Daily Horoscope: ಈ ರಾಶಿಗಿಂದು ಚಿನ್ನಾಭರಣ ಖರೀದಿಯ ಸಂತಸ

By Suvarna News  |  First Published Apr 26, 2022, 5:00 AM IST

26 ಏಪ್ರಿಲ್ 2022, ಮಂಗಳವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಧನಸ್ಸಿನ ಅವಿವಾಹಿತರಿಗೆ ಕಂಕಣಬಲ


ಮೇಷ(Aries): ಅಂದುಕೊಂಡಿದ್ದೇ ಒಂದು ಆಗೋದೇ ಒಂದು ಎಂಬಂತಾಗುವುದು. ನಿರೀಕ್ಷೆ ಹುಸಿಯಾಗುವುದು. ತಿರುಗಾಟ ದುಂದು ವೆಚ್ಚಕ್ಕೆ ಕಾರಣವಾಗುತ್ತದೆ. ಕುಟುಂಬ ಸದಸ್ಯರ ಜೊತೆ ಕೆಲ ಸಮಯ ಕುಳಿತು ಮಾತನಾಡಿ. ಜವಾಬ್ದಾರಿ ಹೆಚ್ಚಿದಂತೆನಿಸುವುದು. ಲಕ್ಷ್ಮೀ ಧ್ಯಾನ ಮಾಡಿ. 

ವೃಷಭ(Taurus): ಮನೆಯಲ್ಲಿ ಮಕ್ಕಳ ವಿವಾಹ ಚಿಂತೆ ಹೆಚ್ಚುವುದು. ಯುವಕರಿಗೆ ಉದ್ಯೋಗದಲ್ಲಿ ಬಡ್ತಿ ದೊರೆಯುವುದು. ವಿದೇಶದಲ್ಲಿ ನೆಲೆಸುವ ಅವಕಾಶಗಳೂ ಸಿಗಬಹುದು. ವಿದ್ಯಾರ್ಥಿಗಳಿಗೆ ಶುಭ ದಿನ. ಉದರ ಸಂಬಂಧಿ ಸಮಸ್ಯೆಗಳು ಬಾಧಿಸಬಹುದು. ಇಷ್ಟ ದೇವರ ಸ್ಮರಣೆ ಮಾಡಿ. 

Latest Videos

undefined

ಮಿಥುನ(Gemini): ಚಿನ್ನಾಭರಣ ಖರೀದಿಸುವಿರಿ. ಮರೆವಿನ ಕಾರಣದಿಂದ ಮಹತ್ತರವಾದುದನ್ನು ಕಳೆದುಕೊಳ್ಳಬೇಕಾಗಬಹುದು. ನಿಮ್ಮಿಂದ ಅಪರಿಚಿತರಿಗೆ ನೆರವು ದೊರಕುವ ಅವಕಾಶಗಳು ಎದುರಾಗುತ್ತವೆ. ಬೆನ್ನು ನೋವು ಕಾಡಲಿದೆ. ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ. 

ಕಟಕ(Cancer): ಋಣಾತ್ಮಕ ಯೋಚನೆಗಳು, ಚಿಂತೆಗಳು, ಕೋಪ, ಉದ್ವೇಗ ಹೆಚ್ಚುವುದು. ಖಿನ್ನತೆ ಆವರಿಸುವುದು. ಕಾರ್ಯಕ್ಷೇತ್ರದಲ್ಲಿ ನಿರೀಕ್ಷಿತ ಹಣ ಬಾರದೇ ಹೋಗಬಹುದು. ಸ್ನೇಹಿತರು ಮತ್ತು ಕುಟುಂಬದ ಸದಸ್ಯರಿಂದ ನೆರವು, ಪ್ರೀತಿ ದಕ್ಕಲಿದೆ. ಹನುಮಾನ್ ಚಾಲೀಸಾ ಹೇಳಿಕೊಳ್ಳಿ. 

Saturn Transit 2022: ಶನಿಯಿಂದ ಈ ರಾಶಿಗಳಿಗೆ ಸಂಕಷ್ಟ, ಈಗಿಂದಲೇ ಕೈಗೊಳ್ಳಿ ಪರಿಹಾರ

ಸಿಂಹ(Leo): ಸಂಗಾತಿಯ ವಿಷಯದಲ್ಲಿ ಸಣ್ಣಪುಟ್ಟದ್ದಕ್ಕೂ ಸಿಡುಕುತನ ಸಲ್ಲದು. ಅದರಿಂದ ಯಾರಿಗೂ ನೆಮ್ಮದಿ ಇಲ್ಲ. ಯಾರೋ ಮನೆಯವರ ಬಗ್ಗೆ ತಪ್ಪು ಮಾತನಾಡುತ್ತಿದ್ದಾರೆ ಎಂದರೆ ಹಿತ್ತಾಳೆ ಕಿವಿಯವರಂತೆ ಕೇಳಿಸಿಕೊಳ್ಳಬೇಡಿ. ಮನೆಯ ಸದಸ್ಯರ ಪರ ನಿಂತು ಮಾತಾಡಿ. ಆಂಜನೇಯನಿಗೆ ಕುಂಕುಮ ಅರ್ಪಿಸಿ. 

ಕನ್ಯಾ(Virgo): ನಿಮ್ಮ ಕೆಲ ಗುಟ್ಟುಗಳು ರಟ್ಟಾಗಿ ಅವಮಾನವಾಗುವುದು. ಮುಜುಗರವಾದರೂ ಆಗೋದೆಲ್ಲ ಒಳ್ಳೆಯದಕ್ಕೇ ಎಂದುಕೊಳ್ಳಿ. ಮನಸ್ಸಲ್ಲೇ ಮಂಡಗೆ ತಿಂದಿದ್ದು ಸಾಕು, ಇನ್ನಾದರೂ ಬೇಕಾದ್ದನ್ನು ಬಾಯಿ ಬಿಟ್ಟು ಕೇಳಿ. ಆಂಜನೇಯನಿಗೆ ವೀಳ್ಯದ ಹಾರ ಅರ್ಪಿಸಿ.

ತುಲಾ(Libra): ಸ್ವಂತ ಸಾಮರ್ಥ್ಯದ ಮೇಲೆ ನಂಬಿಕೆ ಇರಿಸಿ ಕೆಲಸ ಕಾರ್ಯಗಳನ್ನು ಯಶಸ್ಸಿನ ನಡೆಯಲ್ಲಿ ತೆಗೆದುಕೊಂಡು ಹೋಗುವ ಸಂಕಲ್ಪದೊಂದಿಗೆ ಮುನ್ನುಗ್ಗಿ. ಸಹವಾಸ ದೋಷದಿಂದಾಗಿ ಹೆಸರಿಗೆ ಮಸಿ ಬಳಿಯಬಹುದು. ಉತ್ತಮರ ಸಂಗ ಮಾಡುವುದರತ್ತ ಗಮನ ಹರಿಸಿ. ಕುಲದೇವರ ಸ್ಮರಣೆ ಮಾಡಿ.

ವೃಶ್ಚಿಕ(Scorpio): ಚಿನ್ನಾಭರಣ ಖರೀದಿಯಿಂದ ಸಂತಸ.  ನೂತನ ಕಾರ್ಯಭಾರ ಸಂತಸ ತರುವುದು. ಸಜ್ಜನರ ಸಮಾಗಮ ಸಮಾಧಾನ ತರುವುದು. ಮಗುವಿನ ಜೊತೆಗಿನ ಒಡನಾಟದ ಆನಂದವನ್ನು ನೀವು ಆನಂದಿಸುವಿರಿ. ಗೋ ಗ್ರಾಸ ನೀಡಿ. 

ಧನುಸ್ಸು(Sagittarius): ಹಿರಿಯರ ಸಲಹೆಗಳನ್ನು ಪರಿಗಣಿಸಿ. ಅವಿವಾಹಿತರಿಗೆ ಕಂಕಣ ಬಲ. ದಾಂಪತ್ಯದಲ್ಲಿ ಕೆಲ ಸಣ್ಣಪುಟ್ಟ ವಾದವಿವಾದಗಳು ಕಾಣಿಸಿಕೊಳ್ಳಬಹುದು. ಮಾತಿನ ಮೇಲೆ ನಿಯಂತ್ರಣವಿಲ್ಲದಿದ್ದಲ್ಲಿ ಸುಲಭವಾಗಿ ನಿಮ್ಮ ಖ್ಯಾತಿಗೆ ಧಕ್ಕೆ ತಂದುಕೊಳ್ಳುತ್ತೀರಿ. ಮನೆದೇವರನ್ನು ಸ್ಮರಿಸಿ. 

ಮಕರ(Capricorn): ಧೈರ್ಯದಿಂದಲೇ ಜಯ ಸಿಗುವುದು. ನಿಮ್ಮ ಕೀಳರಿಮೆಗಳನ್ನು ಬದಿಗಿರಿಸುವತ್ತ ಗಮನ ಹರಿಸಿ. ನಿಮ್ಮಲ್ಲಿ ನೀವೇ ಸ್ಪೂರ್ತಿ ತುಂಬಿಕೊಳ್ಳಬೇಕು. ಹೊಸ ದಿನವನ್ನು ಹೊಸ ಚೈತನ್ಯದೊಂದಿಗೆ ಕಳೆವ ಸಂಕಲ್ಪ ಮಾಡಿ. ಹನುಮಾನ್ ಚಾಲೀಸಾ ಹೇಳಿಕೊಳ್ಳಿ. 

ಪುರಾಣದ ನಾಲ್ಕು ಮುದ್ದಾದ ಜೋಡಿಗಳ ಪ್ರೇಮಕತೆ

ಕುಂಭ(Aquarius): ಸಂಗಾತಿಯನ್ನು ಪ್ರೀತಿಯಿಂದ ನೋಡಿಕೊಳ್ಳಿ. ಕುಟುಂಬವರ್ಗದವರಿಂದ ಕಾರ್ಯವೈಖರಿಗೆ ಟೀಕೆಗಳು ಬರಬಹುದು. ಮೈ ಕೈ ನೋವಿನಂಥ ಸಮಸ್ಯೆಗಳು ಕಿರಿ ಕಿರಿ ತರಬಹುದು. ಇಂದು ನಿಮಗೆ ದೊರೆವ ಸಲಹೆಯೊಂದು ಜೀವನದಲ್ಲಿ ಅತ್ಯಂತ ಲಾಭಕಾರಿಯಾಗಿ ಪರಿಣಾಮ ಬೀರಬಲ್ಲದು. ಬಡವರಿಗೆ ಕೆಂಪು ಧಾನ್ಯ ದಾನ ಮಾಡಿ. 

ಮೀನ(Pisces): ಆಸೆಗಳ ಮೇಲೆ ನಿಗಾ ಇರಲಿ. ಅವು ದುರಾಸೆಯಾಗಲು ಬಿಡದಿರಿ. ಮನಸ್ಸಲ್ಲೇ ಮಂಡಿಗೆ ತಿಂದರೆ ಪ್ರಯೋಜನವಿಲ್ಲ. ಮನೆಯಲ್ಲಿ ಶುಭ ಕಾರ್ಯ ನಡೆಯುವುದು. ಅಣ್ಣ ತಮ್ಮಂದಿರ ತಕರಾರು ಅಂತ್ಯ ಕಾಣುವುದು. ಮನೆ ಹಿರಿಯರನ್ನು ಚೆನ್ನಾಗಿ ನೋಡಿಕೊಳ್ಳಿ. ಹಸಿದವರ ಹೊಟ್ಟೆ ತುಂಬಿಸಿ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!