ಮೈಸೂರು ವಿಶ್ವವಿದ್ಯಾಲಯ ಕ್ಲಿಕ್ಸ್‌ ಕ್ಯಾಂಪಸ್‌ ನಡುವೆ ಒಡಂಬಡಿಕೆ

By Kannadaprabha News  |  First Published Nov 8, 2022, 10:00 PM IST

ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ಬೆಂಗಳೂರು ಮೂಲದ ಶಿಕ್ಷಣ, ತಂತ್ರಜ್ಞಾನ ಸಂಸ್ಥೆಯಾದ ಕ್ಲಿಕ್ಸ್‌ ಕ್ಯಾಂಪಸ್‌ನೊಂದಿಗೆ ಒಡಂಬಡಿಕೆ 


ಮೈಸೂರು(ನ.08): ಮೈಸೂರು ವಿಶ್ವವಿದ್ಯಾಲಯ ಮತ್ತು ಕ್ಲಿಕ್ಸ್‌ ಕ್ಯಾಂಪಸ್‌ ಒಡಂಬಡಿಕೆ ಮಾಡಿಕೊಂಡಿವೆ. ಮೈಸೂರು ವಿವಿ ವ್ಯಾಪ್ತಿಗೆ ಒಳಪಡುವ ಎಲ್ಲಾ ಕಾಲೇಜು ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ಬೆಂಗಳೂರು ಮೂಲದ ಶಿಕ್ಷಣ, ತಂತ್ರಜ್ಞಾನ ಸಂಸ್ಥೆಯಾದ ಕ್ಲಿಕ್ಸ್‌ ಕ್ಯಾಂಪಸ್‌ನೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಯಿತು. ಮೈವಿವಿ ಕುಲಪತಿ ಪೊ.ಜಿ. ಹೇಮಂತ್‌ಕುಮಾರ್‌, ಕೆರಿಯರ್‌ ಹಬ್‌ನ ನಿರ್ದೇಶಕ ಪೊ. ಹಂಸವೇಣಿ ಮತ್ತು ಕ್ಲಿಕ್ಸ್‌ ಕ್ಯಾಂಪಸ್‌ನ ಸಿಇಒ ಎಂ.ಟಿ. ಅರಸು ಒಪ್ಪಂದ ಪತ್ರಗಳಿಗೆ ಸಹಿ ಮಾಡಿದರು.

ನಂತರ ಮಾತನಾಡಿದ ಪೊ›.ಜಿ. ಹೇಮಂತ ಕುಮಾರ್‌, ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಎಲ್ಲಾ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ಬೆಂಗಳೂರು ಮೂಲದ ಶಿಕ್ಷಣ ತಂತ್ರಜ್ಞಾನ ಸಂಸ್ಥೆಯಾದ ಕ್ಲಿಕ್ಸ್‌ ಕ್ಯಾಂಪಸ್‌ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಸಹಯೋಗದಿಂದ, ಬೆಂಗಳೂರಿನ ಡಾ. ಸಂತೋಷ್‌ ಕೋಶಿ ಅವರ ನೇತೃತ್ವದ ಕೊಶೀಸ್‌ ಸಮೂಹ ಸಂಸ್ಥೆಗಳ ಕಾರ್ಪೊರೇಟ್‌ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮಗಳ ಅಡಿಯಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಅನೇಕ ತರಬೇತಿ ಕಾರ್ಯಕ್ರಮ ಉಚಿತವಾಗಿ ದೊರೆಯಲಿದೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು. ಅಲ್ಲದೆ, ರಾಜ್ಯದ ವಿಶ್ವವಿದ್ಯಾನಿಲಯಗಳ ಪೈಕಿ, ಮೈಸೂರು ವಿವಿ ಈ ಒಡಂ ಬಡಿಕೆಗೆ ಒಳಪಟ್ಟಪ್ರಥಮ ವಿಶ್ವವಿದ್ಯಾನಿಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರು.

Tap to resize

Latest Videos

ಮಂಡ್ಯ ವಿಶ್ವವಿದ್ಯಾಲಯ ಕನಸು-ನನಸು, ವಿವಿ ವ್ಯಾಪ್ತಿಯಲ್ಲಿ 47 ಪದವಿ ಕಾಲೇಜುಗಳು

ಕ್ಲಿಕ್ಸ್‌  ಕ್ಯಾಂಪಸ್‌ನ ಸಿಇಒ ಎಂ.ಟಿ. ಅರಸು ಮಾತನಾಡಿ, ವಿದ್ಯಾರ್ಥಿಗಳು ಕ್ಲಿಕ್ಸ್‌ ಕ್ಯಾಂಪಸ್‌ ಮೊಬೈಲ್‌ ಆಪ್‌ ಅನ್ನು ತಮ್ಮ ಮೊಬೈಲ್‌ ಮೂಲಕ ಡೌನ್‌ಲೋಡ್‌ ಮಾಡಿಕೊಂಡು ಉಚಿತವಾಗಿ ಸೈನ್‌ ಅಪ್‌ ಮಾಡಿಕೊಳ್ಳಬಹುದು. ವಿವಿಧ ಆ್ಯಪ್‌ ಹಾಗೂ ಕೋರ್ಸ್‌ಗಳ ಬಗ್ಗೆ ಉಚಿತವಾಗಿ ಕಲಿಯಬಹುದು. ಈ ಆನ್‌ಲೈನ್‌ ಕೋರ್ಸ್‌ ದಿನದ 24 ಗಂಟೆಗಳೂ ಲಭ್ಯವಿದ್ದು ವಿದ್ಯಾರ್ಥಿಗಳು ತಮಗೆ ಬೇಕಾದ ಸಮಯದಲ್ಲಿ ಕಲಿಯಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಈ ಕೋರ್ಸ್‌ ಕಲಿಯುವುದರಿಂದ ಸರ್ಕಾರದ ವಿವಿಧ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯನ್ನು ಮತ್ತು ವಿವಿಧ ಬ್ಯಾಂಕಿಂಗ್‌ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಮತ್ತು ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಬೇಕಿರುವ ಮಾನಸಿಕ ಸಾಮರ್ಥ್ಯ, ಆಪ್ಟಿಟ್ಯೂಡ್‌, ರೀಸನಿಂಗ್‌, ಸಾಫ್‌ಟಸ್ಕಿಲ್‌, ಮುಂತಾದ ವಿಷಯ ಕುರಿತು ತಿಳಿದುಕೊಳ್ಳಲು ನೆರವಾಗುತ್ತದೆ. ಈ ವೇಳೆ ಮೈಸೂರು ವಿವಿ ಕುಲಸಚಿವ ಪ್ರೊ.ಆರ್‌. ಶಿವಪ್ಪ, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್‌ನ ಡಿ. ರವಿಕುಮಾರ್‌ ಮೊದಲಾದವರು ಇದ್ದರು.
 

click me!