300ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿ ಶ್ರೀಮಂತನಾದ ಈ ನಟ ಬೆಂಗಳೂರಿನ ಸ್ವಂತ ಮನೆ, 7 ಸೈಟ್ ಮಾರಿದ್ದೇಕೆ?

Published : Nov 21, 2026, 04:15 PM IST
Veteran Actor Srinivasa Murthy

ಸಾರಾಂಶ

ಡಾ.ರಾಜ್‌ಕುಮಾರ್‌ನಿಂದ ಹಿಡಿದು ಪುನೀತ್ ರಾಜ್ ಕುಮಾರ್ ಸೇರಿದಂತೆ ದಿಗ್ಗಜರ ಜೊತೆ 300ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ ನಟ. ನಾಯಕನಾಗಿ, ಪೋಷಕ ನಟನಾಗಿ ಪಾತ್ರ ನಿರ್ವಹಿಸಿದ್ದಾರೆ. ಸದ್ಯ ಧಾರವಾಹಿಯಲ್ಲಿ ಮಿಂಚುತ್ತಿರುವ ಈ ನಟ ತನ್ನ ಮನೆ, 7 ಸೈಟ್ ಸೇರಿ ಎಲ್ಲಾ ಆಸ್ತಿ ಮಾರಿದ್ದೇಕೆ?

ಬೆಂಗಳೂರು (ನ.21) ನಾಯಕನಾಗಿ, ಪೋಷಕ ನಟನಾಗಿ ಸೇರಿದಂತೆ ವಿಭಿನ್ನ ಪಾತ್ರಗಳಲ್ಲಿ ಮಿಂಚಿದ ನಟ. ಅದರಲ್ಲೂ ಭೋಜರಾಜನ ಪಾತ್ರಕ್ಕೆ ಈಗಲೂ ಮೆಚ್ಚುಗೆ ಸುರಿಮಳೆ ವ್ಯಕ್ತವಾಗುತ್ತಲೇ ಇದೆ. ಡಾ.ರಾಜ್‌ಕುಮಾರ್‌ ಜೊತೆ, ಪುನೀತ್ ರಾಜ್‌ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ದರ್ಶನ್ ಸೇರಿದಂತೆ ಯುವ ಪೀಳಿಗೆ ನಟರು ಜೊತೆಗೂ ಪ್ರಮುಖ ಪಾತ್ರದಲ್ಲಿ ನಟಿಸಿದ ನಟ. ಬರಿಗೈಯಲ್ಲಿ ಬೆಂಗಳೂರಿಗೆ ಬಂದು ಪ್ರತಿಷ್ಠತ ಬಡಾವಣೆಯಲ್ಲಿ ದೊಡ್ಡ ಮನೆ, ಬೆಂಗಳೂರಿನ ವಿವಿದೆಡೆ 7 ಸೈಟ್ ಖರೀದಿಸಿದ ನಟ, ರಾತ್ರೋ ರಾತ್ರಿ ಎಲ್ಲಾ ಮಾರಾಟ ಮಾಡಬೇಕಾಯಿತು. ಸದ್ಯ ಮತ್ತೆ ಫೀನಿಕ್ಸ್‌ನಂತೆ ಎದ್ದುಬಂದಿರುವ ಈ ನಟ ಜೆಕೆ ಶ್ರೀನಿವಾಸ ಮೂರ್ತಿ.

ಬರಿಗೈಯಲ್ಲಿ ಬೆಂಗಳೂರು ಬಂದ ಮೂರ್ತಿ

ಜೆಕಿ ಶ್ರೀನಿವಾಸ ಮೂರ್ತಿ ಬಹುಮುಖ ಪ್ರತಿಭೆ ಕಲಾವಿದ. ನಾಯಕನಾಗಿ, ಪೋಷಕ ನಟನಾಗಿ ಮಾತ್ರವಲ್ಲ, ನಿರ್ದೇಶಕರಾಗಿ, ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ಶ್ರೀನಿವಾಸ್ ಮೂರ್ತಿ ಬೆಂಗಳೂರಿಗೆ ಬಂದಾಗ ಏನೂ ಇರಲಿಲ್ಲ. ವಿದ್ಯಾಭ್ಯಾಸ ಮುಗಿಸಿ ಸರ್ವೇ ಇಲಾಖೆಯಲ್ಲಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡಿದ್ದರು. ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದ ಶ್ರಿನಿವಾಸ ಮೂರ್ತಿ ನಾಟಕ ಮೂಲಕ ಸಿನಿಮಾಗೆ ಎಂಟ್ರಿಕೊಟ್ಟಿದ್ದರು. ನಾಯಕನಾಗಿ ಮಿಂಚಿದರು. ಸಿನಿಮಾದಿಂದ ಗಳಿಸಿದ ಸಂಪಾದನೆಯಲ್ಲಿ ಬೆಂಗಳೂರಿನಲ್ಲಿ ಭವ್ಯ ಅರಮನೆಯಂತ ಮನೆ ಕಟ್ಟಿಸಿದರು. ಬಳಿಕ ವಿವೆದೆಡೆ 7 ಸೈಟ್ ಖರೀದಿಸಿದ್ದರು. ಆದರೆ ತಮ್ಮ ಮಗನ ಸಿನಿಮಾ ನಿರ್ಮಾಣ ಮಾಡಿ ಕೋಟಿ ಕೋಟಿ ಸಾಲದಲ್ಲಿ ಮುಳುಗಿದರು. ಹೀಗಾಗಿ ಸ್ವಂತ ಮನೆ, 7 ಸೈಟ್ ಎಲ್ಲಾ ಮಾರಾಟ ಮಾಡಿ ಬಾಡಿಗೆ ಮನೆಯಲ್ಲಿ ಆಶ್ರಯ ಪಡೆಯುವ ಪರಿಸ್ಥಿತಿ ನಿರ್ಮಾಣವಾಯಿತು.

ಧಮಾಕು ಸಿನಿಮಾ ಮಾಡಿ ಸೋತು ಹೋದ ಮೂರ್ತಿ

ಶ್ರೀನಿವಾಸ ಮೂರ್ತಿ ಹಲವು ಸಿನಿಮಾಗಳ ನಿರ್ಮಾಣ ಹೊತ್ತಿದ್ದರು. ಆದರೆ ಕೆಲ ಸಿನಿಮಾಗಳ ಮಕಾಡೆ ಮಲಗಿತ್ತು. ಕೊನೆಗೆ ತಮ್ಮ ಪುತ್ರ ನವೀನ್ ಕೃಷ್ಣ ನಾಯಕನಾಗಿ ಧಿಮಾಕು ಸಿನಿಮಾ ನಿರ್ಮಾಣ ಮಾಡಿದರು. 2.67 ಲಕ್ಷ ರೂಪಾಯಿ ಬಂಡವಾಳ ಹಾಕಿ ಧಿಮಾಕು ಸಿನಿಮಾ ನಿರ್ಮಾಣ ಮಾಡಿದರು. ಸಿನಿಮಾ ಚೆನ್ನಾಗಿತ್ತು. ಆದರೆ ಗೆಲ್ಲಲಿಲ್ಲ. ಪರಿಣಾಮ ಶ್ರೀನಿವಾಸ್ ಮೂರ್ತಿ ಸಂಪೂರ್ಣ ಸಾಲದಲ್ಲಿ ಮುಳುಗಿದರು. ಸಾಲ ತೀರಿಸಲು ಸ್ವಂತ ಮನೆ ಮಾರಾಟ ಮಾಡಿದರು, ಇದ್ದ 7 ಸೈಟ್ ಕೂಡ ಮಾರಾಟ ಮಾಡಿದರು. ಕೋಟಿ ಕೋಟಿ ರೂಪಾಯಿ ಸಾಲವನ್ನು ತಮ್ಮ ಸಂಪಾದನೆಯ, ಪ್ರೀತಿಯ ಮನೆ, ಸೈಟ್ ಎಲ್ಲವನ್ನು ಮಾರಾಟ ಮಾಡಿ ಬಾಡಿಗೆ ಮನೆಗೆ ಬಂದರು.

ಪಶ್ಚಾತಾಪ ಇಲ್ಲ, ದೇವರು ಕೊಟ್ಟ ಕಿತ್ತುಕೊಂಡ

ಸ್ವಂತ ಮನೆ, 7 ಸೈಟ್, ಇದ್ದ ಆಸ್ತಿ ಎಲ್ಲವನ್ನುಕಳೆದುಕೊಂಡಿದ್ದೇನೆ. ಹಾಗಂತ ನನಗೆ ಪಶ್ಚಾತಾಪ ಇಲ್ಲ, ನೋವಿಲ್ಲ. ಕಾರಣ ನಾನು ಬೆಂಗಳೂರಿಗೆ ಬಂದಾಗ ನನ್ನಲ್ಲಿ ಏನೂ ಇರಲಿಲ್ಲ. ದೇವರ ಒಂದು ಸಂದರ್ಭದಲ್ಲಿ ಎಲ್ಲವನ್ನು ಕೊಟ್ಟ, ಬಳಿಕ ಕಿತ್ತಿಕೊಂಡ. ಆದರೆ ಜನರ ಪ್ರೀತಿ, ವಿಶ್ವಾಸ ಹಾಗೇ ಇದೆ. ಈ ಖುಷಿ ನನಗಿದೆ ಎಂದು ಜಿಕೆ ಶ್ರೀನಿವಾಸ ಮೂರ್ತಿ ಪದೇ ಪದೇ ಹೇಳುತ್ತಾರೆ.

ಸರ್ಕಾರಿ ಉದ್ಯೋಗ ತೊರೆದ ರೋಚಕ ಕತೆ

ಶ್ರೀನಿವಾಸ್ ಮೂರ್ತಿ ಕರ್ನಾಟಕ ಸರ್ಕಾರದ ಸರ್ವೇ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದರು. ನಾಟಕ, ಸಿನಿಮಾದಲ್ಲಿ ಸಣ್ಣ ಸಣ್ಣ ಪಾತ್ರ ಮಾಡುತ್ತಾ ಜೀವನ ಸಾಗಿತ್ತು. ಇದರ ನಡುವೆ ಸಿನಿಮಾದಲ್ಲಿ ಪ್ರಮುಖ ಪಾತ್ರಗಳು ಸಿಗಲು ಆರಂಭಗೊಂಡಿತು. ಅಂದಿನ ಮುಖ್ಯಮಂತ್ರಿ ಬಂಗಾರಪ್ಪ ಕೂಡ ಶ್ರೀನಿವಾಸ ಮೂರ್ತಿ ನಟನೆ ಮೆಚ್ಚಿಕೊಂಡಿದ್ದರು. ಸರ್ಕಾರಿ ಉದ್ಯೋಗದ ನಡುವೆ ನಟನೆಯಲ್ಲೂ ಮಿಂಚಿದ ಶ್ರೀನಿವಾಸ ಮೂರ್ತಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ರಾಜಕೀಯ ಏನು ಎಂದೇ ಗೊತ್ತಿಲ್ಲದ ಶ್ರೀನಿವಾಸ ಮೂರ್ತಿ ರಾಜಕೀಯಕ್ಕೆ ಧುಮಿಕಿ ಸೋಲು ಕಂಡರು. ಚುನಾವಣೆಗೆ ಸ್ಪರ್ಧಿಸಲು ಸರ್ಕಾರಿ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದರು. ಇತ್ತ ಸೋಲಿನ ಬಳಿಕ ಸಂಪೂರ್ಣವಾಗಿ ಸಿನಿಮಾದಲ್ಲಿ ತೊಡಗಿಕೊಂಡರು. ಸದ್ಯ ಶ್ರೀನಿವಾಸ ಮೂರ್ತಿ ಧಾರವಾಹಿಯಲ್ಲಿ ಮಿಂಚುತ್ತಿದ್ದಾರೆ. ಕನ್ನಡದ ಪ್ರಮುಖ ಧಾರವಾಹಿಗಳಲ್ಲಿ ನಟಿಸುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಯಾರೇ ಕೂಗಾಡಲಿ' ಹಾಡಿನ ಎಮ್ಮೆ ರಾತ್ರೋರಾತ್ರಿ ಗಾಯಬ್! ಮರುದಿನ ಡಾ.ರಾಜ್‌ ರಿಯಾಕ್ಷನ್‌ ಹೇಗಿತ್ತು? ಸ್ವಾರಸ್ಯಕರ ಘಟನೆ
ಚಿಕ್ಕಣ್ಣ ಇನ್ನೆರಡು ವರ್ಷದಲ್ಲಿ ದೊಡ್ಡ ಸೂಪರ್‌ ಸ್ಟಾರ್‌ ಆಗ್ತಾರೆ: ಭವಿಷ್ಯ ನುಡಿದ ಶಿವಣ್ಣ