ಫೈನ್ ಕಟ್ಟಲ್ಲ, ಟ್ರೋಲ್ ಮಾಡಿದವನಿಗೆ ಫೋಟೋ ಸಮೇತ ತಿರುಗೇಟು ನೀಡಿದ ಬೆಂಗಳೂರು ಪೊಲೀಸ್!

By Suvarna News  |  First Published Oct 20, 2022, 5:26 PM IST

ಗಾಡಿ ನಂಬರ್ ಫೋಟೋ ಹಾಕಿ ದಂಡ ಕಟ್ಟಿ ಅಂದರೆ ನಾನು ಕಟ್ಟಲ್ಲ. ನಾನು ಹೆಲ್ಮೆಟ್ ಹಾಕಿ ಗಾಡಿ ಚಲಾಯಿಸಿಲ್ಲ ಎಂದು ಪುಂಗಿ ಬಿಟ್ಟವನಿಗೆ ಬೆಂಗಳೂರು ಪೊಲೀಸ್ ಸರಿಯಾಗಿ ತಿರುಗೇಟು ನೀಡಿದೆ. ಇದೀಗ ಟ್ರೋಲಿಗರೂ ಕೂಡ ವಾಹನ ಸವಾರನಿಗೆ ಕತೆ ಹೇಳುವುದು ಬಿಟ್ಟು ದಂಡ ಕಟ್ಟಲು ಸೂಚಿಸಿದ್ದಾರೆ.
 


ಬೆಂಗಳೂರು(ಅ.20): ಟ್ರಾಫಿಕ್ ನಿಯಮ ಕಟ್ಟುನಿಟ್ಟಾಗಿದೆ. ಎಲ್ಲೆಡೆ ಕ್ಯಾಮರಗಳು ಸವಾರರ ಮೇಲೆ ಹದ್ದಿನ ಕಣ್ಣಿಟ್ಟಿದೆ. ಪೊಲೀಸರು ಇಲ್ಲ, ಕ್ಯಾಮೆರಾ ಮಾರುದ್ದ ದೂರದಲ್ಲಿದೆ ಎಂದು ಸಿಗ್ನಲ್ ಜಂಪ್ ಅಥವಾ ಇನ್ಯಾವುದೇ ನಿಯಮ ಉಲ್ಲಂಘಿಸದರೆ ಸದಿಲ್ಲದೆ ಇ ಚಲನ್ ನಿಮ್ಮ ಕೈಸೇರಲಿದೆ. ಹೀಗೆ ಪೊಲೀಸರು ದ್ವಿಚಕ್ರ ವಾಹನದ ನಂಬರ್ ಪ್ಲೇಟ್ ಫೋಟೋ ಮಾತ್ರ ಕ್ರಾಪ್ ಮಾಡಿ ಸವಾರನಿಗೆ ಇ ಚಲನ್ ಕಳುಹಿಸಿತ್ತು. ಈ ಕುರಿತು ಸವಾಲ ಟ್ವೀಟ್ ಮೂಲಕ ಭಾರಿ ಸದ್ದು ಮಾಡಿದ್ದ. ಗಾಡಿ ನಂಬರ್ ಮಾತ್ರ ಫೋಟೋ ಹಾಕಿ ಹೆಲ್ಮೆಟ್ ಹಾಕಿಲ್ಲ ಎಂದು ದಂಡ ಕಟ್ಟಲು ಬೆಂಗಳೂರು ಪೊಲೀಸರು ಹೇಳಿದ್ದಾರೆ. ನಾನು ಹೆಲ್ಮೆಟ್ ಹಾಕದೇ ಸ್ಕೂಟರ್ ಚಲಾಯಿಸಿಲ್ಲ. ಸುಮ್ಮನೆ ನಂಬರ್ ಪ್ಲೇಟ್ ಫೋಟೋ ಹಾಕಿದರೆ ದಂಡ ಕಟ್ಟಲ್ಲ ಎಂದು ಬೆಂಗಳೂರು ಪೊಲೀಸರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಈ ಮಾತನ್ನು ನಂಬಿದ ಹಲವರು ಪೊಲೀಸರೇ ಎಡವಟ್ಟು ಮಾಡಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದರು. ಆದರೆ ಬೆಂಗಳೂರು ಪೊಲೀಸರು ಯಾವ ಸ್ಥಳದಲ್ಲಿ ಹೆಲ್ಮೆಟ್ ಹಾಕದೆ ರೈಡ್ ಮಾಡಲಾಗಿದೆ ಅನ್ನೋ ಸಂಪೂರ್ಣ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಇಷ್ಟೇ ಅಲ್ಲ ದಂಡ ಕಟ್ಟುವಂತೆ ಸೂಚಿಸಿದೆ. ಈ ಮೂಲಕ ಬೆಂಗಳೂರು ಪೊಲೀಸರು ಖಡಕ್ ತಿರುಗೇಟಿಗೆ ಸವಾರ ಸೈಲೆಂಟ್ ಆಗಿ ದಂಡ ಕಟ್ಟಲು ಮುಂದಾಗಿದ್ದಾನೆ.

ಫೆಲಿಕ್ಸ್ ರಾಜ್ ಅನ್ನೋ ಟ್ವಿಟರ್ ಖಾತೆಯ ವ್ಯಕ್ತಿ ಬೆಂಗಳೂರು ಪೊಲೀಸರಿಗೆ ತಿರುಗಾಣ ಎಸೆದಿದ್ದ. ಆದರೆ ಪೊಲೀಸರ ಉತ್ತರಕ್ಕೆ ಗಪ್ ಚುಪ್ ಆಗಿದ್ದಾನೆ. ಬೆಂಗಳೂರು ಪೊಲೀಸರ ಇ ಚಲನ್ ಟ್ವೀಟ್ ಮಾಡಿದ ಫೆಲಿಕ್ಸ್ ರಾಜ್, ಸರಿಯಾದ ದಾಖಲೆ ಇಲ್ಲದೆ ನಾನು ದಂಡ ಕಟ್ಟುವುದಿಲ್ಲ. ಕೇವಲ ಸ್ಕೂಟರ್ ನಂಬರ್ ಪ್ಲೇಟ್ ಮಾತ್ರ ಕಾಣುವ ಫೋಟೋ ಹಾಕಿ ದಂಡ ಕಟ್ಟಿ ಅಂದರೆ ಹೇಗೆ ಸಾಧ್ಯ? ಸರಿಯಾದ ಫೋಟೋ ನೀಡಿ ಇಲ್ಲದಿದ್ದರೆ ಕೇಸ್ ಹಿಂತೆಗೆದುಕೊಳ್ಳಿ ಎಂದಿದ್ದಾನೆ. ಇದೇ ರೀತಿ ಹಿಂದೆಯೂ ನಡೆದಿದೆ. ಕೇಸ್ ಕ್ಲೀಯರ್ ಮಾಡುವ ಉದ್ದೇಶದಿಂದ ತಪ್ಪೇ ಮಾಡದಿದ್ದರೂ ದಂಡ ಕಟ್ಟಿದ್ದೇನೆ ಎಂದು ಬೆಂಗಳೂರು ಪೊಲೀಸರ ಮೇಲೆ ಹರಿಹಾಯ್ದಿದ್ದ.

Tap to resize

Latest Videos

undefined

Bengaluru: ಹಾಫ್ ಹೆಲ್ಮೆಟ್ ಧರಿಸಿದ ಪೇದೆಗೂ ದಂಡ: ಆದರೂ ಜನರ ತರಾಟೆ

ಇದಕ್ಕೆ ಹಲವರು ಧನಿಗೂಡಿಸಿದ್ದರು. ಬೆಂಗಳೂರು ಪೊಲೀಸರೇ ಎಡವಟ್ಟು ಮಾಡಿದ್ದಾರೆ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದರು. ಇತ್ತ ಬೆಂಗಳೂರು ಪೊಲೀಸರು ಫೆಲಿಕ್ಸ್ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಫೆಲಿಕ್ಸ್ ರಾಜ್ ಯಾವ ರಸ್ತೆಯಲ್ಲಿ ಹೆಲ್ಮೆಟ್ ಇಲ್ಲದೆ ಪ್ರಯಾಣ ಮಾಡಿದ್ದಾನೆ ಅನ್ನೋ ಸಂಪೂರ್ಣ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಸ್ಕೂಟರ್, ರಸ್ತೆ, ಪಕ್ಕದಲ್ಲಿನ ವಾಹನಗಳು ಹಾಗೂ ಸ್ಕೂಟರ್ ಚಲಾಯಿಸುವ ವ್ಯಕ್ತಿ ಕೂಡ ಸ್ಪಷ್ಟವಾಗಿ ಗೋಚಿಸುತ್ತಿದೆ   

 

 

ಬೆಂಗಳೂರು ಪೊಲೀಸರು ಈ ಫೋಟೋ ಟ್ವೀಟ್ ಮಾಡುತ್ತಿದ್ದಂತೆ ಟ್ರೋಲಿಗರು ಫೆಲಿಕ್ಸ್ ರಾಜ್‌ನನ್ನು ಹಿಗ್ಗಾ ಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ಮಾಡಿ ನಾನು ಮಾಡೇ ಇಲ್ಲ ಅನ್ನೋ ರೀತಿ ಹೇಳಿಕೆ ನೀಡಬೇಡಿ. ಮರು ಮಾತಿಲ್ಲದೆ ದಂಡ ಕಟ್ಟಿ. ಇದು ಬೆಂಗಳೂರು ಪೊಲೀಸರು, ದೇಶದಲ್ಲೇ ಅತ್ಯಾಧುನಿಕ ತಂತ್ರಜ್ಞಾನ ಬಳಸುವ ಪೊಲೀಸ್ ಇಲಾಖೆ. ಬೆಂಗಳೂರು ಪೊಲೀಸರಿಗೆ ಯಾಮಾರಿಸಲು ಬಂದರೆ ಪರಿಸ್ಥಿತಿ ಇದಕ್ಕಿಂತ ಕೆಟ್ಟದಾಗುತ್ತೆ ಎಂದು ಹಲವರು ಟ್ರೋಲ್ ಮಾಡಿದ್ದಾರೆ.  ಮೊದಲು ಹೆಲ್ಮೆಟ್ ಹಾಕಿಕೊಂಡು ಗಾಡಿ ಒಡಿಸುವ ಆಮೇಲೆ ಆರೋಪ ಮಾಡು ಎಂದು ಕೆಲವರು ಬುದ್ದಿಮಾತು ಹೇಳಿದ್ದಾರೆ. 

ಓವರ್‌ ಸ್ಪೀಡ್‌ ಚಾಲನೆಗಾಗಿ ತಡೆದ ಟ್ರಾಫಿಕ್ ಪೋಲೀಸರನ್ನು ಥಳಿಸಿದ ಯುವಕ

ಟ್ರೋಲ್ ಮೇಲೆ ಟ್ರೋಲ್, ಪೊಲೀಸರ ಉತ್ತರದಿಂದ ಫೆಲಿಕ್ಸ್ ರಾಜ್ ಹೈರಾಣಾಗಿದ್ದಾನೆ. ತಕ್ಷಣವೇ ತನ್ನ ಟ್ವೀಟ್ ಡಿಲೀಟ್ ಮಾಡಿದ್ದಾನೆ. ಇದನ್ನೂ ಹಲವರು ಪ್ರಶ್ನಿಸಿದ್ದಾರೆ. ಬೆಂಗಳೂರು ಪೊಲೀಸರ ಉತ್ತರಕ್ಕೆ ಫೆಲಿಕ್ಸ್ ರಾಜ್ ತನ್ನ ಟ್ವೀಟ್ ಡಿಲೀಟ್ ಮಾಡಿ ಹೊಸ ನವರಂಗಿ ಆಟಕ್ಕೆ ಮುಂದಾಗಿದ್ದಾನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
 

click me!