ಮಧುರೈನಲ್ಲಿ ಒಂದೇ ಶಾಲೆಯಲ್ಲಿ ಅಂದ್ರೆ ಬಾಲಕಿಯರ ಶಾಲೆಯಲ್ಲಿ ಓದಿದರು ಮತ್ತು ಆತ್ಮೀಯ ಸ್ನೇಹಿತರಾಗಿದ್ದರು. ಆರೋಪಿ ನಂದಿನಿಯನ್ನು ಮದುವೆಯಾಗಲು ಲಿಂಗ ಬದಲಾಯಿಸಿಕೊಂಡಿದ್ದ ಎಂದು ವರದಿಯಾಗಿದೆ.
ಚೆನ್ನೈ (ಡಿಸೆಂಬರ್ 25, 2023): ತಮಿಳುನಾಡು ರಾಜಧಾನಿ ಚೆನ್ನೈನ ದಕ್ಷಿಣ ಹೊರವಲಯ ಕೆಲಂಬಕ್ಕಂ ಬಳಿಯ ತಲಂಬೂರ್‌ನಲ್ಲಿ ಮಹಿಳಾ ಸಾಫ್ಟ್‌ವೇರ್ ಇಂಜಿನಿಯರ್‌ರೊಬ್ಬರನ್ನು ಬಾಲ್ಯದ ಸಹಪಾಠಿಯೊಬ್ಬರು ಆಕೆಯ ಹುಟ್ಟುಹಬ್ಬದ ಮುನ್ನಾದಿನದಂದು ಚೈನ್‌ನಿಂದ ಕಟ್ಟಿ, ಅಕೆಯ ಕೈ, ಕತ್ತು ಸೀಳಿ ಜೀವಂತ ಸುಟ್ಟು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಯುವತಿಯನ್ನು 26 ವರ್ಷ ವಯಸ್ಸಿನ ಆರ್ ನಂದಿನಿ ಎಂದು ತಿಳಿದುಬಂದಿದೆ. ಮದುವೆಯಾಗಲು ಲಿಂಗ ಬದಲಾವಣೆ ಮಾಡಿಕೊಂಡ ಆಕೆಯ ಸಹಪಾಠಿಯೊಬ್ಬರು ಟೆಕ್ಕಿಯನ್ನು ಕೊಂದಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಈ ಪ್ರಕರಣ ಸಂಬಂಧ ನಂದಿನಿಯನ್ನು ಎಂಬಿಎ ಪದವೀಧರ ವೆಟ್ರಿಮಾರನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಲಿಂಗ ಬದಲಾವಣೆಗೆ ಒಳಗಾಗುವ ಮೊದಲು ಇವರ ಹೆಸರು ಪಾಂಡಿ ಮುರುಗೇಶ್ವರಿ.
ಇದನ್ನು ಓದಿ: ಲೈಂಗಿಕ ದೌರ್ಜನ್ಯಕ್ಕೆ ಸೇಡು: 25 ವರ್ಷದ ಯುವಕನ ಇರಿದು ಕೊಂದ ಮೂವರು ಅಪ್ರಾಪ್ತರು
ಅವರಿಬ್ಬರೂ ಮಧುರೈನಲ್ಲಿ ಒಂದೇ ಶಾಲೆಯಲ್ಲಿ ಅಂದ್ರೆ ಬಾಲಕಿಯರ ಶಾಲೆಯಲ್ಲಿ ಓದಿದರು ಮತ್ತು ಆತ್ಮೀಯ ಸ್ನೇಹಿತರಾಗಿದ್ದರು ಎಂದು ತಿಳಿದುಬಂದಿದೆ. ಆದರೆ, ಲಿಂಗ ಬದಲಾವಣೆಯ ಬಳಿಕ ನಂದಿನಿ ವೆಟ್ರಿಮಾರನ್ ನ ಪುನರಾವರ್ತಿತ ಮನವೊಲಿಕೆಗಳ ಹೊರತಾಗಿಯೂ ಅವರ ಪ್ರಪೋಸಲ್ ಅನ್ನು ತಿರಸ್ಕರಿಸಿದರು.
ಇದರಿಂದ ಅವರ ಫ್ರೆಂಡ್‌ಶಿಪ್ ಮೊದಲಿನಷ್ಟು ಇರಲಿಲ್ಲ. ಆದರೂ ಇಷ್ಟೆಲ್ಲ ಆದ ನಂತರವೂ ಇಬ್ಬರೂ ಸಂಪರ್ಕದಲ್ಲಿದ್ದರು ಎಂದು ವರದಿಯಾಗಿದೆ. ಇನ್ನು, 8 ತಿಂಗಳ ಹಿಂದೆ ಮಾಹಿತಿ ತಂತ್ರಜ್ಞಾನದಲ್ಲಿ ಬಿಎಸ್ಸಿ ಪದವಿ ಮುಗಿಸಿ ಚೆನ್ನೈನಲ್ಲಿ ಕೆಲಸ ಗಿಟ್ಟಿಸಿಕೊಂಡ ನಂದಿನಿ ಚಿಕ್ಕಪ್ಪನ ಜತೆ ನಗರದಲ್ಲಿ ನೆಲೆಸಿದ್ದರು.
ಇದನ್ನು ಓದಿ: ಪತ್ನಿಗೆ ವರದಕ್ಷಿಣೆ ಕಿರುಕುಳದ ಜತೆ ಅಸ್ವಾಭಾವಿಕ ಲೈಂಗಿಕತೆಗೆ ಒತ್ತಾಯಿಸಿದ ಪ್ರಮುಖ ಉದ್ಯಮಿ!
ನಂದಿನಿ ಹುಟ್ಟುಹಬ್ಬದ ಹಿಂದಿನ ದಿನ ವೆಟ್ರಿಮಾರನ್ ಆಕೆಗೆ ಶನಿವಾರ ಕರೆ ಮಾಡಿ ತನ್ನೊಂದಿಗೆ ಸ್ವಲ್ಪ ಸಮಯ ಕಳೆಯಲು ಕೇಳಿದ್ದಾನೆ. ಬಳಿಕ, ಇಬ್ಬರು ಭೇಟಿಯಾದಾಗ ಆರೋಪಿ ಆಕೆಗೆ ಹೊಸ ಬಟ್ಟೆ ತಂದು ತಾಂಬರಂ ಬಳಿಯ ಅನಾಥಾಶ್ರಮಕ್ಕೆ ಕರೆದೊಯ್ದು ದೇಣಿಗೆ ನೀಡಿದ್ದರು ಎನ್ನಲಾಗಿದೆ.
ನಂತರ, ಆಕೆಯನ್ನು ಮರಳಿ ಮನೆಗೆ ಡ್ರಾಪ್ ಮಾಡೋದಾಗಿ ಒತ್ತಾಯಿಸಿದನು ಮತ್ತು ದಾರಿಯಲ್ಲಿ ಪೊನ್ಮಾರ್‌ನಲ್ಲಿ ನಿರ್ಜನ ಸ್ಥಳದಲ್ಲಿ ನಿಲ್ಲಿಸಿದನು. ಆ ನಿರ್ಜನ ಪ್ರದೇಶದಲ್ಲಿ ಫೋಟೋಗಳಿಗೆ ಪೋಸ್ ಕೊಡಲು ನಂದಿನಿಯನ್ನು ಕೇಳಿದ. ನಂತರ ಮೋಜಿಗಾಗಿ ಎಂದು ಹೇಳಿ ಬೈಕ್‌ನಿಂದ ಚೈನ್‌ಗಳನ್ನು ತಂದು ಆಕೆಯ ಕೈಕಾಲು ಕಟ್ಟಿ ಹಾಕಿದ್ದಾನೆ.
ಕ್ಲಾಸ್‌ನಲ್ಲಿ ವಿದ್ಯಾರ್ಥಿನಿಯರ ಡೇಟಿಂಗ್ ಪ್ರೊಫೈಲ್ ಪ್ರದರ್ಶಿಸಿದ ವಿವಿ ಪ್ರಾಧ್ಯಾಪಕಿ: ಕೇಸ್ ದಾಖಲು
ನಂತರ, ನಂದಿನಿ ಕೇಳಿಕೊಂಡರೂ ಬಿಡುಗಡೆ ಮಾಡಲು ನಿರಾಕರಿಸಿದರು. ಆಕೆಯ ಮೇಲೆ ಪೆಟ್ರೋಲ್ ಬಾಟಲಿ ಸುರಿದು ಬೆಂಕಿ ಹಚ್ಚುವ ಮೊದಲು ಬ್ಲೇಡ್‌ನಿಂದ ಆಕೆಯ ಕುತ್ತಿಗೆ ಮತ್ತು ಕೈಗಳನ್ನು ಸೀಳಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲದೆ, ಕೃತ್ಯ ಎಸಗಿದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ವಲ್ಪ ಸಮಯದ ನಂತರ, ಪ್ರದೇಶದ ಜನರು ನಂದಿನಿ ತನ್ನ ಜೀವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವುದನ್ನು ಕಂಡು ಪೊಲೀಸರರಿಗೆ ಕರೆ ಮಾಡಿದರು. ಸಾಯುವ ಮುನ್ನ ಆಕೆ ವೆಟ್ರಿಮಾರನ್ ಫೋನ್ ನಂಬರ್ ನೀಡಿದ್ದಳು ಎಂದೂ ತಿಳಿದುಬಂದಿದೆ.
ಪೊಲೀಸರು ಆತನಿಗೆ ಕರೆ ಮಾಡಿದಾಗ, ಆತ ಅಪರಾಧದ ಸ್ಥಳಕ್ಕೆ ಬಂದು ನಂದಿನಿ ತನ್ನ ಸ್ನೇಹಿತ ಎಂದು ಹೇಳಿದನು. ನಂದಿನಿಯನ್ನು ಕ್ರೋಮ್‌ಪೇಟೆಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಾಗ ಅವರು ಪೊಲೀಸ್ ತಂಡ ಮತ್ತು ಪ್ರದೇಶದ ನಿವಾಸಿಗಳೊಂದಿಗೆ ಹೋದರು. ಆದರೆ, ನಂದಿನಿ ಶನಿವಾರ ತಡರಾತ್ರಿ ಮೃತಪಟ್ಟಿದ್ದರು. ಆದರೆ ಅಷ್ಟರಲ್ಲಿ ವೆಟ್ರಿಮಾರನ್ ನಾಪತ್ತೆಯಾಗಿದ್ದ.
ಇದರಿಂದ ಅನುಮಾನಗೊಂಡ ಪೊಲೀಸರು ಆತನನ್ನು ಪತ್ತೆ ಹಚ್ಚಿ ಭಾನುವಾರ ಬಂಧಿಸಿ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.