
ಕುರುಕ್ಷೇತ್ರ ಚಿತ್ರ ಬಿಡುಗಡೆಯಾದ ಮಾರನೇ ದಿನ ಗಾಂಧಿ ನಗರದಲ್ಲಿ ದರ್ಶನ್ ಕುಟುಂಬದ ಬಗ್ಗೆ ಗುಸುಗುಸು ಮಾತುಗಳು ಕೇಳಿ ಬರುತ್ತಿತ್ತು.
ಹೊಸಕೆರೆ ಹಳ್ಳಿಯ ಪ್ರೆಸ್ಟೀಜ್ ಅಪಾರ್ಟ್ ಮೆಂಟ್‌ನಲ್ಲಿ ವಿಜಯಲಕ್ಷ್ಮೀ ಹಾಗೂ ಮಗ ವಿನೀಶ್ ವಾಸವಿದ್ದು ರಾಜರಾಜೇಶ್ವರಿ ನಗರದಲ್ಲಿ ದರ್ಶನ್ ವಾಸಿಸುತ್ತಿದ್ದಾರೆ. ಶುಭ ಕಾರ್ಯಕ್ರಮ ಹಾಗೂ ಹಬ್ಬದಂದು ದರ್ಶನ್, ವಿಜಯಲಕ್ಷ್ಮೀ ರಾಜರಾಜೇಶ್ವರಿ ನಿವಾಸಕ್ಕೆ ಬಂದು ಆಚರಿಸುತ್ತಾರೆ ಎಂಬ ಮಾತಿದೆ. ಎಂದಿನಂತೆ ವಿಜೃಂಭಣೆಯಿಂದ ವರಮಹಾಲಕ್ಷ್ಮೀ ಹಬ್ಬ ಆಚರಿಸಿ ಟ್ವಿಟರ್‌ನಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದರು.
ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ ಚಾಲೆಂಜಿಂಗ್ ಸ್ಟಾರ್ ಮಾಡಿದ ಮನವಿ
ಮೂಲಗಳ ಪ್ರಕಾರ ದರ್ಶನ್ ಕುರುಕ್ಷೇತ್ರ ಸಿನಿಮಾ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಅದರೆ ಅದು ಅಂದುಕೊಂಡಷ್ಟು ಯಶಸ್ಸು ಕಾಣದೇ ನಿರಾಶರಾದ ದರ್ಶನ್ ಅದೇ ಸಿಟ್ಟಿನಲ್ಲಿ ಪತ್ನಿ ವಿಜಯ್‌ಲಕ್ಷ್ಮೀ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದವು. ಇದಾದ ನಂತರ ಟ್ಟಿಟ್ಟರ್‌ನಲ್ಲಿ ಹರಿದಾಡುತ್ತಿರುವ ವದಂತಿ ಸುಳ್ಳೆಂದು ಟ್ವೀಟ್ ಮಾಡಿ ತಮ್ಮ ಖಾತೆಯಲ್ಲಿ ಹೆಸರು ಬದಲಾಯಿಸಿಕೊಂಡಿದ್ದಾರೆ. ವಿಜಯಲಕ್ಷ್ಮೀ ದರ್ಶನ್ ಅಂತ ಇದ್ದ ಹೆಸರನ್ನು ವಿಜಯಲಕ್ಷ್ಮೀ ಎಂದು ಮಾಡಿಕೊಂಡಿದ್ದಾರೆ.
ಹಲ್ಲೆ ವದಂತಿ ಬಗ್ಗೆ ಕಿವಿಗೊಡಬೇಡಿ ಎಂದು ವಿಜಯಲಕ್ಷ್ಮೀ ಹೇಳಿದರೂ ದಿಢೀರನೇ ಪ್ರೊಫೈಲ್ ನಿಂದ ದರ್ಶನ್ ಹೆಸರು ತೆಗೆದಿರುವುದು ಇನ್ನಷ್ಟು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.
ಈ ಹಿಂದೆಯೂ ಕೂಡಾ ದರ್ಶನ್ ಪತ್ನಿ ಮೇಲೆ ಹಲ್ಲೆ ಮಾಡಿದ್ದೂ ಕೂಡಾ ಸುದ್ದಿಯಾಗಿತ್ತು. ಕುಟುಂಬದಲ್ಲಿ ಬಿರುಕು ಕಾಣಿಸಿಕೊಂಡಿದ್ದು ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ. ಇತ್ತೀಚಿಗೆ ಒಟ್ಟಿಗೆ ಕಾಣಿಸಿಕೊಳ್ಳುವುದೂ ಅಪರೂಪವಾಗಿದೆ. ಮಗ ಇದ್ದಾಗ ಮಾತ್ರ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುವುದನ್ನು ನೋಡಬಹುದಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.