* ಪ್ರಿಯಕರನಿಂದ ಅತ್ಯಾಚಾರಕ್ಕೆ ತುತ್ತಾಗಿ ಸಂತ್ರಸ್ತೆ ಗರ್ಭಿಣಿ
* ಯೂಟ್ಯೂಬ್ ನೋಡಿ ಮಗುವಿಗೆ ಜನ್ಮ ನೀಡಿದ 17 ವರ್ಷದ ಯುವತಿ
* ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸ್, ಬಂಧನ
ಮಲಪ್ಪುರಂ(ಅ.28): ತನ್ನ ಪ್ರಿಯಕರನಿಂದ ಅತ್ಯಾಚಾರಕ್ಕೆ (Rape) ಒಳಗಾಗಿದ್ದ 17 ವರ್ಷದ ಯುವತಿಯು ಮಗುವಿಗೆ ಜನ್ಮ ನೀಡಿರುವ ಘಟನೆ ಕೇರಳದ (Kerala) ಮಲಪ್ಪುರಂ ಜಿಲ್ಲೆಯಲ್ಲಿ (Malappuram District) ನಡೆದಿದೆ. ಆಕೆ ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ್ದು, ಯೂಟ್ಯೂಬ್ ವಿಡಿಯೋ (YouTube Video) ನೋಡಿ ಹೊಕ್ಕುಳಿನ ಬಳ್ಳಿ ತನ್ನಿಂತಾನೇ ಕತ್ತರಿಸಿಕೊಂಡಿದ್ದಾಳೆ ಎಂದಿರುವ ಪೊಲೀಸರು, ಆಕೆಯನ್ನು ಸದ್ಯ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಮಗು ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಆಕೆಯ ಗರ್ಭಕ್ಕೆ ಕಾರಣವಾಗಿದ್ದ 21 ವರ್ಷದ ಪ್ರಿಯಕರನ್ನು ಪೋಕ್ಸೋ ಕಾಯ್ದೆಯಡಿ (POCSO Act) ಬಂಧಿಸಲಾಗಿದೆ
ಘಟನೆಯ ಹಿನ್ನೆಲೆ:
12ನೇ ತರಗತಿ ವಿದ್ಯಾರ್ಥಿಯಾಗಿರುವ (Student) ಸಂತ್ರಸ್ತ ಯುವತಿ ಮತ್ತು ಬಂಧಿತ ಆರೋಪಿ ಪರಸ್ಪರ ಪ್ರೀತಿಸುತ್ತಿದ್ದರು. ಯುವತಿ 18 ವರ್ಷ ದಾಟಿದ ಬಳಿಕ ಮದುವೆಯಾಗುವ ಯೋಚನೆಯಲ್ಲಿದ್ದರು. ಆದರೆ ತನ್ನ ಪ್ರೇಮಿಯಿಂದ ಗರ್ಭ ಧರಿಸಿದ್ದ ಯುವತಿ ಅ.20ರಂದು ತನ್ನ ಮನೆಯಲ್ಲಿ ಅಪ್ಪ-ಅಮ್ಮನಿಗೂ ತಿಳಿಯದಂತೆ ಗುಪ್ತವಾಗಿ ಮಗುವಿಗೆ ಜನ್ಮ ನೀಡಿದ್ದಳು. ಅ.22ರಂದು ಮಗು ಅಳುವ ಧ್ವನಿ ಕೇಳಿದ್ದರಿಂದ ಈ ಘಟನೆಯು ಯುವತಿಯ ಕುಟುಂಬ ಸದಸ್ಯರ ಗಮನಕ್ಕೆ ಬಂದಿತ್ತು. ಇನ್ನು ಮಗು ಮತ್ತು ತಾಯಿಯನ್ನು ಆರೋಪಿಯ ಕುಟುಂಬಸ್ಥರೇ ನೋಡಿಕೊಳ್ಳುತ್ತಿದ್ದಾರೆ. ಆದಾಗ್ಯೂ, ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ ಎಂದಿದ್ದಾರೆ ಪೊಲೀಸರು.
ಅಪ್ರಾಪ್ತ ಬಾಲಕಿಯನ್ನು (Minor Girl) ಪ್ರೀತಿಸಿ ಮದುವೆಯಾಗಿ (Marriage) ಹೆಣ್ಣು ಮಗುವಿನ (Baby Girl) ಜನನದ ನಂತರ ಸಿಡಿಪಿಒ (CDPO) ದೂರಿನ ಮೇರೆಗೆ ಪತಿಯನ್ನು ಪೋಸ್ಕೋ (POSCO) ಕಾಯ್ದೆಯಡಿ ಬಂಧಿಸಿರುವ ಘಟನೆ ತಾಲೂಕು ಪೊಲೀಸ್ (Police) ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ತಾಲೂಕಿನ ಇರಕಸಂದ್ರ ಕಾಲೋನಿಯ ರಾಮಕೃ ಷ್ಣಯ್ಯನ ಮಗನಾದ ರಮೇಶ್ ಎಂಬುವನೇ ಪೋಸ್ಕೋ ಕಾಯ್ದೆಯಡಿ ಬಂಧಿತರಾಗಿರುವ (Arrest) ಆರೋಪಿಯಾಗಿದ್ದು, ಹೆರಿಗೆಯ ನಂತರ ಮಹಿಳಾ ಮತ್ತು ಮಕ್ಕಳ ಇಲಾಖೆಯ (Department of Women and Child Development) ಅಪ್ರಾಪ್ತ ಬಾಲಕಿಯ ಮದುವೆ ಬಗ್ಗೆ ದೂರು ನೀಡಿದೆ ಎನ್ನಲಾಗಿದೆ.
ಬಾಲಕಿಗೆ ಬಲವಂತದ ಬಾಲ್ಯ ವಿವಾಹ : ಮಗುವಿಗೆ ಜನ್ಮ ನೀಡಿದ ಬಳಿಕ ಬೆಳಕಿಗೆ
ರಮೆಶ್ ಆಟೋ ಡ್ರೈವರ್ (Auto Driver) ಆಗಿದ್ದು, ಪ್ರೀತಿಸಿ ಮದುವೆಯಾಗಿದ್ದಾನೆ ಎನ್ನಲಾಗಿದೆ. ಈತ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿ ಕೊರಟಗೆರೆ ಮಾರುತಿ ಆಸ್ಪತ್ರೆಯಲ್ಲಿ ಹೆರಿಗೆಯಾದ (Delivery) ಬಳಿಕ ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಮಾಹಿತಿ ರವಾನೆಯಾಗಿದೆ.
ಅಲ್ಲಿನ ಸಿ.ಡಿ.ಪಿಓ ದೂರಿನ ಮೇರೆಗೆ ಕೋಳಾಲ ಪೊಲೀಸ್ ಠಾಣೆಯಲ್ಲಿ ಫೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿನ್ನು ವಶಕ್ಕೆ ಪಡೆಯಲಾಗಿದೆ.
ಕೊರೋನಾ ಕಾಲದಲ್ಲಿ ಹೆಚ್ಚುತ್ತಿವೆ ಬಾಲ್ಯವಿವಾಹ !
ಈ ಹಿಂದೆ ಮದುವೆಯ ಮಾಹಿತಿ ಅರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಕೆ ಸಹಾಯಕ ನಿದೇರ್ಶಕರಾದ ಅಂಬಿಕಾ, ಅಂಗನವಾಡಿ ಕಾರ್ಯ ಕರ್ತೆ ಹಾಗು ಗ್ರಾ.ಪಂ ಪಿಡಿಓ ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಗುಟ್ಟಾಗಿ ಬೇರೆಡೆ ಮದುವೆ ಮಾಡಿ ಹೆಣ್ಣಿನ ಕಾಲುಂಗುರ ಹಾಗೂ ತಾಳಿಯನ್ನು ತೆಗೆದಿಟ್ಟು ಬಂದು ಪರಿಶೀಲಿಸಿರುವವರನ್ನು ಯಾಮಾರಿಸಿದ್ದರು ಎನ್ನಲಾಗಿದೆ.
ಈಗ ಹೆರಿಗೆಯಾದ ನಂತರ ಸಿಕ್ಕಿಬಿದ್ದಿದ್ದು, ಸಿಡಿಪಿಓ ದೂರು ಮೇರೆಗೆ ಗಂಡ ಹಾಗು ಮದುವೆಗೆ ಸಹಕರಿಸಿದ ಪೋಷಕರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎನ್ನಲಾಗಿದೆ. ಈ ಸಂಬಂಧ ತಾಲೂಕಿನ ಕೋಳಾಲ ಪೊಲೀಸ್ ಠಾಣೆಯ ಸಿಪಿಐ ಸಿದ್ದರಾಮೆಶ್ವರ್, ಪಿಎಸ್‌ಐ ಮಹಾಲಕ್ಷ್ಮಮ್ಮ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸಿದ್ದಾರೆ.