ಲಂಡನ್‌ನಿಂದ ಬಂದು ಮತ ಚಲಾಯಿಸಿ ಮಾದರಿಯಾದ ಯುವತಿ!

By Ravi JanekalFirst Published Apr 26, 2024, 4:28 PM IST
Highlights

ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಪ್ರಜೆಯೂ ಮತದಾನ ಮಾಡುವಂತೆ ಚುನಾವಣಾ ಆಯೋಗ ಎಷ್ಟೇ ಜಾಗೃತಿ ಮೂಡಿಸಿದ್ರೂ ಜನರು ಮಾತ್ರ ತಮ್ಮೂರಲ್ಲೇ ಮತದಾನ ಮಾಡಲು ನಿರ್ಲಕ್ಷ್ಯ ತೋರಿಸುತ್ತಿರುವವರ ಮಧ್ಯೆ ಇಲ್ಲೊಬ್ಬಳು ಯುವತಿ ಮತದಾನ ಮಾಡುವುದಕ್ಕಾಗಿಯೇ ಲಂಡನ್‌ನಿಂದ ಮಂಡ್ಯಕ್ಕೆ ಬಂದು ಮತ ಚಲಾಯಿಸುವ ಮೂಲಕ ಮಾದರಿಯಾಗಿದ್ದಾರೆ.

ಮಂಡ್ಯ (ಏ.26): ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಪ್ರಜೆಯೂ ಮತದಾನ ಮಾಡುವಂತೆ ಚುನಾವಣಾ ಆಯೋಗ ಎಷ್ಟೇ ಜಾಗೃತಿ ಮೂಡಿಸಿದ್ರೂ ಜನರು ಮಾತ್ರ ಅದೆಷ್ಟು ನಿರ್ಲಕ್ಷ್ಯವಹಿಸಿದ್ದಾರೆಂದರೆ ಅವರು ತಮ್ಮೂರಲ್ಲೇ ಮತಗಟ್ಟೆ ಕೇಂದ್ರಕ್ಕೆ ಹೋಗಿ ಮತ ಚಲಾಯಿಸುತ್ತಿಲ್ಲ. ಕೆಲವರು ಬಿಸಿಲು ಝಳಕ್ಕೆ ಹೆದರಿ ಮನೆಯಲ್ಲಿ ಉಳಿದರೆ ಇನ್ನು ಕೆಲವರು ಮತದಾನದ ದಿನದಂದು ರಜೆ ಸಿಕ್ಕಿದ್ದಕ್ಕೆ ಟ್ರಿಪ್ ಹೋಗುತ್ತಿರೋ ಜನರ ನಡುವೆ ಇಲ್ಲೊಬ್ಬಳು ಮತದಾನ ಮಾಡುವ ಸಲುವಾಗಿಯೇ ಲಕ್ಷಾಂತರ ರೂ ಹಣ ಖರ್ಚು ಮಾಡಿಕೊಂಡು ದೂರದ ಲಂಡನ್‌ನಿಂದ ಮಂಡ್ಯಗೆ ಬಂದು ಮತ ಚಲಾಯಿಸುವ ಮೂಲಕ ಮತದಾನ ಮಹತ್ವ ತಿಳಿಸಿದ್ದಾಳೆ.

Lok Sabha Elections 2024: ತಮ್ಮ ಹಕ್ಕು ಚಲಾಯಿಸಲು ದುಬೈನಿಂದ ಕೋಲಾರ, ಮಂಗಳೂರಿಗೆ ಬಂದ ಮತದಾರರು!

ಹೌದು, ಮಂಡ್ಯ ಜಿಲ್ಲೆಯ ಕಾಳೇನಹಳ್ಳಿ ಗ್ರಾಮದ ಸೋನಿಕ ಎಂಬ ಯುವತಿ ಮತದಾನ ಮಾಡುವುದಕ್ಕಾಗಿಯೇ ಲಂಡನ್‌ನಿಂದ ಮಂಡ್ಯಕ್ಕೆ ಬಂದಿದ್ದಾಳೆ. ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ಸೋನಿಕಾ ಲಂಡನ್‌ನಲ್ಲಿ ನೆಲೆಸಿದ್ದಾರೆ. ಇಂದು ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆ ಮತದಾನ ಮಾಡುವ ಸಲುವಾಗಿ ಬರೋಬ್ಬರಿ ಒಂದೂವರೆ ಲಕ್ಷ ಖರ್ಚು ಮಾಡಿಕೊಂಡು ಗ್ರಾಮಕ್ಕೆ ಬಂದು ಮತ ಚಲಾಯಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ ಶೇ.57.43%  ಮತದಾನವಾಗಿದೆ. ಲೋಕಸಭಾ ಚುನಾವಣೆ ಕ್ಷಣ ಕ್ಷಣದ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 

ಮತದಾನ ಬಳಿಕ ವೃದ್ಧ ಸಾವು!

ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಬೆಳಗ್ಗೆಯಿಂದ ಬಿರುಸಿನ ಮತದಾನ ನಡೆಯುತ್ತಿದೆ. ಯುವಕರಿಂದ ವೃದ್ಧರು, ಅಂಗವಿಕಲರೆನ್ನದೆ ಮತಗಟ್ಟೆಗೆ ಬಂದು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದಾರೆ. ಈ ನಡುವೆ ಮತ ಚಲಾಯಿಸಲು ವೃದ್ಧನೋರ್ವ ಮತದಾನ ಬಳಿಕ ಮೃತಪಟ್ಟ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಚನ್ನೇಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕುಂದೂರಯ್ಯ (87) ಸಾವನ್ನಪ್ಪಿರುವ ವೃದ್ಧ. ಕಾಲು ನೋವಿನಿಂದ ಬಳಲುತ್ತಿದ್ದ ವೃದ್ಧ. ಇಂದು ಬೆಳಗ್ಗೆಯೇ ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದಾನೆ. ಮತದಾನ ಮಾಡಿ ಮನೆಗೆ ಬಂದ ಬಳಿಕ ಸಾವನ್ನಪ್ಪಿದ್ದಾನೆ.

ವಿಧಾನಸಭಾ ಕ್ಷೇತ್ರವಾರು ವಿವರ ಇಂತಿದೆ:

  • ಕೆ ಆರ್ ಪೇಟೆ - ಶೇ.56.60%, 
  • ಮದ್ದೂರು - ಶೇ.60.70%
  • ಮಳವಳ್ಳಿ -53.36%
  • ಮಂಡ್ಯ - 55.27%
  • ಮೇಲುಕೋಟೆ- 59.69%
  • ನಾಗಮಂಗಲ -58.81%
  • ಶ್ರೀರಂಗಪಟ್ಟಣ -58.02%
  • ಕೆ ಆರ್ ನಗರ - ಶೇ.57.96%
click me!