ಅಂಬರೀಷ್​ ಟೆರರ್​ ಆಗಿದ್ರು: ಕಾಲೇಜ್​ ಹತ್ರ ಬರ್ತಿದ್ದಂಗೇ ಹುಡುಗೀರು ಹೆದರಿ ಓಡಿ ಹೋಗ್ತಿದ್ರು! ಆ ದಿನಗಳ ನೆನೆದ ನಟ ಜೈಜಗದೀಶ್​

Published : Nov 21, 2026, 04:18 PM IST
Jaijagadeesh about Ambareesh

ಸಾರಾಂಶ

ರೆಬೆಲ್ ಸ್ಟಾರ್ ಅಂಬರೀಷ್ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕಾಲೇಜು ದಿನಗಳಲ್ಲಿ ಅವರು ಎಷ್ಟೊಂದು ಟೆರರ್ ಆಗಿದ್ದರು ಎಂಬುದನ್ನು ನಟ ಜೈಜಗದೀಶ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನೆನಪಿಸಿಕೊಂಡಿದ್ದು, ಅವರನ್ನು ಕಂಡು ಹುಡುಗಿಯರು ಹೆದರಿ ಓಡುವ ಬಗ್ಗೆ ಹೇಳಿರುವ ಹಳೆಯ ವಿಡಿಯೋ ಮತ್ತೆ ವೈರಲ್​ ಆಗುತ್ತಿದೆ.

'ರೆಬೆಲ್ ಸ್ಟಾರ್' ಮತ್ತು 'ಮಂಡ್ಯದ ಗಂಡು' ಎಂದು ಪ್ರೀತಿಯಿಂದ ಕರೆಸಿಕೊಳ್ಳುವ ಅಂಬರೀಷ್​ ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಅಪಾರ. ಅವರನ್ನು ಅವರ ಅಭಿಮಾನಿಗಳು ಎಂದಿಗೂ ಸ್ನೇಹಜೀವಿ ಎಂದೇ ಕರೆಯುತ್ತಾರೆ. ಆರಂಭದಲ್ಲಿ ಒಂದಿಷ್ಟು ಸಿನಿಮಾಗಳಲ್ಲಿ ವಿಲನ್​ ಆಗಿ ನಟಿಸಿದ್ದರೂ, ಅವರು ನಾಯಕನಾಗಿ ಮಿಂಚಿದವರು. 1972ರಲ್ಲಿ ತೆರೆಕಂಡ ನಾಗರಹಾವು ಚಿತ್ರದ ಮೂಲಕ ನಟನೆ ಆರಂಭಿಸಿದ ಅಂಬರೀಷ್​ ಅವರು 200ಕ್ಕೂ ಅಧಿಕ ಸಿನಿಮಾಗಳ ನಟಿಸಿ ಮನೆ ಮಾತಾದವರು. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾಗಿ ಹಾಗೂ ಕರ್ನಾಟಕ ಸರ್ಕಾರದಲ್ಲಿ ವಸತಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 2018ರಲ್ಲಿ ಎಲ್ಲರನ್ನೂ ಅಗಲಿದರೂ ನಟ ಅಂಬರೀಷ್​ ಇಂದಿಗೂ ಅವರ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ.

ಹೆಣ್ಣುಮಕ್ಕಳು ಹೆದರಿ ಓಡ್ತಿದ್ರು

ಇಂತಿಪ್ಪ ನಟ, ಒಂದು ಕಾಲದಲ್ಲಿ ಅರ್ಥಾತ್​ ಕಾಲೇಜು ದಿನಗಳಲ್ಲಿ ಅಂಬರೀಷ್​ ಎಂದರೆ ಹೆಣ್ಣುಮಕ್ಕಳು ಎಷ್ಟರ ಮಟ್ಟಿಗೆ ಹೆದರುತ್ತಿದ್ದರು, ಹೇಗೆ ಎಲ್ಲರಲ್ಲಿ ಭಯ ಹುಟ್ಟಿಸುತ್ತಿದ್ದರು ಎಂದು ಹಿರಿಯ ನಟ ಜೈಜಗದೀಶ್​ ಅವರು ವೀಕೆಂಡ್​ ವಿತ್​ ರಮೇಶ್​ ಕಾರ್ಯಕ್ರಮದಲ್ಲಿ ಅಂಬರೀಷ್​ ಅವರ ಎದುರೇ ಹೇಳಿದ್ದ ಕ್ಲಿಪ್ಪಿಂಗ್​ ಈಗ ಮತ್ತೊಮ್ಮೆ ವೈರಲ್​ ಆಗುತ್ತಿದೆ. ಅಂಬರೀಷ್​ ಅವರು ಅತಿಥಿಯಾಗಿ ಬಂದ ಈ ಕಾರ್ಯಕ್ರಮದಲ್ಲಿ, ನಿಮ್ಮ ಬಾಲ್ಯದ ಸ್ನೇಹಿತ ಒಬ್ಬರು ನಿಮ್ಮ ಕಾಲೇಜು ದಿನಗಳ ಬಗ್ಗೆ ಹೇಳುತ್ತಾರೆ ನೋಡಿ ಎಂದು ನಟ ರಮೇಶ್​ ಅರವಿಂದ ಅವರು ಜೈಜಗದೀಶ್​ ಅವರನ್ನು ವೇದಿಕೆ ಮೇಲೆ ಕರೆ ತಂದಿದ್ದರು.

ಆ ಸಂದರ್ಭದಲ್ಲಿ, ಜೈಜಗದೀಶ್​ ಅವರು, ಅಂಬರೀಷ್​ ಎಂದರೆ ಈ ಸ್ನೇಹಜೀವಿ ಅಂತೆಲ್ಲಾ ಕರೆಯುತ್ತಾರೆ. ಆದರೆ ಕಾಲೇಜು ದಿನಗಳಲ್ಲಿ ಇವರು ಟೆರರ್​ ಆಗಿದ್ರು. ಬೈಕ್​ ಮೇಲೆ ಮಹಾರಾಣಿ ಕಾಲೇಜು ಹತ್ತಿರ ಬರ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆಯೇ ಹುಡುಗಿಯರೆಲ್ಲಾ ಹೆದರಿ ಓಡಿ ಹೋಗುತ್ತಿದ್ದರು. ಕೆಂಪು ಕಣ್ಣು, ಸಿಗರೇಟ್​ ಸೇಯುತ್ತಾ ಬೈಕ್ ಮೇಲೆ ಬರುತ್ತಿದ್ದರೆ ಕೆಲವರೆಲ್ಲಾ ಬಾಲಿವುಡ್​ ಆ್ಯಕ್ಟರ್​ ಶತ್ರುಘ್ನ ಸಿನ್ಹಾ ಥರ ಇದ್ದಾರೆ ಎಂದು ಹೇಳುತ್ತಿದ್ದರೂ, ಹೆಣ್ಣುಮಕ್ಕಳಂತೂ ಹೆದರಿ ಓಡುತ್ತಿದ್ದರು ಎಂದು ನೆನಪಿಸಿಕೊಂಡಿದ್ದರು.

Most Blessed Person ಅಂಬರೀಷ್​

ಸ್ಪೀಡ್ ಎಂದರೆ ಅಂಬರೀಷ್​ ಆಗಿದ್ರು. ಆಗ ಅವರ ಹತ್ತಿರ ಒಂದು ಅಂಬಾಸಿಡರ್​ ಕಾರು ಇತ್ತು. ಆ ಕಾರಿನಲ್ಲಿ ನಾವು ಪಡವರಹಳ್ಳಿ ಪಾಂಡವರು ಚಿತ್ರದ ಸಿನಿಮಾ ಶೂಟಿಂಗ್​ಗೆ ಹೋಗ್ತಾ ಇದ್ವಿ. ಆವಾಗ್ಲೇ ಸಿಕ್ಕಾಪಟ್ಟೆ ಸ್ಪೀಡ್​ ಕಾರು ಓಡಿಸ್ತಿದ್ರು. ನಾನು ಭಯಪಟ್ಟು ಕಾರಿನಿಂದ ಇಳಿದೇ ಬಿಟ್ಟಿದ್ದೆ. ಆವಾಗ ಮೈಸೂರು-ಬೆಂಗಳೂರಿಗೆ ಹೋಗಬೇಕು ಎಂದ್ರೆ ಕಾರಿನಲ್ಲಿ ಮೂರೂವರೆ ಗಂಟೆ ಬೇಕಾಗಿತ್ತು. ಆದರೆ ಅಂಬರೀಷ್​ ಒಂದೂವರೆ ಗಂಟೆಯಲ್ಲೇ ಹೋಗ್ತಿದ್ರು. ಆ ಪರಿ ಸ್ಪೀಡ್​ ಅವರದ್ದು ಎಂದಿದ್ದಾರೆ ಜೈಜಗದೀಶ್​. ನನ್ನ ಪ್ರಕಾರ, ಕನ್ನಡ ಚಿತ್ರರಂಗದಲ್ಲಿ ಮೋಸ್ಟ್​ ಬ್ಲೆಸ್ಡ್​ ಪರ್ಸನ್​ ಅಂದರೆ ಅದು ಅಂಬರೀಷ್​ ಎಂದು ನಟನನ್ನು ಜೈಜಗದೀಶ್​ ಹಾಡಿ ಹೊಗಳಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Exclusive: ಇದರಲ್ಲಿ ದೆವ್ವವೂ ಇದೆ, ದೈವವೂ ಇದೆ: 15 ವರ್ಷಗಳ ಸಿನಿಮಾ ಪಯಣದ ಕಥೆ ಬಿಚ್ಚಿಟ್ಟ ಶೈನ್ ಶೆಟ್ಟಿ
ಶ್ರದ್ಧಾ ಕಪೂರ್​ಗೆ ಕರೆ ಮಾಡಿ ಕ್ಷಮೆ ಕೇಳಿದ ಸಲ್ಮಾನ್ ಖಾನ್: ಅದೆಂಥಾ ಮಹಾ ಅಪರಾಧ ಮಾಡಿದಾರೆ ಈ ನಟ?