ಸರ್ಕಾರಿ ಶಾಲೆ ಶಿಕ್ಷಕಿಯ ಒಂದೊಳ್ಳೆ ಕೆಲ್ಸ ವೈರಲ್

By Anusha KbFirst Published Jun 26, 2022, 4:40 PM IST
Highlights

ಶಿಕ್ಷಕರು ಮಕ್ಕಳ ಬದುಕಿನಲ್ಲಿ ಸರಿಯಾದ ಮಾರ್ಗವನ್ನು ತೋರುತ್ತಾರೆ. ಆದರೆ ಎಲ್ಲರಿಗೂ ಇಂತಹ ಶಿಕ್ಷಕರು ಸಿಗುವುದಿಲ್ಲ. ಆದರೆ ಬಿಹಾರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ತಮ್ಮ ಶಾಲೆಯಲ್ಲಿ ತಮ್ಮ ಕೆಲಸ ಮುಗಿದ ನಂತರ ಮಂಗಳಮುಖಿ ಹಾಗೂ ದಿವ್ಯಾಂಗರ ಕಲ್ಯಾಣಕ್ಕಾಗಿ ದುಡಿಯುತ್ತಿದ್ದಾರೆ.

ಪಾಟ್ನಾ: ಶಿಕ್ಷಕರು ಮಕ್ಕಳ ಬದುಕಿನಲ್ಲಿ ಸರಿಯಾದ ಮಾರ್ಗವನ್ನು ತೋರುತ್ತಾರೆ. ಆದರೆ ಎಲ್ಲರಿಗೂ ಇಂತಹ ಶಿಕ್ಷಕರು ಸಿಗುವುದಿಲ್ಲ. ಆದರೆ ಬಿಹಾರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ತಮ್ಮ ಶಾಲೆಯಲ್ಲಿ ತಮ್ಮ ಕೆಲಸ ಮುಗಿದ ನಂತರ ಮಂಗಳಮುಖಿ ಹಾಗೂ ದಿವ್ಯಾಂಗರ ಕಲ್ಯಾಣಕ್ಕಾಗಿ ದುಡಿಯುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಪಾಠ ಹೇಳಿ ಮನೆಗೆ ಹಿಂದಿರುಗುವ ಸರ್ಕಾರಿ ಶಾಲೆಯ ಶಿಕ್ಷಕಿ ನಮ್ರತಾ ಆನಂದ್ ಅವರು ತಮ್ಮ ಸಮಯವನ್ನು ತೃತೀಯಲಿಂಗಿ ಮತ್ತು ವಿಶೇಷ ಚೇತನರ ಕಲ್ಯಾಣಕ್ಕಾಗಿ ಬಳಸುತ್ತಾರೆ. 

ನಮ್ರತಾ ಆನಂದ್ ಅವರು ಪಾಟ್ನಾ ಜಿಲ್ಲೆಯ ಸಿಪಾರಾದಲ್ಲಿನ ಸರ್ಕಾರಿ ಮಧ್ಯಮ ಶಾಲೆಯಲ್ಲಿ ಪರಿಸರ ಮತ್ತು ಸಾಮಾಜಿಕ ವಿಜ್ಞಾನವನ್ನು ಮಕ್ಕಳಿಗೆ ಕಲಿಸುತ್ತಾರೆ. ಶಾಲೆ ಮುಗಿದ ನಂತರ ಅವರು ಪಾಟ್ನಾದ ಚಿತ್ಕೊಹ್ರಾ ಪ್ರದೇಶದ ಕೊಳೆಗೇರಿಗಳಿಗೆ ಭೇಟಿ ನೀಡಿ ಅಲ್ಲಿ ಪಾಠ ಮಾಡುತ್ತಾರೆ. 2007ರಲ್ಲಿ ನಮ್ರತಾ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ಸಮಾಜಮುಖಿ ಕಾರ್ಯಗಳನ್ನು ಆರಂಭಿಸಿದರು. ಭೋಧನೆ ಮತ್ತು ಸಮಾಜಸೇವೆ ನನ್ನ ಆಸಕ್ತಿಯ ಕ್ಷೇತ್ರಗಳು. ಬಡ ಕುಟುಂಬದಿಂದ ಮಕ್ಕಳಿಗೆ  ಶಿಕ್ಷಣ ನೀಡಲು ಕಮಲ ನೆಹರು ಶಾಲೆಯಲ್ಲಿ ಕೊಠಡಿಯೊಂದನ್ನು ನಿರ್ಮಿಸಲಾಗಿದೆ. ಅಗತ್ಯವಿರುವವರಿಗೆ ಉಚಿತ ಶಿಕ್ಷಣ ನೀಡಲು 4 ರಿಂದ 5 ಇತರ ಕೇಂದ್ರಗಳನ್ನು ಸಹ ತೆರೆಯಲಾಗಿದೆ ಎಂದು ನಮ್ರತಾ ಹೇಳುತ್ತಾರೆ. 

ಭಾರತೀಯ ವಿಕಾಸ್ ಪರಿಷತ್ತಿನ ಬೆಂಬಲದೊಂದಿಗೆ, ಅವರು ವಿಶೇಷಚೇತನರಿಗೆ ಕ್ಯಾಲಿಪರ್‌ಗಳು, ಕೃತಕ ಕಾಲುಗಳು ಮತ್ತು ತ್ರಿಚಕ್ರ ವಾಹನಗಳನ್ನು ಒದಗಿಸುವ ಮೂಲಕ ಅವರನ್ನು ಬೆಂಬಲಿಸಿದ್ದಾರೆ. ಅದರೊಂದಿಗೆ ಅವರು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಮಂಗಳಮುಖಿಯರಿಗೆ ಉಚಿತ ಪಡಿತರವನ್ನು ಒದಗಿಸಿದ್ದಾರೆ. ಚಳಿಗಾಲದಲ್ಲಿ ಅವರಿಗೆ ಹೊದಿಕೆಗಳನ್ನು ಸಹ ನೀಡಿದ್ದೇವೆ ಎಂದು ಅವರು ಹೇಳಿದರು.

2020ರಲ್ಲಿ, ನಮ್ರತಾ ಕುರ್ತೋಲ್‌ನ ಫುಲ್ಜಾರಿ ಗಾರ್ಡನ್‌ನಲ್ಲಿ (Fuljhari Garden of Kurthol) ಸಂಸ್ಕಾರ ಶಾಲೆಯನ್ನು ಸ್ಥಾಪಿಸಿದರು. ಬಡ ಕುಟುಂಬ ಮತ್ತು ಕೊಳೆಗೇರಿಗಳ ಮಕ್ಕಳಿಗೆ ಅಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತದೆ. ಅವರು ಸಂಗೀತ ಮತ್ತು ಹೊಲಿಗೆ ಮತ್ತು ನೇಯ್ಗೆ, ಹಪ್ಪಳ ತಯಾರಿಕೆ, ಚಿತ್ರಕಲೆ ಮತ್ತು ನೃತ್ಯದಲ್ಲಿ ತರಬೇತಿ ನೀಡುತ್ತಾರೆ. ತಮ್ಮ ಕುಟುಂಬಕ್ಕೆ ಬಟ್ಟೆ , ಹೊಲಿಗೆ ಮತ್ತು ಶಾಲಾ ಮಕ್ಕಳ ಸಮವಸ್ತ್ರದಿಂದ ಬರುವ ಆದಾಯದಿಂದ ಆರ್ಥಿಕವಾಗಿ ಸಹಾಯ ಮಾಡುತ್ತಿದ್ದಾರೆ ಎಂದು ಬಾಲಕಿಯರಾದ ಗುಡಿಯಾ ಮಾತು ಪ್ರೀತಿ ಹೇಳಿದರು.

ಇವರಿಂದ ತರಬೇತಿ ಪಡೆದ ಕೆಲವರು ಕರಕುಶಲ ಮತ್ತು ಚಿತ್ರಕಲೆ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ನಿರ್ಮಿಸಿದ್ದಾರೆ. ಸುಲೇಖಾ ಕುಮಾರಿ (Sulekha Kumari) ಎಂಬುವವರು ಬ್ಯೂಟಿಷಿಯನ್ ಕೋರ್ಸ್ ಮಾಡಿ ಗೌರವಾನ್ವಿತ ಮೊತ್ತ ಗಳಿಸುತ್ತಿದ್ದಾರೆ. ಅದೇ ರೀತಿ ರಾಧಾ ಮತ್ತು ಮಮತಾ ಕುಮಾರಿ (Mamta Kumari) ಎಂಬುವವರಿಗೆ ಮದುವೆ ಸಮಾರಂಭಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವೇದಿಕೆ ನೃತ್ಯಕ್ಕೆ ಕರೆಗಳು ಬರುತ್ತಿವೆ. ಜನಪ್ರಿಯ ಗಿಟಾರ್ ವಾದಕರಾದ ಪ್ರವೀಣ್ ಕುಮಾರ್ ಬಾದಲ್ ( Praveen Kumar Badal) ಅವರು ಇಲ್ಲಿ ಮಕ್ಕಳಿಗೆ ತಂತಿವಾದ್ಯದಲ್ಲಿ ತರಬೇತಿ ನೀಡುತ್ತಾರೆ. ಸಮಾಜ ಸೇವಕ ಮಿಥಿಲೇಶ್ ಸಿಂಗ್ (Mithilesh Singh) ಅವರು ಸಂಸ್ಕಾರಶಾಲೆಯನ್ನು ತೆರೆಯಲು ಜಾಗವನ್ನು ಒದಗಿಸಿದ್ದಾರೆ ಎಂದು ಅವರು ನಮೃತಾ ಹೇಳಿದರು.

ಜಿಲ್ಲಾ ನ್ಯಾಯಾಧೀಶರ ಪುತ್ರಿಯಾಗಿರುವ ನಮ್ರತಾ ಅವರು ಶಾಲೆಗಳ ಸಂಯೋಜಕಿಯಾಗಿ ನೇಮಕಗೊಂಡಾಗ ಸಾಕಷ್ಟು ಕಲಿತರು. ಅವರು 2014 ರಿಂದ 2018 ರವರೆಗೆ 15 ಸರ್ಕಾರಿ ಶಾಲೆಗಳಿಗೆ ಸೇರಿದ 2,500 ಮಕ್ಕಳೊಂದಿಗೆ ಕೆಲಸ ಮಾಡಿದರು. ಇದು ನನ್ನ ವ್ಯವಸ್ಥಾಪಕ ಕೌಶಲ್ಯವನ್ನು ಸುಧಾರಿಸಲು ಸಹಾಯ ಮಾಡಿದೆ ಎಂದು ಅವರು ಹೇಳುತ್ತಾರೆ. ದೀದಿ ಜೀ ಫೌಂಡೇಶನ್‌ನ ಬ್ಯಾನರ್ ಅಡಿಯಲ್ಲಿ, ಅವರು ಜಲ ಜೀವನ ಹರಿಯಲಿ ಮಿಷನ್, ಬೇಟಿ ಪಢಾವೋ ಬೇಟಿ ಬಚಾವೋ, ಪರಿಸರ ಮತ್ತು ನೈರ್ಮಲ್ಯ ಅಭಿಯಾನಗಳು, ತಂಬಾಕು ವಿರೋಧಿ ಅಭಿಯಾನಗಳು ಮತ್ತು ಸಾಕ್ಷರತಾ ಅಭಿಯಾನಗಳಂತಹ ಕಾರ್ಯಗಳಲ್ಲಿ ಭಾಗವಹಿಸಿದ್ದಾರೆ.
 

click me!