
ಬೆಂಗಳೂರು(ಏ.27): ಸರ್ಕಾರದ ಆದೇಶ ಧಿಕ್ಕರಿಸಿಬಾಹುಬಲಿ-2 ಸಿನಿಮಾವನ್ನು 3 ದಿನಗಳ ಮುಂಚಿತವಾಗಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಹಣದ ಮೂಲಕ ಮುಂಗಡ ಬುಕ್ಕಿಂಗ್ ಮಾಡಿಕೊಂಡ ಚಿತ್ರಮಂದಿರದ ಮಾಲೀಕರು,ಹಂಚಿಕೆದಾರರು ಸಾರ್ವಜನಿಕರಿಂದ ಲಕ್ಷಾಂತರ ಲೂಟಿ ಮಾಡಿದ್ದಾರೆ.
ಬಾಹುಬಲಿ-2 ಹೆಸರಿನಲ್ಲಿ ಹಣ ಕೊಳ್ಳೆ ಹೊಡೆದ ಚಿತ್ರಮಂದಿರದ ಮಾಲೀಕರು ರೂ.500 ರಿಂದ 1500 ರೂ.ಗಳ ವರೆಗೂ ಮುಂಗಡ ಕಾಯ್ದಿರಿಸಿಕೊಂಡಿದ್ದಾರೆ. ಸಾಮಾನ್ಯ ಚಿತ್ರಮಂದಿರಗಳಲ್ಲಿ ಪ್ರತಿ ಟಿಕೆಟ್ಗೆ 500 ರೂ.ಗಳಿದ್ದರೆ ಮಲ್ಟಿಫ್ಲೆಕ್ಸ್'ಗಳಲ್ಲಿ 1500 ರೂ.ಗಳ ವರೆಗೂ ಹಣವನ್ನು ಕೊಳ್ಳೆ ಹೊಡೆದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ 200 ರೂ. ದರ ಜಾರಿಗೆ ಕಡತಕ್ಕೆ 3 ದಿನದ ಹಿಂದೆಯೇ ಸಹಿ ಹಾಕಿದ್ದರೂ ಅಧಿಕೃತ ಆದೇಶ ಹೊರಬಿದ್ದಿಲ್ಲ.ಇದನ್ನೇ ಬಳಸಿಕೊಂಡ ಬಾಹುಬಲಿ-2 ವಿತರಕರು, ಹಂಚಿಕೆದಾರರು ಹಾಗೂ ಥಿಯೇಟರ್ ಮಾಲೀಕ ಹಗಲು ದರೋಡೆ ಮಾಡಿದ್ದಾರೆ. ಸರ್ಕಾರಕ್ಕೆ ಮಾತ್ರ ಬಾಹುಬಲಿ-2ಗೆ ಮೂಗುದಾರ ಹಾಕಲು ಸಾಧ್ಯವಾಗಲಿಲ್ಲ.
ಬೆಂಗಳೂರಿನಲ್ಲಿ ಇಂದೇ ಬಿಡುಗಡೆ
ನಿಗದಿಪಡಿಸಿದ ದಿನಾಂಕದಂತೆ ದೇಶಾದ್ಯಂತ ನಾಳೆ (ಏ.28) ಬಿಡುಗಡೆಯಾಗಬೇಕಿದ್ದ ಬಾಹುಬಲಿ-2 ಒಂದು ದಿನ ಮುಂಚಿತವಾಗಿಯೇ ಇಂದಿನಿಂದಲೇ ಬೆಂಗಳೂರಿನ ಪ್ರತಿಷ್ಠಿತ ಥಿಯೇಟರ್ಗಳಲ್ಲಿ ಇಂದು ರಾತ್ರಿ 10ಗಂಟೆಗೆ ಬಿಡುಗಡೆಯಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.