ಅನುಮೋದನೆಗೊಂಡ 46 ಹೊಸ ಸರ್ಕಾರಿ ಪಿಯು ಕಾಲೇಜು ಶೀಘ್ರ ಆರಂಭಿಸುವಂತೆ ಯುವಕನೋರ್ವ ಸಿಎಂ ಸಿದ್ದರಾಮಯ್ಯ, ಸಚಿವರಿಗೆ ರಕ್ತದಲ್ಲಿ ಬರೆದು ಆಗ್ರಹಿಸಿದ್ದಾನೆ.
ವಿಜಯಪುರ (ಜೂ.16): ಅನುಮೋದನೆಗೊಂಡ 46 ಹೊಸ ಸರ್ಕಾರಿ ಪಿಯು ಕಾಲೇಜು ಶೀಘ್ರ ಆರಂಭಿಸುವಂತೆ ಯುವಕನೋರ್ವ ಸಿಎಂ ಸಿದ್ದರಾಮಯ್ಯ, ಸಚಿವರಿಗೆ ರಕ್ತದಲ್ಲಿ ಬರೆದು ಆಗ್ರಹಿಸಿದ್ದಾನೆ.
ಶಿಕ್ಷಣ ಪ್ರೇಮಿ ಹೋರಾಟಗಾರ ವಿಜಯರಂಜನ್ ಜೋಷಿ ರಕ್ತದಲ್ಲಿ ಪತ್ರ ಬರೆದಿರುವ ಯುವಕ. ಸಿಎಂ ಸಿದ್ದರಾಮಯ್ಯ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಿಕ್ಷಣ ಇಲಾಖೆ ನಿರ್ದೇಶಕರು, ಶಾಸಕರಿಗೆ ರಕ್ತದಲ್ಲಿ ಪತ್ರ ಬರೆದು ಕಾಲೇಜು ಆರಂಭಿಸುವಂತೆ ಆಗ್ರಹಿಸಿದ್ದಾರೆ.
65 ಸಾವಿರ ಅಂಗನವಾಡಿಗಳ 2.60 ಲಕ್ಷ ಮಕ್ಕಳಿಗಿಲ್ಲ ಹಾಲು: 5 ತಿಂಗಳಿಂದ ಹಾಲಿನ ಪೌಡರ್ ಪೂರೈಕೆ ಮಾಡದ ಕೆಎಂಎಫ್!
2022-23ನೇ ಸಾಲಿನಲ್ಲಿ ರಾಜ್ಯದಲ್ಲಿ 46ಹೊಸ ಪಿಯು ಕಾಲೇಜುಗಳಿಗೆ ಅನುಮೋದನೆ ಕೊಟ್ಟಿದ್ದ ಹಿಂದಿನ ಸರ್ಕಾರ. ನಾಲತವಾಡ ಪಟ್ಟಣ ಸೇರಿದಂತೆ ರಾಜ್ಯಾದ್ಯಂತ 46ಹೊಸ ಪದವಿಪೂರ್ವ ಕಾಲೇಜಿಗೆ ಅನುಮೋದನೆ ಕೊಟ್ಟಿದ್ದ ಬಿಜೆಪಿ ಸರ್ಕಾರ. ಆದರೆ ಇದೀಗ ಕಾಂಗ್ರೆಸ್ ನೇತೃತ್ವದ ಹೊಸ ಸರ್ಕಾರ ಬಂದಿದ್ದರೂ ಇನ್ನೂ ಹೊಸ ಪಿಯು ಕಾಲೇಜು ಆರಂಭಿಸುವ ಬಗ್ಗೆ ನಿರ್ಧಾರ ಇಲ್ಲ. ಶೈಕ್ಷಣಿಕ ವರ್ಷದ ಪ್ರವೇಶಾತಿ ಮುಗಿಯುತ್ತಾ ಬಂದಿದ್ದರೂ ಇನ್ನೂ ಆರಂಭವಾಗದ ಹೊಸ ಪಿಯು ಕಾಲೇಜು. ಹೊಸ ಪಿಯು ಕಾಲೇಜು ಆರಂಭಿಸಿದರೆ ಸುಮಾರು 15ರಿಂದ 20 ಸಾವಿರ ಬಡವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ. ಹೀಗಾಗಿ ಸರ್ಕಾರ ಶೀಘ್ರ ಹೊಸ ಪಿಯು ಕಾಲೇಜಿನಲ್ಲಿ ಪ್ರವೇಶಾತಿಗೆ ಅವಕಾಶ ಕೊಡುವ ರಕ್ತದಲ್ಲಿ ಬರೆದು ಆಗ್ರಹಿಸಿರುವ ಯುವಕ ವಿಜಯರಂಜನ್.
ಮೂಲತಃ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಗ್ರಾಮದ ನಿವಾಸಿಯಾಗಿರುವ ವಿಜಯರಂಜನ್ ಜೋಶಿ. ತನ್ನೂರಿನ ಬಗ್ಗೆ ಅಪಾರ ಕಾಳಜಿ ಹೊಂದಿರುವ ಯುವಕ. ತನ್ನೂರಿಗೆ ಕಾಲೇಜು ಆರಂಭಿಸುವಂತೆ ಕುಮಾರಸ್ವಾಮಿ ಸಿಎಂ ಇದ್ದಾಗಲೂ ಪತ್ರ ಬರೆದು ಮನವಿ ಮಾಡಿದ್ದ. ಪ್ರಧಾನಿ ನರೇಂದ್ರಮೋದಿಯವರಿಗೂ ಪತ್ರ ಬರೆದು ಮನವಿ ಸಲ್ಲಿಸಿದ್ದ ಯುವಕ. ಪ್ರಧಾನಿ ಕಚೇರಿಯಿಂದ ಪ್ರತಿಕ್ರಿಯೆಯೂ ಬಂದಿತ್ತು. ಆದರೆ ಈ ಯುವಕ ಶೀಘ್ರ ಆರಂಭಿಸುವಂತೆ ಪತ್ರ ಬರೆದು ಒತ್ತಾಯಿಸುತ್ತಲೇ ಬಂದಿದ್ದ. ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ನೂತನ ಸಿಎಂ, ಸಚಿವರಿಗೆ ರಕ್ತದಲ್ಲೇ ಪತ್ರ ಬರೆದು ಆಗ್ರಹಿಸಿರುವ ವಿಜಯರಂಜನ್ ಜೋಶಿ. ಯುವಕನ ಮನವಿ ಸರ್ಕಾರ ಹೇಗೆ ಸ್ಪಂದಿಸುತ್ತದೆ ಕಾದು ನೋಡಬೇಕು.
ಮದರಸಾ ವಿದ್ಯಾರ್ಥಿಗಳ ಇಂಗ್ಲಿಷ್ ಕಲಿಕೆಗೆ ದಾರುಲ್ ಉಲೂಂ ನಿರ್ಬಂಧ