ಮಕ್ಕಳಿಗೆ ಕೆಮ್ಮು, ನೆಗಡಿ ಹೆಚ್ಚಳ: ಮೂರು ದಿನ ಶಾಲೆಗೆ ರಜೆ ಘೋಷಿಸಿದ ಮೇಗಲಹುಂಡಿ ಸರ್ಕಾರಿ ಪ್ರೌಢಶಾಲೆ

By Ravi Janekal  |  First Published Feb 16, 2023, 10:17 AM IST

ವಿದ್ಯಾರ್ಥಿಗಳಿಗೆ ಕೆಮ್ಮು, ನೆಗಡಿ ಹೆಚ್ಚಾದ ಕಾರಣ ಚಾಮರಾಜನಗರ ತಾಲೂಕಿನ ಮೇಗಲಹುಂಡಿ ಸರ್ಕಾರಿ ಪ್ರೌಢಶಾಲೆ ಮೂರು ದಿನಗಳ ಕಾಲ ರಜೆ ಘೋಷಣೆ ಮಾಡಿದೆ. 104 ಮಕ್ಕಳು ಓದ್ತಿರೊ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಅನಾರೋಗ್ಯ ಕಾಡ್ತಿದೆ. ಇಪ್ಪತ್ತಕ್ಕೂ ಹೆಚ್ಚು ಮಕ್ಕಳು ಕೆಮ್ಮು ನೆಗಡಿಯಿಂದ ಬಳಲುತ್ತಿದ್ದುದರಿಂದ ರಜೆ ಘೋಷಣೆ ಮಾಡಲಾಗಿದೆ. 


ಚಾಮರಾಜನಗರ (ಫೆ.16) : ಚಾಮರಾಜನಗರ (ಫೆ.16) ವಿದ್ಯಾರ್ಥಿಗಳಿಗೆ ಕೆಮ್ಮು, ನೆಗಡಿ ಹೆಚ್ಚಾದ ಕಾರಣ ಚಾಮರಾಜನಗರ ತಾಲೂಕಿನ ಮೇಗಲಹುಂಡಿ ಸರ್ಕಾರಿ ಪ್ರೌಢಶಾಲೆ ಮೂರು ದಿನಗಳ ಕಾಲ ರಜೆ ಘೋಷಣೆ ಮಾಡಿದೆ.

ಮೇಗಲಹುಂಡಿ ಸರ್ಕಾರಿ ಪ್ರೌಢಶಾಲೆ(Megalahundi government high school)ಯಲ್ಲಿ ನೂರಕ್ಕೂ ಅಧಿಕ ವಿದ್ಯಾರ್ಥಿ(Student)ಗಳು ಓದುತ್ತಿದ್ದಾರೆ. ಆರಂಭದಲ್ಲಿ 21 ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದರು. ಬಳಿಕ ಮತ್ತೆ ಕೆಲವರಿಗೆ ಹಬ್ಬಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಶಾಲೆ ಮೂರು ದಿನಗಳ ಕಾಲ ರಜೆ ಘೋಷಿಸಿದೆ.

Tap to resize

Latest Videos

undefined

ವಿದ್ಯಾರ್ಥಿ ಶುಲ್ಕ ಹೆಚ್ಚಳ ಬೇಡ ಎಂದಿದ್ದಕ್ಕೆ ಕಿವಿ ತಮಟೆ ಕಿತ್ತುಹೋಗುವಂತೆ ಹೊಡೆದ ಮುಖ್ಯ ಶಿಕ್ಷಕ!

ಗಣಿತ ಹಬ್ಬದಂದು(Maths festival) ಮಾಡಿಸಿದ್ದ ಬೋಂಡಾ ತಿಂದು ಮಕ್ಕಳಿಗೆ ಅನಾರೋಗ್ಯ ಎಂದು ಸಹಶಿಕ್ಷಕ ದುಂಡು ಮಹದೇವ ಆರೋಪಿಸಿದ್ದಾರೆ. ಮಕ್ಕಳ ಅನಾರೋಗ್ಯಕ್ಕೆ ಶಾಲೆ ಮುಖ್ಯೋಪಾಧ್ಯಾಯ ರಮೇಶ್(Ramesh) ಬೇಜವಬ್ದಾರಿಯೇ ಕಾರಣ ಎನ್ನಲಾಗಿದೆ. 

ಆದರೆ  ಸಹ ಶಿಕ್ಷಕನ ಆರೋಪ ಅಲ್ಲಗೆಳೆದಿರುವ ಶಾಲೆಯ ಮುಖ್ಯ ಶಿಕ್ಷಕ ರಮೇಶ್. ಗಣಿತ ಹಬ್ಬಕ್ಕೂ ಮೊದಲು ಕೆಲವು ಮಕ್ಕಳಲ್ಲಿ ಜ್ವರದ ಲಕ್ಷಣ ಇತ್ತು. ಇದು ಇತರ ಮಕ್ಕಳಿಗೆ ತಗುಲಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಶಾಲೆಗೆ ರಜೆ ನೀಡಲಾಗಿದೆ ಎಂದು ಎಂದಿದ್ದಾರೆ.

ಪ್ರಭಾರದಲ್ಲಿದ್ದ ಸಹ ಶಿಕ್ಷಕ ದುಂಡುಮಹದೇವ ಕಳೆದ ಎರಡು ವರ್ಷದಿಂದ ತಮಗೆ ಸರಿಯಾಗಿ ಚಾರ್ಜ್ ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ. ಚಾರ್ಜ್ ಕೇಳಿದ್ದಕ್ಕೆ ಇಲ್ಲಸಲ್ಲದ‌ ಆರೋಪ ಮಾಡುತ್ತಿದ್ದಾರೆ ಎಂದ ಮುಖ್ಯ ಶಿಕ್ಷಕ ರಮೇಶ್.ಹೇಳಿದ್ದಾರೆ. ಒಟ್ಟಿನಲ್ಲಿ ಶಿಕ್ಷರಿಬ್ಬರ ನಡುವಿನ ಜಗಳದಿಂದ ಮತ್ತು ಮಕ್ಕಳಿಗೆ ನೆಗಡಿ, ಕೆಮ್ಮು ಹೆಚ್ಚಳದಿಂದಾಗಿ ಗ್ರಾಮಸ್ಥರು ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಇಬ್ಬರನ್ನು ಮೊದಲು ಇಲ್ಲಿಂದ ರ್ಗಾವಣೆ ಮಾಡುವಂತೆ ಆಗ್ರಹಿಸಿದ್ದಾರೆ. ಮೇಗಲಹುಂಡಿ ಸರ್ಕಾರಿ ಶಾಲೆಗೆ ಶಾಲೆಗೆ ಜಿಲ್ಲೆಯಲ್ಲೆ ಉತ್ತಮ ಹೆಸರಿದೆ. ಈ‌ ಇಬ್ಬರು ಶಿಕ್ಷಕರಿಂದ ಶಾಲೆ‌ ಹಾಗೂ ಗ್ರಾಮದ ಹೆಸರು  ಹಾಳುಮಾಡುತ್ತಿದ್ದಾರೆ. ಮೊದಲು ಇವರನ್ನು ಈ ಶಾಲೆಯಿಂದ ವರ್ಗಾವಣೆ ಮಾಡುವಂತೆ ಒತ್ತಾಯಿಸಿದ್ದಾರೆ. 

ಸಮವಸ್ತ್ರ ವಿತರಣೆಗೆ ಸರ್ಕಾರದ ನಿರ್ಲಕ್ಷ್ಯ: ಅಧಿಕಾರಿಯನ್ನ ಜೈಲಿಗೆ ಕಳಿಸ್ತೇವೆ; ಹೈಕೋರ್ಟ್ ಎಚ್ಚರಿಕೆ

click me!