
ಚೆನ್ನೈ(ಎ.28): ಇಡೀ ದೇಶವೇ ಬಾಹುಬಲಿ 2 ಸಿನಿಮಾದ ಮೊದಲ ಶೋ ನೋಡಲು ಕಾತುರದಿಂದ ಕಾಯುತ್ತಿದ್ದರೆ, ಇತ್ತ ತಮಿಳುನಾಡಿನ ಪ್ರೇಕ್ಷಕರು ಮಾತ್ರ ತುಸು ಹೆಚ್ಚು ಸಮಯ ಕಾಯಬೇಕಾದ ಪರಿಸ್ಥಿತಿ ಎದುರಾಯಿತು. ಹಣಕಾಸು ವಿಚಾರವಾಗಿ ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ 2-: ದ ಕನ್ಕ್ಲೂಜನ್' ಸಿನಿಮಾದ ಬೆಳಗ್ಗಿನ ಶೋಗಳನ್ನು ತಮಿಳುನಾಡಿನಲ್ಲಿ ರದ್ದು ಮಾಡಲಾಗಿತ್ತು ಎಂಬ ವಿಚಾರ ತಿಳಿದು ಬಂದಿದೆ.
ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಬಾಹುಬಲಿ 2 ಸಿನಿಮಾದ ನಿರ್ಮಾಪಕ ಮಂಡಳಿ ಹಾಗೂ ವಿತರಕರ ನಡುವೆ ಏರ್ಪಟ್ಟ ಮನಸ್ತಾಪದಿಂದಾಗಿ ಸಿನಿಮಾ ರದ್ದಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಹೀಗಾಗಿ ತಮಿಳುನಾಡಿನಲ್ಲಿ ಸಿನಿಮಾದ ತೆಲುಗು ಹಾಗೂ ತಮಿಳು ಆವೃತ್ತಿ ಬಿಡುಗಡೆಯಾಗಿಲ್ಲ.
ಥಿಯೇಟರ್ ಮಾಲಿಕರೊಬ್ಬರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದು, 'ಈ ವಿವಾದವನ್ನು ಬಗೆಹರಿಸಲು ಮಾತುಕತೆ ನಡೆಸಲಾಗುತ್ತಿದೆ. ಮಧ್ಯಾಹ್ನದೊಳಗೆ ಸಿನಿಮಾದ ತೆಲುಗು ಹಾಗೂ ತಮಿಳು ಆವೃತ್ತಿಗಳು ಬಿಡುಗಡೆಗೊಳ್ಳುವ ಸಾಧ್ಯತೆಗಳಿವೆ' ಎಂದು ತಿಳಿಸಿದ್ದಾರೆ. ಸಿನಿಮಾದ ಹಿಂದಿ ಆವೃತ್ತಿ ಮಾತ್ರ ಈಗಾಗಲೇ ಬಿಡುಗಡೆಗೊಂಡಿದೆ.
ಕೃಪೆ: NDTv
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.