
ಮಂಗಳೂರು(ಎ.29): ನೀವು ಕಿರಿಕ್ ಪಾರ್ಟಿ ಸಿನಿಮಾ ನೋಡಿದ್ದರೆ ಅದರಲ್ಲಿದ್ದ ಹಳದಿ ಕಾರು ಗೊತ್ತಿರುತ್ತದೆ. ಸಿನಿಮಾದಲ್ಲಿ ಮುಖ್ಯ ಪಾತ್ರ ವಹಿಸುವ ಚೆಂದದ, ಡಿಫರೆಂಟಾದ ಕಾರಿದು. ಅದನ್ನು ಚಿತ್ರತಂಡ ತಮಗೆ ಬೇಕಾದ ಹಾಗೆ ರೆಡಿ ಮಾಡಿಸಿಕೊಂಡಿತ್ತು. ಹಾಗಾಗಿ ಹಲವಾರು ಮಂದಿಗೆ ಆ ಕಾರಿನ ಮೇಲೆ ಸಿಕ್ಕಾಪಟ್ಟೆಲವ್ವಾಗಿತ್ತು. ತಮ್ಮ ಬಳಿಯೂ ಅಂಥ ದ್ದೊಂದು ಕಾರಿದ್ದರೆ ಅಂತ ಅದೆಷ್ಟೋ ಜನ ಆಸೆ ಪಟ್ಟಿದ್ದರು.
ಈಗ ಕಿರಿಕ್ ಪಾರ್ಟಿ ತಂಡ ಆ ಕಾರನ್ನು ಹರಾಜಿಗಿಟ್ಟಿದೆ. ಇಂಟರೆಸ್ಟಿಂಗ್ ಅಂದರೆ ಆ ಹರಾಜಿನಲ್ಲಿ ಬಂದ ಹಣವನ್ನು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ದಾನ ಮಾಡುತ್ತೇವೆ ಅಂತ ಕಿರಿಕ್ ಪಾರ್ಟಿ ತಂಡ ಹೇಳಿಕೊಂಡಿದೆ. ಇದು ಬಹಳ ಒಳ್ಳೆಯ ಕೆಲಸ. ಗೆದ್ದವರೆಲ್ಲರೂ ಸಣ್ಣ ಪಾಲೊಂದನ್ನು ಅವಶ್ಯಕತೆ ಇರುವವರಿಗೆ ನೀಡಿದರೆ ಅದಕ್ಕಿಂತ ಮಾದರಿ ಕೆಲಸ ಮತ್ತೊಂದಿಲ್ಲ. ಅಂದಹಾಗೆ ನೀವು ಹರಾಜಿನಲ್ಲಿ ಭಾಗವಹಿಸಬೇಕಾದರೆ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಏಪ್ರಿಲ್ 29ರಂದು ರಿಜಿಸ್ಪ್ರೇಷನ್ ಶುರುವಾಗಲಿದೆ.
ಯಾವಾಗ ಹರಾಜು: ಮೇ 6 ರಿಂದ 14ರವರೆಗೆ. ಹೆಸರು ನೋಂದಾಯಿಸಿ: https://www.autoallot.com
ವರದಿ: ಕನ್ನಡಪ್ರಭ, ಸಿನಿವಾರ್ತೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.