ಬೋಧನಾ ಶುಲ್ಕ ವಿದ್ಯಾರ್ಥಿಗಳ ಕೈಗೆಟುಕುವಂತಿರಬೇಕು: ಸುಪ್ರೀಂನಲ್ಲಿ ವಿದ್ಯಾರ್ಥಿಗಳಿಗೆ ಜಯ

By Kannadaprabha News  |  First Published Nov 9, 2022, 8:51 AM IST

ಶಿಕ್ಷಣ ಲಾಭಗಳಿಸುವ ವ್ಯಾಪಾರವಲ್ಲ ಮತ್ತು ಬೋಧನಾ ಶುಲ್ಕ ಎಂದೆಂದಿಗೂ ವಿದ್ಯಾರ್ಥಿಗಳ ಕೈಗೆಟುಕುವಂತಿರಬೇಕು ಎಂದು ಸ್ಪಷ್ಟಪಡಿಸಿರುವ ಸುಪ್ರೀಂಕೋರ್ಟ್‌, ವೈದ್ಯಕೀಯ ಶಿಕ್ಷಣದ ಶುಲ್ಕ ಹೆಚ್ಚಳದ ಆದೇಶ ವಜಾ ಮಾಡಿದ್ದ ಆಂಧ್ರ ಹೈಕೋರ್ಟ್‌ ತೀರ್ಪನ್ನು ಎತ್ತಿಹಿಡಿದಿದೆ.



ನವದೆಹಲಿ: ಶಿಕ್ಷಣ ಲಾಭಗಳಿಸುವ ವ್ಯಾಪಾರವಲ್ಲ ಮತ್ತು ಬೋಧನಾ ಶುಲ್ಕ ಎಂದೆಂದಿಗೂ ವಿದ್ಯಾರ್ಥಿಗಳ ಕೈಗೆಟುಕುವಂತಿರಬೇಕು ಎಂದು ಸ್ಪಷ್ಟಪಡಿಸಿರುವ ಸುಪ್ರೀಂಕೋರ್ಟ್‌, ವೈದ್ಯಕೀಯ ಶಿಕ್ಷಣದ ಶುಲ್ಕ ಹೆಚ್ಚಳದ ಆದೇಶ ವಜಾ ಮಾಡಿದ್ದ ಆಂಧ್ರ ಹೈಕೋರ್ಟ್‌ ತೀರ್ಪನ್ನು ಎತ್ತಿಹಿಡಿದಿದೆ. ಜೊತೆಗೆ ಹೈಕೋರ್ಟ್‌ನ ತೀರ್ಪು ಪ್ರಶ್ನಿಸಿದ್ದ ಆಂಧ್ರಪ್ರದೇಶ ರಾಜ್ಯ ಸರ್ಕಾರ ಮತ್ತು ಖಾಸಗಿ ವೈದ್ಯಕೀಯ ಕಾಲೇಜಿಗೆ ತಲಾ 5 ಲಕ್ಷ ರು. ದಂಡ ವಿಧಿಸಿದೆ

ವೈದ್ಯಕೀಯ ಶಿಕ್ಷಣ ಕೋರ್ಸ್‌ಗಳ (medical education courses) ವಾರ್ಷಿಕ ಬೋಧನಾ (tuition fee) ಶುಲ್ಕವನ್ನು 24 ಲಕ್ಷ ರು.ಗೆ ಹೆಚ್ಚಿಸಲಾಗಿದೆ. ಅದರೆ, ಹಿಂದಿನ ಶುಲ್ಕಕ್ಕಿಂತ 7 ಪಟ್ಟು ಹೆಚ್ಚಳವನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು. ಕಾರಣ, ಶಿಕ್ಷಣವೆಂಬುದು (education) ಲಾಭ ನಡೆಸಲು ಇರುವ ಉದ್ಯಮವಲ್ಲ. ಅದು ಎಂದೆಂದಿಗೂ ವಿದ್ಯಾರ್ಥಿಗಳ ಕೈಗೆ ಎಟುಕುವ ಮಟ್ಟದಲ್ಲೇ ಇರಬೇಕು ಎಂದು ನ್ಯಾ. ಎಂ.ಆರ್‌.ಶಾ (MR Shah) ಮತ್ತು ನ್ಯಾ.ಸುಧಾನ್ಷು ಧುಲಿಯಾ (Justice Sudhanshu Dhulia)ಅವರನ್ನೊಳಗೊಂಡ ನ್ಯಾಯಪೀಠ ಆದೇಶಿಸಿತು.

Tap to resize

Latest Videos

Child Education : ಪಾಲಕರ ಹಣ ಮಕ್ಕಳ ಶಿಕ್ಷಣದ ಹೆಸರಿನಲ್ಲಿ ಪೋಲಾಗ್ತಿದೆಯೇ?

ಶುಲ್ಕ ಹೆಚ್ಚಳದ ವೇಳೆ ಶೈಕ್ಷಣಿಕ ಸಂಸ್ಥೆ (educational institution) ಇರುವ ಸ್ಥಳ, ಕೋರ್ಸ್‌ನ ಸ್ವರೂಪ, ಲಭ್ಯವಿರುವ ಮೂಲಸೌಕರ್ಯಗಳ ವೆಚ್ಚ ಮೊದಲಾದ ಅಂಶಗಳನ್ನು ಪರಿಗಣಿಸಬೇಕು. ಇದ್ಯಾವುದನ್ನೂ ಪರಿಗಣಿಸದೇ ಸರ್ಕಾರ ಅಕ್ರಮವಾಗಿ ಹೊರಡಿಸಿದ ಆದೇಶದ ಅನ್ವಯ ಕಾಲೇಜು ಆಡಳಿತ ಮಂಡಳಿ (college management board)ವಿದ್ಯಾರ್ಥಿಗಳಿಂದ ಹೆಚ್ಚುವರಿ ಹಣ ಸಂಗ್ರಹಿಸಲು ಅವಕಾಶ ನೀಡಲಾಗದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು ಉಕ್ರೇನ್‌ ಆಯ್ಕೆ ಮಾಡೋದ್ಯಾಕೆ?

ಏನಿದು ಪ್ರಕರಣ:

ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ವಾರ್ಷಿಕ ಬೋಧನಾ ಶುಲ್ಕವನ್ನು 24 ಲಕ್ಷ ರು.ಗೆ ಹೆಚ್ಚಿಸಲು ಆಂಧ್ರಪ್ರದೇಶ ಸರ್ಕಾರ (Andhra Pradesh government) ಅನುಮತಿ ನೀಡಿತ್ತು. ಇದನ್ನು ವಿದ್ಯಾರ್ಥಿಗಳು ಹೈಕೋರ್ಟ್‌ನಲ್ಲಿ (High Court) ಪ್ರಶ್ನಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ಯಾವುದೇ ಸಮಿತಿಯ ಶಿಫಾರಸು/ ವರದಿ ಇಲ್ಲದೆಯೇ ರಾಜ್ಯ ಸರ್ಕಾರ ಶುಲ್ಕ ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ಶುಲ್ಕ ಹೆಚ್ಚಳಕ್ಕೆ ಯಾವುದೇ ಸಕಾರಣವಿಲ್ಲ ಎಂದು ಹೇಳಿ ಶುಲ್ಕ ಹೆಚ್ಚಳದ ಆದೇಶವನ್ನು ಹೈಕೋರ್ಟ್‌ ವಜಾ ಮಾಡಿತ್ತು. ಇದನ್ನು ನಾರಾಯಣ ವೈದ್ಯಕೀಯ ಕಾಲೇಜಿನ ( Narayana Medical College) ಆಡಳಿತ ಮಂಡಳಿ ಸುಪ್ರೀಂಕೋರ್ಟ್‌ನಲ್ಲಿ (Supreme Court) ಪ್ರಶ್ನಿಸಿತ್ತು.

ಬಿಬಿಎ ಡ್ರಾಪ್ ಔಟ್ ಆದ್ರೂ ಚಹಾ ಮಾರಿ ಕೋಟ್ಯಧಿಪತಿಯಾದ ಭಾರತೀಯ ವಿದ್ಯಾರ್ಥಿ!

ಅಪ್ರಾಪ್ತೆಯ ವಯಸ್ಸು ನಿರ್ಧಾರಕ್ಕೆ ಶಾಲೆ ದಾಖಲೆ ಸೂಕ್ತ: ಹೈಕೋರ್ಟ್

click me!