ಬೆಂಗಳೂರಿನ ಯಶವಂತಪುರ ರೈಲು ಹಳಿಯಲ್ಲಿ ಸಂಶಯಾಸ್ಪದವಾಗಿ ಯುವಕನೋರ್ವನ ಮೃತದೇಹ ಪತ್ತಯಾಗಿದೆ. ಮೃತದೇಹ ಕೊಳ್ಳೇಗಾಲದ ಲಿಂಗಾಣಾಪುರದ ನಂದೀಶ್(27) ಎಂದು ಗುರುತಿಸಲಾಗಿದೆ. ಮೃತದೇಹವು ಮೂರು ತುಂಡುಗಳಾಗಿ ಪತ್ತೆಯಾಗಿರುವ ಹಿನ್ನೆಲೆ ಕೊಲೆ ಮಾಡಿ ಎಸೆದಿರುವ ಶಂಕೆ ವ್ಯಕ್ತವಾಗಿದೆ.
ಚಾಮರಾಜನಗರ (ಜ.8): ಬೆಂಗಳೂರಿನ ಯಶವಂತಪುರ ರೈಲು ಹಳಿಯಲ್ಲಿ ಸಂಶಯಾಸ್ಪದವಾಗಿ ಯುವಕನೋರ್ವನ ಮೃತದೇಹ ಪತ್ತಯಾಗಿದೆ.
ಮೃತದೇಹ ಕೊಳ್ಳೇಗಾಲದ ಲಿಂಗಾಣಾಪುರದ ನಂದೀಶ್(27) ಎಂದು ಗುರುತಿಸಲಾಗಿದೆ. ಮೃತದೇಹವು ಮೂರು ತುಂಡುಗಳಾಗಿ ಪತ್ತೆಯಾಗಿರುವ ಹಿನ್ನೆಲೆ ಕೊಲೆ ಮಾಡಿ ಎಸೆದಿರುವ ಶಂಕೆ ವ್ಯಕ್ತವಾಗಿದೆ.
undefined
ಪೊಲೀಸರ ನಿರ್ಲಕ್ಷ್ಯ:
ಮೊನ್ನೆ ರಾತ್ರಿ ಮೈಸೂರಿನಿಂದ ಬಂದಾಗ ಕೊಳ್ಳೇಗಾಲ ಬಸ್ ನಿಲ್ದಾಣದ ಬಳಿ ಮೂವರು ನಂದೀಶ್ ಮೇಲೆ ಹಲ್ಲೆ ನಡೆಸಿದ್ದರೆಂಬ ಆರೋಪಿಸಿದ್ದ ಪೋಷಕರು. ಬಸ್ ನಲ್ಲಿ ತನ್ನ ಪತ್ನಿ ಮೈಮುಟ್ಟಿದ ಎಂದು ನಂದೀಶ್ ಗೆ ಹಿಗ್ಗಾಮುಗ್ಗಾ ಥಳಿಸಿದ್ದ ವ್ಯಕ್ತಿಗಳು. ನಂದೀಶ್‌ನನ್ನು ಅಟ್ಟಾಡಿಸಿಕೊಂಡು ಹೋಗಿದ್ದ ಮೂವರು ವ್ಯಕ್ತಿಗಳು. ಆ ಬಳಿಕ ನಂದೀಶ್ ಮನೆಗೆ ವಾಪಾಸ್ಸಾಗಿರಲಿಲ್ಲ. ಹೀಗಾಗಿ ಪೊಲೀಸರಿಗೆ ದೂರು ನೀಡಲು ಹೋಗಿದ್ದ ಪೋಷಕರು. ಆದರೆ ದೂರು ದಾಖಲಿಸಿಕೊಳ್ಳದೇ ಪೊಲೀಸರು ನಿರ್ಲಕ್ಷ್ಯ ಮಾಡಿದ್ದರು. ಇದಾಗಿ ಮಾರನೇ ದಿನವೇ ಯಶವಂತಪುರದ ರೈಲು ಹಳಿಯಲ್ಲಿ ಮೂರು ತುಂಡುಗಳಾಗಿ ಪತ್ತೆಯಾಗಿದ್ದಾನೆ. ತಮ್ಮ ಮಗನನ್ನು ಕೊಲೆ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಹುಬ್ಬಳ್ಳಿ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ, ಕೊಲೆ ಶಂಕೆ
ಪೋಷಕರ ದೂರು ಗಂಭೀರವಾಗಿ ಪರಿಗಣಿಸಿ ಕೇಸ್ ದಾಖಲಿಸಿ ವಿಚಾರಣೆ ನಡೆಸಿದ್ದರೆ ಕೊಲೆಯಾಗುತ್ತಿರಲಿಲ್ಲ. ಪೊಲೀಸರ ನಿರ್ಲಕ್ಷ್ಯವೇ ಸಾವಿಗೆ ಕಾರಣವಾಯಿತೇ?