ಗಂಗಾವತಿ: ಅಂಬೇಡ್ಕರ್ ಪ್ರತಿಮೆ. ಭಾವಚಿತ್ರಕ್ಕೆ ಟೊಮ್ಯಾಟೋ ಸಾಸ್ ಎರಚಿದ ಕಿಡಿಗೇಡಿಗಳು!

By Ravi Janekal  |  First Published Jan 8, 2024, 1:30 PM IST

ಸಂವಿಧಾನಶಿಲ್ಪಿ ಡಾ ಬಿಆರ್ ಅಂಬೇಡ್ಕರ್ ಪ್ರತಿಮೆ, ಭಾವಚಿತ್ರಕ್ಕೆ ತಡರಾತ್ರಿ ಕಿಡಿಗೇಡಿಗಳು ಟೊಮ್ಯಾಟೋ ಸಾಸ್ ಎರಚಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಕೋರ್ಟ್ ಎದುರುಗಡೆ ಇರುವ ಅಂಬೇಡ್ಕರ್ ಸರ್ಕಲ್ ನಲ್ಲಿ ನಡೆದಿದೆ.


ಕೊಪ್ಪಳ (ಜ.8): ಸಂವಿಧಾನಶಿಲ್ಪಿ ಡಾ ಬಿಆರ್ ಅಂಬೇಡ್ಕರ್ ಪ್ರತಿಮೆ, ಭಾವಚಿತ್ರಕ್ಕೆ ತಡರಾತ್ರಿ ಕಿಡಿಗೇಡಿಗಳು ಟೊಮ್ಯಾಟೋ ಸಾಸ್ ಎರಚಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಕೋರ್ಟ್ ಎದುರುಗಡೆ ಇರುವ ಅಂಬೇಡ್ಕರ್ ಸರ್ಕಲ್ ನಲ್ಲಿ ನಡೆದಿದೆ.

ಘಟನೆ ಖಂಡಿಸಿ ದಲಿತ ಸಂಘಟನೆಗಳಿಂದ ದಿಢೀರ್ ಪ್ರತಿಭಟನೆ ನಡೆಸುತ್ತಿದ್ದು, ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಘಟನೆ ಬಳಿಕ ಜನರು ಜಮಾವಣೆ ಆಗುತ್ತಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ,ತಹಸೀಲ್ದಾರ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಕೆಲಸ ಕಾರ್ಯಗಳು ಅರ್ಧಕ್ಕೆ ನಿಲ್ಲಿಸಿ ಶಾಸಕ ಜನಾರ್ದನರೆಡ್ಡಿ ಸಹ ಆಗಮಿಸಿದ್ದಾರೆ.

Tap to resize

Latest Videos

undefined

ವೆಂಕಟಮ್ಮನಹಳ್ಳಿ ಪೊಲೀಸ್ ಹತ್ಯಾಕಾಂಡ ಪ್ರಕರಣ; ನಾಲ್ವರು ಮಾಜಿ ನಕ್ಸಲರು ಪೊಲೀಸ್  ವಶಕ್ಕೆ, ಇಂದು ಕೋರ್ಟ್ ಗೆ ಹಾಜರು!

ಡಾ.ಅಂಬೇಡ್ಕರ್ ಪ್ರತಿಮೆಗೆ ಅವಮಾನಗೊಳಿಸಿದ ಕಿಡಿಗೇಡಿಗಳನ್ನು ಶೀಘ್ರ ಪತ್ತೆ ಹಚ್ಚಿ ಬಂಧಿಸುವಂತೆ ದಲಿತ ಸಂಘಟನೆಗಳು ಆಗ್ರಹಿಸಿವೆ. ಬಂಧನ ಆಗುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಪ್ರತಿಮೆ ಮುಂದೆ ಕುಳಿತು ಪ್ರತಿಭಟನೆ ಮಾಡುತ್ತಿರುವ ಜನರು. ಶಾಸಕರು, ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದ್ರೂ ಪ್ರತಿಭಟನೆ ಮುಂದುವರಿದಿದೆ.

ಕಠಿಣ ಕ್ರಮದ ಭರವಸೆ ಬಳಿಕ ಪ್ರತಿಭಟನೆ ವಾಪಸ್:

ಅಂಬೇಡ್ಕರ್ ಭಾವಚಿತ್ರ, ಪ್ರತಿಮೆ ಅವಮಾನ ಮಾಡಿದ ಕಿಡಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ಭರವಸೆ ನೀಡಿ ಬಿಗುವಿನ ವಾತಾವರಣ ತಿಳಿಗೊಳಿಸಿದ ಅಧಿಕಾರಿಗಳು. ಬಳಿಕ ನಗರ ಸಭೆ ಸಿಬ್ಬಂದಿಯಿಂದ ಅಂಬೇಡ್ಕರ್ ಮೂರ್ತಿ ಶುದ್ಧಗೊಳಿಸಲಾಯಿತು. ಈ ವೇಳೆ ಸ್ಥಳದಲ್ಲಿಯೇ ನಿಂತು ಮೂರ್ತಿಯನ್ನು ಶುದ್ಧಗೊಳಿಸಿದ ನಗರಸಭೆ ಪೌರಯುಕ್ತ ವೀರುಪಾಕ್ಷಮೂರ್ತಿ.  

ಇಂದು ಜೈಲಿನಿಂದ ಕರವೇ ನಾರಾಯಣಗೌಡ ಸೇರಿ 29 ಕಾರ್ಯಕರ್ತರ ಬಿಡುಗಡೆ; ಪರಪ್ಪನ ಅಗ್ರಹಾರ ಬಳಿ 144 ಸೆಕ್ಷನ್ ಜಾರಿ!

click me!