ಸಂದರ್ಶನ: ‘ಕಿರಿಕ್ ಕೀರ್ತಿ’ಯಲ್ಲಿ ನಂದು ಬೋಲ್ಡ್ ಪಾತ್ರ!

Published : Feb 22, 2017, 08:54 AM ISTUpdated : Apr 11, 2018, 12:44 PM IST
ಸಂದರ್ಶನ: ‘ಕಿರಿಕ್ ಕೀರ್ತಿ’ಯಲ್ಲಿ ನಂದು ಬೋಲ್ಡ್ ಪಾತ್ರ!

ಸಾರಾಂಶ

‘ಬಿಗ್‌ಬಾಸ್ ಸೀಸನ್ 4’ ಹವಾ ಮುಗಿದು, ಸಂಜನಾ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು ನಿಮಗೇ ಗೊತ್ತು. ‘ಬಿಗ್‌ಬಾಸ್’ನ ಜನಪ್ರಿಯತೆ ಅವರನ್ನು ಸಿನಿಮಾ ಪ್ರಪಂಚಕ್ಕೆ ಎಂಟ್ರಿ ಆಗುವಂತೆ ಮಾಡಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಟ್ರಾಲ್ ಮೇಲೆ ಟ್ರಾಲ್ ಮಾಡುತ್ತಿದ್ದರೂ ಅವರ ಮೇಲೆ ರೇಗಿ, ದಕ್ಕಿಸಿಕೊಂಡ ಸಂಜನಾ ‘ಮೊಂಬತ್ತಿ’ಯಲ್ಲಿ ಐಟ್ ಸಾಂಗ್ ಮಾಡಿದರು, ಇದೀಗ ‘ಕಿರಿಕ್ ಕೀರ್ತಿ’ ಚಿತ್ರದಲ್ಲಿ ಕೀರ್ತಿ ಜೊತೆಗೇ ಹೀರೋಯಿನ್ ಆಗಿ ಆಯ್ಕೆಗೊಂಡಿದ್ದಾಳೆ, ಅದರ ಪೋಟೋ ಶೂಟ್ ಕೂಡ ನಡೆದು ಹೋಗಿದೆ. ಸದ್ಯ ಸಂಜನಾರ ಒಂದು ಸಂದರ್ಶನ ಇಲ್ಲಿದೆ

‘ಬಿಗ್‌ಬಾಸ್ ಸೀಸನ್ 4’ ಹವಾ ಮುಗಿದು, ಸಂಜನಾ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು ನಿಮಗೇ ಗೊತ್ತು. ‘ಬಿಗ್‌ಬಾಸ್’ನ ಜನಪ್ರಿಯತೆ ಅವರನ್ನು ಸಿನಿಮಾ ಪ್ರಪಂಚಕ್ಕೆ ಎಂಟ್ರಿ ಆಗುವಂತೆ ಮಾಡಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಟ್ರಾಲ್ ಮೇಲೆ ಟ್ರಾಲ್ ಮಾಡುತ್ತಿದ್ದರೂ ಅವರ ಮೇಲೆ ರೇಗಿ, ದಕ್ಕಿಸಿಕೊಂಡ ಸಂಜನಾ ‘ಮೊಂಬತ್ತಿ’ಯಲ್ಲಿ ಐಟ್ ಸಾಂಗ್ ಮಾಡಿದರು, ಇದೀಗ ‘ಕಿರಿಕ್ ಕೀರ್ತಿ’ ಚಿತ್ರದಲ್ಲಿ ಕೀರ್ತಿ ಜೊತೆಗೇ ಹೀರೋಯಿನ್ ಆಗಿ ಆಯ್ಕೆಗೊಂಡಿದ್ದಾಳೆ, ಅದರ ಪೋಟೋ ಶೂಟ್ ಕೂಡ ನಡೆದು ಹೋಗಿದೆ. ಸದ್ಯ ಸಂಜನಾರ ಒಂದು ಸಂದರ್ಶನ ಇಲ್ಲಿದೆ

1) ‘ಬಿಗ್‌ಬಾಸ್’ ನಂತ್ರ ಸಿಕ್ಕಾಪಟ್ಟೆ ಬ್ಯುಸಿ ಅದ್ರಿ ಅಲ್ವಾ?

ಹೌದು ನಿಜ. ‘ಮೊಂಬತ್ತಿ’ ಚಿತ್ರದ ಸ್ಪೆಷಲ್ ಸಾಂಗ್ ನಂತ್ರ, ಕಿರಿಕ್ ಕೀರ್ತಿ ಜತೆಗೆ ಒಂದು ಸಿನಿಮಾ ಫಿಕ್ಸ್ ಆಗಿದೆ. ಇನ್ನೇರಡು ಸಿನಿಮಾಗಳ ಮಾತುಕತೆ ನಡೆದಿದೆ. ಸದ್ಯಕ್ಕೆ ಬೇರಾವುದೂ ಫೈನಲ್ ಆಗಿಲ್ಲ.

2) ‘ಬಿಗ್‌ಬಾಸ್’ ಕಾರಣನಾ?

ಒಂಥರ ಅದೃಷ್ಟ ಅನ್ನುವ ಹಾಗೆ ಒಳ್ಳೆಯ ಅವಕಾಶ ಸಿಕ್ಕಿತು, ಬಿಗ್‌ಬಾಸ್‌ಗೆ ಹೋಗಿ ಬಂದೆ. ಅಲ್ಲಿಂದೀಗ ಶುರುವಾಗಿರುವ ಸಿನಿಮಾ ಪ್ರಯಾಣಕ್ಕೆ ‘ಬಿಗ್‌ಬಾಸ್’ ಕಾರಣ ಅನ್ನೋದಂತೂ ಹೌದು. ಇದು ಎಲ್ಲಿ ತನಕವೋ, ನೋಡೋಣ.

3) ಸೋಷಿಯಲ್ ಮೀಡಿಯಾಗಳಲ್ಲಿ ನಿಮ್ಮ ಮೇಲೆ ಟ್ರಾಲ್ ನಿಂತೇ ಇಲ್ಲ?

ನನ್ನ ಪ್ರಕಾರ ಕೆಲವರಿಗೆ ಕೆಲಸ ಇಲ್ಲ ಅಂತ ಅನ್ನಿಸತ್ತೆ. ಅನಗತ್ಯವಾಗಿ ಕಾಲೆಳೆಯುತ್ತಿದ್ದಾರೆ. ಈಗಾಗಲೇ ಕೆಲವರಿಗೆ ಸರಿಯಾದ ಉತ್ತರ ನೀಡಿದ್ದೇನೆ. ಅದ್ರೂ ಕೆಲವರ ಕೆಟ್ಟ ಚಾಳಿ ನಿಂತಿಲ್ಲ. ಹೀಗೇ ಮುಂದುವರಿದರೆ ದೂರು ನೀಡುವುದು ಗ್ಯಾರಂಟಿ.

4) ಹಾಗಾದ್ರೆ ಭುವನ್ ಹಾಗೂ ಸಂಜನಾ ನಡುವಿನ ಗೆಳೆತನ ಎಂಥದ್ದು?

ನಿಮಗೇ ಗೊತ್ತಿರೋ ಹಾಗೆ ಇದೆಲ್ಲ ಶುರುವಾಗಿದ್ದು ಬಿಗ್‌ಬಾಸ್ ಮನೆಯಿಂದ. ನಾವಿಬ್ಬರೂ ಅಲ್ಲಿ ಒಳ್ಳೆಯ ಸ್ನೇಹಿತರಾಗಿದ್ದೆವು. ಅಷ್ಟು ಮಾತ್ರಕ್ಕೆ ಪ್ರೀತಿ, ಪ್ರೇಮ, ಮದುವೆ ಅನ್ನೋಕ್ಕೆ ಸಾಧ್ಯವೇ? ಅಲ್ಲಿಂದ ಹೊರಬಂದ ನಂತ್ರ ನಾನೇನೋ ಹೇಳಿದ್ದು ಇನ್ನೇನೋ ಆಯಿತು. ಮದುವೆ ಆಗ್ತಾರಂತೆ ಎನ್ನುವ ಕತೆ ಹೆಣೆಯಲಾಯಿತು. ಎಲ್ಲ ತಮಾಷೆ ಎನಿಸುತ್ತೆ.

5) ಸಂಜನಾ ಸಿಕ್ಕಾಪಟ್ಟೆ ಬೋಲ್ಡ್ ಅಂತೆ, ಹೌದಾ?

ನಾನು ಬೆಳೆದಿದ್ದೇ ಹಾಗೆ. ಬಿಗ್‌ಬಾಸ್‌ನಲ್ಲಿ ನನ್ನ ಮೇಲಿದ್ದ ಆರೋಪ ಕಮ್ಮಿ ಬಟ್ಟೆ ಹಾಕುತ್ತಾರೆನ್ನೋದು. ಇಷ್ಟಕ್ಕೂ ತಪ್ಪೇನು? ನಮಗ್ಯಾವುದೂ ಕಂಪರ್ಟ್ ಎನಿಸುತ್ತೋ ಅಂಥ ಬಟ್ಟೆ ತೊಡುವುದರಲ್ಲಿ ತಪ್ಪಿಲ್ಲ ಎನ್ನುವುದು ನನ್ನ ವಾದ.

6) ಸಿನಿಮಾಗಳಲ್ಲೂ ನಿಮಗೆ ಇಷ್ಟೇ ಬೋಲ್ಡ್ ಪಾತ್ರ ಬೇಕಾ?

ನನ್ನನ್ನು ಬೋಲ್ಡ್ ಹುಡುಗಿ ಅಂತ ಕರೆದವರು ಪಕ್ಕಾ ಹಳ್ಳಿ ಹುಡುಗಿಯಾಗಿ ನೋಡುವುದಕ್ಕೆ ಇಷ್ಟ ಪಡೋದಿಲ್ಲ ಅಂತ ಎನಿಸುತ್ತೆ. ಸದ್ಯಕ್ಕೆ ‘ಕಿರಿಕ್ ಕೀರ್ತಿ’ಯಲ್ಲಿ ಅಂಥದ್ದೇ ಪಾತ್ರ ಇದೆಯಂತೆ. ಇನ್ನೂ ಕತೆ ಕೇಳಿಲ್ಲ.

7) ಕಿರುತೆರೆ ಜರ್ನಿ?

ನನ್ನ ಲೈಫ್'ನಲ್ಲಿ ಎಲ್ಲ ಆಕಸ್ಮಿಕ. ಧಾರಾವಾಹಿ, ಬಿಗ್‌ಬಾಸ್, ಈಗ ಸಿನಿಮಾ ಕೂಡ. ಅವಕಾಶ ಸಿಕ್ಕರೆ ಅಲ್ಲೂ ಬ್ಯುಸಿ ಆಗುತ್ತೇನೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದಳಪತಿ ವಿಜಯ್ 'ಜನ ನಾಯಗನ್' ಚಿತ್ರದ ಕಥೆ ಇದೇನಾ? ಲೀಕ್ ಆದ ಸ್ಟೋರಿ.. ಶಾಕ್ ಆಯ್ತು ಚಿತ್ರತಂಡ!
ನಾನು ಅವಳಲ್ಲ.. ಕಾಳ್ಗಿಚ್ಚಿನಂತೆ ಹರಡಿದ ಎಐ ಫೋಟೋ: ರಶ್ಮಿಕಾ, ಶ್ರೀಲೀಲಾ ಬಳಿಕ ಸಿಟ್ಟಾದ ನಿವೇತಾ ಥಾಮಸ್