ಚುನಾವಣಾ ಮತಯಂತ್ರಗಳು, ಕಾರು ಒಡೆದು ಹಾಕಿದ ಗ್ರಾಮಸ್ಥರು: ಬಸವನ ಬಾಗೇವಾಡಿಯ 23 ಜನರ ಬಂಧನ

By Sathish Kumar KH  |  First Published May 10, 2023, 1:30 PM IST

ಮತದಾನ ಮಾಡುವುಕ್ಕಾಗಿ ತರಲಾಗಿದ್ದ  ಮತಯಂತ್ರಗಳನ್ನ ಒಡೆದು ಪುಡಿಪುಡಿ ಮಾಡಿದ ಘಟನೆ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದಲ್ಲಿ ನಡೆದಿದೆ. 


ವಿಜಯಪುರ (ಮೇ 10): ಮತದಾನ ಮಾಡುವುಕ್ಕಾಗಿ ತರಲಾಗಿದ್ದ  ಮತಯಂತ್ರಗಳನ್ನ ಒಡೆದು ಪುಡಿಪುಡಿ ಮಾಡಿದ ಘಟನೆ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದಲ್ಲಿ ನಡೆದಿದೆ. 

ಇವಿಎಂ ಮಶೀನ್ ಹಾಗೂ ವಿವಿಪ್ಯಾಟ್ ಮಶೀನ್‌ಗಳನ್ನ ಒಡೆದು ಹಾಕಿದ ಗ್ರಾಮಸ್ಥರು. ಬಿಸನಾಳ, ಡೋಣುರ ಗ್ರಾಮದಿಂದ ವಿಜಯಪುರಕ್ಕೆ ವಾಪಸ್ ತೆಗೆದುಕೊಂಡು ಬರ್ತಿದ್ದಾಗ ಘಟನೆ ನಡೆದಿದೆ. ಅರ್ಧಕ್ಕೆ ಮತದಾನ ಕಾರ್ಯ ಸ್ಥಗಿತಗೊಳಿಸಿ ವಾಪಸ್ ಕೊಂಡೊಯ್ಯಲಾಗ್ತಿದೆ ಎಂದು ತಪ್ಪು ಭಾವಿಸಿ ಮತ ಯಂತ್ರ ಒಡೆದು ಹಾಕಿದ ಗ್ರಾಮಸ್ಥರು. ಅಧಿಕಾರಿಗಳ ಕಾರನ್ನು ಜಖಂಗೊಳಿಸಿದ ಗ್ರಾಮಸ್ಥರು. ಸಿಬ್ಬಂದಿಗಳಿಗು ಥಳಿತ, ಮಸಬಿನಾಳ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.

Tap to resize

Latest Videos

undefined

ಮತದಾನ ಮಾಡಲು ಬಂದವರು ಮಸಣ ಸೇರಿದರು: ಹೃದಯಾಘಾತಕ್ಕೆ ಇಬ್ಬರು ಬಲಿ

ಹೆಚ್ಚುವರಿ ಮತಯಂತ್ರಗಳು: ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಹಾಗೂ ಇಂತಿಷ್ಟು ಮತಗಟ್ಟೆಗಳಿಗೆ ಅನುಕೂಲ ಆಗುವಂತೆ ಚುನಾವಣಾ ಅಧಿಕಾರಿಗಳು ಹೆಚ್ಚುವರಿಯಾಗಿ ಮತಯಂತ್ರಗಳಾದ ವಿವಿ ಪ್ಯಾಟ್‌, ಬ್ಯಾಲೆಟ್‌ ಯೂನಿಟ್‌ ಹಾಗೂ ಕಂಟ್ರೋಲ್‌ ಯೂನಿಟ್‌ ಸೇರಿದಂತೆ ಎಲ್ಲ ಸಂಗ್ರಹಣೆ ಮಾಡಿ ಇಟ್ಟುಕೊಂಡಿದ್ದರು. ಯಾವುದೇ ಮತಗಟ್ಟೆಯಲ್ಲಿ ಮತಯಂತ್ರಗಳು ಕೆಟ್ಟು ಹೋದಲ್ಲಿ ಅದಕ್ಕೆ ಬದಲಿಯಾಗಿ ಹೆಚ್ಚುವರಿ ಸಂಗ್ರಹಣೆ ಮಾಡಿಟ್ಟುಕೊಂಡಿದ್ದ ಯಂತ್ರಗಳನ್ನು ಬಳಕೆ ಮಾಡಲಾಗುತ್ತಿತ್ತು.

ಚುನಾವಣಾ ಅಧಿಕಾರಿಗಳಿಗೂ ಥಳಿತ: ಇನ್ನು ಮಸಬಿನಾಳ ಗ್ರಾಮದಲ್ಲಿ ಚುನಾವಣಾ ಅಧಿಕಾರಿಗಳು ಮತಯಂತ್ರಗಳನ್ನು ಅರ್ಧಕ್ಕೆ ತೆಗೆದುಕೊಂಡು ಹೋಗುತ್ತಿರುವುದನ್ನು ಕಂಡು ಗ್ರಾಮಸ್ಥರು ಚುನಾವಣಾ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ. ಆದರೆ, ಚುನಾವಣಾ ಅಧಿಕಾರಿಗಳು ಇವು ಹೆಚ್ಚುವರಿ ಯಂತ್ರಗಳು ಎಂದು ಹೇಳಿದರೂ ಕೇಳದೇ, ಈ ಎಲ್ಲ ಮತಯಂತ್ರಗಳನ್ನು ಅರ್ಧಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಗಲಾಟೆ ಆರಂಭಿಸಿದ್ದಾರೆ. ವಾಗ್ವಾದ ಮಾಡಿ ಅಧಿಕಾರಿಗಳನ್ನು ಥಳಿಸಿ ಮತಯಂತ್ರಗಳನ್ನು ಕಿತ್ತುಕೊಂಡಿದ್ದಾರೆ. ಗ್ರಾಮಸ್ಥರೆಲ್ಲರೂ ಸೇರಿ, ಮತಯಂತ್ರಗಳನ್ನು ಒಡೆದು ಹಾಕಿದ್ದಾರೆ. ಇನ್ನು ಚುನಾವಣಾ ಅಧಿಕಾರಿಗಳ ಕಾರನ್ನು ಕೂಡ ಒಡೆದು ಹಾಕಿ, ಕಾರನ್ನು ಉರುಳಿಸಿ ಹಾಕಿದ್ದಾರೆ.

ಕಾರಿನಲ್ಲಿ ಯಂತ್ರ ತೆಗೆದಯಕೊಂಡು ಹೋಗುವಾಗ ಘಟನೆ: ಇನ್ನು ಚುನಾವಣಾ ಅಧಿಕಾರಿಗಳು ಇವಿಎಂ ಮಶೀನ್‌ಗಳನ್ನು ಕಾರಿನಲ್ಲಿ ಇಟ್ಟುಕೊಂಡು ಓಡಾಡುವುದನ್ನು ನೋಡಿದ  ವಾಪಸ್ ತರೋದನ್ನ ಗಮನಿಸಿ ಸಿಬ್ಬಂದಿಗಳನ್ನ ಪ್ರಶ್ನಿಸಿದ ಜನರು, ತಮ್ಮ ಅಭ್ಯರ್ಥಿಗಳನ್ನು ಸೋಲಿಸಲು ಚುನಾವಣಾ ಅಧಿಕಾರಿಗಳು ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ತಪ್ಪು ಭಾವಿಸಿ ಇವಿಎಂ, ವಿವಿಪ್ಯಾಟ್ ‌ಮಶೀನ್‌ಗನ್ನು ಒಡೆದು ಹಾಕಿದ್ದಾರೆ. ಇನ್ನು ಚುನಾವಣಾ ಸಿಬ್ಬಂದಿ ಕೂಡ ಸರಿಯಾಗಿ ಉತ್ತರಿಸಿಲ್ಲ ಎಂದು ತಿಳಿದುಬಂದಿದೆ.

ಮತದಾನಕ್ಕೆ ತೊಂದರೆಯಾಗಿಲ್ಲ ಎಂದ ಜಿಲ್ಲಾಧಿಕಾರಿ: ಮತಯಂತ್ರ ಧ್ವಂಸ ಪ್ರಕರಣ ನಡೆದ ಮಸಬಿನಾಳ ಗ್ರಾಮದ ಸ್ಥಳಕ್ಕೆ ಭೇಟಿ ಮಾಡಿದ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ್ ಅವರು ಸ್ಥಳ ಪರಿಶೀಲನೆ ಮಾಡಿದರು. ಜನರ ಗಲಾಟೆಯನ್ನು ನಿಯಂತ್ರಣಕ್ಕೆ ತಂದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೆಚ್ಚುವರಿಯಾಗಿ ಮತಗಟ್ಟೆಯಲ್ಲಿ ಕಾಯ್ದಿರಿಸಲಾಗಿದ್ದ ಮತಯಂತ್ರಗಳು ಹಾನಿಗೀಡಾಗಿವೆ. ಸೆಕ್ಟರ್ ಅಧಿಕಾರಿ ವಾಹನದಲ್ಲಿ ಕೊಂಡೊಯ್ಯುವಾಗ ಜನರು ತಪ್ಪು ಭಾವಿಸಿ ಒಡೆದು ಹಾಕಿದ್ದಾರೆ. ಘಟನೆಯಿಂದ ಮತದಾನಕ್ಕೆ ಯಾವುದೆ ಅಡ್ಡಿಯಾಗಿಲ್ಲ. ಮತದಾನಕ್ಕೆ ಯಾವುದೇ ತೊಂದರೆಯಾಗಿಲ್ಲ‌. ಮತದಾನ ಸರಳವಾಗಿ ಶಾಂತಿಯುತವಾಗಿ ನಡೆಯುತ್ತಿವೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಕಾನೂನು ಉಲ್ಲಂಘಿಸಿ ಬಿಜೆಪಿ ಅಭ್ಯರ್ಥಿ ಬಹಿರಂಗ ಪ್ರಚಾರ, ಕೇಳಲು ಹೋದ ಪಿಎಸ್‌ಐ ಮೇಲೆ ಹಲ್ಲೆ!

23 ಜನರನ್ನ ಬಂಧಿಸಿ ವಶಕ್ಕೆ ಪಡೆದ ಪೊಲೀಸರು: ಗ್ರಾಮಕ್ಕೆ ಭೇಟಿ ನೀಡಿ ಸ್ಥಳ‌ ಪರಿಶೀಲನೆ ನಡೆದಿದ ಎಸ್ಪಿ ಆನಂದಕುಮಾರ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ‌. ಈಗಾಗಲೇ 25-30 ಜನರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದೇವೆ. ಈ ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ದರು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಇಂಥ ಕೃತ್ಯದಲ್ಲಿ ಭಾಗವಹಿಸಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ಸಹ ನೀಡಿದ್ದಾರೆ.

click me!