ತಿಪಟೂರು ರಸ್ತೆ ಅಗಲೀಕರಣಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್, 32.50 ಕೋಟಿ ರೂ ವೆಚ್ಚದಲ್ಲಿ 4 ಲೇನ್!

Published : Nov 02, 2022, 05:21 PM ISTUpdated : Nov 02, 2022, 05:24 PM IST
ತಿಪಟೂರು ರಸ್ತೆ ಅಗಲೀಕರಣಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್, 32.50 ಕೋಟಿ ರೂ ವೆಚ್ಚದಲ್ಲಿ 4 ಲೇನ್!

ಸಾರಾಂಶ

ಕೇಂದ್ರ ಸರ್ಕಾರ ಇದೀಗ ಕರ್ನಾಟಕದ ಮತ್ತೊಂದು ಹೆದ್ದಾರಿ ಅಭಿವೃದ್ಧಿಗೆ ಅನುಮೋದನೆ ನೀಡಿದೆ. ಈ ಬಾರಿ ತಿಪಟೂರಿನ NH 206 ರಸ್ತೆ ಅಗಲೀಕರಣಕ್ಕೆ ಸಚಿವ ನಿತಿನ್ ಗಡ್ಕರಿ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ನವದೆಹಲಿ(ನ.02): ಭಾರತದ ಹೆದ್ದಾರಿ ರಸ್ತೆಗಳು ತ್ವರಿತಗತಿಯಲ್ಲಿ ಅಭಿವೃದ್ಧಿಯಾಗುತ್ತಿದೆ. ಅತ್ಯಾಧುನಿಕ ಹಾಗೂ ಅಂತಾರಾಷ್ಟ್ರೀಯ ಮಟ್ಟದ ರಸ್ತೆಗಳನ್ನು ಕೇಂದ್ರ ಸರ್ಕಾರ ನಿರ್ಮಾಣ ಮಾಡುತ್ತಿದೆ. ಕೇಂದ್ರದ ಅನುದಾನದಲ್ಲಿ ಈಗಾಗಲೇ ಕರ್ನಾಟಕದಲ್ಲಿ ಹಾದು ಹೋಗುತ್ತಿರುವ ಹಲವು ಹೆದ್ದಾರಿಗಳು ಅಭಿವೃದ್ಧಿಯಾಗುತ್ತಿದೆ. ಇದರಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಕಾಮಾಗಾರಿ ಬಹುತೇಕ ಪೂರ್ಣಗೊಂಡಿದೆ. ಬೆಂಗಳೂರು ಮಂಗಳೂರು ರಸ್ತೆ ಕಾಮಾಗಾರಿ ಯೋಜನೆ ಸಿದ್ದಗೊಂಡಿದೆ. ಇದರ ಜೊತೆ ಹಲವು ರಸ್ತೆ ಕಾಮಾಗಾರಿಗಳು ನಡೆಯುತ್ತಿದೆ. ಇದೀಗ ಕೇಂದ್ರ ಸರ್ಕಾರ ತಿಪಟೂರಿನ ಎನ್ ಎಚ್ 206 ರಸ್ತೆ ಅಗಲೀಕರಣಕ್ಕೆ ಅನುಮೋದನೆ ನೀಡಿದೆ. ಈ ಸಂತಸವನ್ನು ಸ್ವತಃ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಂಚಿಕೊಂಡಿದ್ದಾರೆ. 

ತಿಪಟೂರಿನ ಕೋಡಿ ಸರ್ಕಲ್ ನಿಂದ ಹುಚ್ಚಗೊಂಡನಹಳ್ಳಿ ಬೈ ಪಾಸ್ ತನಕ ರಸ್ತೆ ಅಗಲೀಕರಣ ಮಾಡಲಾಗುತ್ತಿದೆ. ಸದ್ಯ 2 ಲೇನ್ ರಸ್ತೆ ಇದಾಗಿದೆ. ಇದರಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ. ಹೆಚ್ಚಿನ ವಾಹನಗಳು ಓಡಾಡುತ್ತಿರುವುದರಿಂದ ರಸ್ತೆಯೂ ಹಾಳಾಗಿದೆ. ಇದೀಗ ಇದೇ ರಸ್ತೆಯನ್ನು 2 ಲೇನ್‌ನಿಂದ 4 ಲೇನ್ ರಸ್ತೆಯಾಗಿ ಅಗಲೀಕರಣ ಮಾಡಲು ಕೇಂದ್ರ ಮುಂದಾಗಿದೆ. ಈ ರಸ್ತೆ ಅಗಲೀಕರಣ ಕಾರ್ಯ 32.50 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. 

 

 

ಯಾದಗಿರಿ: ಸೂರತ್‌ ಚೆನ್ನೈ ಎಕ್ಸಪ್ರೆಸ್‌ ವೇ, ನೊಂದ ರೈತನ ಪತ್ರಕ್ಕೆ ಸಿಎಂ ಸ್ಪಂದನೆ

ಪುಣೆ - ಬೆಂಗಳೂರು ಎಕ್ಸ್‌ಪ್ರೆಸ್‌ ರಸ್ತೆ: ಇಂದು ಸಭೆ
ಕೊಪ್ಪಳ ಮಾರ್ಗವಾಗಿ ಹಾದು ಹೋಗುವ ಪುಣೆ- ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೆ ರಸ್ತೆ ನಿರ್ಮಾಣದ ಕುರಿತು ಈಗಾಗಲೇ ಕೇಂದ್ರ ಸರ್ಕಾರ ಡಿಪಿಆರ್‌ ತಯಾರಿಸಿದ್ದು, ಈ ಹಿನ್ನೆಲೆ ಜಿಲ್ಲಾ ವ್ಯಾಪ್ತಿಯಲ್ಲಿನ ಹೈವೆಯ ಕುರಿತು ಸಾರ್ವಜನಿಕರೊಂದಿಗೆ ಸಮಾಲೋಚನಾ ಸಭೆ ನಡೆಸಲಾಗಿದೆ.  ಈ ಕುರಿತು ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ ಅವರು ಪ್ರಕಟಣೆ ನೀಡಿದ್ದು, ಭಾರತಮಾಲಾ ಯೋಜನೆ ಅಡಿಯಲ್ಲಿ ಎಕ್ಸ್‌ಪ್ರೆಸ್‌ ಹೈವೆ ನಿರ್ಮಾಣ ಮಾಡಲಾಗುತ್ತಿದ್ದು, ಈಗಾಗಲೇ ಗುರುತಿಸಿರುವ ಮಾರ್ಗದ ಅಲೈನ್‌ಮೆಂಟ್‌ ಕುರಿತು ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಲಾಗಿದೆ. 

ಈ ಮೂಲಕ ಬಹು ವರ್ಷಗಳಿಂದ ಇದ್ದ ಬೇಡಿಕೆಯೊಂದು ಈಡೇರುವ ಕಾಲ ಸನ್ನಿಹಿತವಾಗಿದೆ. ತಾಲೂಕಿನ ವ್ಯಾಪ್ತಿಯಲ್ಲಿನ ಹಿರೇಸಿಂದೋಗಿ, ಕಾತರಕಿ, ಗುಡ್ಲಾನೂರು ಮಾರ್ಗವಾಗಿ ತೆರಳುವ ಈ ರಸ್ತೆ ತುಂಗಭದ್ರಾ ನದಿಯಲ್ಲಿ ಸುಮಾರು ಮೂರು ಕಿಮೀ ಸೇತುವೆ ನಿರ್ಮಾಣವಾಗಲಿದೆ ಎನ್ನುವುದು ವಿಶೇಷ.

ಮಂಡ್ಯ: ಕೆ.ಕೋಡಿಹಳ್ಳಿ ಬಳಿ ಸೇತುವೆ ನಿರ್ಮಾಣಕ್ಕೆ ಕೇಂದ್ರ ಅಸ್ತು, ಪ್ರತಾಪ್‌ ಸಿಂಹ

ಗದಗ-ಹೊನ್ನಾಳಿ ಹೆದ್ದಾರಿ ಕಾಮಗಾರಿಗೆ ವೇಗ
ಕುಂಟುತ್ತಾ ಸಾಗಿದ್ದ ಗದಗ-ಹೊನ್ನಾಳಿ (ಬಾಗಲಕೋಟೆ-ಬಿಳಿಗಿರಿರಂಗನ ಬೆಟ್ಟರಾಜ್ಯ ಹೆದ್ದಾರಿ 57ರ ವ್ಯಾಪ್ತಿಯ) ರಾಜ್ಯ ಹೆದ್ದಾರಿ 26ರ ಕಾಮಗಾರಿ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ವೇಗ ಪಡೆದುಕೊಂಡಿದ್ದು ತಾಲೂಕಿನ ಜನರಲ್ಲಿ ಹರ್ಷ ಉಂಟು ಮಾಡಿದೆ. ಬಾಗಲಕೋಟೆ-ಬಿಳಿರಂಗನಬೆಟ್ಟರಾಜ್ಯ ಹೆದ್ದಾರಿ 57ರ ಕಾಮಗಾರಿಯಲ್ಲಿ 663 ಕಿ.ಮೀ. ರಸ್ತೆಯಾಗಬೇಕಾಗಿದೆ. ಇದು ರಾಜ್ಯದಲ್ಲಿಯೇ ಅತಿ ಉದ್ದವಾದ ರಾಜ್ಯ ಹೆದ್ದಾರಿಯಾಗಿದೆ. ಆ ಪೈಕಿ ಗದಗ-ಹೊನ್ನಾಳಿ ರಾಜ್ಯ ಹೆದ್ದಾರಿ 26ರ ಅಡಿ 138 ಕಿ.ಮೀ. ರಸ್ತೆ ನಿರ್ಮಿಸುವ ಜವಾಬ್ದಾರಿಯಿದೆ.

PREV
Read more Articles on
click me!

Recommended Stories

ಬೆಂಗಳೂರಲ್ಲಿ ಒಂದೇ ದಿನ 13,000 ಎಲೆಕ್ಟ್ರಿಕ್ ವಾಹನ ನೋಂದಣಿ, ಎಲ್ಲರೂ ಇವಿ ಖರೀದಿಗೆ ಇದೆ ಕಾರಣ
ವಾಹನ ಮಾಲೀಕರೇ ಎಚ್ಚರ ಬೆಂಗಳೂರಲ್ಲಿ ಮತ್ತೆ ಟೋಯಿಂಗ್ ಆರಂಭ, ಈ ಬಾರಿ ದಂಡ ಎಷ್ಟು?