ಮಂಡ್ಯ ವಿವಿಯಲ್ಲಿ ರಾಜ್ಯದಲ್ಲೇ ಮೊದಲ ಆ್ಯಪಲ್‌ ಲ್ಯಾಬ್‌

By Kannadaprabha NewsFirst Published Jun 16, 2023, 1:03 PM IST
Highlights

ತಂತ್ರಜ್ಞಾನದಲ್ಲಿ ಮಂಡ್ಯ ವಿ​ಶ್ವ​ವಿ​ದ್ಯಾ​ಲಯ ಪಕ್ಕದ ಜಿಲ್ಲೆಗ​ಳ ವಿವಿಗ​ಳಿಗಿಂತಲೂ ಹೆಚ್ಚು ಸುಸಜ್ಜಿತವಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಸ​ಹ​ಕಾ​ರಿ​ಯಾ​ಗು​ತ್ತದೆ. ಶಿ​ಕ್ಷ​ಕರು ಹಾಗೂ ವಿ​ದ್ಯಾರ್ಥಿಗಳು ಇ​ದನ್ನು ಸ​ರಿ​ಯಾದ ರೀ​ತಿ​ಯಲ್ಲಿ ಸ​ದ್ಬ​ಳಕೆ ಮಾ​ಡಿ​ಕೊ​ಳ್ಳುವ ಮೂ​ಲಕ ಜಿಲ್ಲೆ ಹಾಗೂ ವಿಶ್ವವಿದ್ಯಾಲಯದ ಘನತೆ ಹೆ​ಚ್ಚಿ​ಸ​ಬೇಕು ಎಂದು ಶಾ​ಸಕ ರ​ವಿ​ಕು​ಮಾರ್‌ ಸ​ಲಹೆ ನೀ​ಡಿ​ದರು.

ಮಂಡ್ಯ (ಜೂ.16) : ತಂತ್ರಜ್ಞಾನದಲ್ಲಿ ಮಂಡ್ಯ ವಿ​ಶ್ವ​ವಿ​ದ್ಯಾ​ಲಯ ಪಕ್ಕದ ಜಿಲ್ಲೆಗ​ಳ ವಿವಿಗ​ಳಿಗಿಂತಲೂ ಹೆಚ್ಚು ಸುಸಜ್ಜಿತವಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಸ​ಹ​ಕಾ​ರಿ​ಯಾ​ಗು​ತ್ತದೆ. ಶಿ​ಕ್ಷ​ಕರು ಹಾಗೂ ವಿ​ದ್ಯಾರ್ಥಿಗಳು ಇ​ದನ್ನು ಸ​ರಿ​ಯಾದ ರೀ​ತಿ​ಯಲ್ಲಿ ಸ​ದ್ಬ​ಳಕೆ ಮಾ​ಡಿ​ಕೊ​ಳ್ಳುವ ಮೂ​ಲಕ ಜಿಲ್ಲೆ ಹಾಗೂ ವಿಶ್ವವಿದ್ಯಾಲಯದ ಘನತೆ ಹೆ​ಚ್ಚಿ​ಸ​ಬೇಕು ಎಂದು ಶಾ​ಸಕ ರ​ವಿ​ಕು​ಮಾರ್‌ ಸ​ಲಹೆ ನೀ​ಡಿ​ದರು.

ಗುರುವಾರ ಮಂಡ್ಯ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಆ್ಯಪಲ್‌ ಲ್ಯಾಬ್‌ ಪ್ರ​ಯೋ​ಗಾ​ಲಯದ ಉದ್ಘಾಟನೆ ನೆರವೇರಿಸಿ ಮಾತನಾಡಿ, ರಾ​ಜ್ಯ​ದಲ್ಲೇ ಆ್ಯ​ಪಲ್‌ ಲ್ಯಾಬ್‌ ಹೊಂದಿ​ರುವ ಮೊ​ದಲ ವಿ​ಶ್ವ​ವಿ​ದ್ಯಾ​ಲ​ಯ​ವಾಗಿ ಮಂಡ್ಯ ವಿವಿ ಹೊ​ರ​ಹೊ​ಮ್ಮಿದೆ. ಇದು ನ​ನಗೆ ಹೆ​ಚ್ಚಿನ ಖುಷಿ ನೀ​ಡಿದೆ ಎಂದರು.

Latest Videos

ಅಭಿಷೇಕ್-ಅವಿವಾ ಬೀಗರೂಟಕ್ಕೆ ಮಂಡ್ಯದಲ್ಲಿ ಭರ್ಜರಿ ಸಿದ್ದತೆ: ಬಾಡೂಟದ ಮೆನು ನೋಡಿದ್ರೆ ಬಾಯಲ್ಲಿ ನೀರು ಬರುತ್ತೆ

ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಡಾ.ಪುಟ್ಟರಾಜು ಮಾತನಾಡಿ, ನಮ್ಮ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿರುವ ಸುಸಜ್ಜಿತವಾದ ಆ್ಯಪಲ್‌ ಲ್ಯಾಬ್‌ನ್ನು ಬಳಸಿಕೊಂಡು ವಿದ್ಯಾರ್ಥಿಗಳು ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳಬೇಕು. ಮಂಡ್ಯ ಜಿಲ್ಲೆಯ ಗ್ರಾಮೀಣ ಭಾಗದ ವಿಧ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಸಶಕ್ತೀಕರಣಗೊಳಿಸಿಕೊಂಡು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಲ್ಲಿ ಆ್ಯಪಲ್‌ ಲ್ಯಾಬ್‌ ಹೆಚ್ಚು ಸಹಕಾರಿಯಾಗಿದೆ. ಇದರ ಉಪಯೋಗವನ್ನು ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ಇದೇ ವೇಳೆ ಮಂಡ್ಯ ವಿ​ವಿಗೆ ಅ​ಗ​ತ್ಯ​ವಿ​ರುವ ಸೌ​ಲ​ಭ್ಯ​ಗಳ ಬೇ​ಡಿ​ಕೆಯ ಮ​ನವಿ ಪ​ತ್ರ​ವನ್ನು ಸ​ಲ್ಲಿಸಿ ಶೀಘ್ರ ಕ್ರಮ ಕೈ​ಗೊ​ಳ್ಳು​ವಂತೆ ಮ​ನ​ವಿ ಮಾ​ಡಿ​ದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಜೀವ್‌.ಪಿ ಮತ್ತು ಫಣೀಂದರ್‌ ಅವರು ಉನ್ನತೀಕರಿಸಿದ ಆ್ಯಪಲ್‌ ಲ್ಯಾಬ್‌ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು. ಕುಲಸಚಿವ ಡಾ.ನಾಗರಾಜ್‌ ಜಿ.ಜೋಳ್ಳಿ, ಡಾ.ರಂಗರಾಜು, ಸಿಂಡಿಕೇಟ್‌ ಸದಸ್ಯರಾದ ನಾಗರಾಜು, ಬಸವರಾಜ್‌ ಎತ್ನಳ್ಳಿ, ಆ್ಯಪಲ್‌ ಇಸ್ಫೋಟೆಕ್‌ನ ಮೋಹಿತ್‌ ಹೆಗ್ಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಂಡ್ಯ ವಿಶ್ವವಿದ್ಯಾಲಯ ಕನಸು-ನನಸು, ವಿವಿ ವ್ಯಾಪ್ತಿಯಲ್ಲಿ 47 ಪದವಿ ಕಾಲೇಜುಗಳು

ಆ್ಯಪಲ್‌ ಲ್ಯಾಬ್‌ ವಿಶೇಷತೆ

ರಾಜ್ಯದಲ್ಲೇ ಮೊದಲ ಆ್ಯಪಲ್‌ ಲ್ಯಾಬ್‌ ಮಂಡ್ಯ ವಿಶ್ವವಿದ್ಯಾಲಯದಲ್ಲಿ ಆರಂಭಗೊಂಡಿರುವುದು ಹೆಗ್ಗಳಿಕೆ ವಿಚಾರ. ಅಮೆರಿಕ ಮೂಲದ ಆ್ಯಪಲ್‌ ಕಂಪನಿಯ ತಂತ್ರಜ್ಞಾನ ಆಡಳಿತ ನಿರ್ವಹಣೆ, ತಂತ್ರಜ್ಞಾನ ಬಳಕೆಗೆ ಹೆಚ್ಚು ಸಹಕಾರಿಯಾಗಿದೆ. ಪ್ರಪಂಚದ 500 ಟಾಪ್‌ ಕಂಪನಿಗಳು ಈ ತಂತ್ರಜ್ಞಾನವನ್ನು ಬಳಕೆ ಮಾಡುತ್ತಿವೆ. ಸಾಮಾನ್ಯ ಲ್ಯಾಬ್‌ಗಳಲ್ಲಿ ತರಬೇತಿ ಪಡೆಯುವರು ಕನಿಷ್ಠ 15 ಸಾವಿರ ರು.ವರೆಗೆ ವೇತನವನ್ನು ಪಡೆಯಬಹುದಾಗಿದ್ದರೆ, ಆ್ಯಪಲ್‌ ಲ್ಯಾಬ್‌ನಲ್ಲಿ ತರಬೇತಿ ಪಡೆಯುವವರು 1 ಲಕ್ಷ ರು.ವರೆಗೆ ವೇತನ ಪಡೆಯುವಷ್ಟುಪರಿಣತಿಯನ್ನು ಪಡೆದಿರುತ್ತಾರೆ. ಆ್ಯಪಲ್‌ಕಂಪನಿಯ ಪರಿಣಿತರಿಂದಲೇ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು. 35 ಲಕ್ಷ ರು. ವೆಚ್ಚದಲ್ಲಿ ಲ್ಯಾಬ್‌ನ್ನು ತೆರೆಯಲಾಗಿದೆ. ಮಂಡ್ಯ ವಿಶ್ವವಿದ್ಯಾಲಯಕ್ಕೆ ಇದೇ ಮಾದರಿಯ ಎರಡು ಲ್ಯಾಬ್‌ಗಳ ಅವಶ್ಯಕತೆ ಇದೆ. ವಿವಿ ವ್ಯಾಪ್ತಿಗೆ ಬರುವ 50 ಕಾಲೇಜುಗಳ ವಿದ್ಯಾರ್ಥಿಗಳು ಈ ಲ್ಯಾಬ್‌ನ ಸೇವೆಯನ್ನು ಬಳಸಿಕೊಳ್ಳಬಹುದು ಎಂದು ಮಂಡ್ಯ ವಿವಿ ಉಪ ಕುಲಪತಿ ಡಾ.ಪುಟ್ಟರಾಜು ಕನ್ನಡಪ್ರಭ ಪತ್ರಿಕೆಗೆ ಮಾಹಿತಿ ನೀಡಿದರು.

click me!