Illicit Relationship| ಪ್ರಿಯತಮನ ಜೊತೆ ಸೇರಿ ಗಂಡನ ಕೊಲೆಗೆ ಹೆಂಡ್ತಿ ಸ್ಕೆಚ್‌..!

By Suvarna News  |  First Published Nov 21, 2021, 2:37 PM IST

*   ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹೂವಿನಹಳ್ಳಿಯಲ್ಲಿ ನಡೆದ ಘಟನೆ
*   ಅನೈತಿಕ ಸಂಬಂಧವನ್ನ ಮುಚ್ಚಿ ಹಾಕಲು ಗಂಡನ ಕೊಲೆಗೆ ಯತ್ನಿಸಿದ ಪತ್ನಿ
*   ಆರೋಪಿಗಳನ್ನ ಬಂಧಿಸಿದ ಪೊಲೀಸರು
 


ಯಾದಗಿರಿ(ನ.21): ನಿದ್ದೆ ಮಾತ್ರೆ ಕೊಟ್ಟು ಪ್ರಿಯತಮನ ಜೊತೆ ಸೇರಿ ಗಂಡನ ಕೊಲೆಗೆ(Murder) ಪತ್ನಿ ಯತ್ನಿಸಿದ‌ಘಟನೆ ಯಾದಗಿರಿ(Yadgir) ಜಿಲ್ಲೆಯ ಸುರಪುರ ತಾಲೂಕಿನ ಹೂವಿನಹಳ್ಳಿಯಲ್ಲಿ ನ 18 ರಂದು ನಡೆದಿದ್ದು ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಅನೈತಿಕ ಸಂಬಂಧವನ್ನ(Illicit Relationship) ಮುಚ್ಚಿ ಹಾಕಲು ಪಾಪಿ ಹೆಂಡತಿ ತನ್ನ ಗಂಡನ ಕೊಲೆಗೆ ಯತ್ನಿಸಿದ್ದಾಳೆ ಎಂದು ತಿಳಿದು ಬಂದಿದೆ. 

ಚಂದ್ರಕಲಾ ಎಂಬಾಕೆಯೇ ತನ್ನ ಪ್ರಿಯತಮ ಬಸನಗೌಡ ಜೊತೆ ಸೇರಿ ಪತಿ ವಿಶ್ವನಾಥರಡ್ಡಿ ಕೊಲೆಗೆ ಯತ್ನಿಸಿದ್ದಾಳೆ. ಚಂದ್ರಕಲಾ ತನ್ನ ತಂಗಿಯ ಗಂಡನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ದೇವರ ಪ್ರಸಾದವೆಂದು ನಂಬಿಸಿ ನೀರಿನಲ್ಲಿ ನಿದ್ದೆ ಮಾತ್ರೆ(Sleeping Pill) ಪುಡಿ ಹಾಕಿದ್ದರು ಆರೋಪಿಗಳು(Accused). ಪತ್ನಿ ಕೊಟ್ಟ ನಿದ್ದೆ ಮಾತ್ರೆ ಸೇವಿಸಿ ‌ನಿದ್ದೆ ಮಾಡುವಾಗ ಕತ್ತು ಹಿಸುಕಿ ಕೊಲೆಗೆ ಯತ್ನಿಸಲಾಗಿದೆ. ಕತ್ತು ಹಿಸುಕುವಾಗ ಎಚ್ಚರಗೊಂಡ ಪತಿ ವಿಶ್ವನಾಥರಡ್ಡಿ  ಮನೆಯಿಂದ ಪರಾರಿಯಾಗಿದ್ದಾನೆ. ಪರಾರಿಯಾಗುವ ಮುನ್ನ ತನ್ನ ಹೆಂಡತಿಯ ಪ್ರಿಯತಮನಿಗೆ ಥಳಿಸಿ(Assault) ಹೋಗಿದ್ದಾನೆ ಎಂದು ತಿಳಿದು ಬಂದಿದೆ.

Tap to resize

Latest Videos

undefined

ಗಂಡನನ್ನೆ ಕೊಂದ ಪತ್ನಿ, 2 ತಿಂಗ್ಳು ಬಳಿಕ ಗೊತ್ತಾಯ್ತು ಆಕೆಯ ಪಲ್ಲಂಗ ಪುರಾಣ

ದೇವರ(God) ಪ್ರಸಾದ ಸೇವಿಸಿದ್ರೆ ಒಳ್ಳೆದಾಗುತ್ತೆ ಅಂತ ನಂಬಿಸಿ ವಿಶ್ವನಾಥರಡ್ಡಿಗೆ ಮೋಸ ಮಾಡಿದ್ದಾರೆ ಈ ಜೋಡಿ.  ಚಂದ್ರಕಲಾ ಪ್ರಿಯತಮ ಬಸನಗೌಡ ಕೊಲೆ ಮಾಡುವ ಬಗ್ಗೆ ಮಾತಾಡಿರುವ ಆಡಿಯೋದಿಂದ(Audio) ಪ್ರಕರಣಕ್ಕೆ(Case)ಹೊಸ ಟ್ವಿಸ್ಟ್ ಸಿಕ್ಕಿದೆ. ಆರೋಪಿಗಳಾದ ಚಂದ್ರಕಲಾ ಹಾಗೂ ಪ್ರಿಯತಮ ಬಸನಗೌನನ್ನ ಪೊಲೀಸರು(Police) ಬಂಧಿಸಿದ್ದಾರೆ(Arrest). ಈ ಸಂಬಂಧ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನೈತಿಕ ಸಂಬಂಧ ಪ್ರಶ್ನಿಸಿ ಮಗನ ಕೊಲೆ

ಬೆಂಗಳೂರು: ತನ್ನ ತಾಯಿ ಜತೆಗಿನ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದ ಮಗನನ್ನು ತಾಯಿಯ ಪ್ರಿಯಕರ ಚಾಕುವಿನಿಂದ ಕೊಂದಿರುವ(Murder) ಘಟನೆ ಹಲಸೂರು ಸಮೀಪ ಅ.5 ರಂದು ನಡೆದಿತ್ತು. 

ಮರ್ಫಿ ಟೌನ್‌ನಿವಾಸಿ ನಂದು(17) ಕೊಲೆಯಾದ ದುರ್ದೈವಿ. ಈ ಪ್ರಕರಣ ಸಂಬಂಧ ಆರೋಪಿ ಬಾಗಲೂರು ಸಮೀಪದ ನಿವಾಸಿ ಶಕ್ತಿವೇಲುನನ್ನು ಬಂಧಿಸಿದ ಪೊಲೀಸರು,(Police) ಮೃತನ ತಾಯಿ ಗೀತಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮರ್ಫಿ ಟೌನ್‌ನಲ್ಲಿರುವ ಗೀತಾ ಮನೆಗೆ ಶಕ್ತಿವೇಲು ಸೋಮವಾರ ರಾತ್ರಿ ಬಂದಾಗ ಈ ಕೊಲೆ ನಡೆದಿತ್ತು. 

ತಾಯಿ ಪ್ರೇಮಕ್ಕೆ ಮಗನ ವಿರೋಧ:

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಆರು ವರ್ಷಗಳ ಹಿಂದೆ ಪತಿಯಿಂದ ಪ್ರತ್ಯೇಕವಾಗಿ ತನ್ನ ಇಬ್ಬರು ಮಕ್ಕಳ ಜತೆ ಮರ್ಫಿಟೌನ್‌ನಲ್ಲಿ ಗೀತಾ ನೆಲೆಸಿದ್ದಾಳೆ. ಮನೆಗಳಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಆಕೆಗೆ ಫೇಸ್‌ಬುಕ್‌ಮೂಲಕ ಆಟೋ ಚಾಲಕ ಅವಿವಾಹಿತ ಶಕ್ತಿವೇಲು ಪರಿಚಯವಾಗಿತ್ತು. ಈ ಸ್ನೇಹವು ಕ್ರಮೇಣ ಅನೈತಿಕ ಸಂಬಂಧಕ್ಕೆ ತಿರುಗಿದೆ. ತನ್ನ ತಾಯಿ ಹಾದಿ ತಪ್ಪಿರುವ ವಿಷಯ ತಿಳಿದು ಕೆರಳಿದ ನಂದು, ಆಕೆಯ ಗೆಳೆಯ ಶಕ್ತಿವೇಲು ಮನೆಗೆ ಬಂದಾಗ ಗಲಾಟೆ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದರು. 

ಶಿಕಾರಿಪುರ; ಆಕೆಗೆ  33...  ಮದುವೆಯಾದರೂ ಕಿರಿಯ ಗೆಳೆಯನೊಬ್ಬ ಸಿಕ್ಕಿದ್ದ!

ಅಂತೆಯೇ ಪ್ರಿಯತಮೆ ಮನೆಗೆ ಸೋಮವಾರ ರಾತ್ರಿ ಶಕ್ತಿವೇಲು ಬಂದಿದ್ದಾನೆ. ಆ ವೇಳೆ ಮನೆಯಲ್ಲಿದ್ದ ನಂದು, ನೀನು ಯಾಕೆ ಮನೆಗೆ ಬರುತ್ತೀಯಾ ಎಂದು ಪ್ರಶ್ನಿಸಿದ್ದಾನೆ. ಈ ಹಂತದಲ್ಲಿ ಇಬ್ಬರ ನಡುವೆ ಬಿರುಸಿನ ಮಾತುಕತೆ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಇಬ್ಬರು ಪರಸ್ಪರ ಬಡಿದಾಡಿಕೊಂಡಿದ್ದಾರೆ. ಆಗ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ನಂದುಗೆ ಶಕ್ತಿವೇಲು ಇರಿದಿದ್ದಾನೆ. ಕೂಡಲೇ ಪುತ್ರನ ರಕ್ಷಣೆಗೆ ಧಾವಿಸಿದ ಗೀತಾ, ಸ್ಥಳೀಯರ ಸಹಕಾರದಲ್ಲಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ತೀವ್ರ ರಕ್ತಸ್ರಾವದಿಂದ ಆತ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು. 

ತಾಯಿ ವಿಚಾರಣೆ:

ಈ ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು, ತಪ್ಪಿಸಿಕೊಳ್ಳಲು ಯತ್ನಿಸಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಆದರೆ ಹತ್ಯೆಯಲ್ಲಿ ಗೀತಾಳ ಪಾತ್ರವಿದೆಯೇ ಅಥವಾ ಇಲ್ಲವೇ ಎಂಬುದು ಖಚಿತವಾಗಿಲ್ಲ. ಹೀಗಾಗಿ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!