ಅಭಿಮಾನಿಯ ಬೆನ್ನ ಮೇಲೆ ‘ಸಂಗೊಳ್ಳಿ ರಾಯಣ್ಣ’ ಟ್ಯಾಟು ವೈರಲ್ !

By Web Desk  |  First Published May 28, 2019, 12:58 PM IST

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಯೊಬ್ಬ ಬೆನ್ನ ಮೇಲೆ ಹಾಕಿಸಿಕೊಂಡ ಟ್ಯಾಟು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್.


 

ಸ್ಯಾಂಡಲ್ ವುಡ್ ನಟರಲ್ಲಿ ಕ್ರೇಜಿ ಅಭಿಮಾನಿಗಳನ್ನು ಹೊಂದಿರುವುದು ಚಾಲೆಂಜಿಂಗ್ ಸ್ಟಾರ್ ಎಂದರೆ ತಪ್ಪಾಗದು ನೋಡಿ. ದರ್ಶನ್ ಅಂದ್ರೆ ಪಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಅಭಿಮಾನಿಗಳು ಅಪಾರ.

Tap to resize

Latest Videos

 

ರಾಮನಗರ ತಾಲ್ಲೂಕಿನ ಕರೇನಹಳ್ಳಿಯ ಕಾರ್ತಿಕ್ ಎಂಬಾತ ದರ್ಶನ್ ಹುಚ್ಚು ಅಭಿಮಾನಿಯಾಗಿದ್ದು ಬೆನ್ನ ಮೇಲೆ ಸಂಗೊಳ್ಳಿ ರಾಯಣ್ಣ ಟ್ಯಾಟು ಹಾಕಿಸಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ಒಂದು ಭುಜದಲ್ಲಿ ದರ್ಶನ್ ಸಾರಥಿ ಚಿತ್ರದಲ್ಲಿ ಬಳಸಿದ ಕುದುರೆ ಟ್ಯಾಟು ಹಾಕಿಸಿಕೊಂಡು ಮತ್ತೊಂದು ಭುಜದ ಮೇಲೆ ಯಜಮಾನ ಚಿತ್ರದ ಹೆಸರು ಹಾಕಿಸಿಕೊಂಡಿದ್ದಾನೆ.

ದರ್ಶನ್‌ಗೆ 'ಚಾಲೆಂಜಿಂಗ್ ಸ್ಟಾರ್' ಎಂದು ಬಿರುದು ಕೊಟ್ಟ ಬಳಗವಿದು!

ಮಂಡ್ಯ ಲೋಕಸಭಾ ಚುನಾವಣೆ ವೇಳೆ ಸುಮಲತಾ ಅಂಬರೀಶ್ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತುಕೊಂಡು ದರ್ಶನ್ ಪ್ರಚಾರದ ವೇಳೆ ಲಕ್ಷಾಂತರ ಅಭಿಮಾನಿಗಳು ಪ್ರೀತಿಗಳಿಸಿರುವುದಕ್ಕೆ ಪ್ರಚಾರಕ್ಕೆ ಆಗಮಿಸಿದ ಜನ ಸಾಗರವೇ ಸಾಕ್ಷಿ.

ಇನ್ನು ಕಾರ್ತಿಕ್ ದರ್ಶನ್ ರನ್ನು ಭೇಟಿ ಮಾಡಲು ಸಾಕಷ್ಟು ಬಾರಿ ಪ್ರಯತ್ನಪಟ್ಟಿದ್ದು ವಿಫಲರಾಗಿದ್ದು ಒಮ್ಮೆಯಾದರೂ ಹತ್ತಿರದಿಂದ ನೋಡಿ ಮಾತನಾಡಿಸಬೇಕೆಂಬುದು ಅವರ ಹಂಬಲ.

ದರ್ಶನ್‌ ಜತೆ ನಟಿಸಿದ್ದ ನಟಿ ಲೋಕಸಭಾ ಸಂಸದೆ

click me!