ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿಲ್ಲ ಎಂದು ಅಪ್ರಾಪ್ತೆಯ ಕೊಲೆ

By Anusha KbFirst Published Jun 20, 2022, 3:15 PM IST
Highlights

ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಕಳುಹಿಸಿದ ಫ್ರೆಂಡ್‌ ರಿಕ್ವೆಸ್ಟ್‌ ಅನ್ನು ಸ್ವೀಕರಿಸಲಿಲ್ಲ ಎಂದು ಸಿಟ್ಟಿಗೆದ್ದ ಯುವಕನೋರ್ವ ಅಪ್ರಾಪ್ತ ಯುವತಿಯನ್ನು ಕೊಲೆ ಮಾಡಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಲಕ್ನೋ: ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಕಳುಹಿಸಿದ ಫ್ರೆಂಡ್‌ ರಿಕ್ವೆಸ್ಟ್‌ ಅನ್ನು ಸ್ವೀಕರಿಸಲಿಲ್ಲ ಎಂದು ಸಿಟ್ಟಿಗೆದ್ದ ಯುವಕನೋರ್ವ ಅಪ್ರಾಪ್ತ ಯುವತಿಯನ್ನು ಕೊಲೆ ಮಾಡಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಮದುವೆ ಕಾಗದ (wedding card) ನೀಡುವ ನೆಪವೊಡ್ಡಿ ಬಾಲಕಿಯ ಮನೆಗೆ ಬಂದ ಯುವಕ ಅದನ್ನು ಆಕೆ ಸ್ವೀಕರಿಸಲು ಬಂದಾಗ ಅವಳ ಮೇಲೆ ದಾಳಿ ನಡೆಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ತನ್ನ ಸ್ನೇಹದ ಮನವಿಯನ್ನು ಸ್ವೀಕರಿಸಿಲ್ಲ ಎಂಬ ಸಣ್ಣ ಕ್ಷುಲ್ಲಕ ಕಾರಣಕ್ಕೆ  16 ವರ್ಷ ಪ್ರಾಯದ ಬಾಲಕಿಯನ್ನು ಯುವಕ ಕೊಲೆ ಮಾಡಿದ್ದಾನೆ ಅಲ್ಲದೇ ಆಕೆಯ ತಾಯಿಯ ಮೇಲೆ ಕೂಡ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಮಾಡಿದ ಯುವಕನನ್ನು ರವಿ ಎಂದು ಗುರುತಿಸಲಾಗಿದೆ. 

ಆರೋಪಿ ರವಿ ಮುಜಾಫನಗರದ (Muzaffanagar) ನಿವಾಸಿಯಾಗಿದ್ದಾನೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ ಮರ್ತಾಂಡ್‌ ಪ್ರಕಾಶ್ ಸಿಂಗ್ (Martand Prakash Singh) ಹೇಳಿದ್ದಾರೆ. ಬಾಲಕಿಯ ತಂದೆ ತೇಜ್‌ವೀರ್ ಸಿಂಗ್ (Tejveer Singh) ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.  ತಂದೆ ತೇಜ್‌ವೀರ್ ಸಿಂಗ್ (Tejveer Singh) ಫರಿದಾಬಾದ್‌ (Faridabad factory) ಫ್ಯಾಕ್ಟರಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸ್ಟೇಷನ್‌ ಹೌಸ್ ಅಧಿಕಾರಿ ಅಜಯ್ ಕೌಶಲ್ (Ajay Kaushal) ಹೇಳಿದ್ದಾರೆ. ಹೆದ್ದಾರಿ ಪೊಲೀಸ್‌ ಸ್ಟೇಷನ್ ಸರಹದ್ದಿನಲ್ಲಿ ಬರುವ ನಗ್ಲಾ ಬೊಹ್ರಾ ಗ್ರಾಮದಲ್ಲಿ (Nagla Bohra village) ಭಾನುವಾರ ಈ ಘಟನೆ ನಡೆದಿದೆ. ಮದುವೆ ಕಾಗದ ನೀಡುವ ನೆಪದಲ್ಲಿ ಮನೆಗೆ ಬಂದ ಆರೋಪಿ ರವಿ ಈ ಕೃತ್ಯವೆಸಗಿದ್ದಾನೆ. 

ಗಡಿ ಮೀರಿದ ಪ್ರೀತಿ: ಫೇಸ್‌ಬುಕ್‌ ಗೆಳೆಯನ ಭೇಟಿಗೆ ಬಾಂಗ್ಲಾದಿಂದ ಭಾರತಕ್ಕೆ ಈಜಿದ ಯುವತಿ

ಕಾಗದ ತೆಗೆದುಕೊಂಡು ಬಂದ ರವಿ (Ravi) ಬಳಿ ಕಾಗದ ಸ್ವೀಕರಿಸಲು ಬಾಲಕಿ ಬಂದಾಗ ಆತ ಚಾಕುವಿನಿಂದ ಆಕೆಗೆ ಇರಿದಿದ್ದಾನೆ ಈ ವೇಳೆ ಆಕೆಯ ತಾಯಿ ಸುನೀತಾ ರಕ್ಷಣೆಗೆ ಬಂದಿದ್ದು, ಈ ವೇಳೆ ಬಾಲಕಿಯ ತಾಯಿಯ ಮೇಲೆಯೂ ಆತ ಹಲ್ಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಆತ ತನ್ನನ್ನು ತಾನು ಕೊಂದು ಕೊಳ್ಳಲು ಬಯಸಿದ್ದಾನೆ. ಇತ್ತ ಬಾಲಕಿಯ ತಂದೆ ತೇಜ್‌ವೀರ್ ಸಿಂಗ್ ಈ ಬಗ್ಗೆ ಪೊಲೀಸರಿಗೆ ನೀಡಿದ ಮಾಹಿತಿಯಲ್ಲಿ ತಮ್ಮ ಪುತ್ರಿಗೆ ಆರೋಪಿ ರವಿ ಫೇಸ್‌ಬುಕ್‌ನಲ್ಲಿ (Facebook)  ಫ್ರೆಂಡ್ ರಿಕ್ವೆಸ್ಟ್ (friend request) ಕಳುಹಿಸಿದ್ದ. ಇದನ್ನು ನಮ್ಮ ಪುತ್ರಿ ಸ್ವೀಕರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಆರೋಪಿ ಈ ಕೃತ್ಯವೆಸಗಿದ್ದಾನೆ ಎಂದು ಹೇಳಿದ್ದಾರೆ. ಬಾಲಕಿಯ ತಾಯಿ ಸುನೀತಾ (Sunita) ಹಾಗೂ ಆರೋಪಿ ರವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಧರ್ಮೆಂದ್ರ ಚೌಹಾನ್ (Dharmendra Chauhan) ಹೇಳಿದ್ದಾರೆ. 

 

ಒಟ್ಟಿನಲ್ಲಿ ಯುವಕನ ಅತಿರೇಕದ ವರ್ತನೆಗೆ ಬದುಕಿ ಬಾಳಬೇಕಿದ್ದ ಪುಟ್ಟ ಬಾಲಕಿಯೊಬ್ಬಳು ಸಾವಿನ ಮನೆ ಸೇರಿದ್ದಾಳೆ.

ಕೋಲ್ಕತ್ತಾದ ಹುಡುಗಿಯೊಂದಿಗೆ ಫೇಸ್‌ಬುಕ್‌ನಲ್ಲಿ 6 ತಿಂಗಳ ಸ್ನೇಹದ ಬಳಿಕ ಯುವಕನೋರ್ವ ತನ್ನ ಮನೆಯಿಂದ 5 ಲಕ್ಷ ರೂಪಾಯಿಯೊಂದಿಗೆ ಹುಡುಗಿಯನ್ನು ಭೇಟಿಯಾಗಲು ಕೋಲ್ಕತ್ತಾ ತಲುಪಿದ ಘಟನೆ ನಡೆದಿತ್ತು. ಇತ್ತ ಯುವಕ ನಾಪತ್ತೆಯಾಗಿರುವ ಬಗ್ಗೆ ಆತನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಇದಾದ ನಂತರ ಸೈಬರ್ ಸೆಲ್ ಸಹಾಯದಿಂದ ಆತನಿದ್ದ ಸ್ಥಳವನ್ನು ಪತ್ತೆಹಚ್ಚಿದ ರೇವಾ ಪೊಲೀಸರು ಕೋಲ್ಕತ್ತಾಗೆ ತೆರಳಿ ಯುವಕನನ್ನು ವಶಕ್ಕೆ ಪಡೆದಿದ್ದರು. ಅಲ್ಲದೇ ಪೊಲೀಸರು ಯುವಕನ ಬಳಿ ಇದ್ದ ಐದು ಲಕ್ಷ ರೂಪಾಯಿ ಮೊತ್ತವನ್ನೂ ವಶಕ್ಕೆ ಪಡೆದಿದ್ದರು.

ಫೇಸ್‌ಬುಕ್‌ನಲ್ಲರಳಿದ ಪ್ರೀತಿ, ಮನೆಯಲ್ಲಿದ್ದ 5 ಲಕ್ಷದ ಜೊತೆ ಪ್ರಿಯತಮೆ ನೋಡಲು ಹೋದ ಸಚಿನ್, ಮುಂದಾಗಿದ್ದೇನು?
ಮಧ್ಯಪ್ರದೇಶದ ರೇವಾದ ಲಕ್ಷ್ಮಣ್ ಬಾಗ್ ನಿವಾಸಿ ಸಚಿನ್ ಮಿಶ್ರಾ ಮೇ 25 ರಂದು ಮನೆಯಿಂದ ನಾಪತ್ತೆಯಾಗಿದ್ದರು. ಮನೆಯಿಂದ ತೆರಳುವ ವೇಳೆ ಸಚಿನ್ ಮನೆಯಲ್ಲಿದ್ದ 5 ಲಕ್ಷ ರೂಪಾಯಿ ತೆಗೆದುಕೊಂಡು ಹೋಗಿದ್ದ. ಈ ವೇಳೆ ಸಚಿನ್ ಕುಟುಂಬದವರು ಮನೆಯಿಂದ ಹೊರ ಹೋಗಿದ್ದರು. ಮನೆಯಲ್ಲಿ ಸಚಿನ್ ಕಾಣದಿದ್ದಾಗ ಮನೆಯವರು ಹುಡುಕಾಟ ಆರಂಭಿಸಿದ್ದಾರೆ. ಸಿಗದಿದ್ದಾಗ  ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಸೈಬರ್ ಸೆಲ್ ಸಹಾಯದಿಂದ ಪೊಲೀಸರು ಕೋಲ್ಕತ್ತಾದಲ್ಲಿ ಸಚಿನ್ ಇರುವ ಸ್ಥಳವನ್ನು ಪತ್ತೆಹಚ್ಚಿದರು. ಎಸ್ಪಿ ನವನೀತ್ ಭಾಸಿನ್ ಸೂಚನೆ ಮೇರೆಗೆ ಪೊಲೀಸ್ ತಂಡ ಕೋಲ್ಕತ್ತಾಗೆ ತೆರಳಿ ಸಚಿನ್‌ಗಾಗಿ ಹುಡುಕಾಟ ನಡೆಸಿದ್ದಾರೆ. 

click me!