ಜೀವನದಲ್ಲಿ ಬರುವ ಎಲ್ಲ ಕಷ್ಟ ಸುಖಗಳಲ್ಲಿ ಹೆಂಡತಿಯೊಂದಿಗೆ ಇರುತ್ತೇನೆಂದು ಪ್ರಮಾಣ ಮಾಡಿ ಮದುವೆಯಾದ ಗಂಡ ಆಸ್ತಿ ವಿಚಾರಕ್ಕೆ ಕಟ್ಟಿಕೊಂಡ ಹೆಂಡತಿಯನ್ನೇ ಕೊಲೆ ಮಾಡಿದ್ದಾನೆ.
ರಾಮನಗರ (ಮೇ 22): ಮದುವೆ ಆಗುವಾಗ ಜೀವನದಲ್ಲಿ ಬರುವ ಎಲ್ಲ ಕಷ್ಟ ಸುಖಗಳಲ್ಲಿ ಹೆಂಡತಿಯೊಂದಿಗೆ ಇರುತ್ತೇನೆಂದು ಪ್ರಮಾಣ ಮಾಡಿ ಮದುವೆಯಾದ ಗಂಡ ಆಸ್ತಿ ವಿಚಾರಕ್ಕೆ ಕಟ್ಟಿಕೊಂಡ ಹೆಂಡತಿಯನ್ನೇ ಕೊಲೆ ಮಾಡಿದ್ದಾನೆ.
ಗಂಡನೇ ಹೆಂಡತಿಯಲ್ಲಿ ಕೊಲೆ ಮಾಡಿದ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಮಂಗಾಡಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ಮಹಿಳೆ ಅಶ್ವಿನಿ (30) ಎಂದು ಗುರುತಿಸಲಾಗಿದೆ. ಕಳೆದ ಕೆಲವು ವರ್ಷಗಳ ಹಿಂದೆ ಅಶ್ವಿನಿಯನ್ನು ಮದಿವೆ ಮಾಡಿಕೊಂಡಿದ್ದ ರಮೇಶ್, ವರದಕ್ಷಿಣೆ ಹಾಗೂ ಆಸ್ತಿ ವಿಚಾರಕ್ಕೆ ಹೆಂಡತಿ ಮತ್ತು ಅವರ ಮನೆಯವರೊಂದಿಗೆ ಜಗಳ ಮಾಡುತ್ತಿದ್ದನು ಎಂದು ತಿಳಿದುಬಂದಿದೆ. ಆದರೆ, ಇಂದು ಜಮೀನ ಬಳಿ ಇರುವಾಗಲೇ ಇಬ್ಬರ ನಡುವೆಯೂ ಜಗಳ ಆರಂಭವಾಗಿದೆ.
ಸಿನಿಮಾದಲ್ಲಿ ಅಬ್ಬರಿಸಿದ ನಟಿ ವಿದ್ಯಾ, ಗಂಡನಿಂದ ಹತ್ಯೆಯಾಗಿದ್ದೇಕೆ? ಜೀವಕ್ಕೆ ಮುಳುವಾಯ್ತಾ ರಾಜಕಾರಣ!
ಇಂದು ಬೆಳಗ್ಗೆ ತೆಂಗಿನ ತೋಟದಲ್ಲಿ ಕೆಲಸ ಮಾಡುವಾಗಲೇ ಜಗಳ ಆರಂಭಿಸಿದ ದಂಪತಿಯ ನಡುವೆ ಗಂಡನ ಕೋಪ ವಿಪರೀತಕ್ಕೆ ಹೋಗಿದೆ. ಆಸ್ತಿ ವಿಚಾರವಾಗಿ ಕಿತ್ತಾಡಿಕೊಳ್ಳುತ್ತಾ ಹೆಂಡತಿ ಮೇಲೆ ಭೀಕರವಾಗಿ ಹಲ್ಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ. ಆದರೆ, ಜಗಳದ ವೇಳೆ ಹೆಂಡತಿಯ ಎದೆ, ತಲೆ ಮತ್ತಿತರ ಭಾಗಕ್ಕೆ ಭೀಕರ ಹಲ್ಲೆ ಮಾಡಿದ ಕಾರಣ ಸ್ಥಳದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ಇನ್ನು ಹೆಂಡತಿ ಮೃತಪಟ್ಟಿರುವುದು ಖಚಿತವಾದ ಬೆನ್ನಲ್ಲಿಯೇ ಆರೋಪಿ ಗಂಡ ಅಲ್ಲಿಂದ ಪರಾರಿ ಆಗಿದ್ದಾನೆ. ಪಕ್ಕದ ಜಮೀನಿನವರು ಅಶ್ವಿನಿ ಮೃತ ದೇಹವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಾಲಿವುಡ್‌ಗೆ ಬಂತು ಬಂಗಾರದ ಬೊಂಬೆ; ಕೋಮಲ್ ಝಾ ಗ್ಲಾಮರ್‌ಗೆ ಗಂಡ್‌ಹೈಕ್ಳ ಗುಂಡಿಗೆ ಗಡಗಡ!
ಸ್ಥಳೀಯರ ದೂರನ್ನು ಆಧರಿಸಿ ಸ್ಥಳಕ್ಕೆ ಬಂದ ಅಕ್ಕೂರು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇನ್ನು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಮಾಹಿತಿ ಕಲೆ ಹಾಕಿದಾಗ ಗಂಡನೇ ಆಸ್ತಿ ವಿಚಾರಕ್ಕೆ ಕೊಲೆ ಮಾಡಿ ಹೋಗಿದ್ದಾನೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲಿಯೇ ಪೊಲೀಸರು ಆರೋಪಿಯನ್ನು ಪತ್ತೆ ಮಾಡಲು ಬಲೆ ಬೀಸಿದ್ದಾರೆ. ಆಸ್ತಿ ವಿಚಾರಕ್ಕಾಗಿ ಸುಂದರ ಕುಟುಂಬವೇ ನಾಶವಾಗಿದೆ. ಇನ್ನು ಅಶ್ವಿನಿ ಅವರ ತಂದೆ-ತಾಯಿ ಆಗಮಿಸಿದ್ದು, ಮಗಳನ್ನು ಕಳೆದುಕೊಂಡು ಆಕ್ರಂದನ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಅಕ್ಕೂರು ಪೊಲೀಸ್ ಠಾಣೆಯಲ್ಲಿ ಅಳಿಯ ರಮೇಶನ ವಿರುದ್ಧ ದೂರು ನೀಡಿದ್ದಾರೆ.