ಮಗನ ಮಾರ್ಕ್‌ಶೀಟ್ ಹೆಮ್ಮೆಯಿಂದ ತೋರಿಸಿದ ಆಟೋ ಚಾಲಕ ಅಪ್ಪ

By Anusha Kb  |  First Published Jun 27, 2022, 9:44 AM IST

ಮಕ್ಕಳ ಯಶಸ್ಸು ಅವರ ಕನಸನ್ನು ಈಡೇರಿಸುವ ಸಲುವಾಗಿ ಪೋಷಕರು ತುಂಬಾ ಕಷ್ಟಪಡುತ್ತಾರೆ. ತಮ್ಮೆಲ್ಲಾ ಆಸೆ ಆಕಾಂಕ್ಷೆಗಳನ್ನು ತ್ಯಾಗ ಮಾಡಿ ಮಕ್ಕಳಿಗೆ ಒಂದು ಉತ್ತಮ ಬದುಕನ್ನು ರೂಪಿಸಲು ಹೆಣಗಾಡುತ್ತಾರೆ. ಅದೇ ವೇಳೆ ಮಕ್ಕಳು ಕೂಡ ತಮ್ಮ ಪೋಷಕರ ತ್ಯಾಗವನ್ನು ವ್ಯರ್ಥವಾಗಿಸದೇ ಕಷ್ಟಪಟ್ಟು ಜೀವನದಲ್ಲಿ ಗುರಿ ತಲುಪಿದರೆ ಪೋಷಕರ ತ್ಯಾಗಕ್ಕೊಂದು ಸಾರ್ಥಕತೆ ಬರುತ್ತದೆ. 


ಮಕ್ಕಳ ಯಶಸ್ಸು ಅವರ ಕನಸನ್ನು ಈಡೇರಿಸುವ ಸಲುವಾಗಿ ಪೋಷಕರು ತುಂಬಾ ಕಷ್ಟಪಡುತ್ತಾರೆ. ತಮ್ಮೆಲ್ಲಾ ಆಸೆ ಆಕಾಂಕ್ಷೆಗಳನ್ನು ತ್ಯಾಗ ಮಾಡಿ ಮಕ್ಕಳಿಗೆ ಒಂದು ಉತ್ತಮ ಬದುಕನ್ನು ರೂಪಿಸಲು ಹೆಣಗಾಡುತ್ತಾರೆ. ಅದೇ ವೇಳೆ ಮಕ್ಕಳು ಕೂಡ ತಮ್ಮ ಪೋಷಕರ ತ್ಯಾಗವನ್ನು ವ್ಯರ್ಥವಾಗಿಸದೇ ಕಷ್ಟಪಟ್ಟು ಜೀವನದಲ್ಲಿ ಗುರಿ ತಲುಪಿದರೆ ಪೋಷಕರ ತ್ಯಾಗಕ್ಕೊಂದು ಸಾರ್ಥಕತೆ ಬರುತ್ತದೆ. ನಮ್ಮ ಶ್ರಮವನ್ನು ಅವರು ವ್ಯರ್ಥಗೊಳಿಸಿಲ್ಲ. ನಮ್ಮ ತ್ಯಾಗಕ್ಕೊಂದು ಬೆಲೆ ನೀಡಿದರು ಎಂಬ ಧನ್ಯತಾ ಭಾವ ಅವರಲ್ಲಿ ಬರುತ್ತದೆ. ಪೋಷಕರು ಹೆಮ್ಮೆಯಿಂದ ನನ್ನ ಮಗ ಅಥವಾ ಮಗಳು ಈ ಸಾಧನೆ ಮಾಡಿದರು ಎಂದು ಎದೆಯುಬ್ಬಿಸಿ ಹೇಳಿಕೊಳ್ಳುತ್ತಾರೆ.

ಅದೇ ರೀತಿ ಇಲ್ಲೊಬ್ಬರು ಆಟೋ ಚಾಲಕರು ತಮ್ಮ ಪುತ್ರನ ಸಾಧನೆಯನ್ನು ಪ್ರಯಾಣಿಕರೊಬ್ಬರೊಂದಿಗೆ ಹೆಮ್ಮೆಯಿಂದ ಹೇಳಿಕೊಂಡಿದ್ದು, ಅವರ ಕತೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಟೋ ಚಾಲಕರೊಬ್ಬರ ಮಗ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಧರಿಸಿದ್ದು, ಇದನ್ನು ಅವರು ಪ್ರಯಾಣಿಕರೊಂದಿಗೆ ಹೇಳಿಕೊಂಡು ಮಾರ್ಕ್ಸ್‌ಕಾರ್ಡ್ ಅನ್ನು ತೋರಿಸಿಕೊಂಡಿದ್ದರು. ಇದನ್ನು ವಿಕಾಸ್ ಆರೋರಾ ಅವರು ತಮ್ಮ ಲಿಂಕ್ಡಿನ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅದರ ಸಾರಾಂಶ ಇಲ್ಲಿದೆ.

Tap to resize

Latest Videos

ಬದುಕಿನ ದೊಡ್ಡ ಅಲೆಗಳಿಗೆ ಬೆದರದೆ ಈಜೋದು ಹೇಳಿಕೊಟ್ಟ ಅಪ್ಪ!
 

ಮಹಾರಾಷ್ಟ್ರದ (Maharashtra) ಅಕೋಲಾದಲ್ಲಿ (Akola) ನಾನಿಂದು ಸ್ಥಳೀಯ ಆಟೋವೊಂದರಲ್ಲಿ ಪ್ರಯಾಣಿಸುತ್ತಿದ್ದೆ. ಆಟೋ ಡ್ರೈವರ್ ತಮ್ಮ ಮಗನ ಅಂಕಪಟ್ಟಿಯನ್ನು ಬಹಳ ಹೆಮ್ಮೆ ಹಾಗೂ ಖುಷಿಯಿಂದ ನನಗೆ ತೋರಿಸಿದರು. ಮಾರ್ಕ್ಸ್‌ ನೋಡಿ ಅವನು ಬುದ್ಧಿವಂತ ಮಿದುಳು ಉಳ್ಳವ ಎಂದರು. ತನ್ನ ಮಗನ ಸಾಧನೆಯನ್ನು ಹೇಳಿಕೊಳ್ಳುವಾಗ ಅವರ ಮುಖದಲ್ಲಿ ಭಾರಿ ಹೆಮ್ಮೆ ಹಾಗೂ ಸಂತೋಷವಿತ್ತು. 

ಗದಗ: ಬಾರ್ ಬೆಂಡಿಂಗ್ ಕೆಲಸ ಮಾಡೋ ಹುಡುಗ ಪಿಯುಸಿಯಲ್ಲಿ ರಾಜ್ಯಕ್ಕೆ 2ನೇ ರ್‍ಯಾಂಕ್..!
 

ಪಿಯುಸಿ ಪರೀಕ್ಷೆಯಲ್ಲಿ ಆಟೋ ಚಾಲಕನ (autorickshaw driver) ಪುತ್ರ  600 ಅಂಕಗಳಲ್ಲಿ 592 ಅಂಕ ಗಳಿಸಿದ್ದರು ಹಾಗೂ ಈ ರೀತಿ ಅಂಕ ಗಳಿಸಿದರೆ ಯಾವ ಪೋಷಕರಾದರು  ಖುಷಿ ಪಡದೇ ಇರಲು ಹೇಗೆ ಸಾಧ್ಯ. ಆಟೋರಿಕ್ಷಾ ಚಾಲಕನ ಸಾಮಾಜಿಕ-ಆರ್ಥಿಕ ಹಿನ್ನೆಲೆ ಮತ್ತು ತನ್ನ ಮಗುವಿಗೆ ಶಿಕ್ಷಣ ನೀಡಲು ಅವನು ಎದುರಿಸಬೇಕಾದ ಅಡೆತಡೆಗಳನ್ನು ಗಮನಿಸಿದಾಗ ಈ ಗೆಲುವು ಇನ್ನಷ್ಟು ಸಿಹಿ ಎನಿಸುತ್ತದೆ. 

ಅಲ್ಲದೇ ಪ್ರಯಾಣಿಕನೊಂದಿಗೆ ಅವರು ಈ ವಿಚಾರವನ್ನು ಶೇರ್ ಮಾಡಿಕೊಂಡಿದ್ದು, ಅವರಿಗೆ ಇನ್ನಷ್ಟು ಖುಷಿ ನೀಡಿತ್ತು. ಪ್ರಯಾಣಿಕ ವಿಕಾಸ್ ಆರೋರಾ ಲಿಂಕ್ಡಿನ್‌ಲ್ಲಿ ಮಾಡಿದ ಪೋಸ್ಟ್ ಈಗ ಸಾಕಷ್ಟು ವೈರಲ್ ಆಗಿದ್ದು,  45,500 ಕ್ಕೂ ಹೆಚ್ಚು ಜನ ಈ ಪೋಸ್ಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗೆ ಅಭಿನಂದನೆಗಳು, ಆತನಿಗೆ ಉನ್ನತ ಶಿಕ್ಷಣಕ್ಕೆ ಆರ್ಥಿಕ ಸಹಾಯ ಬೇಕಾದಲ್ಲಿ ನನಗೆ ತಿಳಿಸಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಫೋಟೋ ತೆಗೆದುಕೊಂಡು ನೀವು ಈ ವಿಚಾರವನ್ನು ಇಲ್ಲಿ ಹಂಚಿಕೊಂಡಿರುವುದು ಖುಷಿ ತಂದಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

click me!