
ಅಣ್ಣಾವ್ರ ʼಸಂಪತ್ತಿಗೆ ಸವಾಲ್ʼ ಸಿನಿಮಾ ಗೊತ್ತೇ ಇದೆ. ಚಿತ್ರದಲ್ಲಿ ಬರುವ ʼಎಮ್ಮೆ ನಿನಗೆ ಸಾಟಿ ಇಲ್ಲʼ ಎಂಬ ಹಾಡು ಇವತ್ತಿಗೂ ಫೇಮಸ್ಸು. ಜನಮಾನಸದಲ್ಲಿ ಇವತ್ತಿಗೂ ಅಚ್ಚಳಿಯದೇ ಉಳಿದುಕೊಂಡಿರುವ ಹಾಡುಗಳಲ್ಲಿ ಇದೂ ಒಂದು. ಸಿನಿಮಾದಲ್ಲಿ ಬರುವ ಈ ಹಾಡಿನ ಹಿಂದೆ ಒಂದು ಸ್ವಾರಸ್ಯಕರ ಕಥೆ ಇದೆ. ʼಯಾರೇ ಕೂಗಾಡಲಿ.. ಊರೇ ಹೋರಾಡಲಿ.. ನಿನ್ನ ನೆಮ್ಮದಿಗೆ ಭಂಗವಿಲ್ಲ..ʼ ಈ ಹಾಡು ಸೂಪರ್ ಹಿಟ್ ತಂದಿಕೊಟ್ಟಿತು. ಚಿತ್ರದಲ್ಲಿ ಡಾ.ರಾಜ್‌ಕುಮಾರ್ ಎಮ್ಮೆ ಮೇಲೆ ಕೂತು ಬರುವ ದೃಶ್ಯವನ್ನು ಕಂಡು ಅಭಿಮಾನಿಗಳು ಕಳೆದು ಹೋಗಿದ್ದರು. ಇದೇ ಹಾಡಿನ ಚಿತ್ರೀಕರಣ ನಡೆಯುವಾಗ ಒಂದು ಘಟನೆ ನಡೆದಿತ್ತು.
ಎವಿ ಶೇಷಗಿರಿ ರಾವ್ ನಿರ್ದೇಶನದ ಸಿನಿಮಾದಲ್ಲಿ ಅಣ್ಣಾವ್ರ ಜೊತೆ ಮಂಜುಳಾ, ವಜ್ರಮುನಿ, ಬಾಲಕೃಷ್ಣ ಅವರಂತಹ ದಿಗ್ಗಜರು ನಟಿಸುತ್ತಿದ್ದರು. ಇದೇ ಚಿತ್ರದಲ್ಲಿ ಬಿ. ಮಲ್ಲೇಶ್ ಕೂಡ ಕೆಲಸ ಆಡುತ್ತಿದ್ದರು. ಗಾಜನೂರಿನಲ್ಲಿ ಚಿತ್ರೀಕರಣ ಮಾಡಬೇಕು ಎಂದು ಸಿನಿಮಾ ತಂಡ ಅಲ್ಲಿಗೆ ತೆರಳಿತ್ತು. ಶೂಟಿಂಗ್‌ಗೆ ಎಮ್ಮೆಯ ಅಗತ್ಯ ಇತ್ತು. ಈ ಹಿನ್ನೆಲೆಯಲ್ಲಿ ಬಿ.ಮಲ್ಲೇಶ್ ಗಾಜನೂರಿನ ಸುತ್ತಮುತ್ತದ ಹಳ್ಳಿಗಳಿಗೆ ಹೋಗಿ ಎಮ್ಮೆಯನ್ನು ಹುಡುಕಿದ್ದರು. ಒಂದಷ್ಟು ಹುಡುಕಿದ ನಂತರ ಸಾಧು ಎನಿಸುವ ಎಮ್ಮೆ ಒಂದನ್ನ ಹುಡುಕಿ ತಂದಿದ್ದರು. ಅಂತೆಯೇ ಅದರ ಮೇಲೆ ಕೂತು ಅಣ್ಣಾವ್ರು ಮೊದಲ ದಿನದ ಚಿತ್ರೀಕರಣ ಮುಗಿಸಿದ್ದರು.
ಮಾಲೀಕ 8 ಗಂಟೆ ಸುಮಾರಿಗೆ ಎಮ್ಮೆಯನ್ನು ಹೊಡೆದುಕೊಂಡು ಬರುತ್ತಾನೆ ಅಂದುಕೊಂಡಿದ್ದರು. ಬಂದಿರಲಿಲ್ಲ. 9 ಗಂಟೆ ಕಳೆದರೂ ಬರಲಿಲ್ಲ. ಕೊನೆಗೆ ಎಮ್ಮೆ ಮಾಲೀಕನ ಮನೆಗೆ ಹೋಗಿ ವಿಚಾರಿಸಿದ್ರೆ.. ಅಣ್ಣಾವ್ರು ಅದರ ಮೇಲೆ ಕೂತಿದ್ದಾರೆ ಅನ್ನೋ ಕಾರಣಕ್ಕೆ ಹಠಬಿದ್ದು ಎಮ್ಮೆಯನ್ನು 1500 ರೂಪಾಯಿಗೆ ಖರೀದಿಸಿ ತೆಗೆದುಕೊಂಡು ಹೋಗಿದ್ದನಂತೆ. ಚಾಮರಾಜನಗರದ ಮೂಲದ ವ್ಯಕ್ತಿಯೊಬ್ಬ ಒಂದೂವರೆ ಸಾವಿರ ಕೊಟ್ಟು ತೆಗೆದುಕೊಂಡು ಹೋಗಿದ್ದನಂತೆ. ಆವಾಗಿನ ಕಾಲದಲ್ಲಿ ಒಂದೂವರೆ ಸಾವಿರ ತುಂಬಾ ದೊಟ್ಟ ಅಮೌಂಟ್ ಆಗಿತ್ತು. ಮಾಲೀಕನಿಗೆ ಅದು ಭರಪೂರದ ಹಣ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಮಾರಿಬಿಟ್ಟದ್ದನಂತೆ!
ಈ ವಿಚಾರವನ್ನು ಬಿ.ಮಲ್ಲೇಶ್ ಕಾರ್ಯಕ್ರಮ ಒಂದರಲ್ಲಿ ಈ ಹಿಂದೆ ಹಂಚಿಕೊಂಡಿದ್ದರು. ಶೂಟಿಂಗ್ ಸೆಟ್‌ನಿಂದ ಸದ್ದಿಲ್ಲದೇ ಮಾರಾಟವಾದ ಎಮ್ಮೆಯ ಆಸೆಯನ್ನ ಬಿಟ್ಟು ಇಡೀ ಚಿತ್ರತಂಡ ಬೇರೆ ಎಮ್ಮೆಗಾಗಿ ಹೂಡುಕಾಟ ನಡೆಸಿ ತಂದಿತ್ತು. ಆಗ ಅಣ್ಣಾವ್ರ ರಿಯಾಕ್ಷನ್ ಹೇಗಿತ್ತು ಎಂಬುದನ್ನ ಬಿ. ಮಲ್ಲೇಶ್ ವಿವರಿಸಿದ್ದು ಹೀಗೆ.. ʼಹಿಂದೆ ನಿಂತಿದ್ದೀವಿ ಅಣ್ಣಾವ್ರು ಬಂದ್ರು. ಶೂಟಿಂಗ್ ಸ್ಟಾರ್ಟ್ ಆಯ್ತು. ಬಂದು ಎಮ್ಮೆ ಮೇಲೆ ಕೂತರು. ತಕ್ಷಣಕ್ಕೆ ಕೆಳಗೆ ಇಳಿದು ಬಿಟ್ರು. ನನ್ನ ಕರೆದು ನಿನ್ನೆ ಬಂದ ಎಮ್ಮೆನೇನಾ ಇದು? ಅಂದರು. ನಿನ್ನೆ ಬಂದ ಎಮ್ಮೆಯ ಕೂದಲು ಸಾಫ್ಟ್ ಆಗಿತ್ತು. ಇದೇನಯ್ಯ ಈತರ ಚುಚ್ಚುತ್ತಿದೆ ಅಂದರು. ಅಯ್ಯೋ ಅಣ್ಣಾ ಹಿಂಗಾಯ್ತಣ್ಣ. ನಾವೇನು ಮಾಡೋಣ ಅಣ್ಣ ಅಂತ ಹೇಳಿದ್ವಿʼ ಎಂಬ ವಿಚಾರವನ್ನ ಹಂಚಿಕೊಂಡಿದ್ದರು.
ಆ ಮೂಲಕ ಯಾರೇ ಕೂಗಾಡಲಿ ಹಾಡಿನ ಚಿತ್ರೀಕರಣಕ್ಕೆ ಎರಡು ಎಮ್ಮೆಗಳನ್ನ ಬಳಸಿಕೊಳ್ಳಲಾಗಿತ್ತು. ಇನ್ನು ಚಿತ್ರೀಕರಣ ಎಷ್ಟು ನಾಜೂಕಾಗಿ ನಡೆದಿತ್ತು ಅಂದರೆ ಸಿನಿಮಾ ಎಡಿಟರ್ ಭಕ್ತ ವಾತ್ಸಲಂ ಅವರಿಗೆ ಎರಡು ಎಮ್ಮೆ ಬಳಸಿರೋದೇ ಗೊತ್ತಾಗಿರಲಿಲ್ಲವಂತೆ. ಎಡಿಟರ್ ಭಕ್ತ ಅವರು ಮೂರು ತಿಂಗಳು ಕಾಲ ಎಡಿಟ್ ಮಾಡಿದ್ದಾರೆ. ಬೇರೆ ಎಮ್ಮೆ ಅಂತ ಹೇಳಿಯೇ ಇಲ್ಲ. ಈ ಸಿನಿಮಾ ಸಿಲ್ವರ್ ಜುಬಿಲಿ ಓಡಿದೆ. ಅಷ್ಟೊಂದು ಮಂದಿ ಸಿನಿಮಾ ನೋಡಿದ್ದಾರೆ. ಒಬ್ಬನೇ ಒಬ್ಬ ಆಡಿಯನ್ಸ್ ಏನ್ ಸರ್ ಎರಡು ಎಮ್ಮೆ ತೋರಿಸಿದ್ದಾರಾ ಎನ್ನಲಿಲ್ಲ ಎಂಬ ಸ್ವಾರಸ್ಯಕರ ಸಂಗತಿಯನ್ನ ಮಲ್ಲೇಶ್ ನೆನಪಿಸಿಕೊಂಡಿದ್ರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.