ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ನಟ ಆಶಿಶ್ ವಿದ್ಯಾರ್ಥಿ ತಮ್ಮ 60ನೇ ವರ್ಷದಲ್ಲಿ 2ನೇ ಮದುವೆಯಾಗಿದ್ದಾರೆ. ಅವರ ಮದುವೆಯ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ನವದೆಹಲಿ (ಮೇ.25): ಹಿರಿಯ ನಟ ಆಶಿಶ್ ವಿದ್ಯಾರ್ಥಿ ಅಸ್ಸಾಂ ಮೂಲದ ಫ್ಯಾಶನ್ ಸ್ಟೋರ್ ಒಡತಿ ರೂಪಾಲಿ ಬರುವಾ ಅವರನ್ನು ಸರಳ ಸಮಾರಂಭದಲ್ಲಿ ಗುರುವಾರ ವಿವಾಹವಾಗಿದ್ದಾರೆ. ರಿಜಿಸ್ಟರ್ ಮ್ಯಾರೇಜ್‌ನಲ್ಲಿ ಅವರ ಆಪ್ತ ಸ್ನೇಹಿತರು ಹಾಗೂ ಕುಟುಂಬದ ಕೆಲವೇ ವ್ಯಕ್ತಿಗಳು ಪಾಲ್ಗೊಂಡಿದ್ದರು. ಮದುವೆಯ ಬಳಿಕ ದಂಪತಿಗಳು ಸಂಜೆಯ ವೇಳೆಗೆ ಭರ್ಜರಿ ಔತಣಕೂಟವನ್ನು ಏರ್ಪಡಿಸಿದ್ದಾರೆ. ಆ ಮೂಲಕ ತಮ್ಮ ಹೊಸ ದಾಂಪತ್ಯವನ್ನು ಅರಂಭ ಮಾಡಿದ್ದಾರೆ. ಮದುವೆಯ ಕುರಿತಾಗಿ ಮಾತನಾಡಿರುವ 60 ವರ್ಷದ ಆಶಿಸ್ ವಿದ್ಯಾರ್ಥಿ. 'ನನ್ನ ಜೀವನದ ಈ ಹಂತದಲ್ಲಿ ರೂಪಾಯಿಯನ್ನು ಮದುವೆಯಾಗುತ್ತಿರುವುದು ಬಹಳ ಉತ್ತಮ ಫೀಲಿಂಗ್ ನೀಡುತ್ತಿದೆ. ಇಂದು ಬೆಳಿಗ್ಗೆಯಷ್ಟೇ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದು, ಸಂಜೆಯ ಎಲ್ಲರಿಗೂ ಔತಣಕೂಟ ಏರ್ಪಡಿಸಿದ್ದೇವೆ. ಇದು ಕುಟುಂಬದ ಸಣ್ಣ ಕಾರ್ಯಕ್ರಮವಾಗಿರಬೇಕು ಎನ್ನುವುದು ನನ್ನ ಆಸೆಯಾಗಿತ್ತು. ನಾವಿಬ್ಬರು ಕೆಲ ಸಮಯದ ಹಿಂದಷ್ಟೇ ಭೇಟಿಯಾಗದ್ದೆವು. ಆತ್ಮೀಯತೆ ಬೆಳೆದ ಕಾರಣ ಮದುವೆಯಾಗಲು ನಿರ್ಧರಿಸಿದ್ದೆವು. ಇಬ್ಬರೂ ಕೂಡ ಮದುವೆ ಸಣ್ಣ ಪ್ರಮಾಣದಲ್ಲಿಯೇ ಆಗಬೇಕು ಎಂದು ಬಯಸಿದ್ದೆವು ಎಂದು ತಿಳಿಸಿದ್ದಾರೆ.
ಗುವಾಹಟಿ ಮೂಲದ ರೂಪಾಲಿ ಬರುವಾ, ಕೋಲ್ಕತ್ತಾದಲ್ಲಿ ಫ್ಯಾಶನ್ ಸ್ಟೋರ್ ಇರಿಸಿಕೊಂಡಿದ್ದಾರೆ. ಆಶಿಶ್ ವಿದ್ಯಾರ್ಥಿಯನ್ನು ಸುಂದರ ವ್ಯಕ್ತಿ ಎಂದಿರುವ ಆಕೆ, ಅವರೊಂದಿಗೆ ಬದುಕು ಸುಂದರವಾಗಿರಲಿದೆ ಎನ್ನುವ ನಿರೀಕ್ಷೆ ಇದೆ ಎಂದಿದ್ದಾರೆ. ಮದುವೆಗಾಗಿ ರೂಪಾಲಿ ಬೆಳಗ್ಗೆ 6.30ಕ್ಕೆ ಸಿದ್ಧವಾಗಿದ್ದರು. ಬಿಳಿಯ ಬಣ್ಣದ ಮಕೇಲಾವನ್ನು ಆಕೆ ಧರಿಸಿದ್ದರೆ, ಆಶಿಶ್ ವಿದ್ಯಾರ್ಥಿ ಕೇರಳ ಸ್ಟೈಲ್‌ನಲ್ಲಿ ಬಿಳಿ ಹಾಗೂ ಚಿನ್ನದ ಬಣ್ಣದ ಪಂಚೆ-ಶರ್ಟ್ ಧರಿಸಿದ್ದರು.
11 ಭಾಷೆಗಳಲ್ಲಿ ಅಂದಾಜು 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಆಶಿಶ್ ವಿದ್ಯಾರ್ಥಿ, ಕನ್ನಡದಲ್ಲಿ ಕೋಟಿಗೊಬ್ಬ, ನಂದಿ ಸೇರಿದಂತೆ ಪ್ರಮುಖ ಚಿತ್ರಗಳಲ್ಲಿ ನಟಿಸಿದ್ದರು. ಅದರೊಂದಿಗೆ ಹಿಂದಿ, ತೆಲುಗು, ತಮಿಳು, ಮಲಯಾಳಂ, ಇಂಗ್ಲೀಷ್, ಒಡಿಯಾ, ಮರಾಠಿ ಹಾಗೂ ಬೆಂಗಾಲಿ ಚಿತ್ರರಂಗದಲ್ಲೂ ಅವರು ಪ್ರಖ್ಯಾತರಾಗಿದ್ದಾರೆ. 1986ರಲ್ಲಿ ತಮ್ಮ ಸಿನಿಮಾ ಜರ್ನಿ ಆರಂಭ ಮಾಡಿದ್ದ ಆಶಿಶದ್ ವಿದ್ಯಾರ್ಥಿ ಪ್ರಮುಖ ಪಾತ್ರಗಳನ್ನು ನಿಭಾಯಿಸುವ ಮೂಲಕ ಗಮನಸೆಳೆದಿದ್ದರು.
ಶಿವಾಜಿನಗರದ ಮಿಲಿಟರಿ ಹೋಟೆಲ್‌ನಲ್ಲಿ ಆಶಿಷ್ ವಿದ್ಯಾರ್ಥಿ: ಊಟ ಸವಿದು ವಾವ್.. ಎಂದ ನಟ
ರಾಷ್ಟ್ರ ಪ್ರಶಸ್ತಿ ವಿಜೇತ ನಟ ಈ ಹಿಂದೆ ನಟಿ ಶಕುಂತಲಾ ಬರುವಾ ಅವರ ಪುತ್ರಿ ರಾಜೋಶಿ ಬರುವಾ ಅವರನ್ನು ವಿವಾಹವಾಗಿದ್ದರು. ಅವರಿಗೆ ಅರ್ಥ ವಿದ್ಯಾರ್ಥಿ ಎಂಬ ಮಗನೂ ಇದ್ದಾನೆ. ಆಶಿಶ್ ಕೊನೆಯದಾಗಿ ಟ್ರಯಲ್ ಬೈ ಫೈರ್ ಮತ್ತು ಕುಟ್ಟೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
'ಈ ಒಂದು ಪಾಸಿಟಿವ್ ನನಗೆ ಬೇಡ': ನಟ ಆಶಿಶ್‌ಗೆ ಕೊರೋನಾ ದೃಢ