Daily Horoscope: ಈ ರಾಶಿಗಿಂದು ನಿರ್ಧಾರಗಳು ಎಡವಟ್ಟಾಗಲಿವೆ..ಎಚ್ಚರ ಅಗತ್ಯ

Published : Apr 25, 2022, 05:00 AM IST
Daily Horoscope: ಈ ರಾಶಿಗಿಂದು ನಿರ್ಧಾರಗಳು ಎಡವಟ್ಟಾಗಲಿವೆ..ಎಚ್ಚರ ಅಗತ್ಯ

ಸಾರಾಂಶ

25 ಏಪ್ರಿಲ್ 2022, ಸೋಮವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಮೇಷಕ್ಕೆ ದೊಡ್ಡ ಅವಕಾಶ

ಮೇಷ(Aries): ದೊಡ್ಡ ಅವಕಾಶವೊಂದು ನಿಮಗಾಗಿ ಎದುರು ನೋಡುತ್ತಿದೆ. ಅಂಜದೆ ಅದನ್ನು ಬರ ಮಾಡಿಕೊಳ್ಳಿ. ಯಾವ ವಿಷಯಕ್ಕೂ ಅತಿ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳುವುದು ಬೇಡ. ಮಹಿಳೆಯರ ಪಾಲಿಗೆ ಇದು ಶುಭ ದಿನ. ಅಂದುಕೊಂಡಿದ್ದು ಆಗಲಿದೆ. ಶಿವ ಶತನಾಮಾವಳಿ ಹೇಳಿಕೊಳ್ಳಿ.

ವೃಷಭ(Taurus): ನೀವು ಕಷ್ಟ ಪಟ್ಟು ಮಾಡಿದ ಕೆಲಸ ನಿಷ್ಪ್ರಯೋಜಕ ಎನಿಸಬಹುದು. ಇದರಿಂದ ಶ್ರಮ, ಸಮಯ ವ್ಯರ್ಥವಾದ ನೋವು ಕಾಡುವುದು. ನಿರ್ಜಲೀಕರಣ ಕಾಡುವುದು. ಹೆಚ್ಚು ನೀರು ಕುಡಿಯಿರಿ. ಹಿಂದೆ ಮಾಡಿದ ತಪ್ಪುಗಳು ಮತ್ತೆ ಆಗದ ರೀತಿ ನೋಡಿಕೊಳ್ಳಿ. ಶಿವ ದೇವಾಲಯಕ್ಕೆ ಭೇಟಿ ನೀಡಿ. 

ಮಿಥುನ(Gemini): ಆತುರದಲ್ಲಿ ಯಾವ ಕೆಲಸವನ್ನೂ ಮಾಡಬೇಡಿ, ಯಾವ ನಿರ್ಧಾರವನ್ನೂ ತೆಗೆದುಕೊಳ್ಳಬೇಡಿ. ಅದರಿಂದ ಅಪಾಯವಿದೆ. ಮೋಸ ಹೋಗಿದ್ದೇನೆ ಎನ್ನುವ ಭಾವವೇ ನಿಮ್ಮನ್ನು ತಳಮಳಕ್ಕೆ ಈಡು ಮಾಡಲಿದೆ. ಆದಾಯ ಏರಿಕೆ ಆಗಲಿದೆ. ರುದ್ರಾಭಿಷೇಕ ಮಾಡಿಸಿ. 

ಕಟಕ(Cancer): ನಿಮ್ಮ ಸಾಧನೆ ಕೆಲವರ ಕಣ್ಣು ಕುಕ್ಕುವುದು. ಅವರು ನಿಮ್ಮ ಹೆಸರಿಗೆ ಮಸಿ ಬಳಿಯಲು ಪ್ರಯತ್ನಿಸಿಯಾರು. ಇಂಥ ನಕಾರಾತ್ಮಕ ವ್ಯಕ್ತಿಗಳಿಂದ ದೂರವಿರಲು ಪ್ರಯತ್ನಿಸಿ. ಎಲ್ಲವೂ ಗೊತ್ತಿದೆ ಎಂದು ತೋರ್ಪಡಿಸಿಕೊಳ್ಳಲು ಹೋಗಬೇಡಿ. ಅವಮಾನವಾದೀತು. ಶಿವನಿಗೆ ಭಸ್ಮಾರ್ಚನೆ ಮಾಡಿ.

ಸಿಂಹ(Leo): ಅವಮಾನ ಎದುರಿಸಬೇಕಾಗಬಹುದು. ಹೂಡಿಕೆಯ ವಿಷಯದಲ್ಲಿ ತಪ್ಪಾದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಸೋತೆ ಎಂದು ಸುಮ್ಮನೆ ಕೂರದಿರಿ. ಮರಳಿ ಯತ್ನವ ಮಾಡಿದರೆ ಗೆಲುವು ಸಿಕ್ಕೇ ಸಿಕ್ಕುತ್ತದೆ. ಆತ್ಮವಿಶ್ವಾಸ ಇರಲಿ. ಸುಬ್ರಹ್ಮಣ್ಯನಲ್ಲಿ ಪ್ರಾರ್ಥಿಸಿ. 

ಪುರಾಣದ ನಾಲ್ಕು ಮುದ್ದಾದ ಜೋಡಿಗಳ ಪ್ರೇಮಕತೆ

ಕನ್ಯಾ(Virgo): ಬೆಳಿಗ್ಗೆ ಎದ್ದ ಕೂಡಲೇ ಶುಭ ಸಮಾಚಾರ ಕೇಳಲಿದ್ದೀರಿ. ಹೆಚ್ಚು ಕಾರ್ಯಗಳನ್ನು ಇಂದು ಮಾಡಿ ಮುಗಿಸುವಿರಿ. ಶುಭಫಲ. ನಿಮ್ಮ ಬುದ್ಧಿ ಶಕ್ತಿಯೇ ನಿಮಗೆ ವರವಾಗಲಿದೆ. ಹೊಸ ಆದಾಯದ ಮೂಲಗಳು ದೊರೆಯಲಿವೆ. ಶಿವನಿಗೆ ಜಲಾಭಿಷೇಕ ಮಾಡಿಸಿ. 

ತುಲಾ(Libra): ಸಂಸಾರದಲ್ಲಿ ಸಣ್ಣ ವಿರಸ ಏರ್ಪಡಲಿದೆ. ಸಂಜೆ ವೇಳೆಗೆ ಎಲ್ಲವೂ ಸರಿಯಾಗಲಿದೆ. ಮನಸ್ಸಿನ ನೋವನ್ನು ಆತ್ಮೀಯರ ಬಳಿ ಹೇಳಿಕೊಳ್ಳಿ. ಸಹಾಯ ಮಾಡಿದವರನ್ನು ಮರೆಯುವುದು ಬೇಡ. ಹೆಚ್ಚು ಶ್ರಮ ತೆಗೆದುಕೊಂಡರೂ ಪ್ರತಿಫಲ ಕಡಿಮೆಯೇ ಇರಲಿದೆ. ಶಿವ ಶಕ್ತಿಯರ ಸ್ಮರಣೆ ಮಾಡಿ. 

ವೃಶ್ಚಿಕ(Scorpio): ಚಿನ್ನಾಭರಣ ಕೊಳ್ಳುವ ತಯಾರಿ ಮಾಡಿಕೊಳ್ಳಲಿದ್ದೀರಿ. ಶುಭ ಕಾರ್ಯಗಳು ನಡೆಯಲಿವೆ. ಸುಲಭಕ್ಕೆ ಗುರಿ ಸೇರಬಹುದು ಎಂದು ಅಡ್ಡ ದಾರಿ ಹಿಡಿಯುವ ಪ್ರಯತ್ನ ಮಾಡುವುದು ಬೇಡ. ಧೀರ್ಘ ಕಾಲೀನ ಕಾಯಿಲೆಗಳು ಕಂಗೆಡಿಸಲಿವೆ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. 

ಧನುಸ್ಸು(Sagittarius): ಕೃಷಿ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗುವಿರಿ. ಆತುರದ ನಿರ್ಧಾರ ಬೇಡ. ಆಟೋಟಗಳಲ್ಲಿ ತೊಡಗಿಸಿಕೊಳ್ಳುವಿರಿ. ಯಾರ ಬಗ್ಗೆಯೂ ಲಘುವಾಗಿ ಮಾತನಾಡದಿರಿ. ಉದ್ಯೋಗದಲ್ಲಿ ಸಾಮಾನ್ಯ ದಿನ. ಯಾರನ್ನೂ ಅವಮಾನಿಸುವ ಮಾತಾಡಬೇಡಿ. ಶಿವ ಶತನಾಮಾವಳಿ ಹೇಳಿಕೊಳ್ಳಿ. 

ಓಡಿಹೋದ ಪ್ರೇಮಿಗಳಿಗೆ ಆಶ್ರಯ ನೀಡುವ ವಿಶೇಷ ದೇವಾಲಯ

ಮಕರ(Capricorn): ಹೊಸ ದಾರಿಯಲ್ಲಿ ನೂತನ ಪ್ರಯಾಣ ಆರಂಭವಾಗಲಿದೆ. ಹಾಸಿಗೆ ಇದ್ದಷ್ಟಕ್ಕೆ ಮಾತ್ರವೇ ಕಾಲು ಚಾಜಿ. ಪ್ರತಿಸ್ಪರ್ಧಿಗಳು ಹುಟ್ಟಿಕೊಳ್ಳಲಿದ್ದಾರೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ತುಂಬಾ ನೀರು ಕುಡಿಯಿರಿ. ಶಿವ ಶಕ್ತಿಯರ ಸ್ಮರಣೆ ಮಾಡಿ. 

ಕುಂಭ(Aquarius): ವ್ಯವಹಾರದಲ್ಲಿ ಸೂಕ್ತ ಎಚ್ಚರಿಕೆ ಇದ್ದರೆ ಒಳಿತು. ಸ್ನೇಹಿತರೊಂದಿಗಿನ ಮನಸ್ತಾಪ ಮುಂದುವರೆಯಲಿದೆ. ದಿನದ ಅಂತ್ಯಕ್ಕೆ ಮನಸ್ಸು ಕೊಂಚ ನಿರಾಳ ಆಗಲಿದೆ. ಆಯಾಸ ಹೆಚ್ಚಾಗಲಿದೆ. ಬೇಡದ ಆತಂಕವನ್ನು ಮೈ ಮೇಲೆ ಎಳೆದುಕೊಳ್ಳುವುದು ಬೇಡ. ರುದ್ರಾಭಿಷೇಕ ಮಾಡಿಸಿ. 

ಮೀನ(Pisces): ಮತ್ತೊಬ್ಬರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೋ ಎಂದು ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಮನಸ್ಸಿನ ಮಾತನ್ನು ಕೇಳಿ. ಅನಾವಶ್ಯಕ ಸುತ್ತಾಟ ಮತ್ತು ಖರ್ಚು ಮಾಡುವುದು ಬೇಡ. ಹೊಸ ಬದಲಾವಣೆಗೆ ಮನಸ್ಸು ತುಡಿಯಲಿದೆ. ಕುಲದೇವರ ಸ್ಮರಣೆ ಮಾಡಿ. 

PREV
Read more Articles on
click me!

Recommended Stories

ಇಂದು ಮಂಗಳವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಸೋಮವಾರ ಈ ರಾಶಿಗೆ ಶುಭ, ಅದೃಷ್ಟ