ಹಣ ರೀಫಂಡ್ ಮಾಡಿಸಿಕೊಳ್ಳೋದು ಹೇಗೆ ಎಂದು ಗೂಗಲ್ ಮಾಡಿ 5 ಲಕ್ಷ ಕಳಕೊಂಡ ಯುವಕ

By Anusha Kb  |  First Published Apr 26, 2023, 5:54 PM IST

ಯುವಕನೋರ್ವ ಆನ್‌ಲೈನ್ ವಂಚನೆಗೊಳಗಾಗಿ ಬರೋಬ್ಬರಿ 5 ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದಾನೆ.  ಮಹಾರಾಷ್ಟ್ರದ ಥಾಣೆಯ ಯುವಕನೋರ್ವ ಆಫ್ರಿಕಾದ ದೇಶವೊಂದಕ್ಕೆ ಪ್ರವಾಸ ಹೋಗಲು ಟಿಕೆಟ್ ಬುಕ್ ಮಾಡಿ ನಂತರ ಪ್ರವಾಸ ಕ್ಯಾನ್ಸಲ್ ಮಾಡಿದ್ದ. 


ಥಾಣೆ, ಮಹಾರಾಷ್ಟ್ರ: ಯುವಕನೋರ್ವ ಆನ್‌ಲೈನ್ ವಂಚನೆಗೊಳಗಾಗಿ ಬರೋಬ್ಬರಿ 5 ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದಾನೆ.  ಮಹಾರಾಷ್ಟ್ರದ ಥಾಣೆಯ ಯುವಕನೋರ್ವ ಆಫ್ರಿಕಾದ ದೇಶವೊಂದಕ್ಕೆ ಪ್ರವಾಸ ಹೋಗಲು ಟಿಕೆಟ್ ಬುಕ್ ಮಾಡಿ ನಂತರ ಪ್ರವಾಸ ಕ್ಯಾನ್ಸಲ್ ಮಾಡಿದ್ದಾನೆ. ಪ್ರವಾಸ ಕ್ಯಾನ್ಸಲ್ ಆದ ಹಿನ್ನೆಲೆಯಲ್ಲಿ ಬುಕ್ ಮಾಡಿದ ವಿಮಾನ ಟಿಕೆಟ್‌ಗಳನ್ನು ಕೂಡ ಕ್ಯಾನ್ಸಲ್ ಮಾಡಿದ್ದು, ಇದರಿಂದ ಆತನಿಗೆ ಹಣ ರೀಫಂಡ್ ಆಗಬೇಕಿತ್ತು. ಆದರೆ ರೀಫಂಡ್ ಮಾಡಿಸಿಕೊಳ್ಳುವುದು ಹೇಗೆ ಎಂದು ಗೂಗಲ್‌ನಲ್ಲಿ ಆತ ಹುಡುಕಾಟ ನಡೆಸಿದ್ದಾನೆ. ಈ ವೇಳೆ ಸಿಕ್ಕ ಸರ್ಚ್ ರಿಸಲ್ಟ್‌  ಬಳಸಿಕೊಂಡು ಆತ ರೀಫಂಡ್‌ಗೆ ಯತ್ನಿಸಿದ್ದು, ಮತ್ತೆ 5 ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದಾನೆ. 

ಆತ ನೀಡಿದ ದೂರಿನಲ್ಲಿ ಯುವಕ ಹಾಗೂ ಆತನ ಸ್ನೇಹಿತ ಕೀನ್ಯಾ (Kenya) ದೇಶದ ರಾಜಧಾನಿ ನೈರೋಬಿಗೆ ತೆರಳಲು ಯೋಜನೆ ರೂಪಿಸಿದ್ದರು. ನೈರೋಬಿಯ (Nairobi)  ಮಂಬಸಾ (Mombasa) ನಗರಕ್ಕೆ ಭೇಟಿ ನೀಡಲು ನಿರ್ಧರಿಸಿ  ಏಪ್ರಿಲ್ 29 ಹಾಗೂ ಮೇ 5 ರ ಟಿಕೆಟ್ ಬುಕ್ ಮಾಡಿದ್ದಾರೆ. ಇದಕ್ಕಾಗಿ 1.46 ಲಕ್ಷ ರೂಪಾಯಿಯನ್ನು ಅವರು ಪಾವತಿಸಿದ್ದಾರೆ. ಆದರೆ ನಂತರ ಇವರ ಯೋಜನೆ ಬದಲಾಗಿದ್ದು, ಟಿಕೆಟ್ ಕ್ಯಾನ್ಸಲ್ ಮಾಡಲು ನಿರ್ಧರಿಸಿ ಟಿಕೆಟ್ ಹಣ ರೀಫಂಡ್ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ.  ಅದರಂತೆ ವೆಬ್‌ಸೈಟೊಂದರಲ್ಲಿ ಇದ್ದ ಫಾರ್ಮ್‌ನ್ನು ಏಪ್ರಿಲ್ 11 ರಂದು ಇವರು ತುಂಬಿದ್ದಾರೆ. 

Tap to resize

Latest Videos

ಪ್ಲೀಸ್, ಇಂಥ ಆಮಿಷಗಳಿಗೆ ಬಲಿಯಾಗ್ಬೇಡಿ; ಪಾರ್ಟ್ ಟೈಮ್ ಜಾಬ್ ಲಿಂಕ್ ಕ್ಲಿಕ್ ಮಾಡಿ 7.23ಲಕ್ಷ ಕಳೆದುಕೊಂಡ ಯುವತಿ

ಆದರೆ  ಏರ್‌ಲೈನ್ಸ್‌ನ ಸಹಾಯವಾಣಿ  ಸಂಖ್ಯೆ ಕೈಗೆ ಸಿಗದ ಹಿನ್ನೆಲೆಯಲ್ಲಿ ಅವರು  ಗೂಗಲ್‌ನಲ್ಲಿ ಸರ್ಚ್‌ ಮಾಡಿದ್ದು, ಅಲ್ಲಿದ್ದ ನಂಬರ್ ನೋಡಿದ್ದಾರೆ. ಈ ವೇಳೆ ದೂರವಾಣಿಯಲ್ಲಿ ಆ ಬದಿಯಿಂದ ಮಾತನಾಡಿದವರು ರೀಫಂಡ್ ಮಾಡುವುದಕ್ಕಾಗಿ ನಮ್ಮ ತಾಂತ್ರಿಕ ತಂಡ (technical team) ನಿಮ್ಮನ್ನು ಸಂಪರ್ಕ ಮಾಡಲಿದೆ ಎಂದು ಹೇಳಿದ್ದಾರೆ.  

ಇದಾದ ಬಳಿಕ ದೂರುದಾರಿಗೆ ಕರೆಯೊಂದು ಬಂದಿದ್ದು, 1.28 ಲಕ್ಷವನ್ನು ಮರಳಿಸುವುದಾಗಿ ಹೇಳಿದ್ದಾರೆ. ಅಲ್ಲದೇ  ಇದಕ್ಕಾಗಿ ಆಪ್‌ (app) ವೊಂದನ್ನು ಡೌನ್‌ಲೋಡ್ ಮಾಡುವಂತೆ ಹೇಳಿದ್ದಾರೆ.  ಆದರಂತೆ ದೂರುದಾರರು ಆಪ್ ಡೌನ್‌ಲೋಡ್ ಮಾಡಿದ್ದು ಇದಾದ ಬಳಿಕ ಫೋನ್‌ನ ಸಂಪೂರ್ಣ ಆಕ್ಸೆಸ್ ಅನ್ನು ಸೈಬರ್ ಕಳ್ಳರು ಪಡೆದಿದ್ದು, ಆತನ ಖಾತೆಯಲ್ಲಿದ್ದ 4.8 ಲಕ್ಷವನ್ನು ಕಬಳಿಸಿದ್ದಾರೆ. ದೂರುದಾರರ ದೂರಿನ ಮೇರೆಗೆ ಛಿತಲ್ಸರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

67 ಕೋಟಿ ಜನರ ದತ್ತಾಂಶ ಕದ್ದು ಮಾರಾಟ: ಸೈಬರ್ ಕಳ್ಳನ ಬಂಧನ

click me!