ಕನ್ನಡದ ಕಾಶ್ಲಿ ಹಾಡುಗಳು: ಇವಕ್ಕೆ ಕೋಟಿ ಲೆಕ್ಕದಲ್ಲಿ ಖರ್ಚಾಗಿದೆ

Published : Feb 19, 2017, 02:05 PM ISTUpdated : Apr 11, 2018, 12:58 PM IST
ಕನ್ನಡದ ಕಾಶ್ಲಿ ಹಾಡುಗಳು: ಇವಕ್ಕೆ ಕೋಟಿ ಲೆಕ್ಕದಲ್ಲಿ ಖರ್ಚಾಗಿದೆ

ಸಾರಾಂಶ

ಬಹುಕೋಟಿ ವೆಚ್ಚದಲ್ಲಿ  ನಿರ್ಮಾಣವಾಗುವ ಸ್ಟಾರ್ ಸಿನಿಮಾಗಳಲ್ಲಿ ದುಬಾರಿ ಹಾಡುಗಳ ಕಾರುಬಾರು ಜೋರಾಗಿದೆ. ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಖರ್ಚು ಮಾಡಿರುವ ಚಿತ್ರಗಳಿವು.

ಬೆಂಗಳೂರು(ಫೆ.19): ಸ್ಯಾಂಡಲ್'ವುಡ್ ಸಿನಿಮಾಗಳಲ್ಲಿ ಈಗ ದುಬಾರಿ ಹಾಡುಗಳ ಟ್ರೆಂಡ್ ಶುರುವಾಗಿದೆ. ಬಹುಕೋಟಿ ವೆಚ್ಚದಲ್ಲಿ  ನಿರ್ಮಾಣವಾಗುವ ಸ್ಟಾರ್ ಸಿನಿಮಾಗಳಲ್ಲಿ ದುಬಾರಿ ಹಾಡುಗಳ ಕಾರುಬಾರು ಜೋರಾಗಿದೆ. ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಖರ್ಚು ಮಾಡಿರುವ ಚಿತ್ರಗಳಿವು.

ಹೆಬ್ಬುಲಿ ಚಿತ್ರದ ಎರಡು ಗೀತೆಗಳು

ಕಿಚ್ಚ ಸುದೀಪ್ ಕಮಾಂಡೋ ಪಾತ್ರದಲ್ಲಿ ಘರ್ಜಿಸೋಕ್ಕೆ ಸಜ್ಜಾಗಿರೋ ಸಿನಿಮಾ ಹೆಬ್ಬುಲಿ. ಕಿಚ್ಚನ ಪರಿಚಯದ ಹಾಡು ಸದ್ಯ ಯೂ ಟ್ಯೂಬ್'ನಲ್ಲಿ 20 ಲಕ್ಷ ಜನ ವೀಕ್ಷಿಸಿದ್ದಾರೆ. ಹಾಲಿವುಡ್ ರೇಂಜ್'ನಲ್ಲಿ ಕಿಚ್ಚ ಸುದೀಪ್ ಎಂಟ್ರಿ ಕೋಡುವ ಈ ಹಾಡಿಗೆ ಬರೋಬ್ಬರಿ 1 ಕೋಟಿ ಖರ್ಚು ಮಾಡಿ ಚಿತ್ರೀಕರಣ ಮಾಡಲಾಗಿದೆ.

ಅದ್ದೂರಿ ಸೆಟ್ಟಿನಲ್ಲಿ ಸುಂದರಿ ಹಾಡು

ಕಿಚ್ಚನ ಎಂಟ್ರಿ ಹಾಡಿನ ನಂತ್ರ ಮತ್ತೊಂದು ಕೋಟಿ ರೂಪಾಯಿ ಹಾಡು ಸುಂದರಿ.ಕಿಚ್ಚನ ಜೊತೆ ಮಲಯಾಳಿ ಬೆಡಗಿ ಅಮಲಾ ಪೌಲ್ ರೊಮ್ಯಾನ್ಸ್ ಮಾಡಿರೋ  ಹಾಡಿಗೆ ಕೋಟಿಗೂ ಹೆಚ್ಚು ಖರ್ಚಾಗಿದೆ.

ರಾಜಕುಮಾರನಿಗೆ ಖರ್ಚಾಗಿದೆ ಲಕ್ಷ ಲಕ್ಷ ರೂಪಾಯಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಎಕ್ಸ್ ಫೆಕ್ಟೆಡ್ ಚಿತ್ರ ರಾಜಕುಮಾರ. ಸದ್ಯ ಟೀಸರ್ ನಿಂದಲೇ ಹವಾ ಸೃಷ್ಟಿಸಿರೋ ರಾಜಕುಮಾರ ಟೈಟಲ್ ಹಾಡಿಗೆ ಬರೋಬ್ಬರಿ 60 ರಿಂದ 80 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಆಸ್ಟ್ರೇಲಿಯಾದ ಬ್ಯೂಟಿಫುಲ್ ಲೋಕೆಶನ್ ಹಾಗೂ ಫಾರಿನ್ ಬೆಡಗಿಯರು ಜೊತೆ ಪುನೀತ್ ಟೈಟಲ್ ಹಾಡನ್ನ ಚಿತ್ರೀಕರಿಸಲಾಗಿದೆ. ವಿಶೇಷ ಅಂದ್ರೆ ತೆಲುಗಿನ ಖ್ಯಾತ ನಿರ್ದೇಶಕ ದೇವಿಶ್ರೀ ಪ್ರಸಾದ್ ಯಾರಿವನು ಹಾಡನ್ನ ಹಾಡಿದ್ದಾರೆ.

ಯಶ್ ಸಿನಿಮಾಗಳ ಕಾಸ್ಟ್ಲೀ ಹಾಡುಗಳು

ರಾಕಿಂಗ್ ಸ್ಟಾರ್ ಯಶ್ ಸಿನಿಮಾಗಳಲ್ಲಿ ಬಹುತೇಕ ಚಿತ್ರಗಳಲ್ಲಿ ದುಬಾರಿ ಹಾಡುಗಳು ಇರುತ್ತವೆ. ಅದರಲ್ಲಿ ಮಾಸ್ಟರ್ ಪೀಸ್ ಚಿತ್ರದ ಅಣ್ಣಾಂಗೆ ಲವ್ ಆಗಿದೆ ಹಾಗು ಸಂತು ಸ್ಟ್ರೈಟ್ ಫಾರ್ವಡ್ ಚಿತ್ರದ ಟೈಟಲ್ ಹಾಡು. ಒಂದು ಕೋಟಿ ರೂ.ವೆಚ್ಚದಲ್ಲಿ ಸಂತು ಸ್ಟ್ರೈಟ್ ಫಾರ್ವಡ್ ಚಿತ್ರದ ಹಾಡನ್ನ ಚಿತ್ರೀಕರಣ ಮಾಡಲಾಗಿತ್ತು.

ದರ್ಶನ್ ಟೈಟಲ್ ಗೀತೆಗೆ ಖರ್ಚಾಗಿದೆ ಲಕ್ಷ ರೂಪಾಯಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೂರು ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರ ಚಕ್ರವರ್ತಿ.ಈ ಚಿತ್ರದ ಟೈಟಲ್ ಹಾಡನ್ನ ಬ್ಯಾಂಕಾಂಕ್'ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಫಾರಿನ್ ಡ್ಯಾನ್ಸರ್ ಜೊತೆ ಚಕ್ರವರ್ತಿಯಾಗಿ ಮೆರೆಯುತ್ತಿರುವ ದರ್ಶನ್ ಹಾಡಿಗೆ 60ರಿಂದ 70 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ..

ವರದಿ: ರವಿಕುಮಾರ್ ಎಂಕೆ, ಸುವರ್ಣ ನ್ಯೂಸ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದಳಪತಿ ವಿಜಯ್ 'ಜನ ನಾಯಗನ್' ಚಿತ್ರದ ಕಥೆ ಇದೇನಾ? ಲೀಕ್ ಆದ ಸ್ಟೋರಿ.. ಶಾಕ್ ಆಯ್ತು ಚಿತ್ರತಂಡ!
ನಾನು ಅವಳಲ್ಲ.. ಕಾಳ್ಗಿಚ್ಚಿನಂತೆ ಹರಡಿದ ಎಐ ಫೋಟೋ: ರಶ್ಮಿಕಾ, ಶ್ರೀಲೀಲಾ ಬಳಿಕ ಸಿಟ್ಟಾದ ನಿವೇತಾ ಥಾಮಸ್