ರಾವಣಾಸುರ ಯಶ್ ಸಿನಿಮಾ ನೋಡಲು ಹೋದಾಗ ಶಾರುಖ್ ಖಾನ್ ಎಂಟ್ರಿ? ಥಿಯೇಟರ್‌ನಲ್ಲಿ ಡಬಲ್ ಧಮಾಕಾ!

Published : Oct 17, 2026, 03:38 PM IST
King Promo with Ramayana

ಸಾರಾಂಶ

ಶಾರುಖ್ ಖಾನ್ ನಟನೆಯ ಬಹುನಿರೀಕ್ಷಿತ ‘ಕಿಂಗ್’ ಸಿನಿಮಾದ ಸ್ಪೆಷಲ್ ಪ್ರೋಮೋವನ್ನು ಯಶ್ ಅಭಿನಯದ ‘ರಾಮಾಯಣ’ ಚಿತ್ರದ ಜೊತೆ ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಲು ಮೇಕರ್ಸ್ ಪ್ಲ್ಯಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ.

ಶಾರುಖ್ ಖಾನ್ ನಟನೆಯ 'ಕಿಂಗ್' ಸಿನಿಮಾದ ಪ್ರೋಮೋ, ರಣಬೀರ್ ಕಪೂರ್ ಹಾಗೂ ಯಶ್ ಅಭಿನಯದ 'ರಾಮಾಯಣ' ಚಿತ್ರದ ಜೊತೆ ಥಿಯೇಟರ್‌ಗಳಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ. 'ಕಿಂಗ್' ಬಿಡುಗಡೆಗೂ ಮುನ್ನ ಈ ಸ್ಪೆಷಲ್ ವಿಡಿಯೋ ಪ್ರೇಕ್ಷಕರ ಮುಂದೆ ಬರಲಿದೆ ಎನ್ನುತ್ತಿವೆ ವರದಿಗಳು.

ಶಾರುಖ್ ಖಾನ್ ಅವರ ಮುಂಬರುವ ಆಕ್ಷನ್ ಸಿನಿಮಾ 'ಕಿಂಗ್' ಬಿಡುಗಡೆಗೂ ಮುನ್ನ ಭರ್ಜರಿ ಪ್ರಮೋಷನ್‌ಗೆ ರೆಡಿಯಾಗುತ್ತಿದೆ. ರಣಬೀರ್ ಕಪೂರ್ ಮತ್ತು ಯಶ್ ನಟನೆಯ ಬಹುನಿರೀಕ್ಷಿತ ರಾಮಾಯಣ ಸಿನಿಮಾದ ಜೊತೆಗೆ 'ಕಿಂಗ್' ಪ್ರೋಮೋವನ್ನು ಥಿಯೇಟರ್‌ಗಳಲ್ಲಿ ರಿಲೀಸ್ ಮಾಡಲು ಮೇಕರ್ಸ್ ಪ್ಲಾನ್ ಮಾಡಿದ್ದಾರೆ. ಆದರೆ, ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ.

'ರಾಮಾಯಣ' ಜೊತೆ ಬರುತ್ತಾ 'ಕಿಂಗ್' ಪ್ರೋಮೋ?

ನವೆಂಬರ್ 5, 2026ರಂದು 'ರಾಮಾಯಣ' ಸಿನಿಮಾ ತೆರೆಗಪ್ಪಳಿಸಲಿದೆ. ಇದೇ ವೇಳೆ 'ಕಿಂಗ್' ಸಿನಿಮಾದ ಸ್ಪೆಷಲ್ ಪ್ರೋಮೋವನ್ನು ಥಿಯೇಟರ್‌ಗಳಲ್ಲಿ ಪ್ರದರ್ಶಿಸಲು ಚಿತ್ರತಂಡ ಯೋಚಿಸಿದೆ. ಈ ಪ್ಲಾನ್ ವರ್ಕೌಟ್ ಆದರೆ, ಡಿಸೆಂಬರ್‌ನಲ್ಲಿ ರಿಲೀಸ್ ಆಗಲಿರುವ 'ಕಿಂಗ್' ಸಿನಿಮಾಗೆ ದೊಡ್ಡ ಮಟ್ಟದ ಪ್ರೇಕ್ಷಕರನ್ನು ಸೆಳೆಯಲು ಸಾಧ್ಯವಾಗುತ್ತದೆ.

ನವೆಂಬರ್ 2ರಂದು ಶಾರುಖ್ ಖಾನ್ ತಮ್ಮ 61ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಅದೇ ದಿನ 'ಕಿಂಗ್' ಟೀಸರ್ ರಿಲೀಸ್ ಆಗುವ ಸಾಧ್ಯತೆಯೂ ಇದೆ. ತಮ್ಮ ನೆಚ್ಚಿನ ನಟನ ಹೊಸ ಅವತಾರ ನೋಡಲು ಫ್ಯಾನ್ಸ್ ಕೂಡ ಕಾಯುತ್ತಿದ್ದಾರೆ. ಆದರೆ, ಟೀಸರ್ ರಿಲೀಸ್ ಡೇಟ್ ಹಾಗೂ ಥಿಯೇಟರ್ ಪ್ರಮೋಷನ್ ಬಗ್ಗೆ ಚಿತ್ರತಂಡ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

'ಕಿಂಗ್' ಚಿತ್ರದಲ್ಲಿ ಘಟಾನುಘಟಿ ಸ್ಟಾರ್ಸ್

'ಪಠಾಣ್' ಅಂತಹ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟಿದ್ದ ನಿರ್ದೇಶಕ ಸಿದ್ಧಾರ್ಥ್ ಆನಂದ್, ಈಗ 'ಕಿಂಗ್' ಮೂಲಕ ಶಾರುಖ್ ಖಾನ್‌ರನ್ನು ಮತ್ತೆ ಆಕ್ಷನ್ ಅವತಾರದಲ್ಲಿ ತೋರಿಸಲಿದ್ದಾರೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ, ಸುಹಾನಾ ಖಾನ್, ಅಭಿಷೇಕ್ ಬಚ್ಚನ್, ಅರ್ಷದ್ ವಾರ್ಸಿ ಮತ್ತು ಅಭಯ್ ವರ್ಮಾ ಸೇರಿದಂತೆ ದೊಡ್ಡ ತಾರಾಗಣವೇ ಇದೆ. 2026ರ ಡಿಸೆಂಬರ್ 24ರಂದು 'ಕಿಂಗ್' ಸಿನಿಮಾ ಥಿಯೇಟರ್‌ಗಳಿಗೆ ಎಂಟ್ರಿ ಕೊಡಲಿದೆ. ಕ್ರಿಸ್‌ಮಸ್ ಹಬ್ಬದ ಟಾರ್ಗೆಟ್ ಇಟ್ಟುಕೊಂಡು ಮೇಕರ್ಸ್ ಈ ಡೇಟ್ ಫಿಕ್ಸ್ ಮಾಡಿದ್ದಾರೆ.

ಗ್ರ್ಯಾಂಡ್ ರಿಲೀಸ್‌ಗೆ ರೆಡಿಯಾಗುತ್ತಿದೆ 'ರಾಮಾಯಣ'

ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ನಮ್ಮ ಯಶ್ ರಾವಣನಾಗಿ ಅಬ್ಬರಿಸಲಿದ್ದಾರೆ. ನವೆಂಬರ್‌ನಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ, 'ಕಿಂಗ್' ಪ್ರಮೋಷನ್‌ಗೆ ಇದು ಹೇಳಿ ಮಾಡಿಸಿದ ವೇದಿಕೆಯಾಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಹಿಳೆಯರೇ ಆಳುವ ಗ್ಯಾಂಗ್‌ಸ್ಟರ್ ಸಾಮ್ರಾಜ್ಯ: 80ರ 'ಅಕ್ಕ' ರಹಸ್ಯ ಬಯಲು ಮಾಡ್ತಾರಾ ಕೀರ್ತಿ-ರಾಧಿಕಾ
Drishyam 3 Collection: ಅಜಯ್ ದೇವಗನ್ ಸಿನಿಮಾ ಏನಾಯ್ತು? 15 ದಿನಗಳಲ್ಲಿ 'ದೃಶ್ಯಂ 3' ಮಾಡಿರೋ ಕಲೆಕ್ಷನ್ ಎಷ್ಟು?