Latest Videos

ಹೆಂಡತಿ ಬಿಟ್ಟು ಹೋಗಿದ್ದಕ್ಕೆ ಸಿಟ್ಟು: ಆಸಿಡ್ ಗನ್‌ ಚಾಕುವಿನೊಂದಿಗೆ ಶಾಲೆಗೆ ನುಗ್ಗಿದ್ದ ವ್ಯಕ್ತಿ

By Anusha KbFirst Published Apr 27, 2023, 10:27 AM IST
Highlights

ಹೆಂಡತಿ ಹಾಗೂ ಮಗು ತನ್ನನ್ನು ಬಿಟ್ಟು ಹೋಗಿದ್ದರಿಂದ ಕಂಗೆಟ್ಟ ವ್ಯಕ್ತಿಯೊಬ್ಬ ಸರ್ಕಾರಿ ಶಾಲೆಯೊಂದಕ್ಕೆ ಗನ್ ಹಾಗೂ ಆಸಿಡ್‌ನೊಂದಿಗೆ ನುಗ್ಗಿ ವಿದ್ಯಾರ್ಥಿ ಹಾಗೂ ಶಿಕ್ಷಕರನ್ನು ಒಂದು ಗಂಟೆಗೂ ಹೆಚ್ಚು ಕಾಲ ಒತ್ತೆಯಾಳಾಗಿಸಿರಿಕೊಂಡ ಘಟನೆ ನಡೆದಿದೆ.

ಮಾಲ್ಡಾ: ಹೆಂಡತಿ ಹಾಗೂ ಮಗು ತನ್ನನ್ನು ಬಿಟ್ಟು ಹೋಗಿದ್ದರಿಂದ ಕಂಗೆಟ್ಟ ವ್ಯಕ್ತಿಯೊಬ್ಬ ಸರ್ಕಾರಿ ಶಾಲೆಯೊಂದಕ್ಕೆ ಗನ್ ಹಾಗೂ ಆಸಿಡ್‌ನೊಂದಿಗೆ ನುಗ್ಗಿ ವಿದ್ಯಾರ್ಥಿ ಹಾಗೂ ಶಿಕ್ಷಕರನ್ನು ಒಂದು ಗಂಟೆಗೂ ಹೆಚ್ಚು ಕಾಲ ಒತ್ತೆಯಾಳಾಗಿಸಿರಿಕೊಂಡ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿರುವ ಸರ್ಕಾರಿ ಶಾಲೆಯೊಂದರ 7ನೇ ತರಗತಿಯಲ್ಲಿ ಈ ಘಟನೆ ನಡೆದಿದೆ. ಶಿಕ್ಷಕರು ಮಕ್ಕಳಿಗೆ ಪಾಠ ಮಾಡುತ್ತಿದ್ದಾಗ ಒಮ್ಮಿಂದೊಮ್ಮೆಲೆ ಸರ್ಕಾರಿ ಶಾಲೆಗೆ ನುಗ್ಗಿದ ವ್ಯಕ್ತಿ ಮಕ್ಕಳು ಹಾಗೂ ಶಿಕ್ಷಕರೆದುರು ಗನ್ ತೋರಿಸಿ ಬೆದರಿಸಿದ್ದಾನೆ. ಕೈಯಲ್ಲಿ ಆಸಿಡ್ ಹಾಗೂ ಗನ್ ಹಿಡಿದು ಶಾಲೆಗೆ ನುಗ್ಗಿದ ಈತ ತನ್ನ ಕಾಲಿಗೆ ಚಾಕುವನ್ನು ಸುತ್ತಿಕೊಂಡಿದ್ದ. 

ವಿಚಾರ ತಿಳಿದು ಅಲ್ಲಿಗೆ ಪೊಲೀಸರು (Police), ಮಾಧ್ಯಮದವರು ಆಗಮಿಸಿದ್ದು, ಈ ವೇಳೆ ಆತ ಮಾಧ್ಯಮಗಳು ನನ್ನ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕು, ತನ್ನನ್ನು ಬಿಟ್ಟು ಹೋಗಿರುವ ಹೆಂಡತಿ ಹಾಗೂ ಮಗನನ್ನು ವಾಪಸ್ ನನ್ನ ಬಳಿ ಬರುವಂತೆ ಮಾಡಬೇಕು ಎಂದು ಹೇಳಿದ್ದಾನೆ. ಹೀಗೆ ಈತನ ಹೇಳಿಕೆಯನ್ನು ಮಾಧ್ಯಮಗಳು ರೆಕಾರ್ಡ್‌ ಮಾಡುತ್ತಿದ್ದ ಸಂದರ್ಭವನ್ನು ಬಳಸಿಕೊಂಡು ಪೊಲೀಸ್ ಅಧಿಕಾರಿಯೊಬ್ಬರು ಆತನನ್ನು ಬರಿಗೈಲಿ ನೆಲಕ್ಕೆ ಕಡೆವಿ ಬಂಧಿಸಿದ್ದಾರೆ.

ಯಾದಗಿರಿ; ಸಾಲಗಾರನ ಪತ್ನಿ ಒತ್ತೆಯಾಳು, ಮೂತ್ರ ವಿಸರ್ಜನೆಗೂ ಬಿಡಲಿಲ್ಲ!

ಹೀಗೆ ಶಾಲೆಗೆ ನುಗ್ಗಿ ಆವಾಂತರವೆಬ್ಬಿಸಿದ ವ್ಯಕ್ತಿಯನ್ನು 44 ವರ್ಷ ದೇವ್‌ಕುಮಾರ್ ಬಲ್ಲವ್ (Deb kumar Ballav) ಎಂದು ಗುರುತಿಸಲಾಗಿದೆ.  ಆಸಿಡ್ (Acid) ಹಾಗೂ 9 ಎಂಎಂ ಪಿಸ್ತೂಲ್‌ ಹಿಡಿದು ತರಗತಿಗೆ ನುಗ್ಗಿದ ಈತ  ಮಕ್ಕಳು ಶಿಕ್ಷಕರೆದುರು ಗನ್ ತೋರಿಸಿ ಅವರನ್ನು ಭಯಬೀಳಿಸಿದ್ದ. ಸುಮಾರು ಒಂದು ಗಂಟೆಗಳ ಕಾಲ ಈತ ಎಲ್ಲರನ್ನು ಬೆದರಿಸಿದ್ದ. 

ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದ ಆತನನ್ನು ಡಿಎಸ್‌ಪಿ ಅಜರುದ್ದೀನ್ ಖಾನ್ (Azaruddin Khan) ಎಂಬುವವರು, ಉಪಾಯವಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡಿಎಸ್‌ಪಿ ಆತನೊಂದಿಗೆ ಸೆಣೆಸಾಡುವ ಸಂದರ್ಭದಲ್ಲೇ ತರಗತಿಯಲ್ಲಿದ್ದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಮೆಲ್ಲನೆ ಹೊರಗೆ ತರಲಾಯ್ತು.  ಈ ಘಟನೆಯಲ್ಲಿ ಡಿಎಸ್‌ಪಿ ಅವರ ಸಮಯ ಪ್ರಜ್ಞೆಯನ್ನು ಸಿಎಂ ಮಮತಾ ಬ್ಯಾನರ್ಜಿ ಕೊಂಡಾಡಿದ್ದಾರೆ.   ಎಲ್ಲರೂ ಸೇರಿ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ ಎಂದು ಅವರು ಹೇಳಿದ್ದಾರೆ.  ಅಲ್ಲದೇ ಆತ ಹೀಗೆ ಶಾಲಾ ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡಿರುವುದರ ಹಿಂದೆ ಏನಾದರೂ ಪಿತೂರಿ ಇದೆಯೇ ಈ ಬಗ್ಗೆ ಸಮಗ್ರವಾಗಿ ತನಿಖೆ ಮಾಡಿ ಎಂದು ಮಮತಾ ಬ್ಯಾನರ್ಜಿ ಆದೇಶಿಸಿದ್ದಾರೆ. 

ನಾಪತ್ತೆಯಾಗಿರುವ ಯೋಧ ನಕ್ಸಲರ ಒತ್ತೆಯಾಳು? ಬಿಡಿಸಿಕೊಡುವಂತೆ ಪ್ರಧಾನಿಗೆ ಪುತ್ರಿ ಮನವಿ!

ಈ ಕೃತ್ಯವೆಸಗಿದ ಬಲ್ಲವ್‌ಗೆ ಅಪರಾಧದ ಹಿನ್ನೆಲೆ ಇದ್ದು,  ಕಳೆದ ವರ್ಷ ಜೂನ್‌ನಲ್ಲಿ ಫೇಸ್‌ಬುಕ್‌ನಲ್ಲಿ (Facebook) ಪೊಲೀಸರಿಗೆ ಬೆದರಿಕೆಯೊಡ್ಡಿದ ಕಾರಣಕ್ಕೆ ಈತನನ್ನು ಬಂಧಿಸಲಾಗಿತ್ತು. 

click me!