ಡಿ ಬಾಸ್‌ ಈಸ್ ಬ್ಯಾಕ್;'ಆಟೋ'ಗ್ರಾಫ್‌ಗೆ ಮುಗಿಬಿದ್ದ ಅಭಿಮಾನಿಗಳು!

Published : Sep 30, 2019, 09:46 AM IST
ಡಿ ಬಾಸ್‌ ಈಸ್ ಬ್ಯಾಕ್;'ಆಟೋ'ಗ್ರಾಫ್‌ಗೆ ಮುಗಿಬಿದ್ದ ಅಭಿಮಾನಿಗಳು!

ಸಾರಾಂಶ

  ಕೀನ್ಯಾದಿಂದ ಮನೆಗೆ ಮರುಳಿದ ಡಿ-ಬಾಸ್ ನೋಡಲು ಬೆಳ್ಳಂಬೆಳಗ್ಗೆ ಮನೆ ಮುಂದೆ ಹಾಜರಾದ ಅಭಿಮಾನಿಗಳು, ಆಟೋ ಮೇಲೆ ಆಟೋಗ್ರಾಫ್ ಹಾಕಿಸಿಕೊಂಡು ಸಂಭ್ರಮಪಟ್ಟರು.

ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಅಂದ್ರೆನೇ ಹಾಗೆ. ಎಲ್ಲರನ್ನೂ ಪ್ರೀತಿಸುತ್ತಾ, ಬೇಡಿ ಬಂದವರಿಗೆ ಸಹಾಯ ಮಾಡುತ್ತಾ ಅಭಿಮಾನಿಗಳ ಮನದಲ್ಲಿ ಮನೆ ಮಾಡಿದ್ದಾರೆ.

ಬ್ಯಾಕ್ ಟು ಬ್ಯಾಕ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದ ದರ್ಶನ್ ಕುರುಕ್ಷೇತ್ರ ಚಿತ್ರದ ಹಿಟ್‌ ನಂತರ ಕೊಂಚ ಬ್ರೇಕ್‌ ಬೇಕೆಂದು ಪ್ರಾಣಿಗಳೊಂದಿಗೆ ಸಮಯ ಕಳೆಯಲು ಕೀನ್ಯಾ ಅರಣ್ಯಕ್ಕೆ ತೆರಳಿದ್ದರು. ವೈಲ್ಡ್ ಲೈಫ್ ಫೋಟೋಗ್ರಫಿ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಇರುವ ದರ್ಶನ್ ಪ್ರೊಫೆಷನಲ್ ಕ್ಯಾಮೆರಾದೊಂದಿಗೆ ಕಾಣಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಕೀನ್ಯಾದ ಕಾಡಲ್ಲಿ ಗಜರಾಜನೊಂದಿಗೆ ದಿನ ಕಳೆದ ಡಿ-ಬಾಸ್!

ಇನ್ನು ಕೀನ್ಯಾದಿಂದ ಬೆಂಗಳೂರಿಗೆ ಆಗಮಿಸಿದ ದರ್ಶನ್‌ ದರ್ಶನ ಪಡೆಯಲು ಭಾನುವಾರ ಅಭಿಮಾನಿಗಳು ಮನೆಯ ಮುಂದೆ ಕಾತುರದಿಂದ ಕಾಯುತ್ತಿದ್ದರು. ಯಾರಿಗೂ ನೋಯಿಸಬಾರದೆಂದು ಮನೆಯಿಂದ ಹೊರ ಬಂದು ಎಲ್ಲಾ ಅಭಿಮಾನಿಗಳನ್ನು ಮಾತನಾಡಿಸಿದ್ದಾರೆ. ಹಾಗೂ ಎರಡು ಆಟೋ ಚಾಲಕರು ಆಟೋಗ್ರಾಫ್ ಹಾಕಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

 

ದರ್ಶನ್ ಕೈಯಲ್ಲಿ 'ರಾಬರ್ಟ್' ಚಿತ್ರದ ಪ್ರಾಜೆಕ್ಟ್‌ ಕೈಯಲ್ಲಿದ್ದು ಅಕ್ಟೋಬರ್ 2 ರಿಂದ ಚಿತ್ರೀಕರಣ ಉತ್ತರ ಭಾರತದಲ್ಲಿ ನಡೆಯಲಿದೆ ಎಂದು ಕೆಲ ಮೂಲಗಳಿಂದ ತಿಳಿದು ಬಂದಿದೆ. ತರುಣ್ ಆ್ಯಕ್ಷನ್ ಕಟ್‌ ಹೇಳುತ್ತಿರುವ ‘ರಾಬರ್ಟ್‌’ಗೆ ಆಶಾ ಭಟ್ ನಟಿಯಾಗಿ ಸಾಥ್ ನೀಡಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?