ಕಾರವನ್ನು ಹೊಗಳಿದ್ದು ಅಮಿತ್ ಶಾ ಹಾಗೂ ಮೋದಿ ನಿರ್ಧಾರಕ್ಕೆ ಹಾಗೂ ಸಂಸತ್ತಿನಲ್ಲಿ ಅವರ ಭಾಷಣಕ್ಕೆ ಭೇಷ್ ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ನನ್ನ ಸಂತೋಷ ಅಮೂಲ್ಯ, ಕರ್ಮದಲ್ಲಿ ನನಗೆ ನಂಬಿಕೆ ಇದೆ..' ದಿಲೀಪ್‌ ಖುಲಾಸೆ ಬೆನ್ನಲ್ಲೇ ವೈರಲ್‌ ಆದ ಜಾಕಿ ಭಾವನಾ ಮಾತು!
ಎಲ್ಲಾ ಸೀರಿಯಲ್​ ಜ್ಯೋತಿಷಿಗಳೇಕೇ ಮಹಾ ವಂಚಕರು? ಕರ್ಣ- ನಿಧಿ ಮದ್ವೆ ಮುಹೂರ್ತಕ್ಕೆ ಜಾಲತಾಣದಲ್ಲಿ ಭಾರಿ ಆಕ್ರೋಶ!