ರಾಮಾಜೋಯಿಸರಾಗಿ ಸಾಯಿಕುಮಾರ್‌!

Published : Jul 27, 2019, 10:36 AM IST
ರಾಮಾಜೋಯಿಸರಾಗಿ ಸಾಯಿಕುಮಾರ್‌!

ಸಾರಾಂಶ

ಸಿಂಪಲ್‌ ಸುನಿ ಹಾಗೂ ಶರಣ್‌ ಕಾಂಬಿನೇಷನ್‌ನ ‘ಅವತಾರ ಪುರುಷ’ ಚಿತ್ರದಲ್ಲಿ ಸಾಯಿಕುಮಾರ್‌ ಪಾತ್ರ ಹೇಗಿರುತ್ತದೆ ಎಂಬುದಕ್ಕೆ ಇಲ್ಲಿರುವ ಅವರ ಫೋಟೋಗಳೇ ಸಾಕ್ಷಿ. ‘ರಂಗಿತರಂಗ’ ಚಿತ್ರದ ನಂತರ ಮತ್ತೊಂದು ವಿಭಿನ್ನ ರೀತಿಯ ಪಾತ್ರವನ್ನು ಇಲ್ಲಿ ಮಾಡಿದ್ದಾರೆ ಎಂಬುದು ಚಿತ್ರತಂಡದ ಮಾತು. ತಮ್ಮ ಹುಟ್ಟು ಹಬ್ಬದ ಸಂಭ್ರಮಕ್ಕಾಗಿ ಚಿತ್ರದಲ್ಲಿನ ತಮ್ಮ ಪಾತ್ರದ ಫಸ್ಟ್‌ ಲುಕ್‌ ಬಿಡುಗಡೆ ಮಾಡಿರುವುದಕ್ಕೆ ಸಾಯಿಕುಮಾರ್‌ ಚಿತ್ರತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಇಷ್ಟಕ್ಕೂ ಅವರು ಚಿತ್ರದ ಬಗ್ಗೆ ಹೇಳಿದ್ದೇನು?

1. ಚಿತ್ರದ ಪೋಷಕ ನಟನ ಪಾತ್ರಕ್ಕೂ ಒಂದು ಲಾಂಚಿಂಗ್‌ ಸಂಭ್ರಮ ಮಾಡುತ್ತಿರುವುದನ್ನು ನೋಡಿದಾಗ ಪುಷ್ಕರ್‌ ಮಲ್ಲಿಕಾರ್ಜುನಯ್ಯ ಎಷ್ಟುಪ್ಯಾಷನ್‌ ಇರುವ ನಿರ್ಮಾಪಕ ಅನ್ನೋದು ಗೊತ್ತಾಗುತ್ತದೆ. ಇಲ್ಲಿರುವ ಫೋಟೋಗಳಂತೆ ಚಿತ್ರದಲ್ಲೂ ನನ್ನ ಪಾತ್ರ ತುಂಬಾ ವಿಶೇಷವಾಗಿದೆ.

2. ಈ ಸಿನಿಮಾ ನನಗೆ ಹಲವು ಕಾರಣಗಳಿಗೆ ಮಹತ್ವದ್ದು. ಯಾಕೆಂದರೆ ನಾನು ಕನ್ನಡ ಚಿತ್ರರಂಗಕ್ಕೆ ಬಂದು 25 ವರ್ಷಗಳಾಗುತ್ತಿವೆ. ನನ್ನ ಮೊದಲ ಚಿತ್ರದ ನಾಯಕಿ ಸುಧಾರಾಣಿ ಅವರು. ಅವರು ಈ ‘ಅವತಾರ ಪುರುಷ’ ಚಿತ್ರದಲ್ಲಿ ಸೋದರಿಯಾಗಿ ನಟಿಸಿದ್ದಾರೆ. ಇನ್ನೂ ಆ ದಿನಗಳಲ್ಲಿ ನಾನು ನಟಿ ಭವ್ಯ ಜತೆ ಅಭಿನಯಿಸುವ ಅವಕಾಶ ಸಿಗಲಿಲ್ಲ. ಇಲ್ಲಿ ನನಗೆ ಅವರು ಜೋಡಿಯಾಗಿ ನಟಿಸಿರುವುದು ವಿಶೇಷ.

ನಾಗಿಣಿ ಪಾತ್ರದಲ್ಲಿರುವ ಈ ನಟ ಯಾರೆಂದು ಥಟ್ ಅಂತ ಹೇಳಿ!

3. ನಾಯಕನ ಚೈಲ್ಡ್‌ ವುಡ್‌ ದಿನಗಳಲ್ಲಿ ಒಂದು ಮುಖ್ಯವಾದ ಪಾತ್ರ ಬರುತ್ತದೆ. ಅದು ಆರ್ಯವೇದಿಕ್‌ ಪಂಡಿತ್‌ ರಾಮಾ ಜೋಯಿಸರ ಪಾತ್ರ ನನ್ನದು. ಎರಡು ರೀತಿಯ ಶೇಡ್‌ ಇರುವ ಪಾತ್ರವನ್ನು ನಾನು ಇಲ್ಲಿ ಮಾಡುತ್ತಿದ್ದಾನೆ. ‘ರಂಗಿತರಂಗ’ ಚಿತ್ರದ ನಂತರ ಮತ್ತೊಂದು ಆಸಕ್ತಿಕರ ಪಾತ್ರ ಇದು.

4. ಚಿತ್ರದ ಹೆಸರು, ಚಿತ್ರದ ಕತೆ, ಚಿತ್ರತಂಡ ಎಲ್ಲದೂ ನನಗೆ ಹೊಸದು. ನಾನು ಶರಣ್‌ ಜತೆ ಮೊದಲ ಬಾರಿಗೆ ನಟಿಸುತ್ತಿದ್ದೇನೆ. ಶರಣ್‌ ಅವರ ತಂದೆ- ತಾಯಿ ನನಗೆ ತುಂಬಾ ಪರಿಚಿತರು. ಶರಣ್‌ ಅವರನ್ನು ನಾನು ಚಿಕ್ಕಂದಿನಿಂದಲೂ ನೋಡಿದ್ದೇನೆ. ಈಗ ಸೆಟ್‌ನಲ್ಲಿ ನೋಡಿದಾಗ ಅದ್ಭುತ ನಟ ಅನಿಸಿತು. ಅವರಿಗೆ ಸೂಪರ್‌ ಕಾಮಿಡಿ ಟೈಮಿಂಗ್‌ ಇದೆ.

5. ನಿರ್ದೇಶಕ ಸಿಂಪಲ್‌ ಸುನಿ ಅವರ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ಹೆಸರಿಗೆ ತಕ್ಕಂತೆ ನನಗೆ ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ಗೆ ಬಂದು ಸಿಂಪಲ್ಲಾಗಿ ಒಂದು ಕತೆ ಹೇಳಿದರು. ನನಗೆ ತುಂಬಾ ಇಷ್ಟವಾಯಿತು. ನಿರ್ದೇಶಕರ ಜತೆಗೆ ಬಂದಿದ್ದ ಪುಷ್ಕರ್‌ ಅವರೇ ಹೀರೋ ತರ ಇದ್ದರು. ಹೊಸ ತಂಡ, ಹೊಸ ಕತೆ ಅಂತ ನಾನು ಒಪ್ಪಿಕೊಂಡೆ.

ಖ್ಯಾತ ನಿರ್ದೇಶಕನಿಂದ 10.ರೂ ಪಡೆದು ಧನ್ಯನಾದ ಶರಣ್!

6. ಶರಣ್‌ ಹೀರೋ ಅಂದ ಮೇಲೆ ಮನರಂಜನೆಗೆ ಕೊರತೆ ಇರಲ್ಲ. ಮತ್ತೊಂದು ಹೈಲೈಟ್‌ ಎಂದರೆ ಚಿತ್ರದಲ್ಲಿ ಬರುವ ಲೋಕೇಶನ್‌ ತುಂಬಾ ಮಹತ್ವ. ‘ರಂಗಿತರಂಗ’ ಚಿತ್ರದ ನಂತರ ವಿಲಿಯಂ ಅವರು ಈ ಚಿತ್ರಕ್ಕೂ ಕ್ಯಾಮೆರಾ ಹಿಡಿದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಳಗಳನೆ ಅತ್ತ ಕಾವ್ಯಾ; ಟಾಸ್ಕ್‌ ಗೆದ್ದ ಗಿಲ್ಲಿ, ಸ್ನೇಹದಲ್ಲಿ ಸೋತ!
Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​