
ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಕಾರ್ತಿಕ್ ಆರ್ಯನ್ ಎಂಬುವವರ ಜೊತೆ ಆಗಾಗ ಪಾರ್ಟಿಗಳಲ್ಲಿ, ಏರ್ ಪೋರ್ಟ್ ಗಳಲ್ಲಿ, ಒಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಏನಿಲ್ಲ.. ಏನಿಲ್ಲ.. ನನ್ನ - ನಿನ್ನ ನಡುವೆ ಏನಿಲ್ಲ ಎನ್ನುತ್ತಲೇ ಓಡಾಡುತ್ತಿರುತ್ತಾರೆ. ಎಲ್ಲಿಯೂ ಇಬ್ಬರ ನಡುವಿನ ಸಂಬಂಧದ ಬಗ್ಗೆ ಮಾತನಾಡಿಲ್ಲ. ಇದೀಗ ಸಾರಾ ಅಲಿಖಾನ್ - ಕಾರ್ತಿಕ್ ನಡುವಿನ ಸಂಬಂಧಕ್ಕೆ ಇನ್ನಷ್ಟು ಪುಷ್ಟಿ ನೀಡುವಂತಿದೆ.
ನೆರೆ ಸಂತ್ರಸ್ತರ ನಿಧಿಗೆ 25 ಲಕ್ಷ ರೂ ನೀಡಿದ ಸ್ಟಾರ್ ದಂಪತಿ!
ಸಾರಾ ಅಲಿಖಾನ್ ಬರ್ತಡೇಗೆ ಕಾರ್ತಿಕ್ ಆರ್ಯನ್ ವಿಶೇಷವಾಗಿ ವಿಶ್ ಮಾಡಿದ್ದಾರೆ. ಸಾರಾ ಅಲಿಖಾನ್ ಸದ್ಯ ಬ್ಯಾಂಕಾಕ್ ನಲ್ಲಿದ್ದಾರೆ. ವರುಣ್ ಧವನ್ ಒಟ್ಟಿಗೆ ಕೂಲಿ ನಂ 1 ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಆಗಸ್ಟ್ 12 ರಂದು ಸಾರಾ ಬರ್ತಡೇಯಿದ್ದು ಬ್ಯಾಂಕಾಕ್ ನಲ್ಲಿಯೇ ಆಚರಿಸಿಕೊಂಡಿದ್ದಾರೆ. ಕಾರ್ತಿಕ್ ಆರ್ಯನ್ ಅಲ್ಲಿಗೆ ಹೋಗಿ ವಿಶ್ ಮಾಡಿ ಇಬ್ಬರೂ ಲವ್ಲಿ ಸಮಯ ಕಳೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.