ಒಂದೇ ಹಾಡಿಗೆ 13 ಗೆಟಪ್‌ಗಳು; ಶ್ರೀಮುರಳಿ ಪತ್ನಿ ಕೈವಾಡ!

Published : Sep 30, 2019, 10:22 AM ISTUpdated : Sep 30, 2019, 12:09 PM IST
ಒಂದೇ ಹಾಡಿಗೆ 13 ಗೆಟಪ್‌ಗಳು; ಶ್ರೀಮುರಳಿ ಪತ್ನಿ ಕೈವಾಡ!

ಸಾರಾಂಶ

ಒಂದೇ ಹಾಡಿನಲ್ಲಿ ೧೩ ಗೆಟಪ್‌ಗಳು, ಗಮನ ಸೆಳೆಯುವ ವಿನ್ಯಾಸದ ಕಾಸ್ಟ್ಯೂಮ್‌ಗಳು, ಹಾಡಿನ ಪ್ರತಿ ದೃಶ್ಯವನ್ನೂ ಶ್ರೀಮಂತಗೊಳಿಸಿರುವ, ಹೀರೋಯಿಸಂಗೆ ತಕ್ಕಂತಿರುವ ರಾಜಸ್ಥಾನಿಯ ಈ ಕಾಸ್ಟ್ಯೂಮ್ ಡಿಸೈನ್ ಹಿಂದಿನ ಪ್ರತಿಭೆ ನಟ ಶ್ರೀಮುರಳಿ ಅವರ ಪತ್ನಿ ವಿದ್ಯಾಶ್ರೀಮುರಳಿ.

ಅಂದಹಾಗೆ ಇದು ‘ಭರಾಟೆ’ ಚಿತ್ರದ ವಿಷಯ. ಮೊನ್ನೆಯಷ್ಟೆ ಚಿತ್ರದ ರೋರಿಸಂ ಹೆಸರಿನ ವಿಡಿಯೋ ಹಾಡು ಬಿಡುಗಡೆಗೊಂಡಿದೆ. ಚಂದನ್ ಶೆಟ್ಟಿ ಹಾಗೂ ಅಲೋಕ್ ಧ್ವನಿಯಲ್ಲಿ ಮೂಡಿದ ಈ ಹಾಡು ಸೂಪರ್ ಹಿಟ್ ಆಗಿದೆ.

ಈಗ ನಿರ್ದೇಶಕರು ಸೇಲ್ಸ್‌ಮ್ಯಾನ್‌ಗಳೂ ಆಗಿರಬೇಕು: ಚೇತನ್‌ ಕುಮಾರ್‌

ಹಾಡಿನ ಜತೆಗೆ ಈ ಹಾಡಿನಲ್ಲಿ ಶ್ರೀಮುರಳಿ ತೊಟ್ಟಿರುವ ಕಾಸ್ಟ್ಯೂಮ್‌ಗಳು ಕೂಡ ಗಮನ ಸೆಳೆಯುತ್ತಿವೆ.  ಸಾಕಷ್ಟು ಕಲರ್‌ಫುಲ್ಲಾಗಿ ಕಾಣುತ್ತಿರುವ ಈ ಕಾಸ್ಟ್ಯೂಮ್ ಡಿಸೈನ್ ಮಾಡಿರುವುದು ಯಾರು ಎಂಬ ಕುತೂಹಲ ಕೂಡ ಹುಟ್ಟಿಕೊಂಡಿದೆ.

ನನ್ನ ಪಾತ್ರ ಮತ್ತು ಆ ಹಾಡಿಗೆ ತಕ್ಕಂತೆ ವಿದ್ಯಾ ಅವರೇ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದು, ಹಾಡು ಬಿಡುಗಡೆ ಆದ ಮೇಲೆ ಎಲ್ಲರೂ ನೋಡಿ ಮೆಚ್ಚಿಕೊಳ್ಳುತ್ತಿರುವುದು ನನಗೆ ಖುಷಿ ಕೊಟ್ಟಿದೆ. ಒಂದು ಸಿನಿಮಾ ಹಾಗೂ ಪಾತ್ರಕ್ಕೆ ಕಾಸ್ಟ್ಯೂನ್ ಕೂಡ ಮಹತ್ವ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡುವಂತೆ ಹಾಡಿನಲ್ಲಿ 13 ಗೆಟಪ್‌ಗಳನ್ನು ಹಾಕಿಕೊಂಡಿದ್ದೇನೆ. ಇದು ರೋರಿಸಂ ಹಾಡಿನ ಹೈಲೈಟ್.- ಶ್ರೀಮುರಳಿ ನಟ

ಭರಾಟೆಯ ಇಂಟ್ರೋ ಹಾಡಿಗೆ ಚಂದನ್‌ ಶೆಟ್ಟಿ ಸ್ವರ!

ಹೌದು, ಈ ಹಾಡಿನಲ್ಲಿ ಬರುವ ಅಷ್ಟೂ ಕಾಸ್ಟ್ಯೂಮ್ಗಳನ್ನು ಡಿಸೈನ್ ಮಾಡಿರುವುದು ವಿದ್ಯಾಶ್ರೀಮುರಳಿ. ಇದು ಅವರ ಮೊದಲ ಕಾಸ್ಟ್ಯೂಮ್ ವಿನ್ಯಾಸ ಕೆಲಸ. ರಾಜಸ್ಥಾನಿ ಉಡುಪುಗಳನ್ನು ಒಳಗೊಂಡ ಈ ವಿನ್ಯಾಸಗಳು ನಟ ಶ್ರೀಮುರಳಿ ಅವರಿಗೆ ತಕ್ಕಂತಿವೆ.

ಅಲ್ಲದೆ ಹಾಡಿನ ಶ್ರೀಮಂತಿಕೆ ಹೆಚ್ಚಿಸುವ ಜತೆಗೆ ಕಲರ್ ಫುಲ್ ಮಾಸ್ ಲುಕ್ ಕೊಟ್ಟಿರುವುದು ಕೂಡ ಇದೇ ಕಾಸ್ಟ್ಯೂಮ್‌ಗಳು ಎಂಬುದು ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಅವರ ಮಾತು. ತಮ್ಮ ಪತಿಗೆ ತಾವೇ ಮೊದಲ ಬಾರಿಗೆ ಕಾಸ್ಟ್ಯೂಮ್ ಡಿಸೈನ್ ಮಾಡುವ ಚಿತ್ರರಂಗ ಬಂದಿದ್ದಾರೆ ವಿದ್ಯಾಶ್ರೀಮುರಳಿ ಅವರು. ಸುಪ್ರೀತ್ ನಿರ್ಮಿಸಿ, ಚೇತನ್ ಕುಮಾರ್ ನಿರ್ದೇಶಿಸಿರುವ ಈ ಚಿತ್ರಕ್ಕೆ ಶ್ರೀಲೀಲಾ ನಾಯಕಿ. ಅಕ್ಟೋಬರ್ ತಿಂಗಳಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.

ಭರಾಟೆಯಲ್ಲಿ ಭರ್ಜರಿ ಸೌಂಡ್ ಮಾಡಲು ಬರ್ತಿದ್ದಾನೆ ಅಗಸ್ತ್ಯಾ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?
Karna: ಎಲ್ಲವೂ ಸರಿ ಹೋಗತ್ತೆ ಅಂದುಕೊಂಡಾಗ್ಲೇ ನಿಧಿಯ ಈ ನಿರ್ಧಾರ ಸರಿನಾ? ನಿತ್ಯಾ ಮುಂದೆ ಆಗಿದ್ದೇನು?