ಜಗತ್ತಿನ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರಗಳ ಪೈಕಿ ಮುಂಚೂಣಿಯಲ್ಲಿರುವ ಭಾರತದ 17ನೇ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಮೊದಲ ಹಂತದ 14 ಕ್ಷೇತ್ರಗಳಿಗೆ ಗುರುವಾರ ಮತದಾನ ನಡೆಯಿತು. ಗಣ್ಯರ ಭವಿಷ್ಯ ಮತಗಟ್ಟೆಯಲ್ಲಿ ಭದ್ರವಾಗಿದ್ದು, ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆಂದು ಮೇ 23ರವರೆಗೆ ಕಾಯಲೇಬೇಕು. ಎಂದಿನಂತೆ ನಗರ ಮತದಾರರು ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ತೋರಲಿಲ್ಲ. ದಕ್ಷಿಣ ಕನ್ನಡದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಒಟ್ಟಾರೆ ರಾಜ್ಯದಲ್ಲಿ ನಡೆದ ಮೊದಲ ಹಂತದಲ್ಲಿ ಸರಾಸರಿ ಶೇ.66ರಷ್ಟು ಮತದಾನವಾದಂತೆ ಆಗಿದೆ. ದೇಶದಲ್ಲಿ 95 ಲೋಕಸಭಾ ಕ್ಷೇತ್ರಗಳಿಗೂ ಮತದಾನ ನಡೆದಿದ್ದು, ಶೇ.62ರಷ್ಟು ಮತ ಚಲಾವಣೆಯಾಗಿದೆ.

04:51 PM (IST) Apr 19
ಮತ ಪೆಟ್ಟಿಗೆಯಲ್ಲಿ ಭದ್ರವಾದ ಅಭ್ಯರ್ಥಿಗಳ ಭವಿಷ್ಯ
04:50 PM (IST) Apr 19
ನಿನ್ನೆ ಬಾಗಲಕೋಟೆಯಲ್ಲಿ ಅಬ್ಬರಿಸಿದ ಮೋದಿ
04:50 PM (IST) Apr 19
ರಾಯಚೂರಿನಲ್ಲಿ ರಾಹುಲ್ ಅಬ್ಬರ
06:36 PM (IST) Apr 18
ನಿಮ್ಮ ರಾಜ್ಯದಲ್ಲೆಷ್ಟಾಯಿತು ಮತದಾನ?
05:39 PM (IST) Apr 18
ನಿಮ್ಮ ಕ್ಷೇತ್ರದಲ್ಲಿ ಇಷು ಮತದಾನವಾಗಿದೆ....
04:48 PM (IST) Apr 18
04:45 PM (IST) Apr 18
ಶತಾಯುಷಿ ಸಾಲುಮರದ ತಿಮ್ಮಕ್ಕ ತಮ್ಮ ಸಾಕು ಮಗನೊಂದಿಗೆ ಮತದಾನ ಮಾಡಿದರು..
04:29 PM (IST) Apr 18
ಬೆಂಗಳೂರಿನಲ್ಲಿ ವಾತಾವರಣ ತಂಪಾಗಿತ್ತು. ಮಳೆ ಬರುವ ಮುನ್ಸೂಚನೆ ಇದ್ದರೂ, ಇನ್ನೂ ವರುಣನ ಸುಳಿವಿಲ್ಲ. ಇನ್ನೂ ಒಂದೂವರೆ ಗಂಟೆ ಮತದಾನಕ್ಕೆ ಬಾಕಿ ಇದೆ. ದಯ ಮಾಡಿ ಮತಗಟ್ಟೆಗೆ ತೆರಳಿ, ನಿಮ್ಮ ಕರ್ತವ್ಯ ನಿರ್ವಹಿಸಿ, ಬಲಿಷ್ಠ ಭಾರತ ನಿರ್ಮಾಣಕ್ಕೆ ಕೈ ಜೋಡಿಸಿ.
04:03 PM (IST) Apr 18
03:40 PM (IST) Apr 18
03:03 PM (IST) Apr 18
ದೇಶದ 95 ಲೋಕಸಭಾ ಕ್ಷೇತ್ರಗಳಿಗೆ 2ನೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಯಾವ ರಾಜ್ಯದಲ್ಲಿ ಎಷ್ಟಾಗಿದೆ ಮತದಾನ?
02:07 PM (IST) Apr 18
ಸಿದ್ದರಾಮನ ಹುಂಡಿಯಲ್ಲಿ ಮತ ಚಲಾಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಪುತ್ರ ಯತೀಂದ್ರ...
02:05 PM (IST) Apr 18
ತಮ್ಮ ಹಕ್ಕು ಚಲಾಯಿಸಿದ ಮಾಳವಿಕಾ...
01:56 PM (IST) Apr 18
ತಿಪಟೂರು ತಾಲೂಕು ಕಸಬಾ ಹೋಬಳಿಯ ಮತ್ತು ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 35 ಸಿದ್ದಾಪುರದಲ್ಲಿ, ಕರಿಕೆರೆ ಮಜುರೆ ಗ್ರಾಮದ ವಾಸಿಯಾದ ಬೈರಾಪುರದ 105 ವರ್ಷದ ಚಿಕ್ಕಮ್ಮ ಯುವಕರನ್ನು ಮೆಚ್ಚುವ ರೀತಿಯಲ್ಲಿ ಬಂದು ಮತದಾನ ಮಾಡಿದರು.
01:48 PM (IST) Apr 18
ಸಿರಿಗೆರೆಯ ಬೂತ್ ಸಂಖ್ಯೆ 71 ರಲ್ಲಿ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಮತದಾನ ಮಾಡಿದರು.
01:24 PM (IST) Apr 18
ಉಡುಪಿಯಲ್ಲಿ ತಮ್ಮ ಮತ ಚಲಾಯಿಸಿದ ಉಡುಪಿಯ ಪೇಜಾವರ ಶ್ರೀಗಳು...
01:22 PM (IST) Apr 18
ದಕ್ಷಿಣ ಕನ್ನಡ, ಉಡುಪಿಯಲ್ಲಿ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಆದರೆ, ನಗರ ಪ್ರದೇಶದಲ್ಲಿ ಮತದಾರರು ನಿರಾಸಕ್ತಿ ತೋರುತ್ತಿದ್ದು ಮತದಾನವಾಗಿದ್ದೆಷ್ಟೇ 11ರಹೊತ್ತಿಗೆ...
01:13 PM (IST) Apr 18
ಮೂರು ವಾರಗಳ ಹಿಂದೆ ಕುಂದಾಪುರದ ಗೋಳಿಯಂಗಡಿ ಸಮೀಪ ಅಪಘಾತಕ್ಕೀಡಾಗಿ ಕಾಲಿಗೆ ಬಿದ್ದ ಬಲವಾದ ಪೆಟ್ಟಿನಿಂದ ಮಗ್ಗುಲನ್ನೂ ಬಲಿಸಲು ಆಗದ ಸ್ಥಿತಿಯಲ್ಲಿರುವ ಉಳ್ತೂರಿನ ಜಯಶೀಲ ಪೂಜಾರಿ 11:00 ಗಂಟೆಗೂ ಮೊದಲೇ ತಮ್ಮ ಮತ ಚಲಾಯಿಸಿ ಪ್ರೇರಣೆ ಆಗಿದ್ದಾರೆ.
12:59 PM (IST) Apr 18
ಮಂಡ್ಯದಲ್ಲಿ ಸ್ವತಂತ್ರ ಅಭ್ಯರ್ಥಿ ಸುಮಲತಾ ತಮ್ಮ ಮತ ಚಲಾಯಿಸಿದ್ದಾರೆ.
12:56 PM (IST) Apr 18
ಉಡುಪಿ: ಇಲ್ಲುನ ನಾಡ್ಪಾಲು ಗ್ರಾಮ ನಕ್ಸಲ್ ಪಿಡೀತ ಕಾಸನಮಕ್ಕಿ ಕಿ.ಪ್ರಾ.ಶಾಲೆಯ ಮತಗಟ್ಟೆಯಲ್ಲಿ 12 ಗಂಟೆಗೆ ಶೇ.58.21 ಮತದಾನವಾಗಿದೆ.
12:52 PM (IST) Apr 18
ಮಾಜಿ ಮುಖ್ಯಮಂತ್ರಿ, ಕೇಂದ್ರ ಮಾಜಿ ಸಚಿವ, ಮಹಾರಾಷ್ಟ್ರ ಮಾಜಿ ರಾಜ್ಯಪಾಲ ಎಸ್.ಎಂ.ಕೃಷ್ಣ ಪತ್ನಿ ಪ್ರೇಮಾರೊಂದಿಗೆ ಮತದಾನ ಮಾಡಿದರು.
12:42 PM (IST) Apr 18
ಕರ್ತವ್ಯ ನಿಭಾಯಿಸಿದ ಮೈಸೂರು ರಾಣಿ ಪ್ರಮೋದಾ ದೇವಿ.
12:35 PM (IST) Apr 18
ಹಿಂದುಳಿದ ಮಠಾಧೀಶರ ಒಕ್ಕೂಟ ಚಿತ್ರದುರ್ಗದ ಮಠದಕುರುಬರಹಟ್ಟಿ ಮತಗಟ್ಟೆಯಲ್ಲಿ ಮತ ಚಲಾವಣೆ. ಮಾದಿಗ, ಕುಂಚಿಟಗ, ಬೋವಿ, ಮಡಿವಾಳ, ಛಲವಾದಿ ಸೇರಿದಂತೆ ಹಲವು ಮಠಾಧಿಪತಿಗಳು ತಮ್ಮ ಹಕ್ಕು ಚಲಾಯಿಸಿದರು.
12:31 PM (IST) Apr 18
ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ್ ಪತ್ನಿಯೊಂದಿಗೆ ಮತ ಚಲಾಯಿಸಿದರು.
12:26 PM (IST) Apr 18
ಮತ ಹಾಕಿ ಬಂದವರಿಗೆ ಹೊಟೇಲ್ ನಿಸರ್ಗದಲ್ಲಿ ಫ್ರೀ ಬೆಣ್ಣೆ ದೋಸೆ
ದೋಸೆಗಾರಿ ಸಾಲಲ್ಲಿ ನಿಂತಿರೋ ಮಂದಿ. ನಿಸರ್ಗ ಹೋಟೆಲ್ ಗೆ ಮತದಾನ ಮಾಡಿ ಬಂದ ಮತದಾರರು. ಮತದಾನ ಮಾಡಿ ಬೆಣ್ಣೆ ದೋಸೆ ಸವಿಯುತ್ತಿರೋ ಮತದಾರರುಬೆಳೆಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ತನಕ ಫ್ರೀ ಬೆಣ್ಣೆ ದೋಸೆ. ಮಜ್ಜಿಗೆ ಮತ್ತು ಪಲಾವ್
12:12 PM (IST) Apr 18
ಮತ ಹಾಕಲೆಂದೇ ಬೆಂಗಳೂರಿನಿಂದ ದಕ್ಷಿಣ ಕನ್ನಡಕ್ಕೆ ಬೈಕ್‌ನಲ್ಲಿ ಹೊರಟ ಟೆಕಿಗಳು.
11:42 AM (IST) Apr 18
ಆನೇಕಲ್: ಚುನಾವಣೆಗೆ ಕರ್ತವ್ಯಕ್ಕೆ ಬಂದಿದ್ದ ಸಿಬ್ಬಂದಿ ಮೂರ್ಛೆ.ಬೇರೆ ಸಿಬ್ಬಂದಿಯನ್ನ ಕರ್ತವ್ಯಕ್ಕೆ ನಿಯೋಜಿದ ಚುನಾವಣಾ ಅಧಿಕಾರಿಗಳು. ಆನೇಕಲ್ ತಾಲ್ಲೂಕಿನ ಹಿಲಲಿಗೆ ಗ್ರಾಮದ ಬೂತ್ ನಂ 170 ರಲ್ಲಿ ಘಟನೆ. ಮೂರ್ಛೆ ಹೋದ ಸಿಬ್ಬಂದಿಯನ್ನ ಖಾಸಗಿ ಆಸ್ಪತ್ರೆಗೆ ರವಾನೆ.
11:40 AM (IST) Apr 18
ಪಿಯುಸಿ ಫಲಿತಾಂಶ ಎರಡನೇ ಸ್ಥಾನ ಬಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೂ ಮತದಾರರು ಹುರುಪಿನಿಂದ ಸಾಗುತ್ತಿದ್ದಾರೆ. ಮಧ್ಯಾಹ್ನ 11 ರವರಗೆ ಶೇ.33 ಮತದಾನವಾಗಿದೆ.
ಕೊಡಗು: ಶೇ.29
ಉಡುಪಿ-ಚಿಕ್ಕಮಗಳೂರು: ಶೇ.29
ಹಾಸನ: ಶೇ.24
ಮಂಡ್ಯ: ಶೇ.18
ತುಮಕೂರು: ಶೇ.22
ಚಾಮರಾಜನಗರ: ಶೇ.20
ಕೋಲಾರ-ಶೇ.20
ಬೆಂಗಳೂರು ಉತ್ತರ- ಶೇ.20
ಬೆಂಗಳೂರು ಸೆಂಟ್ರಲ್- ಶೇ.19
ಬೆಂಗಳೂರು ದಕ್ಷಿಣ- ಶೇ.20
ಬೆಂಗಳೂರು ಗ್ರಾಮಾಂತರ- ಶೇ.20
ಚಿತ್ರದುರ್ಗ-ಶೇ.19
ಮೈಸೂರು- 25
ಚಿಕ್ಕಬಳ್ಳಾಪುರ- ಶೇ.20
11:38 AM (IST) Apr 18
ಕ್ರಿಕೆಟಿಗ ಕುಂಬ್ಳೆ ಮತದಾನ...
11:20 AM (IST) Apr 18
ಚಾಮರಾಜನಗರ: ಇನ್ನೂರ ಐವತ್ತಕ್ಕು ಹೆಚ್ಚು ರೈತರಿಂದ ಮತದಾನ ಬಹಿಷ್ಕರಿಸಿದ್ದಾರೆ. ಚಾಮರಾಜನಗರ ಜಿಲ್ಲೆ ಸುವರ್ಣಾವತಿ ಜಲಾಶಯದ ಹಳೆ ಅಚ್ಚುಕಟ್ಟು ಪ್ರದೇಶದ ಆಲೂರು ಸುತ್ತಮುತ್ತಲಿನ ರೈತರ ನಿರ್ಧಾರ.
ಸುವರ್ಣಾವತಿ ಜಲಾಶಯದಲ್ಲಿ ನೀರಿದ್ದರೂ ಬೆಳೆಗಳಿಗೆ ನೀರು ಹರಿಸದ ಕಾವೇರಿ ನೀರಾವರಿ ನಿಗಮ ನಿರ್ಲಕ್ಷ್ಯ. ಬೆಳೆಗಳು ಒಣಗುತ್ತಿದ್ದು, ಬೇಸತ್ತ ರೈತರಿಂದ ಇಂಥ ನಿರ್ಧಾರೆ. ಹಲವು ಬಾರಿ ಮನವಿ ಸಲ್ಲಿಸದರೂ ಕಾವೇರಿ ನೀರಾವರಿ ನಿಗಮ ನಿರ್ಲಕ್ಷ್ಯ.
11:17 AM (IST) Apr 18
ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಕುಟುಂಬದ ಸದಸ್ಯರೊಂದಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.
11:09 AM (IST) Apr 18
ನೀರಿಗೆ ಆಗ್ರಹಿಸಿ ಕೋಲಾರದಲ್ಲಿ ಮತದಾನ ಬಹಿಷ್ಕಾರ. ಮನವೊಲಿಸುತ್ತಿರುವ ಅಧಿಕಾರಿಗಳು
10:58 AM (IST) Apr 18
ಬೆಂಗಳೂರು ಸೆಂಟ್ರಲ್ ಕೈ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪತ್ನಿಯೊಂದಿಗೆ ತೆರಳಿ ಮತ ಚಲಾಯಿಸಿದರು.
10:45 AM (IST) Apr 18
ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪ ತಾಲೂಕಿನ ಹರಿಹರಪುರ ಮಠದ ಶ್ರೀಗಳು ಮತ ಚಲಾಯಿಸಿ, ಎಲ್ಲರಿಗೂ ಮತ ಹಾಕುವಂತೆ ಪ್ರೇರೇಪಿಸಿದರು.