ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಈ ಬಾರಿ ನ್ಯಾಕ್ ಸಮಿತಿ ಸದಸ್ಯರು ಭೇಟಿ ನೀಡುವ ಮೂಲಕ ಫಲಿತಾಂಶ ಪ್ರಕಟವಾಗಿದ್ದು ಕಡೂರು ಕಾಲೇಜು ಇದೇ ಮೊದಲ ಭಾರಿಗೆ ಎ ಶ್ರೇಣಿ ಲಭಿಸಿರುವುದಾಗಿ ಪ್ರಾಚಾರ್ಯ ಎಸ್.ಬಿ.ಮಂಜುನಾಥ್ ತಿಳಿಸಿದರು.
,ಕಡೂರು (ಫೆ.16) : ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಈ ಬಾರಿ ನ್ಯಾಕ್ ಸಮಿತಿ ಸದಸ್ಯರು ಭೇಟಿ ನೀಡುವ ಮೂಲಕ ಫಲಿತಾಂಶ ಪ್ರಕಟವಾಗಿದ್ದು ಕಡೂರು ಕಾಲೇಜು ಇದೇ ಮೊದಲ ಭಾರಿಗೆ ಎ ಶ್ರೇಣಿ ಲಭಿಸಿರುವುದಾಗಿ ಪ್ರಾಚಾರ್ಯ ಎಸ್.ಬಿ.ಮಂಜುನಾಥ್ ತಿಳಿಸಿದರು.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಕಳೆದ ವಾರವಷ್ಟೇ ನ್ಯಾಕ್(NAAC) ಸಮಿತಿ ಅಧ್ಯಕ್ಷರು ಸೇರಿದಂತೆ ಮತ್ತಿಬ್ಬರ ತಂಡ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಕಾಲೇಜಿನಲ್ಲಿ ಮೂಲ ಸೌಲಭ್ಯಗಳು, ಸಾಂಸ್ಕೃತಿಕ ಚಟುವಟಿಕೆಗಳು, ಕ್ರೀಡೆ, ಶೈಕ್ಷಣಿಕ ಪ್ರಗತಿ, ಸ್ವಚ್ಛತæ , ವಿದ್ಯಾರ್ಥಿಗಳ ಶಿಸ್ತು ಎಲ್ಲವನ್ನು ಪರಿಶೀಲನೆ ಮಾಡಿದ್ದರು.
ಹುಣಸೋಡು ಸ್ಫೋಟ ಪ್ರಕರಣ: ಪರಿಹಾರ ವಿಳಂಬದ ವಿರುದ್ಧ ಪ್ರಧಾನಿಗೆ ಮನವಿ
ಕಾಲೇಜಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳಿದ್ದು ಸುಮಾರು 2ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 33 ಉಪನ್ಯಾಸಕರು, 39 ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. 2015ರಲ್ಲಿ ನ್ಯಾಕ್ ಸಮಿತಿ ಕಾಲೇಜಿಗೆ ಭೇಟಿ ನೀಡಿದಾಗ ಬಿ ಶ್ರೇಣಿ ನೀಡಲಾಗಿತ್ತು. ಆದರೆ ಈ ಬಾರಿ ಎ ಶ್ರೇಣಿ ಬಂದಿರುವುದಕ್ಕೆ ಕಾಲೇಜು ಅಭಿವೃದ್ಧಿ ಸಮಿತಿ ಆಡಳಿತ ಸಮಿತಿ ಹಾಗು ಭೋಧಕ ವರ್ಗ ಹಾಗು ಭೋಧಕೇತರ ವರ್ಗಕ್ಕೆ ಮತ್ತಷ್ಟುಉತ್ಸಾಹ ತಂದಿದೆ ಎಂದರು.
ಕಾಲೇಜಿಗೆ ಶಾಸಕ ಬೆಳ್ಳಿಪ್ರಕಾಶ್(Belliprakash) ರವರು ಹೆಚ್ಚಿನ ಮುತುವರ್ಜಿ ವಹಿಸಿ ಕಟ್ಟಡ, ಕೊಠಡಿಯಿಂದ ಹಿಡಿದು ಎಲ್ಲ ರೀತಿಯ ಮೂಲ ಸೌಲಭ್ಯ ಕಲ್ಪಿಸಲು ಮುಂದಾದರು. ಕಾಲೇಜಿಗೆ ಬಹಳ ಪ್ರಮುಖವಾಗಿದ್ದ 100/150 ಅಡಿ ಜಾಗವನ್ನು ಶಾಸಕರು ಹಲವಾರು ಅಡೆತಡೆಗಳಿದ್ದರೂ ಅವುಗಳನ್ನು ಸರಿಪಡಿಸಿ ಕಾಲೇಜು ಅಭಿವೃದ್ಧಿಗೆ ಶ್ರಮಿಸಿದರು. ನೂತನ ಕೊಠಡಿಗಳನ್ನು ಕಟ್ಟಲು 4.55 ಕೋಟಿ ರು. ಅನುದಾನ ಮತ್ತು ಜೊತೆಗೆ 2 ಕೋಟಿ ರು. ವಿಶೇಷ ಅನುದಾನ ದೊರಕಿಸಿಕೊಟ್ಟರು. ನ್ಯಾಕ್ ಸಮಿತಿ ಭೇಟಿ ನೀಡಿದಾಗ ಸಹಕಾರ ನೀಡಿದರು. ಈ ಎಲ್ಲ ಕಾರಣಗಳಿಂದ ಕಾಲೇಜಿಗೆ ಈ ಭಾರಿ ‘ಎ’ ಶ್ರೇಣಿ ಬರಲು ಕಾರಣವಾಗಿದೆ. ಅದಕ್ಕಾಗಿ ಶಾಸಕರಿಗೆ ಕಾಲೇಜು ಪರವಾಗಿ ಅಭಿನಂಧಿಸುತ್ತೇವೆ ಎಂದು ಪ್ರಾಚಾರ್ಯ ಮಂಜುನಾಥ್ ತಿಳಿಸಿದರು. ಇದೇ ಸಂದರ್ಭ ದಲ್ಲಿ ಕಾಲೇಜಿನ ಸಂಯೋಜಕಿ ಲಾವಣ್ಯ,ರಾಘವೇಂದ್ರ ಮತ್ತಿತರರು ಇದ್ದರು.
ನನ್ನ ಮೇಲೆ ದಾಳಿಗಷ್ಟೆ ಇಡಿ ಇರೋದು: ಡಿ.ಕೆ.ಶಿವಕುಮಾರ್
ಅಭಿನಂದನೆ:
ನಮ್ಮ ಕಡೂರು ಕಾಲೇಜಿಗೆ ನ್ಯಾಕ್ ಸಮಿತಿ ‘ಎ’ ಗ್ರೇಡ್ ನೀಡಿರುವುದು ಕಾಲೇಜಿಗೆ ಮತ್ತೊಂದು ಗರಿ ಮೂಡಿದೆ. ಕಾಲೇಜು ಅಭಿವೃದ್ಧಿಗೆ ಪೂರಕವಾಗಿ ನನ್ನ ಶ್ರಮ ನಿರಂತರವಾಗಿರುತ್ತದೆ ಆಡಳಿತ ಮಂಡಳಿ ಮತ್ತು ಉಪನ್ಯಾಸಕರಿಗೆ ಅಭಿನಂದನೆ ಸಲ್ಲಿಸುತ್ತೇನೆ.
- ಬೆಳ್ಳಿಪ್ರಕಾಶ್, ಶಾಸಕ