Daily Horoscope: ಈ ರಾಶಿಗಿಂದು ನಿರೀಕ್ಷೆಗೂ ಮೀರಿ ಯಶಸ್ಸು

Published : Apr 27, 2022, 07:05 AM IST
Daily Horoscope: ಈ ರಾಶಿಗಿಂದು ನಿರೀಕ್ಷೆಗೂ ಮೀರಿ ಯಶಸ್ಸು

ಸಾರಾಂಶ

27 ಏಪ್ರಿಲ್ 2022, ಬುಧವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಕುಂಭಕ್ಕೆ ವೃತ್ತಿ ಸಂಬಂಧಿ ತೊಡಕುಗಳು

ಮೇಷ(Aries): ವಿದೇಶಿ ವ್ಯವಹಾರಗಳಲ್ಲಿ ಅಧಿಕ ಲಾಭವಿರಲಿದೆ. ಆತ್ಮವಿಶ್ವಾಸ ಜೊತೆಗಿರುತ್ತದೆ. ಗೃಹ ಕೈಗಾರಿಕೆಗಳು ನಿಮ್ಮ ಕೈ ಹಿಡಿಯಲಿವೆ. ಮಕ್ಕಳ ನಿಮಿತ್ತ ಖರ್ಚುಗಳು ಹೆಚ್ಚಲಿವೆ. ಆಸ್ತಿ ಖರೀದಿ ವ್ಯವಹಾರ ಮಾಡಬಹುದು. ಗಣಪತಿಗೆ 21 ದರ್ಬೆ ಅರ್ಪಿಸಿ. 

ವೃಷಭ(Taurus): ಸಂಗೀತ, ಧ್ಯಾನ ಮತ್ತು ಯೋಗಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ನಿಮ್ಮದೇ ಸರಿಯೆಂಬ ಧೋರಣೆ ಬೇಡ. ಎದುರು ವಾದಿಸುವವರದೂ ಸರಿ ಇರಬಾರದೇಕೆ ಎಂದು ಯೋಚಿಸಿ. ಸಂಬಂಧಗಳಿಂದ ಕಳಚಿಕೊಳ್ಳುವ ಬದಲು ಅದನ್ನು ಕಾಪಾಡಿಕೊಳ್ಳುವ ಬಗ್ಗೆ ಯೋಚಿಸಿ. ಗಣಪತಿ ಅಷ್ಟೋತ್ತರ ಪಠಿಸಿ. 

ಮಿಥುನ(Gemini): ವಾಹನ ಹಾಗೂ ಬಿಡಿ ಭಾಗಗಳ ವ್ಯಾಪಾರಿಗಳು, ಮೆಕ್ಯಾನಿಕ್ ವೃತ್ತಿಯಲ್ಲಿರುವವರಿಗೆ ಅಧಿಕ ಲಾಭ. ಸಾಲದ ಹೊರೆಯನ್ನೇ ತಲೆ ಮೇಲೆ ಹೊತ್ತವರಿಗೆ ಸಮಾಧಾನಕರ ಸುದ್ದಿ ಸಿಗಲಿದೆ. ಸಾಲದ ಸುರುಳಿಯಿಂದ ಬಿಡಿಸಿಕೊಳ್ಳಲು ಮಾರ್ಗ ಕಾಣಿಸಲಿದೆ. ಕೃಷ್ಣನಿಗೆ ತುಳಸಿ ಅರ್ಪಿಸಿ. 

ಕಟಕ(Cancer): ಯಾವುದೋ ಸಮಸ್ಯೆ ಬಾಧಿಸುವುದು. ಅದರಿಂದ ಹೊರ ಬರುವ ಪರಿಹಾರ ನೋಡಬೇಕೇ ಹೊರತು ಖಿನ್ನರಾಗಿ ಕೂರುವುದರಿಂದ ಪ್ರಯೋಜನವಿಲ್ಲ. ಹೊಸ ಗೆಳೆತನ ಮಾಡುವತ್ತ ಗಮನ ಹರಿಸಿ. ಆದಷ್ಟು ಮನೆಯಿಂದ ಹೊರಗಿರಲು ಪ್ರಯತ್ನಿಸಿ. ಮನೆ ದೇವರ ಸ್ಮರಣೆ ಮಾಡಿ. 

ಸಿಂಹ(Leo): ಹೊಸ  ವ್ಯವಹಾರಳನ್ನು ಆರಂಭಿಸಲು ಹಳೆಯ ವ್ಯವಹಾರ ಸಂಪೂರ್ಣ ಮುಚ್ಚಬೇಕೆಂದು ಕಾಯುತ್ತಾ ಕೂರಬೇಡಿ. ಇದರ ಪಾಡಿಗಿದು ಶುರುವಾಗಲಿ.. ಉಳಿದವು ತನ್ನಿಂತಾನೇ ಆಗುತ್ತವೆ. ಯುವಕರು ನಿಧಾನವಾಗಿ ವಾಹನ ಚಲಾಯಿಸಬೇಕು. ಬುಧ ಮಂತ್ರಗಳನ್ನು ಹೇಳಿಕೊಳ್ಳಿ. 

ಕನ್ಯಾ(Virgo): ಮನೆಯಲ್ಲಿ ಶುಭ ಕಾರ್ಯದ ಸಂಬಂಧಿ ಓಡಾಟ ಹೆಚ್ಚಾಗುವುದು. ಮನಸ್ಸಿನಲ್ಲಿ ಅದರ ಸಂತೋಷ ತುಂಬುವುದು. ವ್ಯಾಸಂಗದಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡುಬರುವುದು. ಆರೋಗ್ಯ ಚೆನ್ನಾಗಿರಲಿದೆ. ಹೆಚ್ಚು ನೀರು ಕುಡಿಯಿರಿ. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

Focus ಮಾಡಲು ಕಷ್ಟವೇ? ಈ ಮಂತ್ರ ಪಠಿಸಿ, ಏಕಾಗ್ರತೆ ಹೆಚ್ಚುತ್ತೆ!

ತುಲಾ(Libra): ಚಿನ್ನಾಭರಣ ವ್ಯಾಪಾರಿಗಳಿಗೆ ಲಾಭ ಹೆಚ್ಚುವುದು. ನಿರುದ್ಯೋಗಿಗಳು ಇನ್ನೊಬ್ಬರ ಕೈ ಕೆಳಗೆ ಕೆಲಸ ಮಾಡಲ್ಲ ಎಂಬೆಲ್ಲ ತಮ್ಮ ಅಹಂಕಾರ ಬದಿಗಿಟ್ಟರೆ ಸಂಪಾದನೆಯ ದಾರಿಯೂ, ಗೌರವಗಳೂ ಹೆಚ್ಚುವುವು. ಮನೆಯ ಸದಸ್ಯರ ಹದಗೆಟ್ಟ ಆರೋಗ್ಯ ಕಂಗಾಲಾಗಿಸುವುದು. ಗಣಪತಿಗೆ ಲಡ್ಡು ನೈವೇದ್ಯ ಮಾಡಿ. 

ವೃಶ್ಚಿಕ(Scorpio): ನಿಮ್ಮ ಸಾಧನೆಯ ಕಾರಣದಿಂದ ಬಂಧು ಮಿತ್ರರು ನಿಮ್ಮನ್ನು ಆದರದಿಂದ ಕಾಣುತ್ತಾರೆ. ಕುಟುಂಬಕ್ಕೆ ಹೊಸ ಸದಸ್ಯರ ಪರಿಚಯವಾಗಲಿದೆ. ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೆ ಇರುವಂಥ ಮನಸ್ಥಿತಿ ತಂದುಕೊಳ್ಳಿ. ಕೃಷ್ಣ ಸ್ಮರಣೆ ಮಾಡಿ. 

ಧನುಸ್ಸು(Sagittarius): ತೋಟಗಾರಿಕೆ ಕ್ಷೇತ್ರದವರಿಗೆ ಅದರಲ್ಲೂ ಹೂ ಹಣ್ಣು ತರಕಾರಿ ವ್ಯಾಪಾರಿಗಳಿಗೆ ಉತ್ತಮ ಸಂಪಾದನೆ ಇರುವುದು. ಅಕ್ರಮವಾಗಿ ಗಳಿಸಿದ ಹಣಕ್ಕೆ ಬೆಲೆ ತೆರಬೇಕಾಗಲಿದೆ. ದೂರ ಪ್ರಯಾಣಗಳು ಹೈರಾಣಾಗಿಸಲಿವೆ. ಸಮಯ ವ್ಯರ್ಥವಾಗಬಹುದು. ಕುಲದೇವರ ಸ್ಮರಣೆ ಮಾಡಿ. 

ಮಕರ(Capricorn): ಕಾರ್ಯದೊತ್ತಡದ ನಡುವೆಯೂ ಕುಟುಂಬದ ಸಮಸ್ಯೆಯತ್ತ ಗಮನ ಹರಿಸುವುದನ್ನು ಮರೆಯಬೇಡಿ. ಹೊಸ ವ್ಯವಹಾರದಲ್ಲಿ ಹಿರಿಯರ ಸಹಾಯ ಸಹಕಾರ ದೊರೆಯಲಿದೆ. ಸಂಗಾತಿಯ ಸಹಕಾರ ಚೆನ್ನಾಗಿರಲಿದೆ. ಸಣ್ಣ ಪುಟ್ಟ ಮಾತಿಗೆ ಜಗಳವಾಡದೆ ಮೌನವಾಗಿ ಉಳಿಯಿರಿ. ಗಣಪತಿ ಶ್ಲೋಕ ಹೇಳಿ.

Akshaya Tritiya 2022: ಈ ದಿನ ಜನರು ಚಿನ್ನ ಖರೀದಿಗೆ ಮುಗಿ ಬೀಳುವುದೇಕೆ?

ಕುಂಭ(Aquarius): ವೃತ್ತಿ ಸಂಬಂಧ ತೊಡಕುಗಳು ಕಾಡುವುವು. ಸವಾಲುಗಳನ್ನು ಎದುರಿಸುವ ಧೈರ್ಯ ತೆಗೆದುಕೊಂಡರೆ ಮತ್ಯಾವುದೂ ಕಷ್ಟವಾಗಿ ಉಳಿಯುವುದೇ ಇಲ್ಲ. ಚಂಚಲತೆ ಹೆಚ್ಚಲಿದೆ. ಕೆಲಸ ಕಾರ್ಯಗಳು ಅರ್ಧಕ್ಕೇ ನಿಲ್ಲಬಹುದು. ಮಾತಿನ ಮೇಲೆ ಹಿಡಿತ ಬೇಕು. ತಾಯಿಯ ಆಶೀರ್ವಾದ ಪಡೆಯಿರಿ.

ಮೀನ(Pisces): ಸಗಟು ವ್ಯಾಪಾರಿಗಳಿಗೆ, ಸರಕು ಸಾಗಾಣಿಕೆದಾರರಿಗೆ ಉತ್ತಮವಾದ ಪ್ರತಿಫಲ ದೊರೆಯಲಿದೆ. ನಿಮ್ಮ ಎಚ್ಚರಿಕೆಯಲ್ಲಿ ನೀವಿಲ್ಲದಿದ್ದರೆ ಕ್ಲೇಶಗಳು ಹೆಚ್ಚಲಿವೆ. ಕಚೇರಿಯಲ್ಲಿ ಹೊರೆ ಹೆಚ್ಚುವುದು. ಸಹೋದ್ಯೋಗಿಗಳ ಬೆಂಬಲ ಸಿಗದೆ ಕಿರಿಕಿರಿಯಾಗುವುದು. ನವಗ್ರಹ ಸ್ಮರಣೆ ಮಾಡಿ. 

PREV
Read more Articles on
click me!

Recommended Stories

ಇಂದು ಸೋಮವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಭಾನುವಾರ ಈ ರಾಶಿಗೆ ಶುಭ, ಅದೃಷ್ಟ