ಪತಿ ನನ್ನ ಜೊತೆ ಲೈಂಗಿಕ ಕ್ರಿಯೆ ನಡೆಸಿ ಎರಡು ವರ್ಷ ಆಯ್ತು. ಎರಡು ತಿಂಗಳ ಹಿಂದೆ ಮಕ್ಕಳನ್ನು ಬಲವಂತವಾಗಿ ಕರೆದುಕೊಂಡು ಹೋಗಲಾಗಿದೆ ಎಂದು ಠಾಣೆಯ ಮುಂದೆ ಪೊಲೀಸಪ್ಪನ ಪತ್ನಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಹೈದರಾಬಾದ್: ಮೇ 21ರ ರಾತ್ರಿಯಿಂದ ಮಹಿಳೆಯೊಬ್ಬರು ನ್ಯಾಯಾಕ್ಕಾಗಿ ಆಗ್ರಹಿಸಿ ಪೊಲೀಸ್ ಠಾಣೆ ಮುಂದೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ಕೊಮುರವಳ್ಳಿಯ ಪೊಲೀಸ್ ಠಾಣೆ ಎದುರು ಮಾನಸ ಎಂಬವರು ಧರಣಿ ಕುಳಿತಿದ್ದಾರೆ. ಮಾನಸ ಪತಿ ನಾಗರಾಜು ಕೊಮುರವಳ್ಳಿಯ ಪೊಲೀಸ್ ಠಾಣೆಯಲ್ಲಿ ಎಸ್‌ಐ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಪತಿಯ ವಿರುದ್ಧವೇ ಮಾನಸ ಪ್ರತಿಭಟನೆಗೆ ಇಳಿದಿದ್ದಾರೆ.
ನಾಗರಾಜು ಮತ್ತು ಮಾನಸ ತೆಲಂಗಾಣದ ಕರೀಂನಗರ ಜಿಲ್ಲೆಯ ನಿವಾಸಿಗಳು. ಹತ್ತು ವರ್ಷಗಳ ಹಿಂದೆ ನಾಗರಾಜು ಮತ್ತು ಮಾನಸ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
ಪ್ರತಿಭಟನೆ ನಡೆಸುತ್ತಿರೋದು ಯಾಕೆ?
ಕಳೆದ ಎರಡು ವರ್ಷಗಳಿಂದ ನನ್ನೊಂದಿಗೆ ಪತಿ ಲೈಂಗಿಕ ಸಂಬಂಧ ಹೊಂದಿಲ್ಲ. ಇಬ್ಬರು ಮಕ್ಕಳನ್ನು ಸಹ ನನ್ನಿಂದ ದೂರು ಇರಿಸಲಾಗಿದೆ ಎಂದು ಮಾನಸ ಗಂಭೀರ ಆರೋಪ ಮಾಡಿದ್ದಾರೆ. ನನ್ನ ಗಂಡನೇ ಎರಡನೇ ಮದುವೆಯಾಗಿರುವ ಕಾರಣ ನನ್ನನ್ನು ದೂರ ಮಾಡಿದ್ದಾರೆ. ನನಗೆ ಗಂಡನಿಂದ ನ್ಯಾಯ ಕೊಡಿಸುವಂತೆ ಆಗ್ರಹಿಸಿ ಪೊಲೀಸ್ ಠಾಣೆಯ ಮುಂದೆ ಕುಳಿತು ಆಗ್ರಹಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಎಸ್‌ಐ ನಾಗರಾಜು ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದನು. ಇದೇ ಕಾರಣದಿಂದ ಮನೆಗೆ ಬರೋದನ್ನು ಸಹ ನಾಗರಾಜು ಕಡಿಮೆ ಮಾಡಿದ್ದನು. ಮಾನಸ ಮತ್ತು ಮಕ್ಕಳು ಕರೀಂನಗರದಲ್ಲಿ ವಾಸವಾಗಿದ್ದು, ಆಗಾಗ್ಗೆ ಬಂದು ಹೋಗುತ್ತಿದ್ದ ಎಂದು ವರದಿಯಾಗಿದೆ.
ಅಧಿಕಾರಿಗಳಿಗೆ ಪತ್ರ ಬರೆದ ಮಾನಸ
ಇದೀಗ ಅದೇ ಮಹಿಳೆಯನ್ನು ನಾಗರಾಜು ಮದುವೆಯಾಗಿದ್ದಾನೆ ಎಂದು ಮಾನಸ ಆರೋಪಿಸಿದ್ದಾರೆ. ಎರಡು ತಿಂಗಳ ಹಿಂದೆ ಕರೀಂನಗರಕ್ಕೆ ಬಂದಿದ್ದ ನಾಗರಾಜು ಇಬ್ಬರು ಮಕ್ಕಳನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ. ಮಕ್ಕಳು ಎಲ್ಲಿದ್ದಾರೆ ಎಂಬ ವಿಷಯವನ್ನು ಸಹ ಹೇಳುತ್ತಿಲ್ಲ. ಈಗ ಡಿವೋರ್ಸ್ ನೀಡುವಂತೆ ಕಿರುಕುಳ ನೀಡಲಾಗುತ್ತಿದೆ. ನನಗೆ ಆತ್ಮಹತ್ಯೆ ಮಾಡಿಕೊಳ್ಳುವ ದಾರಿಯೊಂದೇ ಉಳಿದಿದೆ ಎಂದು ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ ಅಂತ ಮಾನಸ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಮಹಿಳಾ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ; ಕಾಂಗ್ರೆಸ್ ಯುವ ಮುಖಂಡ ಅರೆಸ್ಟ್ಲೂ
ಕ್ರಮಕೈಗೊಳ್ಳದ ಪೊಲೀಸರು!
ಪತಿಯ ವಿರುದ್ಧ ಸಿದ್ದಿಪೇಟೆ ಸಿಪಿ, ಚೆರ್ಯಾಲ ಸಿಐ ಮತ್ತು ಕರೀಂನಗರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಮಾನಸ ಆರೋಪಿಸಿದ್ದಾರೆ.
ಬೇಕಂತಲೇ 211 ಜನರ ಜೊತೆ ಲೈಂಗಿಕ ಸಂಪರ್ಕ ಹೊಂದಿದ HIV ಸೋಂಕಿತೆ
ಪತಿ ನಾಗರಾಜು ಮತ್ತು ಆತನ ಎರಡನೇ ಪತ್ನಿಯ ವಶದಲ್ಲಿರುವ ಮಕ್ಕಳು ಅಪಾಯದಲ್ಲಿದ್ದಾರೆ. ಮಕ್ಕಳು ಮತ್ತು ನನಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿ ಕೋಮುರವಳ್ಳಿ ಪೊಲೀಸ್ ಠಾಣೆ ಎದುರು ಮಾನಸ ಪ್ರತಿಭಟನೆ ನಡೆಸಿದ್ದಾರೆ. ನ್ಯಾಯ ಸಿಗೋವರೆಗೂ ಪ್ರತಿಭಟನೆ ಕೈ ಬಿಡಲ್ಲ ಎಂದು ಮಾನಸ ಹೇಳಿದ್ದಾರೆ.
ಮಾನಸ ಪ್ರತಿಭಟನೆಯ ಕುರಿತು ಕೋಮುರವಳ್ಳಿ ಪೊಲೀಸ್ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಶ್ರೀನು, ಮೇಲಾಧಿಕಾರಿಳ ಆದೇಶದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.