ಕೋಟ್ಯಾಧಿಪತಿ ಗಂಡನ 47 ಲಕ್ಷ ಕದ್ದು ಆಟೋ ಚಾಲಕನೊಂದಿಗೆ ಮಹಿಳೆ ಪರಾರಿ!

By Suvarna NewsFirst Published Oct 28, 2021, 12:21 PM IST
Highlights

*ಪತಿಯ 47 ಲಕ್ಷ ಕದ್ದ ಹೆಂಡತಿ!
*ಆಟೋ ಚಾಲಕನೊಂದಿಗೆ ಪರಾರಿ
*ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲು

ಇಂದೋರ್‌ (ಅ.28) : ತನಗಿಂತ 13 ವರ್ಷ ಚಿಕ್ಕ ವಯಸ್ಸಿನ ಪತಿಯ 47 ಲಕ್ಷ ಕದ್ದು ಆಟೋ ಚಾಲಕನೊಂದಿಗೆ (Auto driver) ಮಹಿಳೆಯೊಬ್ಬಳು ಪರಾರಿಯಾಗಿರುವ ಘಟನೆ ಇಂದೋರ್‌ನ ಖಜ್ರಾನಾ (Indores's Khajrana) ಪ್ರದೇಶದಲ್ಲಿ ನಡೆದಿದೆ. ಅಕ್ಟೋಬರ್ 13 ರಂದು ಈ ಘಟನೆ ನಡೆದಿದ್ದು, ಪತ್ನಿ ನಾಪತ್ತೆಯಾಗಿರುವ ಬಗ್ಗೆ ಪತಿ ಪೊಲೀಸರಿಗೆ ದೂರು ನೀಡಿದ ನಂತರ ಬೆಳಕಿಗೆ ಬಂದಿದೆ. ಮನೆಯಿಂದ 47 ಲಕ್ಷ ರೂಪಾಯಿ ತೆಗೆದುಕೊಂಡು ಪತ್ನಿ ಓಡಿ ಹೋಗಿದ್ದಾಳೆ ಎಂದು ದೂರಿನಲ್ಲಿ ಪತಿ ತಿಳಿಸಿದ್ದಾರೆ.

ಹೊಸಕೋಟೆ: ಪ್ರೇಯಸಿ ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಪ್ರಿಯಕರ, ಕಾರಣ?

ಆಟೊರಿಕ್ಷಾ ಚಾಲಕ ಮಹಿಳೆಯನ್ನು ಆಕೆಯ ಮನೆಗೆ ಆಗಾಗ್ಗೆ ಡ್ರಾಪ್ (drop) ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಅಕ್ಟೋಬರ್ 13 ರಂದು ರಾತ್ರಿಯಾದರೂ ಪತ್ನಿ ಮನೆಗೆ ಬಾರದಿದ್ದಾಗ ಪತಿ ಏನಾದರು ಸಮಸ್ಯೆಯಾಗಿರಬಹುದೆಂದು ಅಂದುಕೊಂಡಿದ್ದಾರೆ. ಆದರೆ ಇದೇ ವೇಳೆ ತನ್ನ ಮನೆಯಲ್ಲಿನ 47 ಲಕ್ಷ ರೂ. ನಗದು ನಾಪತ್ತೆಯಾಗಿರುವುದ ಕೂಡ ತಿಳಿದಿದೆ. ಮನೆಯ ಕಬೋರ್ಡ್ ನಲ್ಲಿ (Cupboard) ಈ ಹಣವನ್ನು ಇಟ್ಟಿದ್ದ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.

ಪ್ರೀತ್ಸೆ..ಪ್ರೀತ್ಸೆ.. ಅಂತ ಸ್ಯಾಂಡಲ್‌ವುಡ್ ನಟಿ ಹಿಂದೆ ಬಿದ್ದ ಟೆಕ್ಕಿ ಅರೆಸ್ಟ್

ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಪತ್ನಿ ಹಾಗೂ ಆಟೋರಿಕ್ಷಾ ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ. ತನಿಖೆಯ ಪ್ರಕಾರ ಆಟೋರಿಕ್ಷಾ ಚಾಲಕ 32 ವರ್ಷ ಇಮ್ರಾನ್ (Imran) ಎಂದು ಗುರುತಿಸಲಾಗಿದೆ. ಖಾಂಡ್ವಾ, ಜವ್ರಾ, ಉಜ್ಜಯಿನಿ ಮತ್ತು ರತ್ಲಂ  ನಗರಗಳಲ್ಲಿ ಚಾಲಕ ಮತ್ತು ಆರೋಪಿ ಮಹಿಳೆಯ ಪತ್ತೆಗಾಗಿ ಪೊಲಿಸರು ದಾಳಿ ಮಾಡಿ ಪತ್ತೆಕಾರ್ಯ ನಡೆಸಿದ್ದಾರೆ.  ಹೆಚ್ಚಿನ ತನಿಖೆ ನಡೆಸಿದ ಪೊಲೀಸರು ಮತ್ತೊಬ್ಬ ವ್ಯಕ್ತಿಯ ಮನೆಗೆ ತೆರಳಿದಾಗ ಅಲ್ಲಿ 33 ಲಕ್ಷ ರೂ ಇರುವುದು ಪತ್ತೆಯಾಗಿದೆ. ಈ ವ್ಯಕ್ತಿ ಇಮ್ರಾನ್ ಸ್ನೇಹಿತ ಎಂದು ವರದಿಯಾಗಿದೆ.

ಸೈಕಲ್ ರಿಕ್ಷಾ ಚಾಲಕನಿಗೆ 3 ಕೋಟಿ ರೂ ತೆರಿಗೆ ವಿಧಿಸಿದ IT ಇಲಾಖೆ!

ಸೈಕಲ್ ರಿಕ್ಷಾ ಚಾಲಕನ ಬ್ಯಾಂಕ್ ಖಾತೆಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಬ್ಯಾಂಕ್ ಅಧಿಕಾರಿಗಳು ಸೂಚಿಸಿದ್ದಾರೆ. ಇದುವರೆಗೂ ಪ್ಯಾನ್ ಕಾರ್ಡ್ ಇಲ್ಲದ ಪ್ರತಾಪ್ ಸಿಂಗ್, ಹೊಸ ಪ್ಯಾನ್ ಕಾರ್ಡ್ ಮಾಡಲು ಬಕಲಪುರದಲ್ಲಿರುವ ತೇಜ್ ಪ್ರಕಾಶ್ ಉಪಾಧ್ಯಾಯ ಮಾಲೀಕತ್ವದಲ್ಲಿರುವ ಜಾನ್ ಸುವಿಧಾ ಕೇಂದ್ರಕ್ಕೆ ತೆರಳಿದ್ದಾರೆ.

150 ರೂಪಾಯಿ ಆದಾಯದ ಸೈಕಲ್ ರಿಕ್ಷಾ ಚಾಲಕನಿಗೆ 3 ಕೋಟಿ ರೂ ತೆರಿಗೆ ವಿಧಿಸಿದ IT ಇಲಾಖೆ!

ಈ ಕೇಂದ್ರದಲ್ಲಿನ ಸಿಬ್ಬಂಧಿಗಳು ಕೇಳಿದ ದಾಖಲೆ ಪತ್ರಗಳನ್ನು, ಮೊಬೈಲ್ ನಂಬರ್ ನೀಡಿದ ಬಳಿಕ ಪ್ರತಾಪ್ ಸಿಂಗ್ ತಮ್ಮ ಕಾರ್ಯಕ್ಕೆ ಮರಳಿದ್ದಾರೆ. ಕೆಲ ದಿನಗಳ ಬಳಿಕ ಮತ್ತೆ ಕೇಂದ್ರಕ್ಕೆ ತೆರಳಿದ ಪ್ರತಾಪ್ ಸಿಂಗ್‌ಗೆ ಪಾನ್‌ಕಾರ್ಡ್‌ನ ಕಲರ್ ಫೋಟೋಕಾಪಿ(ಝೆರಾಕ್ಸ್) ನೀಡಿದ್ದಾರೆ. ಪ್ಯಾನ್ ಕಾರ್ಡ್ ಕುರಿತು ಅರಿವಿಲ್ಲದ ಪ್ರತಾಪ್ ಸಿಂಗ್, ಕಲರ್ ಝೆರಾಕ್ಸ್ ಹಿಡಿದು ವಾಪಾಸ್ಸಾಗಿದ್ದಾರೆ. ಎಡವಟ್ಟಾಗಿದ್ದು ಇಲ್ಲೇ ನೋಡಿ.

2014ರಷ್ಟೇ ತೆರಿ​ಗೆ ಇದ್ದರೆ ಪೆಟ್ರೋಲ್‌ 66 ರೂ, ಡೀಸೆಲ್‌ 55 ರೂ. ಇರುತ್ತಿತ್ತು!

ಪ್ರತಾಪ್ ಸಿಂಗ್ ಒರಿಜನಲ್ ಪಾನ್ ಕಾರ್ಡ್ ಎಗರಿಸಿದ ಖದೀಮರು, ಈ ಪಾನ್‌ಕಾರ್ಡ್‌ನಲ್ಲಿ ಜಿಎಸ್‌ಟಿ ನಂಬರ್ ಪಡೆದುಕೊಂಡಿದ್ದಾರೆ. ಬಳಿಕ ಕೆಲ ವಹಿವಾಟು ನಡೆಸಿದ್ದಾರೆ. ಈ ಖದೀಮರ ವಹಿಪಾಟು ಬರೋಬ್ಬರಿ 43 ಕೋಟಿ ರೂಪಾಯಿ. 2018-19ರ ಸಾಲಿನಲ್ಲಿ ಈ ಎಲ್ಲಾ ವ್ಯವಹಾರಗಳನ್ನು ಬಡ ಸೈಕಲ್ ರಿಕ್ಷಾ ಚಾಲಕನ ಪಾನ್ ಕಾರ್ಡ್ ಮೂಲಕ ನಡೆಸಲಾಗಿದೆ. 43,44,36,201 ರೂಪಾಯಿ ವಹಿವಾಟು ನಡೆಸಿರುವುದಕ್ಕೆ 3 ಕೋಟಿ ರೂಪಾಯಿ ತೆರಿಗೆ ಹಾಕಿ ನೊಟೀಸ್ ನೀಡಿದೆ

click me!