ನೀವೂ ಸೂಪರ್ ದಂಪತಿನಾ? ಹಾಗಾದ್ರೆ ಇಲ್ಲಿದೆ ವೇದಿಕೆ

Published : Jul 27, 2019, 09:46 AM IST
ನೀವೂ ಸೂಪರ್ ದಂಪತಿನಾ? ಹಾಗಾದ್ರೆ ಇಲ್ಲಿದೆ ವೇದಿಕೆ

ಸಾರಾಂಶ

ಗಂಡ-ಹೆಂಡತಿ ಅಂದ ಮೇಲೆ ಅಲ್ಲಿ ಜಗಳ, ವಾಗ್ವಾದ, ಅಭಿಪ್ರಾಯ ಭೇದ ಎಲ್ಲವೂ ಇರಬೇಕು. ಇವೆಲ್ಲಕ್ಕಿಂತ ಮಿಗಿಲಾಗಿ ಪ್ರೀತಿ, ಪರಸ್ಪರ ನಂಬಿಕೆ ಮತ್ತು ಹೊಂದಾಣಿಕೆ ಇರಲೇ ಬೇಕಾಗುತ್ತದೆ. ದಂಪತಿಗಳ ನಡುವಿನ ಈ ಸಂಬಂಧವನ್ನು ಇನ್ನಷ್ಟುಗಟ್ಟಿಗೊಳಿಸುವಂಥ ಶೋ ಒಂದು ಕಲರ್ಸ್‌ ಸೂಪರ್‌ ಚಾನೆಲ್‌ನಲ್ಲಿ ಆರಂಭವಾಗುತ್ತಿದೆ. ಅದುವೇ ಸೂಪರ್‌ ದಂಪತಿ.

ಗಂಡ-ಹೆಂಡತಿ ಅಂದ ಮೇಲೆ ಅಲ್ಲಿ ಜಗಳ, ವಾಗ್ವಾದ, ಅಭಿಪ್ರಾಯ ಭೇದ ಎಲ್ಲವೂ ಇರಬೇಕು. ಇವೆಲ್ಲಕ್ಕಿಂತ ಮಿಗಿಲಾಗಿ ಪ್ರೀತಿ, ಪರಸ್ಪರ ನಂಬಿಕೆ ಮತ್ತು ಹೊಂದಾಣಿಕೆ ಇರಲೇ ಬೇಕಾಗುತ್ತದೆ. ದಂಪತಿಗಳ ನಡುವಿನ ಈ ಸಂಬಂಧವನ್ನು ಇನ್ನಷ್ಟುಗಟ್ಟಿಗೊಳಿಸುವಂಥ ಶೋ ಒಂದು ಕಲರ್ಸ್‌ ಸೂಪರ್‌ ಚಾನೆಲ್‌ನಲ್ಲಿ ಆರಂಭವಾಗುತ್ತಿದೆ. ಅದುವೇ ಸೂಪರ್‌ ದಂಪತಿ.

ಜುಲೈ 29ರಿಂದ ಸೋಮವಾರದಿಂದ ಶನಿವಾರ ಸಂಜೆ 6ರಿಂದ 7ರವರೆಗೆ ಪ್ರಸಾರವಾಗಲಿರುವ ಈ ಕಾರ್ಯಕ್ರಮವನ್ನು ಬಿಗ್‌ಬಾಸ್‌ ಮತ್ತು ಅಡುಗೆ ಕಾರ್ಯಕ್ರಮಗಳ ಮೂಲಕ ಮನೆ ಮಾತಾಗಿರುವ ಮುರಳಿ ನಡೆಸಿಕೊಡಲಿದ್ದಾರೆ. ಹೊಸದಾಗಿ ಮದುವೆಯಾಗಿರುವ ನವಜೋಡಿಗಳಿಂದ ಆರಂಭವಾಗಿ ಮದುವೆಯ ಸಿಲ್ವರ್‌ ಜುಬಿಲಿ ಆಚರಿಸಿಕೊಂಡಿರುವವರು ಕೂಡಾಇದರಲ್ಲಿ ಭಾಗವಹಿಸಬಹುದು.

 

ಸಾಮಾನ್ಯವಾಗಿ ಈ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಲು ಇಚ್ಛಿಸುವ ವ್ಯಕ್ತಿಗಳು ಬೆಂಗಳೂರಿಗೆ ಬರಬೇಕಾಗುತ್ತದೆ. ಆದರೆ ಸೂಪರ್‌ದಂಪತಿ ಸ್ಪರ್ಧಿಗಳಿಗೆ ಆ ಕಷ್ಟಇಲ್ಲ. ಏಕೆಂದರೆ ಈ ಶೋ ಜನರ ಮನೆ ಬಾಗಿಲಿಗೆ ಬರುತ್ತದೆ. ಇದಕ್ಕಾಗಿಯೇ ಲಾರಿಯೊಂದು ಸಿದ್ಧವಾಗಿದೆ. ಈ ಲಾರಿಯಲ್ಲಿ ವಿಶೇಷವಾದ ವೇದಿಕೆ ನಿರ್ಮಿಸಲಾಗಿದೆ. ಈ ಲಾರಿ ಕರ್ನಾಟಕದ ನೂರಾರು ಊರುಗಳಿಗೆ ಪ್ರಯಾಣ ಬೆಳೆಸುತ್ತದೆ. ಅಂದರೆ ತಾಲೂಕು ಕೇಂದ್ರಗಳಿಗೆ ದೊಡ್ಡ ರಿಯಾಲಿಟಿ ಶೋ ಬರುತ್ತಿರುವುದು ಕರ್ನಾಟಕದಲ್ಲಿ ಇದೇ ಮೊದಲು. ಊರೂರಿನಲ್ಲಿ ದಂಪತಿಗಳನ್ನು ಆಟವಾಡಿಸಿ, ಮಾತಾಡಿಸಿ, ನಕ್ಕು ನಲಿಸಿ ಅವರಿಗೆ ಬಹುಮಾನಗಳನ್ನೂ ನೀಡುವ ಶೋ ಇದು.

ಕಾರ್ಯಕ್ರಮ ನಡೆಯುವ ಊರುಗಳಲ್ಲಿ ಒಂದು ವಾರದ ಮೊದಲೇಆಡಿಷನ್‌ ನಡೆಯುತ್ತದೆ. ಅದರಲ್ಲಿ ಆಯ್ಕೆಯಾದವರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ವೂಟ್‌ನ ಮೂಲಕವೂ ದಂಪತಿಗಳು ಅರ್ಜಿ ಸಲ್ಲಿಸಬಹುದು. 

ಪ್ರತಿ ಎಪಿಸೋಡ್‌ನಲ್ಲೂ ನಾಲ್ಕು ದಂಪತಿಗಳು ಮೂರು ಆಟಗಳನ್ನು ಆಡುತ್ತಾರೆ. ಪ್ರತಿ ಗೇಮ್‌ನ ಕೊನೆಗೂ ಒಬ್ಬ ದಂಪತಿ ಆಟದಿಂದ ಹೊರ ಹೋಗುತ್ತಾರೆ. ಕೊನೆಗೆ ಒಬ್ಬ ದಂಪತಿ ಸೂಪರ್‌ದಂಪತಿಯಾಗಿ ಹೊರಹೊಮ್ಮುತ್ತಾರೆ. ಗೆಲ್ಲುವ ದಂಪತಿ ಬಂಗಾರದ ಮಾಂಗಲ್ಯ ಬಹುಮಾನವಾಗಿ ಗೆಲ್ಲುತ್ತಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಟೈಮ್‌ ಬಂದೇಬಿಡ್ತು, ಅಂದು ಹೊಟ್ಟೆ ಉರಿಸಿದ್ದ ರಘು; ಚಕ್ರಬಡ್ಡಿ ಸಮೇತ ವಾಪಸ್‌ ಕೊಟ್ಟ ಗಿಲ್ಲಿ ನಟ
2025ರಲ್ಲಿ ಕಿರುತೆರೆಯಿಂದ ದೂರ ಸರಿದ ನಟಿಯರು: ಈಗ ಮಾಡ್ತಿರೋದು ಏನು?