ಹೆಣ್ಣು ಮಗುವನ್ನು ದತ್ತು ಪಡೆಯಲಿರೋ ಮನೀಶಾ

By Suvarna Web DeskFirst Published Feb 21, 2017, 2:19 AM IST
Highlights

ಹೆಣ್ಣು ಮಗುವೊಂದನ್ನು ದತ್ತು ಪಡೆಯಲು ಮನೀಶಾ ಕೊಯಿರಾಲ ನಿರ್ಧರಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಇನ್ನು 12 ತಿಂಗಳುಗಳೊಳಗೆ ಪುಟ್ಟ ಕಂದಮ್ಮ ಮನೀಶಾ ಮನೆಯನ್ನು ಸೇರಲಿದೆ.

ಮುಂಬೈ (ಫೆ.21): ಬಾಲಿವುಡ್’ನ ಸ್ಟ್ರಾಂಗ್ ಲೇಡಿ ಮನೀಶಾ ಕೊಯಿರಾಲ ಸಂಜಯ್ ದತ್ ಜೀವನ ಚರಿತ್ರೆಯ ಚಿತ್ರದಲ್ಲಿ  ತಾಯಿ ಪಾತ್ರ ಮಾಡುತ್ತಿರುವ ಬೆನ್ನಲ್ಲೇ, ಮನೀಶಾ ರಿಯಲ್ ಲೈಫ್ ನಲ್ಲಿ  ಮತ್ತೊಂದು ಮಹತ್ವಪೂರ್ಣ ಕೆಲಸ ಮಾಡಲು ಮುಂದಾಗಿದ್ದಾರೆ.

ಹೆಣ್ಣು ಮಗುವೊಂದನ್ನು ದತ್ತು ಪಡೆಯಲು ಮನೀಶಾ ಕೊಯಿರಾಲ ನಿರ್ಧರಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಇನ್ನು 12 ತಿಂಗಳುಗಳೊಳಗೆ ಪುಟ್ಟ ಕಂದಮ್ಮ ಮನೀಶಾ ಮನೆಯನ್ನು ಸೇರಲಿದೆ.

ಮನೀಶಾ ಮಾರಕ ಕ್ಯಾನ್ಸರ್’ನಿಂದ ಪಾರಾಗಿ ಬಂದಿದ್ದಾರೆ. ಕ್ಯಾನ್ಸರ್’ನಿಂದ ಮುಕ್ತಿ ಪಡೆದು 5 ವರ್ಷಗಳಾಗಿವೆ. ಖಾಯಿಲೆ ಸಂಪೂರ್ಣ ವಾಸಿಯಾಗಿರುವುದರಿಂದ ಹೆಣ್ಣುಮಗುವನ್ನು ದತ್ತು ಪಡೆಯಲು ನಿರ್ಧರಿಸಿದ್ದೇನೆ ಅಂತಾ ಮನೀಶಾ ತಿಳಿಸಿದ್ದಾರೆ. ಮಗುವನ್ನು ಪಡೆಯಲು ಅತ್ಯಂತ ಉತ್ಸುಕರಾಗಿರೋದಾಗಿ ಹೇಳಿಕೊಂಡಿದ್ದಾರೆ.

click me!