ಮಾರ್ಕೆಟಿಂಗ್, ಪ್ರಚಾರ ಮತ್ತು ಇತರ ಸೇವೆಗಳನ್ನು ಪ್ರಾರಂಭಿಸಿದ ರಿಷಬ್ ಶೆಟ್ಟಿ;ಇದು ಕೆರಾಡಿ ಸ್ಟುಡಿಯೋಸ್!

Published : May 25, 2023, 02:24 PM ISTUpdated : May 26, 2023, 01:01 PM IST
 ಮಾರ್ಕೆಟಿಂಗ್, ಪ್ರಚಾರ ಮತ್ತು ಇತರ ಸೇವೆಗಳನ್ನು ಪ್ರಾರಂಭಿಸಿದ ರಿಷಬ್ ಶೆಟ್ಟಿ;ಇದು ಕೆರಾಡಿ ಸ್ಟುಡಿಯೋಸ್!

ಸಾರಾಂಶ

 ಸಿಹಿ ಸುದ್ದಿ ಹಂಚಿಕೊಂಡ ರಿಷಬ್ ಶೆಟ್ಟಿ. ಸಿನಿಮಾ ಮಾರ್ಕೆಟಿಂಗ್ ಅಖಾಡಕ್ಕೆ ಎಂಟ್ರಿ ಕೊಟ್ಟ ಡಿವೈನ್ ಸ್ಟಾರ್. 

ಕನ್ನಡ ಚಿತ್ರರಂಗದ ಡಿಫರೆಂಟ್ ಡೈರೆಕ್ಟರ್ ಹಾಗೂ ಡಿವೈನ್ ಸ್ಟಾರ್ ಎಂದೇ ಹೆಸರು ಮಾಡಿರುವ ರಿಷಬ್ ಶೆಟ್ಟಿ ಮೂವಿ ಮಾರ್ಕೆಟಿಂಗ್, ಪ್ರಚಾರ ಮತ್ತು ಇತರ ಸೇವೆಗಳನ್ನು ಆರಂಭಿಸುವ ಮೂಲಕ ಚಿತ್ರರಂಗಕ್ಕೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ರಿಷಬ್‌ ಹೊಸ ಕೆಲಸಕ್ಕೆ ಅಭಿಮಾನಿಗಳು ಶುಭವಾಗಲಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 

ರಿಷಬ್ ಪೋಸ್ಟ್:

ಒಂದು ಸಿನಿಮಾ ಗೆಲುವಿಗೆ ಅದರ ನಿರ್ಮಾಣದಷ್ಟೇ, ಪ್ರಚಾರದ ಅಗತ್ಯವೂ ಇದೆ. ಕಳೆದ ಕೆಲವು ವರ್ಷಗಳಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡಿ ಅದನ್ನು ಸೂಕ್ತ ಪ್ರಚಾರದ ಮೂಲಕ ಜನರಿಗೆ ತಲುಪಿಸಿದ ಅನುಭವದೊಂದಿಗೆ ಇಂದು ನಮ್ಮ ತಂಡ ಹೊಸ ಹೆಜ್ಜೆ ಇರುಸುತಿದೆ, 'ಕೆರಾಡಿ ಸ್ಟುಡಿಯೋಸ್' ಎಂಬ ವೇದಿಕೆಯ ಮೂಲಕ ಚಿತ್ರಗಳನ್ನು ಮಾರ್ಕೆಟಿಂಗ್, ಪ್ರಚಾರ ಮತ್ತು ಇತರ ಸೇವೆಗಳನ್ನು ಪ್ರಾರಂಭಿಸಿದ್ದೇವೆ. ಇದು ಉತ್ತಮ ಚಿತ್ರಗಳು ಮತ್ತು ಪ್ರೇಕ್ಷಕರ ನಡುವೆ ಸೇತುವೆ ಆಗಬೇಕೆಂಬಬುದೇ ನಮ್ಮ ಆಶಯ. 

ಕಾಂತಾರದಲ್ಲಿ ಮಿಂಚಿದ ಪ್ರಗತಿ ; ಶೆಟ್ರು ಕೊಟ್ಟ ಅವಕಾಶದ ಬಗ್ಗೆ ಪತ್ನಿ ಮಾತು

ಅಂದ ಹಾಗೆ ಕೆರಾಡ...ನಾನು ಹುಟ್ಟಿ ಬೆಳೆದ, ನನ್ನ ಹೃದಯಕ್ಕೆ ಬಹಳ ಹತ್ತಿರವಾದ ಊರು. ಎಲ್ಲಕ್ಕಿಂತಲೂ ಹೆಚ್ಚಾಗಿ, ನನ್ನೊಳಗೆ ಸಿನಿಮಾದ ಕನಸು ಹುಟ್ಟಿದ್ದು ಇಲ್ಲೇ! ಈ ಪ್ರಯತ್ನವನ್ನು ನನ್ನ ಕೆರಾಡಿಗೆ ಅರ್ಪಿಸಿ, ಚಿತ್ರರಂಗಕ್ಕೆ ನಮ್ಮ ಅಳಿಲು ಸೇವೆಯನ್ನು ಮುಂದುವರೆಸಲಿದ್ದೇವೆ. ನಿಮ್ಮ ಸಹಕಾರವಿರಲಿ.

ಗೋಶಾಲೆಯಲ್ಲಿ ಮಗನ 4ನೇ ಹುಟ್ಟುಹಬ್ಬ ಆಚರಿಸಿದ ಕಾಂತಾರ ರಿಷಬ್ ಶೆಟ್ಟಿ!

ನಾಯಕನಾಗಿ ಮಿಂಚುವುದಕ್ಕೂ ಮೊದಲು ರಿಷಬ್ ಶೆಟ್ಟಿ ನಿರ್ದೇಶಕ, ಬರಹಗಾರ ಹಾಗೂ ನಿರ್ಮಾಪಕನಾಗಿ ಕೆಲಸ ಮಾಡಿದ್ದಾರೆ. ರಿಕ್ಕಿ, ಕಿರಿಕ್ ಪಾರ್ಟಿ, ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆ, ಕಥಾ ಸಂಗಮಾ, ಹೀರೋ, ಪೆಡ್ರೋ, ಶಿವಮ್ಮ, ಕಾಂತಾರ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಕಾಂತಾರ 2 ಸಿನಿಮಾ ಕೆಲಸಗಳು ಆರಂಭವಾಗಿದೆ.  

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು: Shiva Rajkumar
ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್