ಪತಿಯ ಸಾವಿನ ನಂತರ ದು:ಖದ ಬಗ್ಗೆ ಪುಸ್ತಕ ಬರೆದ ಮಹಿಳೆ: ಕೊಲೆ ಆರೋಪದ ಮೇಲೆ ಬಂಧಿಸಿದ ಪೊಲೀಸರು!

By BK AshwinFirst Published May 10, 2023, 2:33 PM IST
Highlights

ಕೌರಿ ರಿಚಿನ್ಸ್ ಅವರನ್ನು ಸೋಮವಾರ ಉತಾಹ್‌ನಲ್ಲಿ ಬಂಧಿಸಲಾಗಿದ್ದು, ಪತಿಗೆ ವಿಷ ಹಾಕಿದ್ದಾರೆ ಎಂಬ ಆರೋಪ ಹೊರಿಸಲಾಗಿದೆ.

ವಾಷಿಂಗ್ಟನ್‌ (ಮೇ 10, 2023): ಕಳೆದ ವರ್ಷ ಪತಿಯನ್ನು ಕಳೆದುಕೊಂಡ ಮಹಿಳೆಯೊಬ್ಬರು ಮಕ್ಕಳ ಪುಸ್ತಕ ಬರೆದಿದ್ದಾರೆ. ತಮ್ಮ ತಂದೆಯನ್ನು ಕಳೆದುಕೊಂಡಿರುವ ದು:ಖವನ್ನು ಕಳೆದುಕೊಳ್ಳಲು ಇದು ಸಹಾಯ ಮಾಡುತ್ತದೆ ಎಂಬ ಭರವಸೆಯೊಂದಿಗೆ ಬುಕ್‌ ಬರೆದಿದ್ರು. ಆದರೆ, ಆ ಮಹಿಳೆ ಮೇಲೆ ಈಗ ಕೊಲೆಯ ಆರೋಪ ಹೊರಿಸಲಾಗಿದೆ. 

ಕೌರಿ ರಿಚಿನ್ಸ್ ಅವರನ್ನು ಸೋಮವಾರ ಉತಾಹ್‌ನಲ್ಲಿ ಬಂಧಿಸಲಾಗಿದ್ದು, ಪತಿಗೆ ವಿಷ ಹಾಕಿದ್ದಾರೆ ಎಂಬ ಆರೋಪ ಹೊರಿಸಲಾಗಿದೆ. ಪಾರ್ಕ್ ಸಿಟಿ ಬಳಿಯ ಸಣ್ಣ ಪರ್ವತ ಪಟ್ಟಣವಾದ ಕಾಮಾಸ್‌ನಲ್ಲಿರುವ ಅವರ ಮನೆಯಲ್ಲಿ ತಮ್ಮ ಪತಿಗೆ ಮಾರಕ ಪ್ರಮಾಣದ ಫೆಂಟನಿಲ್‌ ಅನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಇದಕ್ಕೆ ಸಾಕ್ಷಿಯೂ ಸಿಕ್ಕಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ದಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಇದನ್ನು ಓದಿ: ಅನ್ನ ಮಾಡ್ಲಿಲ್ಲ ಅಂತ ಪತ್ನಿ ಜತೆ ಜಗಳವಾಡಿ ಕೊಂದೇ ಬಿಟ್ಟ ಪಾಪಿ ಪತಿ!

ತನ್ನ ಪತಿ ಎರಿಕ್ ರಿಚಿನ್ಸ್ ಅವರ ದೇಹ ತುಂಬಾ ತಣ್ಣಗಾಗಿದೆ ಎಂದು ರಿಚಿನ್ಸ್ ಮಾರ್ಚ್ 2022 ರ ಮಧ್ಯರಾತ್ರಿ ಅಧಿಕಾರಿಗಳಿಗೆ ಕರೆ ಮಾಡಿದ್ರು. ಮೂರು ಗಂಡು ಮಕ್ಕಳ ತಾಯಿಯಾಗಿರೋ ಈಕೆ ಮನೆ ಮಾರಾಟ ಮಾಡಿದ್ದಕ್ಕೆ ಸೆಲಬ್ರೇಟ್‌ ಮಾಡಲು ಮಿಶ್ರಿತ ವೋಡ್ಕಾ ಕುಡಿದಿದ್ದೆವು ಎಂದು ಅಧಿಕಾರಿಗಳಿಗೆ ತಿಳಿಸಿದರು. ನಂತರ ಮಲಗುವ ಕೋಣೆಯಲ್ಲಿ ಮಲಗಲು ತಮ್ಮ ಮಕ್ಕಳನ್ನು ಸಮಾಧಾನಪಡಿಸಲು ಹೋದೆ. ರೂಮಿಂದ ವಾಪಸ್‌ ಬಂದಾಗ ಪತಿ ಪ್ರತಿಕ್ರಿಯಿಸದಿರುವುದನ್ನು ಕಂಡು 911 ಗೆ ಕರೆ ಮಾಡಿದೆ ಎಂದು ತಿಳಿಸಿದ್ದಾರೆ.

ಇನ್ನು, ಶವಪರೀಕ್ಷೆ ಮತ್ತು ವಿಷಶಾಸ್ತ್ರದ ವರದಿ ವೇಳೆ  39 ವರ್ಷದ ಎರಿಕ್, ಫೆಂಟಾನಿಲ್‌ನ ಐದು ಪಟ್ಟು ಮಾರಕ ಡೋಸೇಜ್ ಅನ್ನು ಸೇವಿಸಿದ್ದಾರೆ. ಮತ್ತು ಈ ಡ್ರಗ್‌ ಕಾನೂನುಬಾಹಿರವಾಗಿದೆ ಹಾಗೂ ಮೆಡಿಕಲ್‌ ಗ್ರೇಡ್‌ ಅಲ್ಲ ಎಂದು ನಿರ್ಧರಿಸಲಾಗಿದೆ.   ಕೊಲೆಯ ಆರೋಪದ ಜೊತೆಗೆ, ರಿಚಿನ್ಸ್ GHB ಎಂಬ ಡ್ರಗ್ಸ್ ಹೊಂದಿರುವ ಆರೋಪವನ್ನು ಸಹ ಎದುರಿಸುತ್ತಿದ್ದಾರೆ.  ಡ್ಯಾನ್ಸ್ ಕ್ಲಬ್‌ಗಳು ಸೇರಿದಂತೆ ಮನರಂಜನಾ ಸೆಟ್ಟಿಂಗ್‌ಗಳಲ್ಲಿ ಆಗಾಗ್ಗೆ ಈ ನಾರ್ಕೋಲೆಪ್ಸಿ ಡ್ರಗ್ಸ್‌ ಅನ್ನು ಬಳಸಲಾಗುತ್ತದೆ. 

ಇದನ್ನೂ ಓದಿ: ಶ್ರದ್ಧಾ ವಾಕರ್ ಹತ್ಯೆ ಕೇಸ್‌: ತಾನು ನಿರಪರಾಧಿ, ವಿಚಾರಣೆ ಎದುರಿಸಲು ಸಿದ್ಧ ಎಂದ ಅಫ್ತಾಬ್‌ ಪೂನಾವಾಲ

ಇನ್ನು, ರಿಚಿನ್ಸ್ ಸ್ಥಳೀಯ ಟಿವಿಯಲ್ಲಿ ಕಾಣಿಸಿಕೊಂಡ 2 ತಿಂಗಳ ನಂತರ ನೀವು ನನ್ನೊಂದಿಗೆ ಇದ್ದೀರಾ? ಎಂಬ ಮಕ್ಕಳಿಗೆ ಬರೆದ ಫೋಟೋ ಬುಕ್‌ ಅನ್ನು ಪ್ರೊಮೋಟ್‌ ಮಾಟಿದ ಬಳಿಕ ಈ ಕೇಸ್‌ ದಾಖಲಿಸಲಾಗಿದೆ. ಅಧಿಕಾರಿಗಳೊಂದಿಗಿನ ಸಂವಾದ ಹಾಗೂ ಫೆಂಟಾನಿಲ್ ಅನ್ನು ಮಾರಾಟ ಮಾಡಿರುವುದಾಗಿ ಹೇಳುವ ವ್ಯಕ್ತಿಯೊಬ್ಬರ ಹೇಳಿಕೆ ದಾಖಲಿಸಿ ಕೊಲೆ ಆಋಓಪ ಹೊರಿಸಲಾಗಿದೆ. 

ರಿಚಿನ್ಸ್ ತನ್ನ ಮಗನನ್ನು ಪರೀಕ್ಷಿಸಲು ಹೋದಾಗ ತನ್ನ ಹಾಸಿಗೆಯ ಪಕ್ಕದಲ್ಲಿ ತನ್ನ ಫೋನ್ ಅನ್ನು ಚಾರ್ಜ್‌ಗೆ ಹಾಕಿದ್ದಾಗಿ ಹೇಳಿದ್ದಳು. ಆದರೆ ಅವರು ತಮ್ಮ ಮಗನ ಮಲಗುವ ಕೋಣೆಗೆ ಹೋಗಿದ್ದ ಮತ್ತು 911 ಕರೆ ಮಾಡಿದ್ದಾರೆ ಎಂದು ಹೇಳುವ ಸಮಯದ ನಡುವೆ ಫೋನ್ ಅನ್ನು ಲಾಕ್ ಮಾಡಲಾಗಿದೆ ಮತ್ತು "ಹಲವು ಬಾರಿ" ಅನ್ಲಾಕ್ ಮಾಡಲಾಗಿದೆ ಎಂಬುದನ್ನು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ. ಆ ಸಮಯದಲ್ಲಿ ಮಹಿಳೆ ಮೆಸೇಜ್‌ಗಳನ್ನು ಕಳಿಸಿದ್ದಳು ಮತ್ತು ಸ್ವೀಕರಿಸಿದ್ದಳು. ನಂತರ, ಆ ಮೆಸೇಜ್‌ಗಳನ್ನು ಡಿಲೀಟ್‌ ಮಾಡಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಇದನ್ನೂ ಓದಿ: ಪ್ಲಾಸ್ಟಿಕ್ ಗನ್ ಬಳಸಿ ಚಿನ್ನಾಭರಣಗಳನ್ನು ಲೂಟಿ ಮಾಡಿದ 16 ವರ್ಷದ ಬಾಲಕ!

ರಿಚಿನ್ಸ್ ಅವರ ವಕೀಲರಾದ ಸ್ಕೈ ಲಜಾರೊ ಅವರು ಕೊಲೆ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದು, ಬಂಧನ ವಿಚಾರಣೆಯನ್ನು ಮೇ 19 ಕ್ಕೆ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ವೃದ್ಧನ ಮೃತದೇಹ 2 ವರ್ಷ ಫ್ರೀಜರ್‌ನಲ್ಲಿಟ್ಟ: ಪಿಂಚಣಿ ಹಣವನ್ನು ಶಾಪಿಂಗ್‌ಗೆ ಬಳಸ್ತಿದ್ದ ಪಾಪಿ!

click me!